Maruti Suzuki: 38 ಸಾವಿರಕ್ಕೆ ಆಲ್ಟೋ 800 ಕಾರು ಖರೀದಿಸುವ ಅವಕಾಶ!

ಸದ್ಯ ಮಾರುತಿ ಸುಜುಕಿ ಸಂಸ್ಥೆ ಆಲ್ಟೋ 800 ವಿಎಕ್ಸ್​ಐ ಪ್ಲಸ್​​ ಕಾರನ್ನು 38 ಸಾವಿರ ರೂ.ಗೆ ಖರೀದಿಸಬಹುದಾದ ಅವಕಾಶವನ್ನು ಮಾಡಿಕೊಟ್ಟಿದೆ

ಮಾರುತಿ ಸುಜುಕಿ ಆಲ್ಟೋ 800

ಮಾರುತಿ ಸುಜುಕಿ ಆಲ್ಟೋ 800

  • Share this:
    ಮಾರುತಿ ಸುಜುಕಿ ಕಂಪನಿಯ ಆಲ್ಟೋ ಕಾರು ಈಗಾಗಲೇ ಹೆಚ್ಚಿಗೆ ಮಾರಾಟವಾಗುವ ಮೂಲಕ ದಾಖಲೆಯನ್ನು ಬರೆದಿದೆ. ಇದೀಗ ಸಂಸ್ಥೆ ಆಲ್ಟೋ 800 ವಿಎಕ್ಸ್​​ಐ ಪ್ಲಸ್​ ಕಾರನ್ನು 38 ಸಾವಿರಕ್ಕೆ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ಮಾಡಿಕೊಟ್ಟಿದೆ. 

    ಮಾರುತಿ ಸುಜುಕಿ ಆಲ್ಟೋ 800 ವಿಎಕ್ಸ್​ಐ ಪ್ಲಸ್​​:

    ಈ ಕಾರಿನಲ್ಲಿ 7.0 ಟಚ್​​ಸ್ಕ್ರೀನ್​ ಇಂನ್ಫೋಟೈನಮೆಂಟ್​ ಸಿಸ್ಟಂ ನಿಡಲಾಗಿದೆ. ಈಗಾಗಲೇ ಬಲೆನೋ, ವಾಗನ್​ಆರ್​, ಸಿಯಾಜ್​, ಸ್ವಿಫ್ಟ್​​​​, ಸ್ವಿಫ್ಟ್​​ ಡಿಸೈರ್​​ನಲ್ಲಿ ನೀಡಲಾಗಿರುವ ಫೀಚರ್​ ಅನ್ನು ಇದರಲ್ಲಿ ನೀಡಲಾಗಿದೆ. ಸದ್ಯ, ಆಲ್ಟೋ 800 ವಿಎಕ್ಸ್​ಐ ಪ್ಲಸ್​​ ಕಾರನ್ನು 3.89 ಲಕ್ಷ ರೂ.ಗೆ (ದೆಹಲಿ ಎಕ್ಸ್​ ಶೋರೂಂ) ಮಾರಾಟ ಮಾಡುತ್ತಿದೆ.

    ಆಲ್ಟೋ 800 ವಿಎಕ್ಸ್​ಐ ಪ್ಲಸ್​​ 796ಸಿಸಿ, ಮೂರು ಸಿಲಿಂಡರ್​ ಎಂಜಿನ್​ ಹೊಂದಿದೆ. ಬಿಎಸ್​6ನಲ್ಲಿ ಪರಿಚಯಿಸಿರುವ ಈ ಕಾರು 47 ಬಿಹೆಚ್​ಪಿ, 6000 ಆರ್​ಪಿಎಮ್​ ಮತ್ತು  69 ಎನ್​ಎಮ್​​ ಟಾರ್ಕ್​ ಉತ್ಪಾದಿಸುತ್ತದೆ.

    ಇನ್ನು ಕಾರಿನಲ್ಲಿ ಏರ್​ಬ್ಯಾಗ್​​, ಆ್ಯಂಟಿ ಕ್ಲಾಕ್​​​ ಬ್ರೇಕಿಂಗ್​ ಸಿಸ್ಟಂ, ಪಾರ್ಕಿಂಗ್​ ಸೆನ್ಸಾರ್​, ಸೀಟ್​ ಬೆಲ್ಟ್​​ ರಿಮೈಂಡರ್​ ನೀಡಲಾಗಿದೆ.

    ಸದ್ಯ ಮಾರುತಿ ಸುಜುಕಿ ಸಂಸ್ಥೆ ಆಲ್ಟೋ 800 ವಿಎಕ್ಸ್​ಐ ಪ್ಲಸ್​​ ಕಾರನ್ನು 38 ಸಾವಿರ ರೂ.ಗೆ ಖರೀದಿಸಬಹುದಾದ ಅವಕಾಶವನ್ನು ಮಾಡಿಕೊಟ್ಟಿದೆ. ಜೊತೆಗೆ 7 ವರ್ಷದ ಇಎಮ್​ಐ ಆಯ್ಕೆಯಂತೆ ತಿಂಗಳಿಗೆ 7,014 ರೂ ಪಾವತಿಸುವ ಆಯ್ಕೆಯನ್ನು ನೀಡುತ್ತಿದೆ. (ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಹತ್ತಿರದ ಮಾರುತಿ ಶೋ.ರೂಂಗೆ ಭೇಟಿ ನೀಡಿ ಪರಿಶೀಲಿಸಿ).
    Published by:Harshith AS
    First published: