ಆಸ್ಟ್ರೇಲಿಯಾದ ಬ್ರಿಸ್ಬೇನ್ ನ 20 ವರ್ಷದ ಗರ್ಭಿಣಿ (Pregnant) ಅಲಿಸ್ಸಾ ಹಾಡ್ಜಸ್ ಅವರು ಕಳೆದ ವರ್ಷ ಸೆಪ್ಟೆಂಬರ್(September) ನಲ್ಲಿ ಹೆರಿಗೆಗೆ ಹೋದಾಗ ತಮ್ಮ ನಾಲ್ಕನೇ ಡೇಟ್ ಗಾಗಿ 25 ವರ್ಷದ ಮ್ಯಾಕ್ಸ್ ಸಿಲ್ವಿ ಅವರನ್ನು ಭೇಟಿಯಾಗಲಿದ್ದರು. ಎಂಟು ತಿಂಗಳ ತುಂಬು ಗರ್ಭಿಣಿಯಾದ ಅಲಿಸ್ಸಾ ಅವರು ಮ್ಯಾಕ್ಸ್ ಅವರನ್ನು ವಿಮಾನ ನಿಲ್ದಾಣದಲ್ಲಿಯೇ (Airport) ಭೇಟಿಯಾಗಬೇಕಿತ್ತು, ಆದರೆ ಅವರು ಮ್ಯಾಕ್ಸ್ ಅನ್ನು ಆಸ್ಪತ್ರೆಯಲ್ಲಿ ಭೇಟಿಯಾಗಬೇಕಾಯಿತು. "ನಾನು ಟಿಂಡರ್ ಗೆ ಹೋದಾಗ ಸುಮಾರು ಆರೂವರೆ ತಿಂಗಳ ಗರ್ಭಿಣಿಯಾಗಿದ್ದೆ ಮತ್ತು ನಾನು ಅದನ್ನು ನನ್ನ ಬಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದೆ ಕೂಡ. ನಾನು ಯಾರಿಗೂ ಮೋಸ ಮಾಡಲು ಇಷ್ಟ ಪಡುವುದಿಲ್ಲ, ಆದ್ದರಿಂದ ನಾನು ಮುಕ್ತ ಮತ್ತು ಪ್ರಾಮಾಣಿಕಳಾಗಿದ್ದೆ" ಎಂದು ಅಲಿಸ್ಸಾ ಅವರು ಮಾಧ್ಯಮಕ್ಕೆ ಹೇಳಿದ್ದಾರೆ.
ಡೇಟ್ ಆಸ್ಪತ್ರೆಯಲ್ಲಿ
"ಮ್ಯಾಕ್ಸ್ ಕೆಲಸಕ್ಕಾಗಿ ಸಾಕಷ್ಟು ಬಾರಿ ಇಲ್ಲಿಗೆ ಪ್ರಯಾಣಿಸುತ್ತಾ (Travel) ಇರುತ್ತಾರೆ, ಆದ್ದರಿಂದ ಅವರು ನನ್ನ ಈ ಮೊದಲು, ಎಂದರೆ ನಾವು ಒಬ್ಬರನ್ನೊಬ್ಬರು ಮೂರು ಬಾರಿ ಮಾತ್ರ ನೋಡಿದ್ದೇವೆ. ನಾನು ಹೆರಿಗೆಗೆ ಹೋದ ದಿನ, ಮ್ಯಾಕ್ಸ್ ಕೆಲಸದ ಪ್ರವಾಸದಿಂದ ಹಿಂತಿರುಗುತ್ತಿದ್ದಾಗ ನಾನು ವಿಮಾನ ನಿಲ್ದಾಣಕ್ಕೆ ಹೋಗಿ ಅವರನ್ನು ಕರೆದುಕೊಂಡು ಬರಬೇಕಿತ್ತು. ಅದು ನಮ್ಮ ಯೋಜನೆಯಾಗಿತ್ತು (Plan), ಆದರೆ ನಾನು ಅವರಿಗೆ 'ನನ್ನನ್ನು ಕ್ಷಮಿಸಿ, ನೀವು ಟ್ಯಾಕ್ಸಿಯನ್ನು ಮಾಡಿಕೊಂಡು ಹೋಗಿ, ನನಗೆ ಹೆರಿಗೆ ನೋವು ಶುರುವಾಗಿದೆ, ಆಸ್ಪತ್ರೆಗೆ (Hospital) ಹೋಗುತ್ತಿದ್ದೇನೆ" ಎಂದು ಸಂದೇಶವನ್ನು ಕಳುಹಿಸಿದೆ ಎಂದು ಹೇಳಿದರು.
ವಿಮಾನದಿಂದ ಇಳಿದ ನಂತರ, ಮ್ಯಾಕ್ಸ್ ನೇರವಾಗಿ ಆ ಸಂದೇಶವನ್ನು ನೋಡಿ ಆಸ್ಪತ್ರೆಗೆ ಬಂದಿದ್ದಾರೆ. ಅಲಿಸ್ಸಾಳ ಶ್ರಮವು ಒಂದು ವಾರ ಹೀಗೆ ಮುಂದುವರಿಯಿತು ಮತ್ತು ಮ್ಯಾಕ್ಸ್ ಇಡೀ ಸಮಯ ಅವಳ ಪಕ್ಕದಲ್ಲಿಯೇ ಆಸ್ಪತ್ರೆಯಲ್ಲಿಯೇ ಇದ್ದನು ಎಂದು ಹೇಳಲಾಗುತ್ತಿದೆ.
ಮಗುವಿನ ಜನನದ ಸಂದರ್ಭ ಜೊತೆಗಿದ್ದ ಗೆಳೆಯ
ಅಲಿಸ್ಸಾ ಅವರು "ನನ್ನ ಅಮ್ಮ (Mother) ಕೂಡ ನನ್ನನ್ನು ಬೆಂಬಲಿಸುತ್ತಿದ್ದಳು. ಆದರೆ ಅವಳಿಗೆ ರಜಾ ದಿನವಿತ್ತು, ಆದ್ದರಿಂದ ಅವಳು ಇಲ್ಲಿಯೇ ಇದ್ದಳು. ಆದರೆ ಇಡೀ ಮಗುವಿನ ಜನನದ ಸಮಯದಿಂದ ನನ್ನೊಟ್ಟಿಗೆ ಇದ್ದದ್ದು ಮ್ಯಾಕ್ಸ್" ಎಂದು ಹೇಳಿದರು.
ತಾನು ಮಗುವಿಗೆ ಜನ್ಮ ನೀಡುವಾಗ ಮ್ಯಾಕ್ಸ್ ತನ್ನೊಂದಿಗೆ ಇರುವ ವಿಚಾರದ ಬಗ್ಗೆ ತನ್ನ ತಾಯಿಗೆ ತಿಳಿದಿರಲಿಲ್ಲ ಎಂದು ಅಲಿಸ್ಸಾ ಹೇಳಿದಳು ಮತ್ತು "ಗರ್ಭಿಣಿಯಾಗಿರುವ ಮಹಿಳೆಯೊಂದಿಗೆ ಇರಲು ಮತ್ತು ಇಷ್ಟು ದೊಡ್ಡ ಜವಾಬ್ದಾರಿಯನ್ನು (Responsibility) ತೆಗೆದುಕೊಳ್ಳಲು ಯಾರಾದರೂ ಏಕೆ ಬಯಸುತ್ತಾರೆ ಎಂಬುದು ಅವಳಿಗೆ ಅರ್ಥವಾಗಲಿಲ್ಲ” ಎಂದು ಹೇಳಿದರು.
ನೋಡೋಕೆ ಸುಂದರ ಮ್ಯಾಕ್ಸ್
“ಆದರೆ ಅದೇ ಸಮಯದಲ್ಲಿ, ಮ್ಯಾಕ್ಸ್ ನೋಡಲು ಸಹ ತುಂಬಾನೇ ಸುಂದರವಾಗಿದ್ದು, ಒಳ್ಳೆಯ ವ್ಯಕ್ತಿ ಸಹ ಆಗಿದ್ದಾನೆ ಎಂದು ಅವಳು ಹೇಳುತ್ತಿದ್ದಳು ಮತ್ತು ಅವನು ನಮಗೆ ತುಂಬಾನೇ ಸಹಾಯ ಮಾಡಿದ್ದಾನೆ ಎಂದು ಅವಳು ಹೇಳಿದಳು" ಎಂದು ಅಲಿಸ್ಸಾ ನೆನಪಿಸಿಕೊಂಡರು.
ಇದನ್ನೂ ಓದಿ: ಈ 5 ಡೇಟಿಂಗ್ ಆ್ಯಪ್ನಲ್ಲಿ ಪ್ರೀತಿ ಸಿಗೋದು ಪಕ್ಕಾ ಅಂತೆ, ಒಂದ್ಸಲ ಟ್ರೈ ಮಾಡಿ ನೋಡಿ!
ಮ್ಯಾಕ್ಸ್ ತನ್ನ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಆಕೆಯೊಂದಿಗೆ ಇರಲು ಬಯಸಿದನು ಮತ್ತು ಆಕೆಯೂ ತನ್ನ ನವಜಾತ ಶಿಶುವನ್ನು ನೋಡಿಕೊಳ್ಳುತ್ತಿದ್ದ ರೀತಿ ಇವನಿಗೆ ತುಂಬಾನೇ ಇಷ್ಟವಾಯಿತು.
ಪರಸ್ಪರ ಇಷ್ಟ ಪಡುವ ಜೋಡಿ
"ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬಾನೇ ಇಷ್ಟ ಪಡುತ್ತೇವೆ ಮತ್ತು ಪರಸ್ಪರ ಬಲವಾದ ಭಾವನೆಗಳನ್ನು ಹೊಂದಿದ್ದೇವೆ ಎಂದು ತಿಳಿದಿದ್ದೇವೆ. ಆದರೆ ಮಗುವಿನ ಜನನವು ನಮ್ಮ ಸಂಬಂಧದ ಉತ್ತುಂಗ ಬಿಂದುವಾಗಿತ್ತು, ಅದು ನಮ್ಮಿಬ್ಬರನ್ನು ಬಾಂಧವ್ಯದಲ್ಲಿ ಬೆಸೆದಿತು. ಹಿಂತಿರುಗಿ ನೋಡಿದಾಗ, ಇದು ಅತ್ಯುತ್ತಮ ನಿರ್ಧಾರ ಎಂದು ನನಗೆ ಅನ್ನಿಸಿದೆ. ಅವರು ಆ ಸಮಯದಲ್ಲಿ ನನ್ನೊಂದಿಗೆ ಇದ್ದರು ಎಂದು ನನಗೆ ತುಂಬಾ ಸಂತೋಷವಾಗಿದೆ (Happy)" ಎಂದು ಅಲಿಸ್ಸಾ ಹೇಳಿದರು.
ಇದನ್ನೂ ಓದಿ: 8 ಲಕ್ಷ ವಿವಾಹಿತರಿಂದ ಈ ಡೇಟಿಂಗ್ ಆ್ಯಪ್ ಬಳಕೆ; ರಾಜ್ಯದ ಜನರೇ ಮೊದಲಂತೆ!
ಮ್ಯಾಕ್ಸ್ ಮಾತನಾಡಿ "ಅಲಿಸ್ಸಾ ನಂತೆಯೇ ನಾನು ಸಹ ಇದಕ್ಕೆ ಮಾನಸಿಕವಾಗಿ ಸಿದ್ಧವಾಗಿರಲಿಲ್ಲ, ಆದ್ದರಿಂದ ನನಗೆ ಸ್ವಲ್ಪ ಆತಂಕವಿತ್ತು. ಅನೇಕ ಅಪರಿಚಿತರು ಇದ್ದರು, ತಂದೆಯಾಗುವ ಬಗ್ಗೆ ನನಗೆ ತಿಳಿದಿರದ ಅನೇಕ ವಿಷಯಗಳು ಇದ್ದವು. ಹೊಸ ತಂದೆಯಾಗುವುದರೊಂದಿಗೆ ಸಾಕಷ್ಟು ಕಲಿಕೆ ಇದೆ" ಎಂದು ಹೇಳಿದರು.
ವೈರಲ್ ಆಯ್ತು ಇವರ ಸ್ಟೋರಿ
ಅಲಿಸ್ಸಾ ತನ್ನ ಈ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಳು, ಅದು ಈಗ ವೈರಲ್ (Viral) ಆಗಿದೆ. ನೆಟ್ಟಿಗರು ಮ್ಯಾಕ್ಸ್ ನನ್ನು "ವರ್ಷದ ವ್ಯಕ್ತಿ" ಎಂದು ಶ್ಲಾಘಿಸಿದರು. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಅದು ಮನುಷ್ಯತ್ವ! ನೀವೀಬ್ಬರು ಅನೇಕ ವರ್ಷಗಳನ್ನು ಒಟ್ಟಿಗೆ ಕಳೆದಿದ್ದೀರಿ ಎಂದು ನಾನು ಭಾವಿಸುತ್ತೇನೆ" ಎಂದು ಬರೆದರೆ, ಇನ್ನೊಬ್ಬರು "ಮ್ಯಾಕ್ಸ್ ಗೆ ಇನ್ನೊಬ್ಬ ಸಹೋದರನಿದ್ದಾರೆಯೇ" ಎಂದು ಪ್ರಶ್ನೆ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ