ಫೆಬ್ರವರಿ ತಿಂಗಳು Maruti Suzuki ಕಂಪೆನಿ ಕಾರು ಖರೀದಿಸುವವರಿಗೆ ಭಾರೀ ಉಡುಗೊರೆ!

Maruti Suzuki Car Offers: ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಕಾರು ಕೊಳ್ಳುವವರಿಗೆ ಸುಮಾರು 52,000 ರೂ.ವರೆಗೆ ವಿವಿಧ ರೀತಿಯ ಆಫರ್​​ಗಳು ಸಿಗಲಿದೆ. ಮಾರುತಿ ಒಡೆತನದ ಈ ಕಾರುಗಳನ್ನು ಖರೀದಿಸಿದರೆ ನಿಮಗೆ ಅಧಿಕ ಲಾಭ ಸಿಗಲಿದೆ.

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ

 • Share this:
  2020ರಲ್ಲಿ ಎದುರಾದ ಕೊರೋನಾ ಸೋಂಕಿನ ಹೊಡೆತಕ್ಕೆ ಹಲವು ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡು ನಷ್ಟಕ್ಕೆ ಸಿಲುಕಿದ್ದವು. ಇದೀಗ ಚೇತರಿಸಿಕೊಳ್ಳುತ್ತಿರುವ ಉದ್ಯಮ ವರ್ಗ ತನ್ನ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಹೌದು, ಆಟೋಮೊಬೈಲ್ ಉದ್ಯಮ ತನ್ನ ವ್ಯಾಪಾರದಲ್ಲಿ ಚೇತರಿಕೆ ಕಂಡಿದ್ದು, ಹೊಸ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಇದೇ ರೀತಿ, ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಕಾರು ಖರೀದಿಸಿವವರಿಗೆ ಭಾರೀ ಲಾಭಗಳು ಸಿಗಲಿವೆ.

  ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಕಾರು ಕೊಳ್ಳುವವರಿಗೆ ಸುಮಾರು 52,000 ರೂ.ವರೆಗೆ ವಿವಿಧ ರೀತಿಯ ಆಫರ್​​ಗಳು ಸಿಗಲಿದೆ. ಮಾರುತಿ ಒಡೆತನದ ಈ ಕಾರುಗಳನ್ನು ಖರೀದಿಸಿದರೆ ನಿಮಗೆ ಅಧಿಕ ಲಾಭ ಸಿಗಲಿದೆ.

  Maruti Suzuki Swift: ಫೆಬ್ರವರಿ 2021ರಲ್ಲಿ ಹೊಸ ಸ್ವಿಫ್ಟ್ ಕಾರು ಖರೀದಿಸಿದವರಿಗೆ 42,000 ರೂ. ವರೆಗೆ ಪ್ರಯೋಜನಗಳು ಸಿಗಲಿವೆ. ಇದರಿಂದ ಸ್ವಿಫ್ಟ್ ಕಾರು ಖರೀದಿಸುವವರಿಗೆ ಇದು ಸುಸಮಯ.

  Alto: ಚಿಕ್ಕ ವಾಹನ ಆಗಿರುವ ಅಲ್ಟೋ ಎರಡು ದಶಕಗಳಿಂದ ಜನಪ್ರಿಯವಾಗಿದೆ. ಚಿಕ್ಕ ವಾಹನದ ಬೆಲೆ ಮತ್ತು ಪೆಟ್ರೋಲ್ ಸಾಮರ್ಥ್ಯವು ಸಾಮಾನ್ಯ ವರ್ಗಗಳನ್ನು ಸೆಳೆದಿದೆ. ಇನ್ನು, ಫೆಬ್ರವರಿ ತಿಂಗಳಿನಲ್ಲಿ ಅಲ್ಟೋ ಕಾರು ಖರೀದಿಸಿದವರಿಗೆ 37,000 ರೂ.ವರೆಗೆ ಉಡುಗೊರೆಗಳು ಸಿಗಲಿವೆ.

  maruti suzuki swift Desire: ಫೆಬ್ರವರಿ ತಿಂಗಳಿನಲ್ಲಿ ಡಿಸೈರ್ ಕಾರು ಖರೀದಿಸಿದವರಿಗೆ 52,000 ರೂ.ವರೆಗೆ ಪ್ರಯೋಜನಗಳು ಸಿಗಲಿವೆ. ಡಿಸೈರ್ ಕಾರು ಈ ಬಾರಿ ಅತ್ಯುನ್ನತ ವಿನ್ಯಾಸವನ್ನು ಕೂಡ ಹೊಂದಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ.

  Maruti Suzuki S Presso: ಎಸ್-ಪ್ರೆಸ್ಸೊ ಕಾರು ಹೊಸ ವಿನ್ಯಾಸ ಜೊತೆಗೆ ಉತ್ತಮ ಸಾಮರ್ಥ್ಯದ ಕ್ಯಾಬಿನ್ ಹೊಂದಿದ್ದು. ಫೆಬ್ರವರಿ ತಿಂಗಳಿನಲ್ಲಿ ಎಸ್-ಪ್ರೆಸ್ಸೊ ಕಾರು ಖರೀದಿಸಿದವರಿಗೆ 52,000 ರೂ.ವರೆಗೆ ಪ್ರಯೋಜನಗಳು ಸಿಗಲಿವೆ.

  Maruti Suzuki Celerio: ಈ ತಿಂಗಳು ಸೆಲೆರಿಯೊ ಕಾರು ಖರೀದಿಸುವವರಿಗೂ ಡಬಲ್ ಧಮಾಕಾ ಸಿಗಲಿದ್ದು. ಕಾರು ಖರೀದಿಯೊಂದಿಗೆ 47,000 ರೂ.ವರೆಗೆ ಲಾಭಗಳು ಸಿಗಲಿವೆ. ಇನ್ನು, 20,000 ರೂ. ಕ್ಯಾಶ್ ಡಿಸ್ಕೌಂಟ್ ಮತ್ತು ಎಕ್ಸ್ಚೆಂಜ್ ಬೋನಸ್ ಸಿಗಲಿದೆ.

  Wagon R: ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದಾದ ವ್ಯಾಗನ್-ಆರ್ ಕಾರು ಮ್ಯಾನುವಲ್‌ ಜೊತೆಗೆ ಎಎಂಟಿ ಗೇರ್‌ಬಾಕ್ಸ್ ಹೊಂದಿದೆ. ಹ್ಯುಂಡೈ ಸ್ಯಾಂಟ್ರೊಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾದ ವ್ಯಾಗನ್-ಆರ್ ಕಾರನ್ನು ಈ ತಿಂಗಳು ಖರೀದಿಸಿದರೆ 30,000 ರೂ. ವರೆಗೆ ಪ್ರಯೋಜನ ಪಡೆಯಬಹುದು.

  Vitara Brezza: ಫೆಬ್ರವರಿ ತಿಂಗಳಿನಲ್ಲಿ ವಿಟಾರಾ ಬ್ರೆಜಾ ಕಾರು ಖರೀದಿಸಿದವರಿಗೆ 35,000 ರೂ.ವರೆಗೆ ಪ್ರಯೋಜನಗಳು ಸಿಗಲಿವೆ

  Eeco car: ಸಿಎನ್‌ಜಿ ಕಿಟ್‌ನ ಆಯ್ಕೆಯನ್ನು ಹೊಂದಿರುವ ಇಕೋ ಕಾರು ಈ ತಿಂಗಳಿನಲ್ಲಿ ಖರೀದಿಸಿದರೆ 37,000 ರೂ.ವರೆಗೆ ಡಿಸ್ಕೌಂಟ್ ಸಿಗಲಿದೆ
  Published by:Harshith AS
  First published: