HOME » NEWS » Tech » MAHINDRA OFFERING DISCOUNTS UPTO RS 80 THOUSAND IN FEBRUARY 2021 ON SELECT MODELS HG

ಮಹೀಂದ್ರಾ ಕಂಪೆನಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್​; ಕಡಿಮೆ ಬೆಲೆಗೆ ಕಾರು ಖರೀದಿಸುವ ಅವಕಾಶ!

ಮಹೀಂದ್ರಾ ಕಂಪೆನಿ 80 ಸಾವಿರದಷ್ಟು ಕಾರುಗಳ ಮೇಲೆ ಬೆನಿಫೀಟ್​ ನೀಡುತ್ತಿದೆ. ಅದರ ಜೊತೆಗೆ ಕ್ಯಾಶ್​ ಡಿಸ್ಕೌಂಟ್​​, ಕಾರ್ಪೊರೇಶನ್​ ಡಿಸ್ಕೌಂಟ್​​, ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಈ ತಿಂಗಳಾಂತ್ಯದವರೆಗೆ ಆಫರ್​ ಅನ್ನು ಕಂಪೆನಿ ಗ್ರಾಹಕರಿಗೆ ನೀಡಲಿದೆ.

news18-kannada
Updated:February 9, 2021, 11:03 AM IST
ಮಹೀಂದ್ರಾ ಕಂಪೆನಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್​; ಕಡಿಮೆ ಬೆಲೆಗೆ ಕಾರು ಖರೀದಿಸುವ ಅವಕಾಶ!
Mahindra XUV500
  • Share this:
ಮಹೀಂದ್ರಾ ಕಂಪೆನಿ ಫೆಬ್ರವರಿ ತಿಂಗಳಿನಲ್ಲಿ ಕೆಲ ಕಾರುಗಳ ಮೇಲೆ ಆಫರ್​ ಹೊರಡಿಸಿದೆ. XUV500, Marazzo, Mahindra Scorpio ಮತ್ತು XUV300 ಕಾರುಗಳನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಿದೆ. ಅಂದಹಾಗೆಯೇ ಮಹೀಂದ್ರಾ ಕಂಪೆನಿ 80 ಸಾವಿರದಷ್ಟು ಕಾರುಗಳ ಮೇಲೆ ಬೆನಿಫೀಟ್​ ನೀಡುತ್ತಿದೆ. ಅದರ ಜೊತೆಗೆ ಕ್ಯಾಶ್​ ಡಿಸ್ಕೌಂಟ್​​, ಕಾರ್ಪೊರೇಶನ್​ ಡಿಸ್ಕೌಂಟ್​​, ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಈ ತಿಂಗಳಾಂತ್ಯದವರೆಗೆ ಆಫರ್​ ಅನ್ನು ಕಂಪೆನಿ ಗ್ರಾಹಕರಿಗೆ ನೀಡಲಿದೆ.

Mahindra XUV500: ಈ ಕಾರಿನ ಮೇಲೆ 80 ಸಾವಿರದಷ್ಟು ಬೆನಿಫಿಟ್​​ ನೀಡುತ್ತಿದೆ. ಅದರಲ್ಲಿ 36 ಸಾವಿರ ಕ್ಯಾಶ್​​ ಡಿಸ್ಕೌಂಟ್​. ಜೊತೆಗೆ 20 ಸಾವಿರ ಎಕ್ಸ್​ಚೇಂಜ್​ ಬೋನಸ್​​, 9 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್​​ ಮತ್ತು 15 ಸಾವಿರ ಅಸೆಸ್ಸರೀಸ್​ ಡಿಸ್ಕೌಂಟ್​ ನೀಡುತ್ತಿದೆ. Mahindra XUV500 ಬಿಎಸ್​6 ಎಂಜಿನ್​ ಹೊಂದಿದ್ದು, 2.2 ಲೀಟರ್​ ಡಿಸೇಲ್​​ ಎಂಜಿನ್​ನಲ್ಲಿ ಖರೀದಿಗೆ ಸಿಗಲಿದೆ.

Marazzo: ಬಿಎಸ್​6 ಎಂಜಿನ್​ ಹೊಂದಿರುವ ಮಹೀಂದ್ರಾ Marazzo ಕಾರು 1.5 ಲೀಟರ್​ ಡಿಸೇಲ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತಿದೆ. ಈ ಕಾರಿನ ಮೇಲೆ 41 ಸಾವಿರ ಬಿನಿಫಿಟ್​​ ನೀಡುತ್ತಿದೆ. ಅದರಲ್ಲಿ 20 ಸಾವಿರ ಕ್ಯಾಶ್​ ಡಿಸ್ಕೌಂಟ್​​, 15 ಸಾವಿರ ಎಕ್ಸ್​ಚೇಂಜ್​​ ಬೋನಸ್​, 6 ಸಾವಿರ ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ.

Mahindra Scorpio: ಈ ಕಾರಿನ ಬೆಲೆ 12.67 ಲಕ್ಷ ರೂ ಇರಲಿದೆ. ಮಹೀಂದ್ರಾ ಸಂಸ್ಥೆ ಫೆಬ್ರವರಿ ತಿಂಗಳ ವಿಶೇಷ ಆಫರ್​ನಲ್ಲಿ Scorpio ಕಾರಿನ ಮೇಲೂ ಬೆನಿಫಿಟ್​ ನೀಡುತ್ತಿದೆ. ಅಂದಹಾಗೆಯೇ ಈ ಕಾರಿನ ಮೇಲೆ 39,500 ಡಿಸ್ಕೌಂಟ್​ ನೀಡುತ್ತಿದೆ. 15 ಸಾವಿರ ಎಕ್ಸ್​ಚೇಂಜ್​ ಬೋನಸ್​​, ಅಂತೆಯೇ 10 ಸಾವಿರ ಕ್ಯಾಶ್​​ ಡಿಸ್ಕೌಂಟ್​​ ಮತ್ತು 4,500 ಕಾರ್ಪೊರೇಟ್​ ಡಿಸ್ಕೌಂಟ್​ ನೀಡುತ್ತಿದೆ. ಇನ್ನು ಅಸೆಸ್ಸರೀಸ್​ ಮೇಲೆ 10 ಸಾವಿರ ಬೆನಿಫಿಟ್​ ನೀಡುತ್ತಿದೆ.
Youtube Video

Mahindra XUV300: ಎರಡು ಎಂಜಿನ್​ ಆಯ್ಕೆಯಲ್ಲಿ XUV300 ಕಾರನ್ನು ಮಹೀಂದ್ರಾ ಕಂಪೆನಿ ಪರಿಚಯಿಸಿದೆ. 110.1ಹೆಚ್​ಪಿ 1.2 ಲೀಟರ್​ ಟರ್ಬೊ ಪೆಟ್ರೋಲ್​​ ಮೋಟರ್​ ಮತ್ತು 116.6ಹೆಚ್​ಪಿ 1.5 ಲೀಟರ್​ ಡಿಸೇಲ್​ ಆಯ್ಕೆಯಲ್ಲಿ ಗ್ರಾಹಕರ ಮುಂದಿರಿಸಿದೆ. ಹಾಗಾಗಿ ಇದರ ಪ್ರಾರಂಭದ ಖರೀದಿ ಬೆಲೆ 7.75 ಲಕ್ಷ ರೂ ಆಗಿದೆ.

ಮಹೀಂದ್ರಾ ಕಂಪೆನಿ ಈ ಕಾರಿನ ಮೇಲೆ 10 ಸಾವಿರ ಕ್ಯಾಶ್​​ ಡಿಸ್ಕೌಂಟ್​ ನೀಡುತ್ತಿದೆ. ಜೊತೆಗೆ 25 ಸಾವಿರ ಎಕ್ಸ್​ಚೇಂಜ್​ ಬೋನಸ್​ ಮತ್ತು 4,500 ಕಾರ್ಪೊರೇಟ್​​ ಡಿಸ್ಕೌಂಟ್​ ನೀಡುತ್ತಿದೆ.  ಇನ್ನು ಅಸೆಸ್ಸೆಸ್ಸರೀಸ್​ಗಳ ಮೇಲೆ 5 ಸಾವಿರ ಬೆನಿಫಿಟ್​ ನೀಡುತ್ತಿದೆ.
Published by: Harshith AS
First published: February 9, 2021, 11:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories