Maruti Suzuki: ದಾಖಲೆ ಬರೆದ ಮಾರುತಿ ಸುಜುಕಿ ಬಲೆನೊ ಕಾರು!

Maruti Suzuki: ಮಾರುತಿ ಸುಜುಕಿ ಕಂಪೆನಿ ಬಲೆನೊ ಕಾರು ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟಗೊಳ್ಳುವ ಮೂಲಕ ಮೊದಲ ಸ್ಥಾನವನ್ನು ಪಡೆದಿದೆ.

ಬಲೆನೊ ಕಾರು

ಬಲೆನೊ ಕಾರು

  • Share this:
    ಲಾಕ್​​ಡೌನ್​ನಿಂದಾಗಿ​ ಅನೇಕ ಕಾರು ಕಂಪೆನಿಗಳು ಮಾರಾಟವಾಗದೆ ನಷ್ಟವನ್ನು ಅನುಭವಿಸಿದ್ದವು.  ಆದರೆ ಮಾರ್ಚ್​ 25ರಿಂದ ಹೇರಲಾಗಿದ್ದ ಲಾಕ್​ಡೌನ್​ ಮೇ ಅಂತ್ಯದಲ್ಲಿ ಸಡಿಲಿಕೆ ಮಾಡಲಾಯಿತು. ಈ ವೇಳೆ ಕಾರು ಕಂಪೆನಿಗಳು ಆನ್​ಲೈನ್​ ಬುಕ್ಕಿಂಗ್​, ಡೋರ್​ ಸ್ಟೆಪ್​ ಡೆಲಿವೆರಿ ಮಾಡುವು ಮೂಲಕ ಮಾರಾಟವನ್ನು ಪ್ರಾರಂಭಿಸಿತ್ತು. ಇದೀಗ ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟಗೊಂಡಿರುವ ಕಾರುಗಳ ಮಾಹಿತಿ ಬಹಿರಂಗವಾಗಿದೆ.

    ಮಾರುತಿ ಸುಜುಕಿ ಕಂಪೆನಿ ಬಲೆನೊ ಕಾರು ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟಗೊಳ್ಳುವ ಮೂಲಕ ಮೊದಲ ಸ್ಥಾನವನ್ನು ಪಡೆದಿದೆ. ಒಟ್ಟಾರೆ 1587 ಕಾರುಗಳು ಮಾರಾಟಗೊಂಡಿದೆ. ಇನ್ನು ಹ್ಯಾಚ್​ಬ್ಯಾಗ್​​ ವಿಭಾಗದಲ್ಲಿ 2ನೇ ಸ್ಥಾನವನ್ನು ಟಾಟಾ ಆಲ್ಟ್ರೋಜ್​​ ಕಾಣಿಸಿಕೊಂಡಿದೆ.

    ಟಾಟಾ ಮೊಟಾರ್ಸ್​ ಕಂಪೆನಿಗಳ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡಿದೆ. ಮೇ ತಿಂಗಳಿನಲ್ಲಿ ಟಾಟಾ ಅಲ್ಟ್ರೋಜ್​​ 1379 ಕಾರುಗಳ ಮಾರಾವಾಗಿದ್ದು, ಆ ಮೂಲಕ 2ನೇ ಸ್ಥಾನವನ್ನು ಅಲಂಕರಿಸಿದೆ. ಅಷ್ಟೇ ಅಲ್ಲದೆ,  ಟಾಟಾ ಕಾರುಗಳ ಮಾರಾಟದವ ಪೈಕಿ ಮೊದಲ ಸ್ಥಾನವನ್ನುಪಡೆದುಕೊಂಡಿದೆ. ಇತ್ತಿಚೆಗೆ ಕೊರೋನಾ ಸಂಕಷ್ಟಕ್ಕೆ ಟಾಟಾ ಮೋಟಾರ್ಸ್​ 1500 ಕೋಟಿ ರೂಪಾಯಿ ದೇಣಿಗೆ ನೀಡಿತ್ತು.

    ಮೇ ತಿಂಗಳನಲ್ಲಿ ವೋಕ್ಸ್​​​​ವ್ಯಾಗನ್​​ ಕಂಪೆನಿಯ ಕಾರುಗಳ ಮಾರಾಟದಲ್ಲೂ ಹೆಚ್ಚಳವಾಗಿದೆ. 1126 ಪೊಲೊ ಕಾರುಗಳು ಮಾರಾಟವಾಗಿದೆ. ಆ ಮೂಲಕ 3ನೇ ಸ್ಥಾನವನ್ನು ಅಲಂಕರಿಸಿದೆ. ಹುಂಡೈ ಕಂಪೆನಿಯ 1000 ಐ20 ಕಾರುಗಳು ಮಾರಾಟವಾಗಿದೆ.
    First published: