Google Doodle: ಮಲಯಾಳಂ ಚಿತ್ರರಂಗದ ಮೊದಲ ಮಹಿಳಾ ನಟಿಗೆ ಗೂಗಲ್ ಡೂಡಲ್​​ನಿಂದ ಗೌರವ!

ಮೊದಲ ಮಳಯಾಲಂ ಮಹಿಳಾ ನಟಿ ಪಿ.ಕೆ ರೋಸಿ

ಮೊದಲ ಮಳಯಾಲಂ ಮಹಿಳಾ ನಟಿ ಪಿ.ಕೆ ರೋಸಿ

P.K Rosy: ಮಳಯಾಲಂ ಚಿತ್ರರಂಗಕ್ಕೆ ಮೊದಲ ಮಹಿಳಾ ನಟಿಯಾಗಿ ಕಾಲಿಟ್ಟಿದ್ದು ಪಿ.ಕೆ ರೋಸಿ ಎಂಬವರು. ಇವರೊಬ್ಬರು ದಲಿತ ಮಹಿಳೆಯಾಗಿ ಸಮಾಜಕ್ಕೆ ಮಾದರಿಯಾಗುವಂತಹ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗಿದ್ರೆ ಇವರು ನಟನೆ ಮಾಡಿದಂತಹ ಮೊದ ಸಿನಿಮಾ ಯಾವುದು? ಯಾಕೆ ಗೂಗಲ್ ಡೂಡಲ್ ಇವರ ಹುಟ್ಟು ಹಬ್ಬವನ್ನು ಆಚರಿಸ್ತಾ ಇದ್ದಾರೆಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
  • Share this:

    ಟೆಕ್​ ದೈತ್ಯ ಕಂಪೆನಿಯೆಂದು ಗುರುತಿಸಿಕೊಂಡಿರುವ ಗೂಗಲ್ (Google) ಪ್ರತೀ ಬಾರಿ ಏನಾದರು ವಿಶೇಷತೆಯೊಂದಿಗೆ ಬಳಕೆದಾರರನ್ನು ಸೆಳೆಯುತ್ತಿರುತ್ತದೆ. ಅದರಲ್ಲಿ ಮುಖ್ಯವಾಗಿ ನಾವು ಗೂಗಲ್​ ಡೂಡಲ್ (Google Doodle) ಅನ್ನು ನೋಡಬಹುದಾಗಿದೆ. ಗೂಗಲ್​ ತನ್ನ ಡೂಡಲ್​ ಮೂಲಕ ಏನಾದರು ಫೋಟೋ, ಆ್ಯನಿಮೇಶನ್​ಗಳನ್ನು ಆ್ಯಡ್ ಮಾಡುವ ಮೂಲಕ ಆಕರ್ಷಿಸುತ್ತಿರುತ್ತದೆ. ಇದು ಒಂದು ಸಂಭ್ರಮದ ದಿನವನ್ನು ಅಥವಾ ಶ್ರೇಷ್ಠ ವ್ಯಕ್ತಿಗಳ ಜನ್ಮದಿನವನ್ನು ಬಿಂಬಿಸುತ್ತದೆ. ಹಲವಾರು ಬಾರಿ ಗೂಗಲ್​ ಇದೇ ರೀತಿಯಲ್ಲಿ ಯಾರದ್ದಾದರೂ ಫೋಟೋವನ್ನು ಆ್ಯಡ್​ ಮಾಡುವ ಮೂಲಕ ಆಚರಣೆ ಮಾಡುತ್ತದೆ. ಅದೇ ರೀತಿ ಇಂದು ಅಂದರೆ ಫೆಬ್ರವರಿ 10 ರಂದು ಮಲಯಾಳಂ ಚಿತ್ರರಂಗದ ಮೊದಲ ಮಹಿಳಾ ನಟಿಯ (Malayalam First Actress) ಹುಟ್ಟುಹಬ್ಬದ ಸಂಭ್ರವನ್ನು ಆಚರಿಸುತ್ತಿದೆ.


    ಹೌದು, ಮಲಯಾಳಂ ಚಿತ್ರರಂಗಕ್ಕೆ ಮೊದಲ ಮಹಿಳಾ ನಟಿಯಾಗಿ ಕಾಲಿಟ್ಟಿದ್ದು ಪಿ.ಕೆ ರೋಸಿ ಎಂಬವರು. ಇವರೊಬ್ಬರು ದಲಿತ ಮಹಿಳೆಯಾಗಿ ಸಮಾಜಕ್ಕೆ ಮಾದರಿಯಾಗುವಂತಹ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗಿದ್ರೆ ಇವರು ನಟನೆ ಮಾಡಿದಂತಹ ಮೊದ ಸಿನಿಮಾ ಯಾವುದು? ಯಾಕೆ ಗೂಗಲ್ ಡೂಡಲ್ ಇವರ ಹುಟ್ಟು ಹಬ್ಬವನ್ನು ಆಚರಿಸ್ತಾ ಇದ್ದಾರೆಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


    ಪಿ.ಕೆ ರೋಸಿ ಯಾರು?


    ಪಿ.ಕೆ ರೋಸಿ ಫೆಬ್ರವರಿ 10, 1903 ರಂದು ಕೇರಳದ ತಿರುವನಂತಪುರನಲ್ಲಿ ಜನಿಸಿದರು. ಇನ್ನು ಇವರ 120ನೇ ಜನ್ಮದಿನ ಪ್ರಯುಕ್ತ ಇಂದು ಗೂಗಲ್​ ಡೂಡಲ್​ ಪಿ.ಕೆ ರೋಸಿಯವರಿಗೆ ಗೌರವವನ್ನು ಸಲ್ಲಿಸಿದೆ.


    ಇದನ್ನೂ ಓದಿ: ಒನ್​ಪ್ಲಸ್​ ಕಂಪೆನಿಯ ಹೊಸ ಇಯರ್​ಬಡ್ಸ್​ ಲಾಂಚ್​! ಫೀಚರ್ಸ್​ಗೆ ಫಿದಾ ಆಗೋದು ಗ್ಯಾರಂಟಿ


    ಮೊದಲ ಸಿನಿಮಾ ಯಾವುದು?


    ಸಮಾಜದ ಅನೇಕ ವಿಭಾಗಗಳಲ್ಲಿ, ವಿಶೇಷವಾಗಿ ಮಹಿಳೆಯರಿಗೆ ಪ್ರದರ್ಶನ ಕಲೆಗಳು ನಿರುತ್ಸಾಹಗೊಂಡ ಯುಗದಲ್ಲಿ, ಪಿ.ಕೆ ರೋಸಿ ಯವರು ಮಲಯಾಳಂ ಚಲನಚಿತ್ರ ವಿಗತಕುಮಾರನ್ (ದಿ ಲಾಸ್ಟ್ ಚೈಲ್ಡ್) ಸಿನಿಮಾದಲ್ಲಿನ ತನ್ನ ಪಾತ್ರದ ಮೂಲಕ ಸಮಾಜದಲ್ಲಿದ್ದ ಅಡೆತಡೆಗಳನ್ನು ಮುರಿದರು. ಇಂದಿಗೂ, ಅವರ ಕಥೆ ಅನೇಕರಿಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿಯೇ ಗೂಗಲ್ ಈ ಗೌರವವನ್ನು ನೀಡಿದೆ.


    ಪಿ.ಕೆ ರೋಸಿಯವರ ಮೊದಲ ಸಿನಿಮಾದ ವಿವಾದ


    ಪಿಕೆ ರೋಸಿ 1928 ರಲ್ಲಿ ಮಲಯಾಳಂನ ಮೂಕ ಚಲನಚಿತ್ರ ವಿಗತಕುಮಾರನ್ (ದಿ ಲಾಸ್ಟ್ ಚೈಲ್ಡ್) ನ ಎಂಬುದರಲ್ಲಿ ಮಹಿಳಾ ನಾಯಕಿಯಾಗಿ ಪಾತ್ರ ನಿರ್ವಹಿಸಿದರು. ಅವರು ಮಲಯಾಳಂ ಚಿತ್ರರಂಗದ ಮೊದಲ ನಾಯಕಿ ಮತ್ತು ಭಾರತೀಯ ಚಿತ್ರರಂಗದ ಮೊದಲ ದಲಿತ ನಟಿ ಎಂದು ಗುರುತಿಸಿಕೊಂಡರು.


    ಮೊದಲ ಮಳಯಾಲಂ ಮಹಿಳಾ ನಟಿ ಪಿ.ಕೆ ರೋಸಿ


    ಆದರೆ ಈ ಮಲಯಾಳಂ ಚಿತ್ರದಲ್ಲಿ ರೋಸಿಯವರು ನಾಯರ್ ಮಹಿಳೆ ಸರೋಜಿನಿ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರ ಬಿಡುಗಡೆಯಾದಾಗ, ದಲಿತ ಮಹಿಳೆಯೊಬ್ಬರು ಈ ಚಿತ್ರದಲ್ಲಿ ನಟನೆ ಮಾಡಿದ್ದನ್ನು ನೋಡಿ ಸಮುದಾಯದ ಸದಸ್ಯರು ಕೋಪಗೊಂಡರು ಎಂದು ವರದಿಯಾಗಿದೆ. ಇನ್ನು ಇದರಿಂದ ಕೋಪಗೊಂಡ ಮೇಲ್ಜಾತಿಯ ಜನಗಳು ಈಕೆಯ ಮನೆಯನ್ನು ಸುಟ್ಟು ಹಾಕಿದ್ದಾರೆ.


    ತಮಿಳುನಾಡಿನಲ್ಲಿ ಜೀವನ


    ಕೇರಳದಲ್ಲಿ ರೋಸಿಯವರಿಗೆ ಆದಂತಹ ಸಮಸ್ಯೆಗಳನ್ನು ಎದುರಿಸಿ, ಜೀವಭಯದಿಂದ ತಮಿಳುನಾಡಿಗೆ ಲಾರಿಯಲ್ಲಿ ಓಡಿ ಹೋಗಿದ್ದಾರೆ. ಜೊತೆಗೆ ಲಾರಿ ಚಾಲಕ ಕೇಶವನ್ ಪಿಳೈ ಎಂಬಾತನನ್ನು ವಿವಾಹವಾದರು. ನಂತರ ತಮಿಳುನಾಡಿನಲ್ಲಿ ರಾಜಮ್ಮಾಳ್ ಎಂಬ ಹೆಸರಿನಿಂದ ಜೀವನ ಸಾಗಿಸುತ್ತಿದ್ದರು.




    ಈ ಸಿನಿಮಾದಿಂದ ಈಕೆ ಯಾವುದೇ ಖ್ಯಾತಿಯನ್ನು ಪಡೆಯಲಿಲ್ಲ, ಬದಲಾಗಿ ಪಿ.ಕೆ ರೋಸಿಯವರು ತನ್ನ ನಟನೆಯ ಜೀವನವನ್ನು ನಿಲ್ಲಿಸಿ ಬಹುವರ್ಷಗಳ ನಂತರ ಇವರು ಮಲಯಾಳಂ ಚಿತ್ರ ರಂಗಕ್ಕೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳು ಬೆಳಕಿಗೆ ಬಂತು.


    ಇನ್ನು ಇವರ ಕೊಡುಗೆಗಾಗಿ ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ನಟರ ಸಮಾಜವು ತನ್ನ ಸಂಸ್ಥೆಗೆ ಪಿ.ಕೆ ರೋಸಿ ಫಿಲ್ಮ್ ಸೊಸೈಟಿ ಎಂದು ಹೆಸರಿಸಿತು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು