HOME » NEWS » Tech » MARUTI SUZUKI OFFERING LARGE DISCOUNTS ON SELECT MODELS AND ARENA RANGE OF CARS IN MARCH 2021 STG HG

Maruti Suzuki: ಮಾರುತಿ ಸುಜುಕಿಯಿಂದ ಭರ್ಜರಿ ರಿಯಾಯಿತಿ! ಇಲ್ಲಿದೆ ಸಂಪೂರ್ಣ ಮಾಹಿತಿ

ಕಂಪನಿಯು ಮಾರ್ಚ್ 2021 ರ ತಿಂಗಳಲ್ಲಿ ಆಲ್ಟೋದಿಂದ ವಿಟಾರಾ ಬ್ರೆಜಾ ವರೆಗೆ ಹಲವು ರಿಯಾತಿಗಳನ್ನು ನೀಡುತ್ತಿದೆ. ಆದರೆ ಎರ್ಟಿಗಾ ಮಾದರಿಯಲ್ಲಿ ರಿಯಾಯಿತಿ ಲಭ್ಯವಿರುವುದಿಲ್ಲ.

news18-kannada
Updated:March 13, 2021, 10:32 AM IST
Maruti Suzuki: ಮಾರುತಿ ಸುಜುಕಿಯಿಂದ ಭರ್ಜರಿ ರಿಯಾಯಿತಿ! ಇಲ್ಲಿದೆ ಸಂಪೂರ್ಣ ಮಾಹಿತಿ
Maruti Suzuki Brezza
  • Share this:
ಭಾರತದ ಪ್ರಮುಖ ಕಾರು ತಯಾರಕರಲ್ಲಿ ಒಂದಾದ ಮಾರುತಿ ಸುಜುಕಿ ಕಂಪನಿಯು ಅರೇನಾ ಶ್ರೇಣಿಯ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಮತ್ತು ಇತರೆ ಪ್ರಯೋಜನಗಳನ್ನು ನೀಡುತ್ತಿದ್ದಾರೆ. ಕಂಪನಿಯು ಮಾರ್ಚ್ 2021 ರ ತಿಂಗಳಲ್ಲಿ ಆಲ್ಟೋದಿಂದ ವಿಟಾರಾ ಬ್ರೆಜಾ ವರೆಗೆ ಹಲವು ರಿಯಾತಿಗಳನ್ನು ನೀಡುತ್ತಿದೆ. ಆದರೆ ಎರ್ಟಿಗಾ ಮಾದರಿಯಲ್ಲಿ ರಿಯಾಯಿತಿ ಲಭ್ಯವಿರುವುದಿಲ್ಲ. ವಾಹನಗಳ ಬೇಡಿಕೆ ಮತ್ತು ಮಾರಾಟವನ್ನು ಹೆಚ್ಚಿಸುವುದು ಈ ಪ್ರಸ್ತಾಪದ ಹಿಂದಿನ ಪ್ರಮುಖ ಕಾರ್ಯಸೂಚಿಯಾಗಿದೆ. ಇನ್ನು, ರಿಯಾಯಿತಿಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ ಎಂಬುದನ್ನು ಕಾರು ಪ್ರಿಯರು ಗಮನಿಸಬೇಕು. ಮಾರುತಿ ಕಾರನ್ನು ಖರೀದಿಸಲು ಬಯಸುವ ಕಾರು ಪ್ರಿಯರಿಗಾಗಿ ಕಂಪನಿ ನೀಡಿರುವ ಕೊಡುಗೆಗಳ ವಿವರಣೆ ಇಲ್ಲಿದೆ.

ಮಾರುತಿ ಎಸ್-ಪ್ರೆಸ್ಸೊ: ಈ ಮಾದರಿಯಲ್ಲಿ ಒಟ್ಟು 52,000 ರೂ.ಗಳ ರಿಯಾಯಿತಿಯೊಂದಿಗೆ ನೀಡಲಾಗುತ್ತದೆ. ಇದರಲ್ಲಿ 20,000 ರೂ ನಗದು ರಿಯಾಯಿತಿ ಮತ್ತು 20,000 ರೂಗಳ ವಿನಿಮಯ ಬೋನಸ್ ಒಳಗೊಂಡಿದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಆಯ್ಕೆಗೆ ಜೋಡಿಸಲಾದ 1.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರುತ್ತದೆ.

ಮಾರುತಿ ಸುಜುಕಿ ಸೆಲೆರಿಯೊ: 47,000 ರೂ.ಗಳ ರಿಯಾಯಿತಿ, 20,000 ರೂ ನಗದು ರಿಯಾಯಿತಿ, ಮತ್ತು 20,000 ರೂ ವಿನಿಮಯ ಬೋನಸ್ ಸೇರಿದಂತೆ ಈ ಮಾದರಿಯಲ್ಲಿ ಕಾರು ಖರೀದಿದಾರರಿಗೆ ಪ್ರಯೋಜನವಾಗಲಿದೆ. ಸೆಲೆರಿಯೋದಲ್ಲಿ 1.0-ಲೀಟರ್ ಕೆ-ಸೀರೀಸ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುಯಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳಿವೆ. ಇದನ್ನು ಎಸ್-ಪ್ರೆಸ್ಸೊಗೆ ಹೋಲುವ ಫ್ಯಾಕ್ಟರಿ-ಫಿಟ್ ಸಿಎನ್‌ಜಿ ಆಯ್ಕೆಯೊಂದಿಗೆ ಒದಗಿಸಲಾಗಿದೆ.

ಮಾರುತಿ ಸುಜುಕಿ ಆಲ್ಟೊ: ಕಂಪನಿಯ ಆರಂಭಿಕ ಹಂತದ ಮಾದರಿಯನ್ನು ಮಾರ್ಚ್‌ನಲ್ಲಿ ತಲಾ 15,000 ರೂ.ಗಳ ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್ ಸೇರಿದಂತೆ 42,000 ರೂ.ಗಳ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು. ಕಾರು 0.8 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್: ಈ ಮಾದರಿಯು 20,000 ರೂ.ಗಳ ವಿನಿಮಯ ಲಾಭ ಮತ್ತು ಮಾರ್ಚ್‌ನಲ್ಲಿ 10,000 ರೂ. ಗಳ ನಗದು ರಿಯಾಯಿತಿಯನ್ನು ಹೊಂದಿದೆ.

ಮಾರುತಿ ಸುಜುಕಿ ಇಕೋ: ಕಂಪನಿಯು 10,000 ರೂ.ಗಳ ನಗದು ರಿಯಾಯಿತಿ ಮತ್ತು 20,000 ರೂಗಳ ವಿನಿಮಯ ಬೋನಸ್ ಸೇರಿದಂತೆ 37,000 ರೂ.ಗಳ ರಿಯಾಯಿತಿ ದರದಲ್ಲಿ ಈ ಮಾದರಿಯಲ್ಲಿ ನೀಡುತ್ತಿದೆ.

ಮಾರುತಿ ಸುಜುಕಿ ವಿಟಾರಾ ಬ್ರೆಜಾ: ಈ ಕಾರು 105 ಎಚ್‌ಪಿ, 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನ್ಯುವಲ್ ಮತ್ತು ಟಾರ್ಕ್ ಪರಿವರ್ತಕ ಗೇರ್‌ಬಾಕ್ಸ್ ಆಯ್ಕೆಗಳನ್ನು ಒಳಗೊಂಡಿದೆ. 10,000 ರೂ ನಗದು ರಿಯಾಯಿತಿ ಮತ್ತು 20,000 ರೂಗಳ ವಿನಿಮಯ ಬೋನಸ್ ಅನ್ನು ಒಳಗೊಂಡಿರುವ ಮಾದರಿಯಲ್ಲಿ ಖರೀದಿದಾರರು 35,000 ರೂ. ಗಳಷ್ಟು ಪ್ರಯೋಜನ ಪಡೆಯಬಹುದು.ಮಾರುತಿ ಸುಜುಕಿ ಡಿಜೈರ್: ಈ ಕಾರು 8,000 ರೂ.ಗಳ ನಗದು ರಿಯಾಯಿತಿ ಮತ್ತು ಮಾರ್ಚ್‌ನಲ್ಲಿ 20,000 ರೂ.ಗಳ ವಿನಿಮಯ ಬೋನಸ್ ಸೇರಿದಂತೆ 35,000 ರೂ.ಗಳ ಲಾಭ ಮತ್ತು ರಿಯಾಯಿತಿಯೊಂದಿಗೆ ಲಭ್ಯವಿದೆ. ಇದು ದೇಶದ ಅತ್ಯಂತ ಇಂಧನ-ಸಮರ್ಥ ಪೆಟ್ರೋಲ್ ಕಾರುಗಳಲ್ಲಿ ಒಂದಾಗಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್: ಈ ಮಾದರಿಯಲ್ಲಿ ಎರಡು ಆರ್ಥಿಕ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ, 68 ಹೆಚ್‌ಪಿ, 1.0-ಲೀಟರ್ ಯುನಿಟ್ ಮತ್ತು 83 ಹೆಚ್‌ಪಿ, 1.2-ಲೀಟರ್ ಯುನಿಟ್ ಆಗಿದೆ. ಇವೆರಡೂ ಮ್ಯಾನುಯಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿವೆ. 8,000 ರೂ ನಗದು ರಿಯಾಯಿತಿ ಮತ್ತು 15,000 ರೂಗಳ ವಿನಿಮಯ ಬೋನಸ್ ಸೇರಿದಂತೆ 30,000 ರೂ. ಗಳ ನಗದು ರಿಯಾಯಿತಿಯನ್ನು ಹೊಂದಿದೆ.

ಮಾರುತಿ ಸುಜುಕಿ ಬಲೆನೊ: ಬಲೆನೊದ ಎಲ್ಲಾ ರೂಪಾಂತರಗಳ ಮೇಲಿನ ರಿಯಾಯಿತಿಗಳು 15,000 ರೂ ನಗದು ರಿಯಾಯಿತಿ ಹೊಂದಿದ್ದು, 10,000 ರೂಗಳ ವಿನಿಮಯ ಬೋನಸ್ ಮತ್ತು
4,000 ರೂ. ಕಾರ್ಪೊರೇಟ್ ರಿಯಾಯಿತಿ ಹೊಂದಿದೆ. ಆದರೆ, ಸಿಗ್ಮಾ ಕಾರಿಗೆ 5,000 ರೂ ಹೆಚ್ಚುವರಿ ನಗದು ರಿಯಾಯಿತಿಯೊಂದಿಗೆ ಲಭ್ಯವಿದೆ.
Youtube Video

ಮಾರುತಿ ಸುಜುಕಿ ಸಿಯಾಜ್: ಈ ಮಾದರಿಯು 10,000 ರೂ. ನಗದು ರಿಯಾಯಿತಿ, 20,000 ರೂಗಳ ವಿನಿಮಯ ಬೋನಸ್ ಮತ್ತು 10,000 ರೂ. ಗಳ ನಗದು ರಿಯಾಯಿತಿಯನ್ನು ಹೊಂದಿದೆ.
First published: March 13, 2021, 10:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories