Bank Account Hack: ಲಿಂಕ್​ ಕ್ಲಿಕ್ ಮಾಡಿ 15 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ! ಮೊಬೈಲ್​ ಬಳಕೆದಾರರೇ ಎಚ್ಚರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ನಾವು ವಂಚನೆಯ ಬಗ್ಗೆ ಕೇಳಿದ್ದೇವೆ. ಅದ್ರಲ್ಲೂ ನಾವು ವಿದೇಶಗಳಲ್ಲಾದ ಘಟನೆಗಳನ್ನು ನೋಡಿದ್ದೇವೆ. ಆದರೆ ಇದೀಗ ಕರ್ನಾಟಕ ಮಂಗಳೂರಿನ ವ್ಯಕ್ತಿಯ ಮೇಲೆ ವಂಚಕರು ದಾಳಿ ಮಾಡಿದ್ದಾರೆ.  ಹಾಗಿದ್ರೆ ಈ ಘಟನೆಯ ಸಂಪೂರ್ಣ ಮಾಹಿತಿ ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

  • Share this:

    ಟೆಕ್ನಾಲಜಿಗಳು (Technology) ಇತ್ತೀಚೆಗೆ ಬಹಳಷ್ಟು ಅಭಿವೃದ್ಧಿಯಾಗುತ್ತಿದೆ. ಇದರ ಜೊತೆಗೆ ವಂಚನೆಗಳನ್ನು ಸಹ ಹೆಚ್ಚುತ್ತಿದೆ. ಆದ್ರೆ ದಿನಕಳೆದಂತೆ ಹ್ಯಾಕರ್ಸ್​​ಗಳು (Hackers) ಸಹ ಹೊಸ ಹೊಸ ಟೆಕ್ನಿಕ್​ಗಳನ್ನು ಜನರನ್ನು ವಂಚನೆ ಮಾಡಲು ಬಳಸುತ್ತಿದ್ದಾರೆ. ಸ್ಮಾರ್ಟ್​ಫೋನ್​ಗಳ ಬೇಡಿಕೆ, ಬಳಕೆ ಹೆಚ್ಚಾಗಿದೆ ಹೌದು, ಆದರೆ ಇದನ್ನೇ ಗುರಿಯಾಗಿಸಿಕೊಂಡು ಕೆಲ ಕಿಡಿಗೇಡಿಗಳು ಮೊಬೈಲ್​ ಬಳಕೆದಾರರ ಡೇಟಾವನ್ನು ಕದಿಯಲು ಮುಂದಾಗಿದ್ದಾರೆ. ನಾವು ಇತ್ತೀಚೆಗೆ ಓಟಿಪಿ, ವಾಟ್ಸಾಪ್​, ಬ್ಯಾಂಕ್ ಮೂಲಕ ಸ್ಕ್ಯಾಮ್​ ಮಾಡೋದನ್ನು ನೋಡಿದ್ದೇವೆ. ಆದರೆ ಇದೀಗ ಯೂಟ್ಯೂಬ್​ ಮತ್ತು ಟೆಲಿಗ್ರಾಮ್​ ಅಪ್ಲಿಕೇಶನ್​ಗಳ (Telegram) ಮೂಲಕವೂ ಹ್ಯಾಕರ್ಸ್​​ಗಳು ಎಂಟ್ರಿ ನೀಡಿದ್ದಾರೆ. ಯೂಟ್ಯೂಬ್​ನಲ್ಲಿ ಮಾಲ್​ವೇರ್​ ಲಿಂಕ್ (Malware Link)​ಗಳನ್ನು ವಿಡಿಯೋ ನೋಡುವವರಿಗೆ ಕಳುಹಿಸಿದ್ರೆ, ಟೆಲಿಗ್ರಾಮ್ನಲ್ಲೂ ಕೂಡ ಇದೇ ರೀತಿಯಲ್ಲಿ ಬಳಕೆದಾರರಿಗೆ ಲಿಂಕ್​ ಕಳಿಸಿ ವಂಚನೆ ಮಾಡುತ್ತಿದ್ದಾರೆ.


    ಇತ್ತೀಚಿನ ದಿನಗಳಲ್ಲಿ ನಾವು ವಂಚನೆಯ ಬಗ್ಗೆ ಕೇಳಿದ್ದೇವೆ. ಅದ್ರಲ್ಲೂ ನಾವು ವಿದೇಶಗಳಲ್ಲಾದ ಘಟನೆಗಳನ್ನು ನೋಡಿದ್ದೇವೆ. ಆದರೆ ಇದೀಗ ಕರ್ನಾಟಕ ಮಂಗಳೂರಿನ ವ್ಯಕ್ತಿಯ ಮೇಲೆ ವಂಚಕರು ದಾಳಿ ಮಾಡಿದ್ದಾರೆ.  ಹಾಗಿದ್ರೆ ಈ ಘಟನೆಯ ಸಂಪೂರ್ಣ ಮಾಹಿತಿ ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


    ಲಿಂಕ್ ಮೂಲಕ ವಂಚನೆ


    ಈ ಸೈಬರ್ ವಂಚಕರು ಸ್ಮಾರ್ಟ್​ಫೋನ್​ ಬಳಕೆದಾರರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡಲು ಮುಂದಾಗಿದ್ದಾರೆ. ಕೇವಲ ಒಂದು ಲಿಂಖ್ ಕಳುಹಿಸುತ್ತಾರೆ. ಅದನ್ನು ತಪ್ಪಿ ಬಳಕೆದಾರರು ಒಂದು ವೇಳೆ ಕ್ಲಿಕ್ ಮಾಡಿದ್ರೆ ಸಾಕು, ಅವರ ಸಂಪೂರ್ಣ ಡೇಟಾ ಹ್ಯಾಕರ್ಸ್​ಗಳ ಕೈಸೇರುತ್ತೆ.


    ಇದನ್ನೂ ಓದಿ: ಸ್ಮಾರ್ಟ್​​ಫೋನ್​ಗಳು ಬ್ಲಾಸ್ಟ್​ ಆಗಲು ಕಾರಣವೇನು ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿ ಮೊಬೈಲ್ ಸೇಫ್​!


    ಮಂಗಳೂರಿನಲ್ಲಿ ನಡೆದ ಘಟನೆ


    ಇನ್ನು ಈ ವಂಚೆನ ಮಂಗಳೂರಿನಲ್ಲಿ ವಾಸಿಸುತ್ತಿರುವಂತಹ ಒಬ್ಬ ವ್ಯಕ್ತಿಗೆ ಆಗಿದ್ದು, ಮಾರ್ಚ್ 4 ರಂದು ಆತನ ಮೊಬೈಲ್​ಗೆ ಅಪರಿಚಿತ ನಂಬರ್​ನಿಂದ ಎಸ್​​ಎಮ್​ಎಸ್ ಒಂದು ಬರುತ್ತದೆ. ಈ ಮೆಸೇಜ್​​ನಲ್ಲಿ ಜಾಬ್​​ಗೆ ಸಂಬಂಧಿಸಿದ ಮೆಸೇಜ್ ಇರುತ್ತದೆ. ಇನ್ನು ಈ ಮೆಸೇಜ್ ಓದಿದ ತಕ್ಷಣ, ಉದ್ಯೋಗವನ್ನೂ ಹುಡುಕುತ್ತಿದ್ದ ಆತ ಅದರಲ್ಲಿದ್ದ ಫೋನ್ ನಂಬರ್​ಗೆ ಕಾಲ್ ಮಾಡಿದ್ದಾನೆ. ಆ ಸಂದರ್ಭದಲ್ಲಿ ಅವರು ಟೆಲಿಗ್ರಾಮ್ ಆ್ಯಪ್​ ಡೌನ್​ಲೋಡ್​ ಮಾಡುವಂತೆ ಹೇಳಿದ್ದರು. ಈ ಮೂಲಕ ಮೋಸ ಮಾಡಿದ್ದಾರೆ.


    ಹಣ ಡಬಲ್​ ಮಾಡುವ ರೀತಿಯಲ್ಲಿ ವಂಚನೆ


    ಟೆಲಿಗ್ರಾಮ್​​ನಲ್ಲಿ ಸಾಮಾನ್ಯವಾಗಿ ಯಾವುದಾರೊಂದು ಲಿಂಖ್​ಗಳು ಬರುತ್ತಿರುತ್ತವೆ. ವಂಚಕರು ಸಲಹೆ ನೀಡಿದಂತೆ ಆ ವ್ಯಕ್ತಿಯು ಟೆಲಿಗ್ರಾಮ್ ಡೌನ್​ಲೋಡ್ ಮಾಡಿಕೊಂಡಿದ್ದಾನೆ. ಅದರಲ್ಲಿ ಹಣ ಡಬಲ್​ ಮಾಡು ಆಸೆ ತೋರಿಸಿ ವಂಚನೆ ಮಾಡಲು ಮುಂದಾಗಿದ್ದಾರೆ.  ಇನ್ನು ಮೊದಲಿಗೆ ಈ ವಂಚಕರು ಬಳಕೆದಾರರಿಂದ 150 ರೂಪಾಯಿ ಪಡೆದರು, ನಂತರ 2 ಸಾವಿರ ರೂಪಾಯಿ ಪಡೆದರು. ಆದರೆ ಸ್ವಲ್ಪ ಸಮಯಗಳ ನಂತರ ಆ ಸಂತ್ರಸ್ತರಿಗೆ 2,800 ರೂಪಾಯಿ ಹಿಂದಿರುಗಿಸಿ ತಮ್ಮ ಬಲೆಗೆ ಬೀಳುವಂತೆ ಮಾಡಿಕೊಂಡಿದ್ದಾರೆ.


    ಸಾಂಕೇತಿಕ ಚಿತ್ರ


    ಬ್ಯಾಂಕ್​ ಖಾತೆ ತೆರಯುವ ನೆಪದಲ್ಲಿ ಮೋಸ


    ಇಷ್ಟಲ್ಲಾ ಘಟನೆಗಳಾದ ನಂತರ ವಂಚಕರು ಮೋಸ ಹೋದ ವ್ಯಕ್ತಿಗೆ ನಿಮ್ಮ ಹೆಸರಿನಲ್ಲೊಂದು ಬ್ಯಾಂಕ್ ಖಾತೆ ಓಪನ್ ಮಾಡ್ಬೇಕು ಎಂದು ಹೇಳುತ್ತಾರೆ. ಇದಕ್ಕಾಗಿ ಒಂದು ಲಿಂಕ್ ಕಳಿಸುತ್ತೇವೆ, ಅದನ್ನು ಭರ್ತಿ ಮಾಡಿ ಎಂದೂ ಹೇಳುತ್ತಾರೆ. ಈಗಾಗಲೇ 2,800 ರೂಪಾಯಿ ಬಂದ ಖುಷಿಯಲ್ಲಿದ್ದ ಈತ, ತಕ್ಷಣ ವಂಚಕ ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ, ಅದರಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ಇದನ್ನು ಭರ್ತಿ ಮಾಡಿದ ತಕ್ಷಣವೇ ಅವರ ಪರ್ಸನಲ್ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 15.34 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.




    ಎಚ್ಚರ


    ಇನ್ನು ಯಾವುದೇ ಲಿಂಕ್​ಗಳು ಆನ್​​ಲೈನ್​​ನಲ್ಲಿ ಬಂದಾಗ ಸರಿಯಾಗಿ ನೋಡಿಕೊಂಡು ಕ್ಲಿಕ್ ಮಾಡ್ಬೇಕು. ಯಾವುದೇ ಉದ್ಯೋಗ ವಿಚಾರದ ಸುದ್ದಿಗಳು ಬಂದಾಗ ಅದರ ಹಿಂದಿನ ಹಿನ್ನಲೆಯನ್ನು ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ  ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    Published by:Prajwal B
    First published: