Mahindra Thar: ನಾಳೆ ನೂತನ ಮಹೀಂದ್ರಾ ಥಾರ್​ ಮಾರುಕಟ್ಟೆಗೆ!; ಹೇಗಿರಲಿದೆ?

Independence day: ಸ್ವಾತಂತ್ರ್ಯ ದಿನಾಚರಣೆ ವಿಶೇಷ ದಿನವಾದ ಆಗಸ್ಟ್​ 15ರಂದು ನೂತನ ಥಾರ್​ ಜೀಪ್​ ಅನಾವರಣಗೊಳ್ಳಲಿದೆ. ಈಗಾಗಲೇ ಸಂಸ್ಥೆ ಹೊಸ ಥಾರ್​ ಬಗ್ಗೆ ಟೀಸರ್​ ಬಿಡೆಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಸರ್​ ಹರಿದಾಡುತ್ತಿದೆ. ವಾಹನ ಪ್ರಿಯರ ಕುತೂಹಲತೆ ಹೆಚ್ಚಿಸಿದೆ.

ಮಹೀಂದ್ರಾ ಥಾರ್​​

ಮಹೀಂದ್ರಾ ಥಾರ್​​

 • Share this:
  ದ್ರಾ ಸಂಸ್ಥೆ ಬಿಡುಗಡೆಗೊಳಿಸಿದ ಥಾರ್​ ಜೀಪ್​ ಗ್ರಾಹಕರನ್ನು ಸೆಳೆಯುವುದರ ಜೊತೆಗೆ ಮಾರುಕಟ್ಟೆಯಲ್ಲಿ ಜನಪ್ರಿಯತೆಗಳಿಸಿತ್ತು. ಇದೀಗ ಸಂಸ್ಥೆ ನೂತನ ಥಾರ್​ ಜೀ​ಪ್​​ ಅನ್ನು ಸಿದ್ಧಪಡಿಸಿದೆ. ಇದೇ ತಿಂಗಳ 15ನೇ ತಾರೀಖಿನಂದು ಅನಾವರಣಗೊಳಿಸುವ ಯೋಜನೆ ಹಾಕಿಕೊಂಡಿದೆ.

  ಸ್ವಾತಂತ್ರ್ಯ ದಿನಾಚರಣೆ ವಿಶೇಷ ದಿನವಾದ ಆಗಸ್ಟ್​ 15ರಂದು ನೂತನ ಥಾರ್​ ಜೀಪ್​ ಅನಾವರಣಗೊಳ್ಳಲಿದೆ. ಈಗಾಗಲೇ ಸಂಸ್ಥೆ ಹೊಸ ಥಾರ್​ ಬಗ್ಗೆ ಟೀಸರ್​ ಬಿಡೆಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಸರ್​ ಹರಿದಾಡುತ್ತಿದೆ. ವಾಹನ ಪ್ರಿಯರ ಕುತೂಹಲತೆ ಹೆಚ್ಚಿಸಿದೆ.

  ಬಿಡುಗಡೆಗೆ ಸಿದ್ಧವಾಗಿರುವ ಥಾರ್​ ಜೀಪ್​ನಲ್ಲಿ ಅತ್ಯಾಧುನಿಕ ತಂತ್ರಜ್ನಾನ, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಫೀಚರ್ಸ್​​ಗಳನ್ನು ನೀಡಲಾಗಿದೆ. ಹಳೇಯ ಮಾದರಿಗಿಂತ ಭಿನ್ನವಾಗಿದೆ. ವಿನ್ಯಾಸವನ್ನು ಬದಲಾಯಿಸಲಾಗಿದೆ. ಆಫ್​​​​ ರೋಡ್​​​ ಸಾಮರ್ಥ್ಯವನ್ನು ಹೊಂದಿರುವ ಥಾರ್​ ಜೀಪ್​ ಸದ್ಯದಲ್ಲೇ ಗ್ರಾಹಕರನ್ನು ಮೋಡಿ ಮಾಡಲಿದೆ.

  ಈಗಾಗಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ ನೂತನ ಥಾರ್​ ಜೀಪ್​ನಲ್ಲಿ ಕ್ಯಾಬಿನ್​, ಹೊಸ ಡ್ಯಾಶ್​​ ಬೋರ್ಡ್​, ಮೀಟರ್​ ಕನ್ಸೋಲ್​​​​, ಪ್ಯಾಸೆಂಜರ್​ ಗ್ರಾಬ್​ ಹ್ಯಾಂಡಲ್​, ರೇರ್​ ಸೀಟ್​ ಸೇರಿದಂತೆ ಹಲವು ಫೀಚರ್​ಗಳನ್ನು ಒಳಗೊಂಡಿದೆಯಂತೆ.  ಇನ್ನು ಪೆಟ್ರೋಲ್​ ಎಂಜಿನ್​ ಹೊಂದಿರುವ ಥಾರ್​ ಜೀಪ್​ 190ಪಿಎಸ್​ ಪವರ್​ ಹಾಗೂ 380ಎನ್​ಎಮ್​ ಪೀಕ್​ ಟಾರ್ಕ್​ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 2.0 ಲೀಟರ್​, 4 ಸಿಲಿಂಡರ್​ ಜೊತೆಗೆ 6 ಸ್ಪೀಡ್​​ ಮ್ಯಾನುಯೆಲ್​​ ಗೇರ್​ ಬ್ಯಾಕ್ಸ್​​ ಇದರಲ್ಲಿದೆ. ಅಗಸ್ಟ್​ 15 ರಂದು ಅನಾವರಣಗೊಳ್ಳುತ್ತಿರುವ ಥಾರ್​ ಜೀಪ್​ ಬೆಲೆ ಇನ್ನೂ ಬಹಿರಂಗವಾಗಿಲ್ಲ.
  Published by:Harshith AS
  First published: