Clubhouse: ಮುಸ್ಲಿಂ ಮಹಿಳೆಯರು ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುವಂಥಾ ವೇದಿಕೆ ಒದಗಿಸಿಕೊಟ್ಟಿದೆ ಕ್ಲಬ್ ಹೌಸ್.. ಏನು ಮಾತಾಡ್ತಿದ್ದಾರೆ ಗೊತ್ತಾ?

Sexuality: ನಾಲ್ವರೂ ಮಹಿಳೆಯರು ಪ್ರಸಿದ್ಧಿ ಪಡೆದದ್ದು ಕ್ಲಬ್ ಹೌಸ್‌ನಲ್ಲಿ ವಿಭಿನ್ನ ರೀತಿಯ ಚರ್ಚೆಗಳನ್ನು ನಡೆಸುವ ಮೂಲಕ. ಸ್ತ್ರೀಲೈಂಗಿಕತೆ, ಹಸ್ತಮೈಥುನ, ಮದುವೆ, ವರದಕ್ಷಿಣೆ ಮತ್ತು ಉನ್ನತ ಶಿಕ್ಷಣದಂತಹ ಟಾಪಿಕ್‌ಗಳನ್ನೇ ಇವರು ಡಿಬೇಟ್‌ಗೆ ಪ್ರಧಾನ ವಸ್ತುವಾಗಿ ಬಳಸುತ್ತಿದ್ದರು

Dandara Pagu

Dandara Pagu

  • Share this:

ಸ್ತ್ರೀಯರು ಲೈಂಗಿಕತೆ ಮತ್ತು ಹಸ್ತಮೈಥುನದಂತಹ ವಿಷಯಗಳ ಬಗ್ಗೆ ಚರ್ಚಿಸುವುದನ್ನು ನಿಷೇಧಿಸುತ್ತಿರುವ ಈ ಕಾಲಾಮಾನದಲ್ಲಿ ಮಹಿಳೆಯರೇ ಆಯೋಜಿಸಿರುವ ಕ್ಲಬ್‌ಹೌಸ್ ಕೊಠಡಿಗಳು ಹೆಚ್ಚಿನ ಸಾಮಾಜಿಕ ಮಾಧ್ಯಮ ಚರ್ಚೆಗಳನ್ನು ಹುಟ್ಟುಹಾಕಿದೆ. ಜೂನ್ 20 ರ ಬೆಳಗ್ಗಿನ ಜಾವ 2ರ ಸುಮಾರಿಗೆ ಭಾರತದಲ್ಲಿರುವ ಹೆಚ್ಚಿನ ಜನರು ಗಾಢ ನಿದ್ರೆಯಲ್ಲಿರುವಾಗ ಮಲಯಾಳಿಗಳ ಗುಂಪೊಂದು ಕ್ಲಬ್‌ಹೌಸ್‌ನಲ್ಲಿ ತೀವ್ರ ಚರ್ಚೆಯಲ್ಲಿ ಮುಳುಗಿದ್ದರು. ಕ್ಲಬ್ ಹೌಸ್ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದ್ದು, ಇದರಲ್ಲಿ ಧ್ವನಿ ಸಂವಾದಗಳನ್ನು 4,000 ಕ್ಕಿಂತ ಹೆಚ್ಚಿನ ಪಾಲ್ಗೊಳ್ಳುವವರೊಂದಿಗೆ ನಡೆಸಬಹುದಾಗಿದೆ. ಇಲ್ಲಿ ಚರ್ಚೆಯಾದ ವಿಷಯ ಯಾವುದೆಂದರೆ “ಆರೋಗ್ಯಕರ ಲೈಂಗಿಕ ಜೀವನ ಮತ್ತು ಮಹಿಳೆಯ ತೃಪ್ತಿ”. ಈ ಡಿಬೇಟ್‌ನ ರುವಾರಿಗಳು ನಾಲ್ವರು ಮಹಿಳೆಯರು. ಅವರೇ ಕಫೀಲಾ ಪರ್ವಿನ್, ಶಹೀಬ್ ವಿಕೆ, ವಫಾ ಹುಸೇನ್ ಮತ್ತು ಮಹಫೂಸಾ. ಇವೆರಲ್ಲರೂ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಮೂಲಕ ಪರಿಚಯವಾದವರು.


ಈ ನಾಲ್ವರೂ ಮಹಿಳೆಯರು ಪ್ರಸಿದ್ಧಿ ಪಡೆದದ್ದು ಕ್ಲಬ್ ಹೌಸ್‌ನಲ್ಲಿ ವಿಭಿನ್ನ ರೀತಿಯ ಚರ್ಚೆಗಳನ್ನು ನಡೆಸುವ ಮೂಲಕ. ಸ್ತ್ರೀಲೈಂಗಿಕತೆ, ಹಸ್ತಮೈಥುನ, ಮದುವೆ, ವರದಕ್ಷಿಣೆ ಮತ್ತು ಉನ್ನತ ಶಿಕ್ಷಣದಂತಹ ಟಾಪಿಕ್‌ಗಳನ್ನೇ ಇವರು ಡಿಬೇಟ್‌ಗೆ ಪ್ರಧಾನ ವಸ್ತುವಾಗಿ ಬಳಸುತ್ತಿದ್ದರು. ಕ್ಲಬ್‌ಹೌಸ್‌ನಲ್ಲಿ ಮಹಿಳೆಯರ ದೃಷ್ಟಿಕೋನಕ್ಕೂ ಬೆಲೆ ಸಿಗಬೇಕು ಅವರ ಮನದಾಳದ ಮಾತುಗಳನ್ನು ಆಲಿಸಬೇಕು ಎಂಬ ನಿಟ್ಟಿನಲ್ಲಿ ನಾವು ನಾಲ್ವರೂ ಮುಸ್ಲಿಂ ಮಹಿಳೆಯರು ಜೊತೆಯಾಗಿ ಬಂದಿರುವೆವು. ಈ ನಾಲ್ವರಲ್ಲಿ ಕಫೀಲಾ ಎಂಬುವವರು ಕೊಡಂಗಲ್ಲೂರ್‌ನಲ್ಲಿ ಬರಹಗಾರ್ತಿಯಾಗಿ ಕೆಲಸಮಾಡುತ್ತಿದ್ದಾರೆ.


ಕ್ಲಬ್​ಹೌಸ್‌ನಲ್ಲಿ ಆರಂಭದ ದಿನಗಳಲ್ಲಿ ಅವರೆಲ್ಲರೂ ಲಿಂಗ ಸೇರ್ಪಡೆ, ಮಹಿಳಾ ಸಬಲೀಕರಣದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೇರೆ ಬೇರೆ ಗುಂಪುಗಳಲ್ಲಿ ಗಂಟೆಗಟ್ಟಲೆ ಸಮಯವನ್ನು ವ್ಯಯಿಸುತ್ತಿದ್ದರು. ಮಲಪ್ಪುರಂನ ಭಾಷಾ ಬೋಧಕಿ ಶಹೀಬಾ ಹೇಳುವಂತೆ ವೇದಿಕೆಯಲ್ಲಿ ಸ್ತ್ರೀವಾದ ಮತ್ತು ಲಿಂಗದ ಕುರಿತು ಸಾಕಷ್ಟು ತಪ್ಪು ತಿಳುವಳಿಕೆ ಹರಡುತ್ತಿದೆ. ಸ್ತ್ರೀವಾದದ ಕುರಿತು ಹೆಚ್ಚಿನ ವಿವರಗಳನ್ನು ತಿಳಿಸುವ ಸಮಯದಲ್ಲಿ ವಫಾ ಮತ್ತು ಇತರರು ಮ್ಯೂಟ್ ಆಗಿರುತ್ತಾರೆ ಹಾಗೆ ಅವರನ್ನು ಸ್ಪೀಕರ್‌ಗಳ ಪ್ಯಾನಲ್‌ನಿಂದ ತೆಗೆದುಹಾಕುವುದನ್ನು ನಾನು ಗಮನಿಸಿರುವೆ. ನಾವು ಸಮಾನ ರೀತಿಯ ಯೋಚನೆಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಪ್ರಜಾಪ್ರಭುತ್ವ ನಿಮಯಗಳೊಂದಿಗೆ ಒಂದು ವಿಷಯವನ್ನು ಪ್ರಸ್ತಾಪಿಸಲು ಆರಂಭಿಸಿದೆವು.


ಕೆನಡಾದ ಸಾಹಿತ್ಯ ರಾಬಿನ್ ಜೆಫ್ರಿ ಹೇಳುವಂತೆ ಕೇರಳವನ್ನು ಒಂದು ಧನಾತ್ಮಕ ಅಂಶವಿರುವ ರಾಜ್ಯವಾಗಿ ನಾವು ಗೌರವಿಸಬೇಕು. ಲಿಂಗ ಸಮಾನತೆಯ ಮೇಲೆ ಆ ರಾಜ್ಯದ ಯೋಚನೆಗಳು ನಿಜಕ್ಕೂ ಶ್ಲಾಘನೀಯ ಮತ್ತು ಕೇರಳವು ಒಂದು ರೋಲ್ ಮಾಡೆಲ್ ಆಗಿದೆ. ಮಲಯಾಳಿಗಳು ರಾಜ್ಯದ ಮಹಿಳೆಯರ ಸ್ವಾತಂತ್ರ್ಯ ಮತ್ತು ಆಲೋಚನೆಗಳನ್ನು ಪುರಸ್ಕರಿಸುತ್ತಾರೆ. ಸ್ತ್ರೀತ್ವವನ್ನು ಗೌರವಿಸುತ್ತಾರೆ. ಜಾಗತೀಕರಣ, ಆರ್ಥಿಕ ಸ್ವಾತಂತ್ರ್ಯದ ನಂತರ ಹಲವಾರು ಸ್ಥಳಗಳಲ್ಲಿ ನಿರಾಕರಣೆಯ ಬದಲಿಗೆ ಅಂಗೀಕರಿಸುವಿಕೆ ಪ್ರಕ್ರಿಯೆ ನಡೆದಿದೆ. ಆದಾಗ್ಯೂ, ಕೇರಳ ತನ್ನ ಕಟ್ಟುನಿಟ್ಟಾದ ಸಾಮಾಜಿಕ ಸ್ಥಿತಿಗತಿ ಮತ್ತು ರಚನಾತ್ಮಕ ಲೈಂಗಿಕ ಆಲೋಚನೆಗಳನ್ನು ಬಲವಾಗಿ ಎತ್ತಿಹಿಡಿದಿದೆ. ನೈತಿಕ ಕಾನೂನು ನಿರ್ವಹಣೆ ಹಾಗೂ ಅದರೊಂದಿಗೆ ನಡೆದ ಚರ್ಚೆಗಳು ‘ಕಿಸ್ ಆಫ್ ಲವ್’ ಪ್ರತಿಭಟನೆಯ ಸಮಯದಲ್ಲಿ ಕೊಳಕು ಸತ್ಯ ಬಹಿರಂಗಗೊಂಡಿತು. ಅನೇಕ ಸಮುದಾಯಗಳಲ್ಲಿ ವೈವಾಹಿಕ ಸಾಮಾಜಿಕ ರಚನೆಯ ಇತಿಹಾಸ, ದೇಶದಲ್ಲಿ ಅತ್ಯಧಿಕ ಸ್ತ್ರೀ ಸಾಕ್ಷರತೆ ಮತ್ತು ಉತ್ತಮ ಲಿಂಗ ಅನುಪಾತ, ಕಡಿಮೆ ಶಿಶು ಮರಣ ಹೊಂದಿರುವ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಲಿಂಗ ವಿರೋಧಾಭಾಸವು ಕೇರಳದ ಹೊರಗಿನ ರಾಜ್ಯದವರಿಗೆ ಆಶ್ಚರ್ಯವನ್ನುಂಟು ಮಾಡಿದವು.


ಚಿತ್ರನಿರ್ಮಾಪಕಿ ಮತ್ತು ಸ್ತ್ರೀವಾದಿ ಕುಂಜಿಲಾ ಮಾಸಿಲಾಮಣಿ ಕ್ಲಬ್‌ಹೌಸ್‌ನಲ್ಲಿ ಸಂವಾದಗಳನ್ನು ಆರಂಭಿಸಿದರು ಅವರು ಸಂವಾದಕ್ಕೆ ‘ಆಣಿಂಗಳ್ ಅಲ್ಲಾತವರ್ ಮಿಂಡುಮ್’ (ಪುರುಷರಲ್ಲದವರು ಮಾತನಾಡುತ್ತಾರೆ) ಎಂದು ಹೆಸರನ್ನಿಟ್ಟರು. ಮಹಿಳೆಯರು ಮಾತನಾಡುವಾಗ ಪುರುಷರು ನಡುವೆ ಸಂವಾದ ನಡೆಸುವುದನ್ನು ಅವರು ಕಂಡುಕೊಂಡು ಸಂವಾದಕ್ಕೆ ಈ ರೀತಿಯ ಶೀರ್ಷಿಕೆಯನ್ನಿಟ್ಟರು. ಆರಂಭಿಕ ದಿನಗಳಲ್ಲಿ ಅವರು ಕ್ಲಬ್‌ ಹೌಸ್‌ನಲ್ಲಿ ಮಾತನಾಡುತ್ತಿದ್ದಾಗ ಸಂವಹನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಯಾವಾಗಲೂ ಯಾರಾದರೂ ಪುರುಷರು ನಡುವೆ ಮಾತನಾಡುತ್ತಿದ್ದರು. ಪುರುಷರ ದಬ್ಬಾಳಿಕೆಯನ್ನು ಸಾಮಾನ್ಯವಾಗಿ ಸ್ವೀಕರಿಸುವ ರೀತಿ ಆಕೆಗೆ ಇಲ್ಲಿಯೂ ಕಂಡುಬಂದಿತು. ಕ್ಲಬ್ ಹೌಸ್‌ನಲ್ಲಿ ಸಂವಹನ ನಡೆಸುವ ವಿಷಯಗಳೆಂದರೆ ಸಾಮಾಜಿಕ ನಿಯಮಗಳ ಉಲ್ಲಂಘನೆ, ಲಿಂಗ ತಾರತಮ್ಯತೆ, ಮಹಿಳೆಯರು ಮತ್ತು LGBTQIA+ ಸಮುದಾಯದ ಸದದ್ಯರು ಸಕ್ರಿಯವಾಗಿ ಭಾಗವಹಿಸುವ ಲೈಂಗಿಕತೆಯ ವಿಷಯಗಳು.


ಮಲಯಾಳಿ ಮಹಿಳೆಯರು ತಮ್ಮ ಲೈಂಗಿಕ ಅಗತ್ಯಗಳು, ಸ್ವಾತಂತ್ರ್ಯ ಮತ್ತು ಹಕ್ಕುಗಳ ಕುರಿತು ಅಪ್ಲಿಕೇಶನ್‌ನಲ್ಲಿ ಬಹಿರಂಗವಾಗಿ ಮಾತನಾಡಲು ಆರಂಭಿಸಿದಾಗ ಸ್ಕ್ರೀನ್ ರೆಕಾರ್ಡಿಂಗ್‌ಗಳನ್ನು ಸೋಶೀಯಲ್ ಮೀಡಿಯಾಗಳಲ್ಲಿ ಶೇರ್ ಮಾಡಲಾಗಿತ್ತ. ಮಲಯಾಳಿಗಳಲ್ಲಿ ಒಂದು ರೀತಿಯ ತಲ್ಲಣವನ್ನೇ ಇದು ಸೃಷ್ಟಿಮಾಡಿತ್ತು. ಇಂಟರ್ನೆಟ್ ಅನ್ನು ಲೈಂಗಿಕ ವಿಷಯದ ಬಗ್ಗೆ ಮಾತನಾಡಲು ತಪ್ಪಾಗಿ ಬಳಸಲಾಗುತ್ತಿದೆ ಎಂಬ ಕಾಮೆಂಟ್‌ಗಳು ಹರಿದಾಡಿದ್ದವು. ಸಮಾಜಕ್ಕೆ ಇಷ್ಟವಾಗದೇ ಇರುವ ಟಾಪಿಕ್‌ಗಳನ್ನು ಕ್ಲಬ್ ಹೌಸ್‌ನಲ್ಲಿ ಸಂವಹನ ನಡೆಸುವುದರಿಂದ ಮಹಿಳೆಯರು ತಮ್ಮ ಹದ್ದುಮೀರಿ ವರ್ತಿಸುತ್ತಿದ್ದಾರೆ ಎಂಬ ಕಾಮೆಂಟ್ ಕೂಡ ಕೇಳಿಬಂದಿತ್ತು. ಅಪ್ಲಿಕೇಶನ್ ನಿಲ್ಲಿಸುವಂತೆ ಒತ್ತಡಗಳೂ ನಡೆದಿದ್ದವು.


ಕ್ಲಬ್‌ಹೌಸ್‌ನಲ್ಲಿ ಮೂರನೇ ದಿನವಾದ ಮಹಫೂಸಾಳಿಗೆ ತನ್ನ ಕುಟುಂಬದಲ್ಲಿನ ಸಮಾರಂಭವೊಂದರಲ್ಲಿ ಭಾಗವಹಿಸಬೇಕಿತ್ತು, ಸ್ತ್ರೀತ್ವ ಮತ್ತು ಸ್ಕಾರ್ಫ್ ಕುರಿತು ಅವರು ಚರ್ಚಿಸಿದ ಅಂಶಗಳ ಸ್ಕ್ರೀನ್ ರೆಕಾರ್ಡಿಂಗ್‌ಗಳು ಆಕೆಯ ಸಂಬಂಧಿಕರನ್ನು ತಲುಪಿತ್ತು. “ನನ್ನ ಸಂಬಂಧಿಕರಿಗೆ ಈ ರೆಕಾರ್ಡಿಂಗ್ ಒಂದು ಬಿಸಿ ಸುದ್ದಿಯಾಗಿತ್ತು ಮತ್ತು ಆ ಸುದ್ದಿಯ ಮೂಲಕೇಂದ್ರ ಬಿಂದು ನಾನಾಗಿದ್ದೆ. ವಿಚ್ಛೇದನದ ನಂತರ ನನ್ನ ಸ್ವಾತಂತ್ರ್ಯವನ್ನು ಹೋರಾಡಿ ಗೆದ್ದನಂತರ ಮನೆಯ ಸದಸ್ಯರು ನನ್ನ ವಿಷಯಕ್ಕೆ ತಲೆಹಾಕುವುದಿಲ್ಲ ಮತ್ತು ಈಗ ಎಲ್ಲಾ ವದಂತಿಗಳು ತಣ್ಣಗಾಗಿವೆ ಎಂದು ಮಹಫೂಸಾ ಹೇಳುತ್ತಾರೆ.


Amazon Alexa: ಅಲೆಕ್ಸಾ ಹೆಸರು ತಂದಿದೆ ಅಮೆಜಾನ್​ಗೆ ವಿಪತ್ತು; ಮಗಳ ಹೆಸರನ್ನೇ ಇಟ್ಟಿದ್ಯಾಕೆ ಎಂದ ಪೋಷಕರು!

ಶಹೀಬಾಳ ಪತಿಯ ಸ್ನೇಹಿತರು ಮತ್ತು ಕೆಲವೊಂದು ಗುಂಪುಗಳೂ ಕೂಡ ಆಕೆಯ ಹಲವಾರು ಕ್ಲಬ್‌ಹೌಸ್ ಚರ್ಚೆಗಳ ವೀಡಿಯೊಗಳನ್ನು ಸ್ವೀಕರಿಸಿತ್ತು. ಅವರೆಲ್ಲರೂ ಆಕೆಯನ್ನು ಕೇಳಿದ ಒಂದೇ ಪ್ರಶ್ನೆಯೆಂದರೆ ನೀನು ಸೆಕ್ಸ್ ಬಿಟ್ಟು ಬೇರೆ ವಿಷಯದ ಬಗ್ಗೆ ಯಾಕೆ ಮಾತನಾಡುವುದಿಲ್ಲವೆಂದು. ಇಂದಿನವರೆಗೂ ಅವರ ದೂರು ನಾನು ಬರೇ ರಾಜಕೀಯದ ಬಗ್ಗೆ ಮಾತನಾಡುತ್ತಿರುವೆ ಎಂದಾಗಿತ್ತು. ಈಗ ರಾಜಕೀಯ ಬಿಟ್ಟು ಪ್ರಚಲಿತ ವಿಷಯದ ಬಗ್ಗೆ ಮಾತನಾಡಿದರೆ ಈ ರೀತಿಯ ಕಾಮೆಂಟ್ ಎಂಬುದಾಗಿ ಆಕೆ ಹಾಸ್ಯ ಮಾಡುತ್ತಾಳೆ.


Vi Prepaid Plan: ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ 25GB ಉಚಿತ ಡೇಟಾ!

ಕ್ಲಬ್ ಹೌಸ್‌ನಲ್ಲಿ ನಡೆಯುವ ಹಲವಾರು ಚರ್ಚೆಗಳು ಮಹಿಳೆಯರನ್ನು ಗಟ್ಟಿಮಾಡಿಸಿದೆ. ಯಾವುದೇ ಸಮಸ್ಯೆಯನ್ನು ಎದುರಿಸುವ ಧೈರ್ಯವನ್ನು ಅವರಲ್ಲಿ ರೂಪಿಸಿದೆ. ಮಾರ್ಕೆಟಿಂಗ್ ವೃತ್ತಿಪರೆಯಾಗಿರುವ ಓಜಲ್ ಹೇಳುವಂತೆ ಕ್ಲಬ್ ಹೌಸ್‌ಗೆ ಸೇರುವ ಮುನ್ನ ನನ್ನ ಜಗತ್ತು ಮನೆ ಮತ್ತು ಕಚೇರಿ ಮಾತ್ರವಾಗಿತ್ತು. ಆದರೆ ಕ್ಲಬ್ ಹೌಸ್‌ಗೆ ಸೇರಿದ ಮೇಲೆ ನನ್ನ ಯೋಚನಾ ಲಹರಿಯೇ ಬದಲಾಯಿತು. ಮಹಿಳೆಯರ ಕಥೆಗಳು ಮತ್ತು ಅವರ ಅನುಭವಗಳನ್ನು ಕೇಳಿದ ನಂತರ ನಾನು ಹಿಂದಿಗಿಂತಲೂ ಗಟ್ಟಿಯಾಗಿರುವೆ ಮತ್ತು ದೃಢವಾಗಿರವೆ ಎಂದು ಹೇಳಿದ್ದಾರೆ.


First published: