• Home
 • »
 • News
 • »
 • tech
 • »
 • Maruti Suzuki: ಕಾರು ಪ್ರಿಯರಿಗೆ ಗುಡ್​ ನ್ಯೂಸ್, ಕೈಗಟಕುವ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರುತಿ ಸುಜುಕಿ!

Maruti Suzuki: ಕಾರು ಪ್ರಿಯರಿಗೆ ಗುಡ್​ ನ್ಯೂಸ್, ಕೈಗಟಕುವ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರುತಿ ಸುಜುಕಿ!

ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ

ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ

ಮಾರುತಿ ಸುಜುಕಿ ಪರಿಚಯಿಸುತ್ತಿರುವ ಕಾರು ಬಲೆನೋ ಸಿಎನ್‌ಜಿ. ಇದು ಬಲೆನೋ ಸೀರಿಸ್‌ನಲ್ಲಿ ಬಿಡುಗಡೆಯಾಗುತ್ತಿರುವ ವಿಶೇಷ ಕಾರಾಗಿದೆ. ಇದು ಹಲವು ಫಿಚರ್ಸ್‌ ಅನ್ನು ಕೂಡ ಹೊಂದಿದೆ.

 • Share this:

  ಈಗಿನ ಕಾಲದಲ್ಲಿ ಜನರು ವಾಹನಗಳನ್ನೇ ಅವಲಂಭಿತವಾಗಿದ್ದಾರೆ. ಅದ್ರಾಲ್ಲೂ 2 ವೀಲರ್‌ ಮತ್ತು 4 ವೀಲರ್‌ ವಾಹನಗಳನ್ನೇ ಕೊಳ್ಳುತ್ತಾರೆ.  ಮೊದಲೆಲ್ಲಾ ಸರ್ಕಾರಿ ಸಾರಿಗೆಗಳಲ್ಲಿ ಜನರು ಪ್ರಯಾಣ ಬೆಳೆಸುತ್ತಿದ್ದರು. ಆದರೆ ಈಗ ಮನೆಯಲ್ಲಿ ಕನಿಷ್ಟ ಒಂದಾದರೂ ವಾಹನಗಳನ್ನು ಹೊಂದಿರುತ್ತಾರೆ. ಹಾಗೆ ಜನರು ಕಾರುಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ದುಬಾರಿ ಕಾರಿನಿಂದ (Car) ಹಿಡಿದು ಕಡಿಮೆ ಬೆಲೆ ಕಾರುಗಳನ್ನು ಹೊಂದುವ ಆಸೆ ಎಲ್ಲರಿಗೂ ಇದೆ. ಅದಕ್ಕಾಗಿಯೇ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ (Maruti Suzuki) ಹೊಸ ಕಾರೊಂದನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ಕಾರು ಬಹಳಷ್ಟು ಫೀಚರ್ಸ್‌ ಅನ್ನು ಹೊಂದಿದೆ. ಏನೆಲ್ಲಾ ಫೀಚರ್ಸ್‌ ಇದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


  ಮಾರುತಿ ಸುಜುಕಿ ಪರಿಚಯಿಸುತ್ತಿರುವ ಕಾರು ಬಲೆನೊ ಸಿಎನ್‌ಜಿ ಎಂಬುದು. ಇದು  ಬಲೆನೊ ಸೀರಿಸ್‌ನಲ್ಲಿ ಬಿಡುಗಡೆಯಾಗುತ್ತಿರುವ ವಿಶೇಷ ಕಾರಾಗಿದೆ. ಇದು ಹಲವು ಫಿಚರ್ಸ್‌ ಹೊಂದಿದ್ದು, ಗ್ರಾಹಕರ ಕೈಗೆಟಕುವ ಧರದಲ್ಲಿ ಲಭ್ಯವಾಗಲಿದ್ದು ಇದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.


  ಎಂಜಿನ್ ಮತ್ತು ಮೈಲೇಜ್


  ಹೊಸ ಬಲೆನೊ ಸಿಎನ್ ಜಿ ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು 1.2 ಲೀಟರ್ ನ್ಯಾಚುರಲಿ ಆಸ್ಪೆರೆಡ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಅಳವಡಿಸಿದೆ. ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ. ಇದು 76 ಬಿಎಚ್ ಪಿ ಮತ್ತು 98.5 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ಪ್ರತಿ ಕೆ.ಜಿ ಸಿಎನ್ ಜಿಗೆ ಗರಿಷ್ಠ 30.61 ಕಿ.ಮೀ ಮೈಲೇಜ್ ಹಿಂದಿರುಗುತ್ತದೆ.


  ಇದನ್ನೂ ಓದಿ: ಫೇಸ್‌ಬುಕ್ ಪೋಷಕ ಸಂಸ್ಥೆ ಮೆಟಾದ ತ್ರೈಮಾಸಿಕ ಆದಾಯದಲ್ಲಿ ಕುಸಿತ, 5%ಕ್ಕಿಂತ ಹೆಚ್ಚು ನಷ್ಟಕ್ಕೊಳಗಾದ ಷೇರುಗಳು


  ವಿನ್ಯಾಸ ಮತ್ತು ಫೀಚರ್ಸ್:


  • ಹೊಸ ಬಲೆನೊ ಸಿಎನ್ ಜಿ ಮಾದರಿಯಲ್ಲಿ ಬ್ಯಾಡ್ಜ್ ಹೊರತಾಗಿ ಸಾಮಾನ್ಯ ಪೆಟ್ರೋಲ್ ಮಾದರಿಯೆಂತೆ ವಿನ್ಯಾಸ ಹೊಂದಿದೆ.


  Maruti Suzuki Launches Baleno CNG For Car Lovers Good mileage affordable
  ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ


  • ಹೊಸ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, 7.0 ಇಂಚಿನ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ಕಾರ್ ಕನೆಕ್ಟ್, ಸ್ಟಾರ್ಟ್/ಸ್ಟಾಪ್ ಬಟನ್ ಸೌಲಭ್ಯಗಳಿವೆ.

  • ಹಾಗೆಯೇ ಈ ಕಾರಿನಲ್ಲಿ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್ ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರಿಕ್ ಪವರ್ಡ್ ರಿಯರ್ ವ್ಯೂ ಮಿರರ್, ಪವರ್ ವಿಂಡೋ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.


  ಸಿಎನ್‌ಜಿ ಕಾರು ಮಾರಾಟದಲ್ಲಿ ಮಹತ್ತರ ಸಾಧನೆ:


  ಮಾರುತಿ ಸುಜುಕಿಯು ಸಿಎನ್‌ಜಿ ಕಾರುಗಳ ಮಾರಾಟದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ. ಸುಮಾರು 10 ಕಾರುಗಳಲ್ಲಿ ಸಿಎನ್ ಜಿ ವರ್ಷನ್‌ನಲ್ಲಿ ಬಿಡುಗಡೆ ಮಾಡಿರುವ ಮಾರುತಿ ಸುಜುಕಿಯು ಇದುವರೆಗೆ ಸುಮಾರು 1 ಮಿಲಿಯನ್ ಗೂ ಅಧಿಕ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಇದಲ್ಲದೆ ಮಾರುತಿ ಸುಜುಕಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳಲ್ಲಿ ಸಿಎನ್ ಜಿ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.


  Maruti Suzuki Launches Baleno CNG For Car Lovers Good mileage affordable
  ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ


  ಬೆಲೆ ಮತ್ತು ಲಭ್ಯತೆ:


  ಹೊಸ ಬಲೆನೊ ಸಿಎನ್‌ಜಿ ಕಾರು ದೆಹಲಿ ಎಕ್ಸ್ ಶೋರೂಂನಲ್ಲಿ ಲಭ್ಯವಿದ್ದು ಇದರ ಪ್ರಕಾರ 8.28 ಲಕ್ಷ ರೂಪಾಯಿ ಆರಂಭಿಕ ಬೆಲೆಯನ್ನು ಹೊಂದಿದೆ. ಹೊಸ ಸಿಎನ್‌ಜಿ ಮಾದರಿಯು ಸ್ಟ್ಯಾಂಡರ್ಡ್ ಬಲೆನೊ ಕಾರಿನ ಡೆಲ್ಟಾ ಮತ್ತು ಜಿಟಾ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ ಜೊತೆಗೆ ಇದರ ಆರಂಭಿಕ ಮಾದರಿಯು 8.25 ಲಕ್ಷ ರೂಪಾಯಿ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು 9.29 ಲಕ್ಷ ರೂಪಾಯಿ ಬೆಲೆ ಹೊಂದಿದೆ.


  ಇದನ್ನೂ ಓದಿ: ಫ್ರೀಯಾಗಿ ಇಂಟರ್ನೆಟ್‌ ಉಪಯೋಗಿಸುವುದು ಹೇಗೆ? ಈ ಟ್ರಿಕ್ಸ್‌ ಫಾಲೋ ಮಾಡಿ


  ಇದು ಮಾರುತಿ ಸುಜುಕಿಯು ಬಿಡುಗಡೆ ಮಾಡುತ್ತಿರುವ ಹೊಸ ಮಾದರಿಯ ಕಾರು ಆಗಿದೆ. ಇಲ್ಲಿ ಹಲವು ಫೀಚರ್ಸ್‌ ಜೊತೆ ಜನರನ್ನು ಆಕರ್ಷಿಸಲಿದೆ ಎಂದು ಇಲ್ಲಿ ತಂತ್ರಜ್ಞರು ಹೇಳಿದ್ದಾರೆ.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು