ನಿಮ್ಮ ಮನೆಯನ್ನು ಮತ್ತಷ್ಟು ಅಂದಗೊಳಿಸಿ; ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಪ್ಲಾಸ್ಟಿಕ್​ ಟೈಲ್ಸ್​

ಪ್ಲಾಸ್ಟಿಕ್​ ಕರಗದ ವಸ್ತುವಾಗಿದ್ದು, ಇದರ ಬಳಕೆಯಿಂದ ಇಂದು ವಿಶ್ವವೇ ಭಯದ ವಾತವರಣಕ್ಕೆ ತಿರುಗಿದೆ. ಪರಿಸರಕ್ಕೆ ಹಾನಿ ಮಾಡುವ ಈ ಪ್ಲಾಸಿಕ್ಟ್​ಗಳಿಂದ ಪ್ರಾಣಿ, ಪಕ್ಷಿ, ಮನುಷ್ಯನ ಜೀವನದ ಮೇಲೆ ಅಗಾಧವಾದ ಪರಿಣಾಮ ಬೀರುತ್ತಿದೆ. ಪ್ರಪಂಚದಾದ್ಯಂತ ವರ್ಷಕ್ಕೆ 300+ ಮಿಲಿಯನ್​ ಟನ್​ ಪ್ಲಾಸ್ಟಿಕ್​ಗಳ ಉತ್ಪತ್ತಿಯಾಗುತ್ತಿದೆ. ಈ ಕುರಿತಾಗಿ ಮುಂಬರುವ ದಿನಗಳಲ್ಲಿ ವಿಶ್ವವನ್ನು ಪ್ಲಾಸ್ಟಿಕ್​ ಮುಕ್ತವನ್ನಾಗಿಸುವ ಸಲುವಾಗಿ ಅಮೇರಿಕಾ ಮೂಲದ ಇಮಿಲಿ ಪ್ಯಾಕರ್​ ಮತ್ತು ವಾಷಿಂಗ್​ಟನ್​ ಮೂಲದ ಜಾಕ್​ ಕಾಲ್​ಹೌನ್​ ಎಂಬವರು ಇಕೋ ಕೋಲ್ಡ್​ಹಾರ್ಬರ್​ ಟೈಲ್ಸ್​ಗಳನ್ನು ಕಂಡುಹಿಡಿದಿದ್ದಾರೆ.

Harshith AS | news18
Updated:March 3, 2019, 4:21 PM IST
ನಿಮ್ಮ ಮನೆಯನ್ನು ಮತ್ತಷ್ಟು ಅಂದಗೊಳಿಸಿ; ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಪ್ಲಾಸ್ಟಿಕ್​ ಟೈಲ್ಸ್​
ಇಕೋ ಕೋಲ್ಡ್​ಹಾರ್ಬರ್​ ಟೈಲ್ಸ್
  • News18
  • Last Updated: March 3, 2019, 4:21 PM IST
  • Share this:
ಸಾಮಾನ್ಯವಾಗಿ ಮನೆಕಟ್ಟುವಾಗ ಮನೆಯ ಒಳಾಂಗಣವನ್ನು ಅಂದಗೊಳಿಸಲು ಬಣ್ಣ-ಬಣ್ಣದ ಟೈಲ್ಸ್​​ಗಳನ್ನು ಬಳಸಲಾಗುತ್ತಾರೆ. ಆದರೆ ಅವುಗಳನ್ನು ಮೀರಿದ ಇಕೋ ಪ್ಲಾಸ್ಟಿಕ್​ ಟೈಲ್ಸ್​ಗಳು ಮಾರುಕಟ್ಟೆಗೆ ಬಂದಿದ್ದು, ಹೆಚ್ಚು ಸುದ್ದಿಯಲ್ಲಿದೆ. 80 ಗ್ರಾಂ ತೂಕವನ್ನು ಹೊಂದಿರುವ ಈ ಟೈಲ್ಸ್​ ಸಂಪೂರ್ಣವಾಗಿ ವೇಸ್ಟ್​​ ಪ್ಲಾಸ್ಟಿಕ್​ನಿಂದ ತಯಾರಿಸಲಾಗುತ್ತಿದೆ.

ಪ್ಲಾಸ್ಟಿಕ್​ ಕರಗದ ವಸ್ತುವಾಗಿದ್ದು, ಇದರ ಬಳಕೆಯಿಂದ ಇಂದು ವಿಶ್ವವೇ ಭಯದ ವಾತವರಣಕ್ಕೆ ತಿರುಗಿದೆ. ಪರಿಸರಕ್ಕೆ ಹಾನಿ ಮಾಡುವ ಈ ಪ್ಲಾಸಿಕ್ಟ್​ಗಳಿಂದ ಪ್ರಾಣಿ, ಪಕ್ಷಿ, ಮನುಷ್ಯನ ಜೀವನದ ಮೇಲೆ ಅಗಾಧವಾದ ಪರಿಣಾಮ ಬೀರುತ್ತಿದೆ. ಪ್ರಪಂಚದಾದ್ಯಂತ ವರ್ಷಕ್ಕೆ 300+ ಮಿಲಿಯನ್​ ಟನ್​ ಪ್ಲಾಸ್ಟಿಕ್​ಗಳ ಉತ್ಪತ್ತಿಯಾಗುತ್ತಿದೆ. ಈ ಕುರಿತಾಗಿ ಮುಂಬರುವ ದಿನಗಳಲ್ಲಿ ವಿಶ್ವವನ್ನು ಪ್ಲಾಸ್ಟಿಕ್​ ಮುಕ್ತವನ್ನಾಗಿಸುವ ಸಲುವಾಗಿ ಅಮೇರಿಕಾ ಮೂಲದ ಇಮಿಲಿ ಪ್ಯಾಕರ್​ ಮತ್ತು ವಾಷಿಂಗ್​ಟನ್​ ಮೂಲದ ಜಾಕ್​ ಕಾಲ್​ಹೌನ್​ ಎಂಬವರು ಇಕೋ ಕೋಲ್ಡ್​ಹಾರ್ಬರ್​ ಟೈಲ್ಸ್​ಗಳನ್ನು ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: ಟ್ರೆಂಡ್​ ಆಯ್ತು ಸೈನಿಕರ ಸಾಹಸ ದೃಶ್ಯಗಳನ್ನೊಳಗೊಂಡ ನೀರೆಯರ ಸೀರೆ

ಇಮಿಲಿ ಮತ್ತು ಜಾಕ್​ ಸಂಶೋಧಿಸಿ ತಯಾರಿಸಿದ ಕೋಲ್ಡ್​ಹಾರ್ಬರ್​ ಟೈಲ್ಸ್​​ಗಳನ್ನು ಸಂಪೂರ್ಣವಾಗಿ ವೇಸ್ಟ್​ ಪ್ಲಾಸ್ಟಿಕ್​ನಿಂದ​ ತಯಾರಿಸಲಾಗುತ್ತದೆ. ಈ ಟೈಲ್ಸ್​ಗಳು ಮನೆಯ ಗೋಡೆಗಳ ಮೇಲಿನ ವಿನ್ಯಾಸವನ್ನು ಬಿಡಿಸಲು, ನೆಲದ ಮೇಲೆ ಹಾಸಲು ಮಾತ್ರವಲ್ಲದೆ ಟೇಬಲ್​ಗಳನ್ನು ಅಂದಗೊಳಿಸಲು​ ಬಳಸಲಾಗುತ್ತದೆ.

ಮೂರು ವಿನ್ಯಾಸಗಳಲ್ಲಿ ತಯಾರಿ:

ಕೋಲ್ಡ್​ಹಾರ್ಬರ್​ ಟೈಲ್ಸ್​ಗಳು ಮೂರು ವಿನ್ಯಾಸದಲ್ಲಿ ತಯಾರಾಗಿದ್ದು, ಆಯಾತಕಾರ, ಚೌಕಕಾರ ಮತ್ತು ಷಟ್​ಕೋನ ವಿನ್ಯಾಸದಲ್ಲಿ ತಯಾರಿಸಲಾಗುತ್ತಿದೆ. ಅಂತೆಯೇ ಈ ಇಕೋ ಟೈಲ್ಸ್​ಗಳು ವಿವಿಧ ಬಣ್ಣಗಳಲ್ಲಿ ದೊರೆಯುತ್ತದೆ.

ಆಯಾತಕಾರದಲ್ಲಿ ತಯಾರಿಸಲಾಗುವ ಕೋಲ್ಡ್​ಹಾರ್ಬರ್​ ಟೈಲ್ಸ್​ 7 ಸೆ.ಮೀ ಉದ್ದ ಹಾಗೂ 15 ಸೆ.ಮೀ ಅಗಲ ಹೊಂದಿದೆ. 80 ಗ್ರಾಂ ತೂಕ ಹೊಂದಿರುವ ಈ ಟೈಲ್ಸ್ ಒಂದನ್ನು ತಯಾರಿಸಲು​ 27 ಪ್ಲಾಸ್ಟಿಕ್​ ಬಾಟಲಿಗಳನ್ನು ಬಳಸಲಗುತ್ತದೆ.ಚೌಕಕಾರ ಟೈಲ್ಸ್​ಗಳು 2 ಸೆ.ಮೀ ಉದ್ದ, 2 ಸೆ.ಮೀ ಅಗಲ ಹೊಂದಿದೆ. ಷಟ್​ ಕೋನ ಆಕೃತಿಯ ಟೈಲ್ಸ್​ ಒಂದನ್ನು ತಯಾರಿಸಲು 43 ಪ್ಲಾಸ್ಟಿಕ್​ ಬಾಟಲಿಗಳ ಮುಚ್ಚಳವನ್ನು ಬಳಸಲಾಗುತ್ತದೆ. ಈ ಟೈಲ್ಸ್​ 8 ಸೆ.ಮೀ ಅಗಲ ಮತ್ತು 6 ಸೆ.ಮೀ ಸುತ್ತಳತೆಯನ್ನು ಹೊಂದಿದೆ.

ಪಾಲಿಥಿಲಿನ್ ರೂಪದ ಪ್ಲಾಸ್ಟಿಕ್​ಗಳನ್ನು ಬಳಸಿಕೊಂಡು ಕೋಲ್ಡ್​ಹಾರ್ಬರ್​ ಟೈಲ್ಸ್​ಗಳನ್ನು ತಯಾರಿಸಲಾಗುತ್ತದೆ. ಸಾಮನ್ಯವಾಗಿ ಪಾಲಿಥಿಲಿನ್​ ಪ್ಲಾಸ್ಟಿಕ್​ಗಳು ಶ್ಯಾಂಪೂ, ವಾಟರ್​ ಬಾಟಲಿ ಮುಚ್ಚವನ್ನು ತಯಾರಿಸಲು ಬಳಸಲಾಗುತ್ತದೆ. ಫಾಲಿಥಿಲಿನ್​ ಪ್ಲಾಸಿಕ್ಟ್​ಗಳು ನೀರಿನಿಂದ ರಕ್ಷಣೆ ಮತ್ತು ದೀರ್ಘ ಬಾಳಿಕೆ ಬರುತ್ತದೆ. ಈ ಟೈಲ್ಸ್​ಗಳನ್ನ ಅಡುಗೆ ಕೋಣೆ ಮತ್ತು ಬಾತ್​​ರೂಂಗಳಲ್ಲಿ ಬಳಸಬಹುದಾಗಿದೆ.​ ​

First published:March 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ