ಫೇಸ್​ಬುಕ್​ ಪಾಸ್​ವರ್ಡ್​ ನೀಡಲು ನಿರಾಕರಿಸಿ ಜೈಲು ಸೇರಿದ ಯುವಕ!

news18
Updated:September 5, 2018, 6:36 PM IST
ಫೇಸ್​ಬುಕ್​ ಪಾಸ್​ವರ್ಡ್​ ನೀಡಲು ನಿರಾಕರಿಸಿ ಜೈಲು ಸೇರಿದ ಯುವಕ!
news18
Updated: September 5, 2018, 6:36 PM IST
-ನ್ಯೂಸ್ 18 ಕನ್ನಡ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೊಂದಿಗೆ ಫೇಸ್​ಬುಕ್ ಪಾಸ್​ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ ಯುವಕನೊಬ್ಬ ಜೈಲು ಸೇರಿದ ಘಟನೆ ಲಂಡನ್​ನಲ್ಲಿ ನಡೆದಿದೆ. ಶಾಲಾ ಬಾಲಕಿಯೊಬ್ಬಳ ಸಾವಿನ ಪ್ರಕರಣ ತನಿಖೆಗೆ ಈ ಶಂಕಿತ ಯುವಕ ತಡೆಯೊಡ್ಡಿರುವ ಹಿನ್ನಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

13 ವರ್ಷದ ಶಾಲಾ ಬಾಲಕಿ ಲೂಸಿ ಮೆಕ್ಹಗ್ ಅವರನ್ನು ಇತ್ತೀಚೆಗೆ ಇರಿದು ಹತ್ಯೆಗೈಯಲಾಗಿತ್ತು. ಈ ಸಂಬಂಧ ಸ್ಟೀಫನ್ ನಿಕೋಲಸ್​ ಎಂಬ ವ್ಯಕ್ತಿಯ ಮೇಲೆ ಪೊಲೀಸರಿಗೆ ಸಂಶಯ ಮೂಡಿತ್ತು. ಈ ಬಗ್ಗೆ ಪರಿಶೀಲಿಸಲು ಸಾಮಾಜಿಕ ತಾಣ ಫೇಸ್​ಬುಕ್ ಪಾಸ್​ವರ್ಡ್​​ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ ತನ್ನ ಪಾಸ್​ವರ್ಡ್​ ಶೇರ್ ಮಾಡಲು ಸ್ಟೀಫನ್ ನಿರಾಕರಿಸಿದ್ದಾನೆ. ಹೀಗಾಗಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲು ನಿರ್ಧರಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ವರದಿಯೊಂದು ವಿವರಿಸಿದೆ.ಬಾಲಕಿ ಮತ್ತು ಸ್ಟೀಫನ್ ನಡುವೆ ಯಾವುದಾದರೂ ಸಂಬಂಧವಿತ್ತೇ?, ತನ್ನ ಸಾಮಾಜಿಕ ತಾಣದಿಂದ ಖಾಸಗಿ ಸಂದೇಶಗಳನ್ನು ಲೂಸಿ ಮೆಕ್ಹಗ್​ಗೆ ಕಳುಹಿಸಿದ್ದಾನೆಯೇ? ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಸ್ಟೀಫನ್​ನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡದೇ, ವಿಚಾರಣೆಗೆ ಸಹಕರಿಸದೇ ಇರುವುದರಿಂದ ತನಿಖಾ ನಿಯಮಗಳ ಕಾನೂನಡಿಯಲ್ಲಿ ದೋಷಿ ಎಂದು ಪರಿಗಣಿಸಿರುವ ಕೋರ್ಟ್ ಸ್ಟೀಫನ್​ಗೆ ​ 14 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.ಇಂಗ್ಲೆಂಡ್​ನ ಆರ್​ಐಪಿಎ ಕಾಯ್ದೆ ಪ್ರಕಾರ ಯಾವುದೇ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಎಲ್ಲ ವಿಧದ ಉಪಕರಣಗಳ ಪಾಸ್​ವರ್ಡ್​ಗಳನ್ನು ನೀಡಬೇಕಿರುವುದು ಕಡ್ಡಾಯವಾಗಿದೆ. ಆರ್​ಐಪಿಎ ಕಾಯ್ದೆಯನ್ನು ಗೌರವಿಸದೇ ತನಿಖೆಗೆ ಅಸಹಕಾರ ತೋರಿದರೆ, ಅವರಿಗೆ ರಾಷ್ಟ್ರೀಯ ಭದ್ರತೆ ದೃಷ್ಟಿಯಲ್ಲಿ ಎರಡು ವರ್ಷಗಳಿಂದ ಐದು ವರ್ಷಗಳ ತನಕ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ