ಕಂಪನಿ ಸಿಇಒ ಜೀವವನ್ನೇ ಬಲಿ ಪಡೆದ ಬ್ಲಾಕ್​ಬೆರ್ರಿ ಮತ್ತು ಹುವಾವೆ ಮೊಬೈಲ್​ಗಳು


Updated:June 25, 2018, 12:37 PM IST
ಕಂಪನಿ ಸಿಇಒ ಜೀವವನ್ನೇ ಬಲಿ ಪಡೆದ ಬ್ಲಾಕ್​ಬೆರ್ರಿ ಮತ್ತು ಹುವಾವೆ ಮೊಬೈಲ್​ಗಳು
(Image: The Star)

Updated: June 25, 2018, 12:37 PM IST
ಮಲೇಷ್ಯಾ: ಇಲ್ಲಿನ ಖ್ಯಾತ ಬಂಡವಾಳ ಹೂಡಿಕೆ​ ಸಂಸ್ಥೆ ಕ್ರಡೆಲ್​ ಫಂಡ್​ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮೊಬೈಲ್ ಸ್ಪೋಟಗೊಂಡು ಮೃತಪಟ್ಟ ಘಟನೆ ನಡೆದಿದೆ.

ಮಲೇಷ್ಯಾ ಸಚಿವಾಲಯದ ಕ್ರಡಲ್ ಫಂಡ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಜ್ರಿನ್ ಹಸನ್ ಅವರ ಮೊಬೈಲ್​ ಸ್ಪೋಟಗೊಂಡು ಮೃತಪಟ್ಟಿದ್ದಾರೆ. ಮೊಬೈಲ್ ಬ್ಯಾಟರಿ ಓವರ್​ಹೀಟ್​ ಆಗಿ ಸ್ಫೋಟಗೊಂಡ ತೀವ್ರತೆಗೆ ಸಿಡಿದ ಮೊಬೈಲ್​ನ ಚೂರುಗಳು ಹಸನ್​ ಅವರ ತೊಲೆ, ಮತ್ತು ಕತ್ತಿನ ಭಾಗದಲ್ಲಿದ್ದವು ಎಂದು ವರದಿಯಾಗಿದೆ.

ಹುವಾವೇ ಮತ್ತು ಬ್ಲಾಕ್​ಬೆರ್ರಿ ಮೊಬೈಲ್​ ಬಳಸುತ್ತಿದ್ದ ನಜ್ರಿನ್​, ರಾತ್ರಿ ಮಲಗುವ ಸಂದರ್ಭದಲ್ಲಿ ತನ್ನ ಬೆಡ್​ ಬಳಿಯೇ ಚಾರ್ಜ್​ಗಿಟ್ಟು ಮಲಗಿದ್ದರಂತೆ. ಈ ವೇಳೆ ಮೊಬೈಲ್​ ಸ್ಪೋಟಗೊಂಡಿದ್ದು ಇದರೊಂದ ವಿಷಕಾರಿ ಅನಿಲ ಒಳತೆಗೆದುಕೊಂಡ ಹಸನ್ ಮೃತಪಟ್ಟಿದ್ದಾರೆ ಎಂದು ಪೊಲೀಸರು  ವರದಿ ಸಲ್ಲಿಸಿದ್ದರು.ಕುಟುಂಬಸ್ಥರ ಪ್ರಕಾರ ಸ್ಪೋಟಗೊಂಡ ಒಂದು ಮೊಬೈಲ್​ನ ಚೂರುಗಳು ನಸ್ರೀನ್​ ಅವರ ಕತ್ತಿನ ಭಾಗದಲ್ಲಿ ಚುಚ್ಚಿಕೊಂಡಿದ್ದವು. ಹೀಗಾಗಿ ಮೊಬೈಲ್​ ಸ್ಪೋಟದ ತೀವ್ರತೆಗೆ ನಜ್ರಿನ್​ ಮೃತಪಟ್ಟಿರಬಹುದು ಎಂದು ಕುಟುಂಬ ಸದಸ್ಯರು ಆರೋಪಿಸುತ್ತಿದ್ದಾರೆ.

ಹೀಗಾಗಿ ನಜ್ರಿನ್ ಹಸನ್ ಅವರು ವಿಷಕಾರಿ ಅನಿಲದಿಂದ ಸತ್ತಿದ್ದಾರೆ ಎಂದು ಪೊಲೀಸರು ನೀಡಿದ್ದ ಮರಣದ ಕಾರಣವನ್ನು ಕುಟುಂಬ ಸದಸ್ಯರು ಮೊದಲೇ ತಳ್ಳಿಹಾಕಿದ್ದಾರೆ.

ನಜ್ರಿನ್ ಬಳಸುತ್ತಿದ್ದ ಬ್ಲಾಕ್‌ಬೆರಿ ಹಾಗೂ ಹುವಾಯಿ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಫೋನ್‌ ಸ್ಫೋಟಗೊಂಡಿರುವುದು ಎಂಬುದು ಇನ್ನೂ ಪತ್ತೆಯಾಗಿಲ್ಲ. ನಜ್ರೀನ್​ ಇಂಗ್ಲೆಂಡ್‌ನ ಬಕಿಂಗ್ ಹ್ಯಾಮ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...