ಇನ್‌ಸ್ಟಾಗ್ರಾಮ್‌ನಲ್ಲಿ ಅಪಹಾಸ್ಯ ವೀಡಿಯೊ ಹಾಕಿ ಜೈಲು ಸೇರಿದ ಯುವಕ

zahir | news18
Updated:January 6, 2019, 3:45 PM IST
ಇನ್‌ಸ್ಟಾಗ್ರಾಮ್‌ನಲ್ಲಿ ಅಪಹಾಸ್ಯ ವೀಡಿಯೊ ಹಾಕಿ ಜೈಲು ಸೇರಿದ ಯುವಕ
ಇನ್​ಸ್ಟಾಗ್ರಾಂ
zahir | news18
Updated: January 6, 2019, 3:45 PM IST
ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ನಲ್ಲಿ ಶಿಕ್ಷಕರು ಮತ್ತು ಶಾಲೆಯ ವಿರುದ್ಧ ದ್ವೇಷ ಹರಡಿದ ಆರೋಪದಲ್ಲಿ ಯುವಕನೊಬ್ಬನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಬುಧಾಬಿಯ ಪ್ರತಿಸ್ಠಿತ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಶಾಲಾ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ದ್ವೇಷ ಹರಡುತ್ತಿದ್ದನು.

ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಅಬುಧಾಬಿಯ ನ್ಯಾಯಾಲಯ ಯುವಕನಿಗೆ 5 ವರ್ಷ ಶಿಕ್ಷೆಯೊಂದಿಗೆ 5 ಲಕ್ಷ ದಿರ್ಹಮ್ ( ಸುಮಾರು 95 ಲಕ್ಷ ರೂ.) ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಇವನ ಇನ್​ಸ್ಟಾಗ್ರಾಮ್​ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸಲಾಗಿದೆ ಎಂದು ಖಲೀಜ್ ಟೈಮ್ಸ್​ ವರದಿ ಮಾಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಕನ್ನಡಿಗರಿಗೆ ಆದ್ಯತೆ

ತನ್ನ ಖಾತೆಯಲ್ಲಿ ಶಿಕ್ಷಕರ ಮೇಲೆ ಹಲ್ಲೆ ನಡೆಸುವಂತೆ ವಿದ್ಯಾರ್ಥಿಗಳಿಗೆ ಪ್ರಚೋದಿಸುವ ವೀಡಿಯೊಗಳನ್ನು ಹಾಕುತ್ತಿದ್ದನು. ಅಲ್ಲದೆ ಸ್ಥಳೀಯ ವಿದ್ಯಾರ್ಥಿಗಳ ಭಾಷಾ ಉಚ್ಛಾರಣೆ ಶೈಲಿಯನ್ನು ಅಪಹಾಸ್ಯ ಮಾಡುತ್ತಿದ್ದನು. ಇದರಿಂದ ವಿದ್ಯಾರ್ಥಿಗಳಲ್ಲಿ ವೈಮನಸ್ಸು ಮೂಡುವ ಸಾಧ್ಯತೆ ಇರುವ ಕಾರಣದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಆನ್​ಲೈನ್ ಶಾಪಿಂಗ್ ಮಾಡುವವರಿಗೆ ಬಿಗ್ ಶಾಕ್: ಡಿಸ್ಕೌಂಟ್​ ನೀಡುವ ಕಂಪೆನಿಗಳಿಗೆ ನಿಷೇಧ..?

 

First published:January 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ