ಪ್ರತಿದಿನ ಸೈಬರ್ ಕ್ರೈಂಗಳು (Cybercrime) ಹೆಚ್ಚಾಗುತ್ತಲೇ ಇದೆ. ಸಾಮಾಜಿಕ ಮಾಧ್ಯಮ, ಮೆಸೆಜ್, ಓಟಿಪಿ, ಲಿಂಕ್ಗಳ (Link) ಮೂಲಕ ಹ್ಯಾಕರ್ಸ್ ದೋಚುತ್ತಲೇ ಇದ್ದಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ವಂಚಕರು ಪ್ರತಿ ದಿನ ಹೊಸ ಹೊಸ ದಾರಿಯನ್ನು ಹುಡುಕುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಹಣವನ್ನು ಸುರಕ್ಷಿತವಾಗಿಡುವುದೇ ದೊಡ್ಡ ಸವಾಲಾಗಿದೆ. ಡೇಟಿಂಗ್ ಆ್ಯಪ್ಗಳು ಕೂಡ ಈಗ ಸೈಬರ್ ಕ್ರೈಂನ ಹೊಸ ವಂಚನೆಯ ಜಾಲವಾಗಿದೆ. ಮೊದಲೆಲ್ಲ ಹನಿಟ್ಯ್ರಾಪ್ ಮಾಡಲಾಗುತ್ತಿತ್ತು. ಇತ್ತೀಚೆಗೆ ನೇರವಾಗಿ ಪ್ರೀತಿಸಿ, ನಂಬಿಸಿ ಹಣವನ್ನು ದೋಚುವುದು ಸಾಮಾನ್ಯವಾಗಿದೆ. ಈಗ ಟಿಂಡರ್ ಮ್ಯಾಚ್ ಆ್ಯಪ್ ಮೂಲಕ ಆರಂಭವಾದ ಪ್ರೇಮ 14 ಕೋಟಿ ರೂ ಕಳೆದುಕೊಳ್ಳುವಲ್ಲಿಗೆ ಮುಕ್ತಾಯವಾಗಿದೆ. ಡಿಜಿಟಲ್ ಪ್ರೀತಿ, ಡಿಜಿಟಲ್ ವ್ಯವಹಾರ ನಂಬಿದವರ ಬ್ಯಾಂಕ್ ಬ್ಯಾಲೆನ್ಸ್ ಡಿಜಿಟ್ ಅನ್ನೇ ಕಡಿಮೆ ಮಾಡಿದೆ.
ಟಿಂಡರ್ನಲ್ಲಿ ವಂಚನೆ
ಹಾಂಗ್ಕಾಂಗ್ನಲ್ಲಿ ವಾಸವಾಗಿರುವ 55 ವರ್ಷದ ಇಟಾಲಿಯನ್ ವ್ಯಕ್ತಿ ಈ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ. ಈ ವ್ಯಕ್ತಿ ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ.
ಆಕೆ ಇನ್ವೆಸ್ಟ್ಮೆಂಟ್ ಬ್ರೋಕರ್(ಹೂಡಿಕೆ ದಳ್ಳಾಳಿ) ಎಂದು ಪರಿಚಯಿಸಿಕೊಂಡಿದ್ದಾಳೆ. ಆಕೆಯ ಮಾತಿಗೆ ಮರುಳಾದ ಈ ವ್ಯಕ್ತಿ ಆಕೆಯೊಂದಿಗೆ ವಾಟ್ಸಪ್ನಲ್ಲಿ ಚಾಟಿಂಗ್ ಶುರು ಹಚ್ಚಿದ್ದಾನೆ.
ನಕಲಿ ಟ್ರೇಡಿಂಗ್ನಲ್ಲಿ ಹೂಡಿಕೆ
ಹೀಗೆ ಇಬ್ಬರ ಮಧ್ಯೆ ಪ್ರೀತಿ ಬೆಳೆದಿದೆ. ಆಕೆಯ ಮೋಹದ ಬಲೆಯಲ್ಲಿ ವ್ಯಕ್ತಿ ಕಳೆದುಹೋಗಿದ್ದಾನೆ. ಆಕೆ ಹೇಳಿದಂತೆ ಹೆಚ್ಚಿನ ರಿಟರ್ನ್ಸ್ ಆಸೆಗೆ ಬಿದ್ದು ನಕಲಿ ಟ್ರೇಡಿಂಗ್ ವೆಬ್ಸೈಟ್ಗೆ ಹಣ ಹೂಡಿಕೆ ಮಾಡಿದ್ದಾನೆ.
ಸುಮಾರು 9 ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 14.2 ಮಿಲಿಯನ್ ಹಾಂಗ್ ಕಾಂಗ್ ಡಾಲರ್ ಹೂಡಿಕೆ ಮಾಡಿದ್ದಾನೆ. ಅಂದರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ 14 ಕೋಟಿಯಾಗುತ್ತದೆ.
22 ಬಾರಿ ಹಣ ವರ್ಗಾವಣೆ
ಈ ಎಲ್ಲಾ ವ್ಯವಹಾರವು ಮಾರ್ಚ್ 6 ರಿಂದ ಮಾರ್ಚ್ 23 ರವರೆಗೆ ನಡೆದಿದೆ. ಸುಮಾರು 22 ಬಾರಿ ಈ ಬ್ಯಾಂಕ್ ವಹಿವಾಟು ನಡೆದಿರುವುದಾಗಿ ಆತನ ಹೇಳಿಕೊಂಡಿದ್ದಾನೆ.
ಪೊಲೀಸರಿಂದ ಪ್ರಕರಣ ಬಯಲು
ಆದರೆ ಹೂಡಿಕೆ ಮಾಡಿದ ಹಣದ ಯಾವುದೇ ರಿಟರ್ನ್ಸ್ ಬರದೇ ಇದ್ದಾಗ ಅನುಮಾನಗೊಂಡು ಪೊಲೀಸರಿಗೆ ದೂರು ದಾಖಲಿಸಿದ್ದಾನೆ. ಆಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಾನು ಸೈಬರ್ ಕ್ರೈಂ ಜಾಲದಲ್ಲಿ ಸಿಲುಕಿದ್ದೇನೆ ಎನ್ನುವುದ ಆ ವ್ಯಕ್ತಿಗೆ ಮನವರಿಕೆಯಾಗಿದೆ.
ಇದನ್ನೂ ಓದಿ: ಏರ್ಟೆಲ್ನಿಂದ ಹೊಸ ಅಗ್ಗದ ಪ್ಲ್ಯಾನ್ ಬಿಡುಗಡೆ! ಇದರಿಂದ ವರ್ಷವಿಡೀ ರೀಚಾರ್ಜ್ ಮಾಡ್ಬೇಕು ಅನ್ನೋ ಚಿಂತೆನೇ ಇರಲ್ಲ
ಮಹಿಳೆಗೆ 2 ಕೋಟಿ ವಂಚಿಸಿದ ಇನ್ನೊಂದು ಪ್ರಕರಣ
ಡೇಟಿಂಗ್ ಆ್ಯಪ್ ಮೂಲಕ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ವಿವಿಧ ಕಡೆ ವರದಿಯಾಗುತ್ತಿವೆ. ಯುಎಸ್ನಲ್ಲಿ ಮಹಿಳೆಯೊಬ್ಬರು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯ ಮೂಲಕ ಸ್ನೇಹ ಆರಂಭಿಸಿದ್ದಾರೆ. ವಾಟ್ಸಪ್ ಮೂಲಕ ಸ್ನೇಹ ಪ್ರೀತಿಗೆ ತಿರುಗಿದೆ. ಬಳಿಕ ಆತನ ಮಾತನ್ನು ನಂಬಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದರೆ.
ಮೋಹಕ ಮೋಡಿಗೆ 2 ಕೋಟಿ ಕಳೆದುಕೊಂಡ ಮಹಿಳೆ
ಆರಂಭದಲ್ಲಿ ಮಹಿಳೆ 500 ಡಾಲರ್ಗಳನ್ನು ಹೂಡಿಕೆ ಮಾಡಿ ರಿಟರ್ನ್ಸ್ ಪಡೆದುಕೊಂಡರು. ಇಲ್ಲಿಂದ ನಂಬಿಕೆ ಗಳಿಸಿಕೊಂಡ ವಂಚಕ ಆಕೆಗೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲು ಹೇಳಿದ್ದಾನೆ. ವಂಚಕನ ಮಾತಿಗೆ ಮರುಳಾದ ಮಹಿಳೆ ಹೂಡಿಕೆ ಮಾಡಿದ್ದಾಳೆ.
ಇದನ್ನೂ ಓದಿ: ಎಲಾನ್ ಮಸ್ಕ್ ಟ್ವಿಟರ್ ಲೋಗೋ ಚೇಂಜ್ ಮಾಡಿದ್ದು ನಿಜನಾ? ಬಳಕೆದಾರರನ್ನು ಏಪ್ರಿಲ್ ಫೂಲ್ ಮಾಡಿದ್ರಾ?
ಈ ಬ್ಯುಸಿನೆಸ್ ವ್ಯವಹಾರವು ಫೋನ್ ಮೂಲಕ ನಡೆಸಿದ್ದಾನಂತೆ. ಮಹಿಳೆ ಹೇಳುವ ಪ್ರಕಾರ ಆತ ಫೋನ್ನಲ್ಲೇ ಸಂಭಾಷಣೆ ನಡೆಸುತ್ತಿದ್ದಂತೆ. ಈ ಬಾರಿ ನಾನು ಹೇಳಿದಂತೆ ನೀವು ಮಾಡಬೇಕು. ಇಲ್ಲವಾದರೆ ನೀವು ಹೂಡಿರುವ ಸಂಪೂರ್ಣ ಹಣವು ನಷ್ಟವಾಗುವುದು ಎಂದಿದ್ದಾನೆ.
70,000 ಡಾಲರ್ ಸಾಲ ಮಾಡಿ ಹೂಡಿಕೆ
ಆತನ ಮಾತನ್ನು ನಂಬಿ 250,000 ಡಾಲರ್ ಹೂಡಿಕೆ ಮಾಡಿದ್ದಾಳೆ. ಆ ಹಣದಲ್ಲಿ 70,000 ಡಾಲರ್ ಸಾಲ ಮಾಡಿ ಹೂಡಿಕೆ ಮಾಡಲಾಗಿದೆ. ಆದರೆ ಅಂತಿಮವಾಗಿ ಆಕೆ ಮೋಸ ಹೋಗಿರುವುದು ತಿಳಿದು ಬಂದಿದೆ.
ಸುಲಭವಾಗಿ ಎಟುಕುವ ತಂತ್ರಜ್ಞಾನವನ್ನು ಎಚ್ಚರಿಕೆಯಿಂದ ಬಳಸಬೇಕು. ಯಾರನ್ನೇ ಆಗಲಿ ಪೂರ್ಣ ನಂಬುವ ಮುನ್ನ ಎಚ್ಚರವಿರಬೇಕು. ಸ್ವಲ್ಪ ಅನುಮಾನ ಬಂದರೂ ಪರಿಶೀಲಿಸಿ ನೋಡಬೇಕು. ಅದರಲ್ಲೂ ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರುವುದು ಒಳಿತು ಎನ್ನುವುದನ್ನು ಈ ಎರಡು ಪ್ರಕರಣಗಳು ತಿಳಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ