ಸುರಕ್ಷತಾ ಪರೀಕ್ಷೆಯಲ್ಲಿ ವಿಫಲವಾದ ಭಾರತದಲ್ಲಿ ನಿರ್ಮಾಣವಾದ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌

Swift Hatchback Safety Test: ಸಂಪೂರ್ಣ ಸುರಕ್ಷತೆಯ ಹಂತಗಳಲ್ಲಿ ಸ್ವಿಫ್ಟ್ ಅನ್ನು ಪರೀಕ್ಷಿಸಲಾಗಿದ್ದು ಕಾರು ಇದೀಗ ಶೂನ್ಯ ಸ್ಟಾರ್‌ಗಳನ್ನು ಗಳಿಸಿ ವಿಫಲವಾಗಿದೆ

ಸ್ವಿಫ್ಟ್​ ಹ್ಯಾಚ್​ಬ್ಯಾಕ್​ ಕಾರು

ಸ್ವಿಫ್ಟ್​ ಹ್ಯಾಚ್​ಬ್ಯಾಕ್​ ಕಾರು

 • Share this:

  ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಎಲ್ಲಾ ಹೊಸ ಮಾದರಿಯ ರೆನಾಲ್ಟ್ ಡಸ್ಟರ್ ಲ್ಯಾಟಿನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ (ಕಾರುಗಳ ಸುರಕ್ಷತಾ ಕಾರ್ಯಕ್ಷಮತೆಯಲ್ಲಿ ನಿಖರ ಮಾಹಿತಿ) ಶೂನ್ಯ ಅಂಕಗಳನ್ನು ಗಳಿಸಿ ವಿಫಲವಾಗಿವೆ. ಭಾರತ ಹಾಗೂ ಜಪಾನ್‌ನಲ್ಲಿ ತಯಾರಿಸಲಾಗಿರುವ ಸುಜುಕಿ ಸ್ವಿಫ್ಟ್ (Maruti Suzuki Swift) ಎರಡು ಏರ್‌ಬ್ಯಾಗ್‌ಗಳನ್ನು ಹೊಂದಿದ್ದರೂ ಲ್ಯಾಟಿನ್ ಅಮೆರಿಕಾದಲ್ಲಿ (Latin America) ಈ ಕಾರು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಜನಪ್ರಿಯ ಕಾರನ್ನು ಚಾಲಕರ ಹಾಗೂ ಪ್ರಯಾಣಿಕರ ರಕ್ಷಣೆಯ ಮೌಲ್ಯಮಾಪನ ಹಾಗೂ ಮಕ್ಕಳ ಸುರಕ್ಷತೆಯ (Children Safety) ಅಂಶವನ್ನು ಗಮನಲ್ಲಿರಿಸಿಕೊಂಡು ಪರಿಶೀಲನೆ ನಡೆಸಲಾಗಿದ್ದು ವಯಸ್ಕರ ಸುರಕ್ಷತೆಯಲ್ಲಿ 15.53% ಹಾಗೂ ಮಕ್ಕಳ ಸುರಕ್ಷತೆಯಲ್ಲಿ 0% ಅಂಕವನ್ನು ಗಳಿಸಿದೆ. ಪರೀಕ್ಷಾ ಫಲಿತಾಂಶವು ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಆವೃತ್ತಿಗಳಲ್ಲಿ ಸಮಾನವಾಗಿವೆ.


  ಸಂಪೂರ್ಣ ಸುರಕ್ಷತೆಯ ಹಂತಗಳಲ್ಲಿ ಸ್ವಿಫ್ಟ್ ಅನ್ನು ಪರೀಕ್ಷಿಸಲಾಗಿದ್ದು ಕಾರು ಇದೀಗ ಶೂನ್ಯ ಸ್ಟಾರ್‌ಗಳನ್ನು ಗಳಿಸಿ ವಿಫಲವಾಗಿದೆ. ಸಂರಕ್ಷಣಾ ಹಂತವು ಕಳಪೆ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದು UN32 ರಿಯರ್ ಪರಿಣಾಮದ ಕೊರತೆ, ಬದಿಭಾಗದಲ್ಲಿರುವ ಏರ್‌ಬ್ಯಾಗ್‌ಗಳಲ್ಲಿ ನ್ಯೂನತೆಗಳು ಹೀಗೆ ಕಾರು ಹಲವಾರು ಋಣಾತ್ಮಕ ಅಂಶಗಳನ್ನು ಪ್ರದರ್ಶಿಸಿವೆ.


  ಸ್ವಿಫ್ಟ್ ಕಾರು ಯುರೋಪ್‌ನಲ್ಲಿ 6 ಏರ್‌ಬ್ಯಾಗ್‌ಗಳು ಹಾಗೂ ಇಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ ESC ನೊಂದಿಗೆ ಮಾರಾಟಗೊಂಡಿದ್ದು ಇದೇ ಮಾಡೆಲ್ ಲ್ಯಾಟಿನ್ ಅಮೆರಿಕಾದಲ್ಲಿ ಹೆಡ್ ಏರ್‌ಬ್ಯಾಗ್‌ಗಳು ಹಾಗೂ ESC ಅನ್ನು ಒಳಗೊಂಡಿಲ್ಲ. ಲ್ಯಾಟಿನ್ ಅಮೆರಿಕಾದ ಸ್ವಿಫ್ಟ್ ಆವೃತ್ತಿಯು ಪ್ರಮಾಣಿತ ಲ್ಯಾಪ್ ಬೆಲ್ಟ್ ಅನ್ನು ಮಧ್ಯದ ಸೀಟಿಂಗ್‌ನಲ್ಲಿ ಹೊಂದಿದ್ದು ಭಾರತದಲ್ಲಿ ಸ್ವಿಪ್ಟ್ ಕಾರು ಎರಡು ಏರ್‌ಬ್ಯಾಗ್‌ಗಳು ಹಾಗೂ ABS ಅನ್ನು ಹೊಂದಿದೆ.


  ಇನ್ನು ಕಾರು ಶೂನ್ಯ ಸ್ಟಾರ್‌ಗಳನ್ನು ಪಡೆದಿರುವ ಕಾರಣಗಳತ್ತ ಗಮನಿಸುವುದಾದರೆ ಸುರಕ್ಷತೆ ಹಾಗೂ ಪರೀಕ್ಷೆಯ ಸಮಯದಲ್ಲಿ ತೆರೆದ ಡೋರ್‌ನ ಪರಿಶೀಲನೆಯಲ್ಲಿ ಋಣಾತ್ಮಕ ಅಂಶವನ್ನು ಪ್ರದರ್ಶಿಸಿದೆ. UN32 ಕೊರೆತಯೂ ಕಾರಿನ ಪ್ರದರ್ಶನವನ್ನು ಹಿಮ್ಮುಖಗೊಳಿಸಿದೆ. ಕಾರಿನ ಬಾಗಿಲು ತೆರೆಯುವ ಸಂದರ್ಭದಲ್ಲಿ UN95 ಅಗತ್ಯಗಳನ್ನು ಈ ಮಾದರಿಯು ಪೂರೈಸುವುದಿಲ್ಲವಾದ್ದರಿಂದ ಇದು ಸುರಕ್ಷತೆಯ ಮಟ್ಟಗಳನ್ನು ತೇರ್ಗಡೆಯಾಗಿಲ್ಲ.


  ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಸಾಲು ಸಾಲು ಬ್ಯಾಂಕ್​ ರಜೆ, ಈ ದಿನಗಳಲ್ಲಿ ಕೆಲಸವಿದ್ದರೆ ಮುಗಿಸಿಕೊಳ್ಳಿ

  ಲ್ಯಾಟಿನ್ NCAP ಯ ಪ್ರಧಾನ ಕಾರ್ಯದರ್ಶಿ ಅಲೆಜಾಂಡ್ರೊ ಫ್ಯೂರಾಸ್ ಹೇಳಿರುವಂತೆ ಲ್ಯಾಟಿನ್ ಅಮೆರಿಕಾದ ನಿವಾಸಿಗಳಿಗೆ ರೆನಾಲ್ಟ್ ಹಾಗೂ ಸುಜುಕಿ ಒದಗಿಸಿರುವ ಇಂತಹ ಕಳಪೆ ಸುರಕ್ಷತೆಯ ಪ್ರದರ್ಶನಗಳು ಅಷ್ಟೊಂದು ಮೆಚ್ಚುಗೆಯಾಗಿಲ್ಲ ಹಾಗೂ ಇದು ಗ್ರಾಹಕರಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ. ಲ್ಯಾಟಿನ್ ಅಮೆರಿಕಾದಲ್ಲಿ ರೆನಾಲ್ಟ್ ಹಾಗೂ ಸುಜುಕಿ ಮಾದರಿಯ ಕಾರುಗಳಿಗೆ ಬೆಲೆ ಕೂಡ ಹೆಚ್ಚಾಗಿದ್ದು ಯಾವುದೇ ಸುರಕ್ಷತೆಯ ಖಾತ್ರಿಯನ್ನು ನೀಡದೇ ಇರುವ ಕಾರುಗಳಿಗೆ ಇಷ್ಟು ಹಣ ನೀಡುವುದು ವ್ಯರ್ಥ ಎಂಬುದು ಅಲ್ಲಿನ ಗ್ರಾಹಕರ ಅಭಿಪ್ರಾಯವಾಗಿದೆ ಹಾಗೂ ಇದು ಅವರಿಗೆ ಅಸಮಾಧಾನವನ್ನುಂಟು ಮಾಡಿದೆ ಎಂದು ಅಲೆಜಾಂಡ್ರೊ ತಿಳಿಸಿದ್ದಾರೆ.


  ಇದನ್ನೂ ಓದಿ: Iphone 13 ಸೆಪ್ಟೆಂಬರ್​ 14ರಂದು ಮಾರುಕಟ್ಟೆಗೆ; ಆದರೆ ಖರೀದಿಗೆ ಸಿಗೋದು ಯಾವಾಗ ಗೊತ್ತಾ?

  ಈ ಕಾರುಗಳು ಮೂಲಭೂತ ಸುರಕ್ಷತಾ ಅಂಶಗಳನ್ನು ಒದಗಿಸದೇ ಇರುವುದು ಗ್ರಾಹಕರಲ್ಲಿ ರಸ್ತೆ ಅಪಘಾತಗಳಂತಹ ಅಪಾಯ ಮಟ್ಟಗಳನ್ನು ಹೆಚ್ಚಿಸುತ್ತವೆ ಎಂಬುದು ಅಲೆಜಾಂಡ್ರೊ ಹೇಳಿಕೆಯಾಗಿದೆ. ಕಾರುಗಳಲ್ಲಿರುವ ಮುಖ್ಯ ಸುರಕ್ಷತಾ ಅಂಶಗಳು ಗ್ರಾಹಕರಿಗೆ ಅಪಾಯಗಳಿಂದ ಸಂರಕ್ಷಣೆಯನ್ನು ಒದಗಿಸುವ ಲಸಿಕೆಯಂತೆ ಕಾರ್ಯನಿರ್ವಹಿಸಲಿದ್ದು ಕಾರುಗಳಲ್ಲೇ ಬರುವ ಭದ್ರತಾ ವ್ಯವಸ್ಥೆಗಳನ್ನು ಖರೀದಿಸುವ ಪ್ರತಿಯೊಬ್ಬ ಗ್ರಾಹಕರು ತಮ್ಮದಾಗಿಸಿಕೊಳ್ಳವುದು ಅವರ ಹಕ್ಕು ಎಂಬುದು ಅಲೆಜಾಂಡ್ರೊ ವಾದವಾಗಿದೆ.


  Published by:Sharath Sharma Kalagaru
  First published: