ಕೊರೋನಾ ವೈರಸ್ ಎಂಬ ಮಹಾಮಾರಿಯಿಂದಾಗಿ ಆಟೋ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿತ್ತು. ಆದರೆ ಕೆಲ ತಿಂಗಳಿಂದ ಆಟೋ ಉದ್ಯಮ ಚೇತರಿಕೆ ಕಾಣುತ್ತಿದೆ. ವಾಹನಗಳನ್ನು ಮಾರಾಟ ಮಾಡುತ್ತಿದೆ. ದೀಪಾವಳಿ ಹಬ್ಬದ ಸಮಯದಲ್ಲಂತೂ ಹಲವು ವಾಹನ ಉತ್ಪಾದಕ ಸಂಸ್ಥೆಗಳು ಭರ್ಜರಿ ಆಫರ್ ನೀಡಿದೆ. ರಿಯಾಯಿತಿ ದರದಲ್ಲಿ ಕಾರು, ಬೈಕ್ಗಳನ್ನು ಸೇಲ್ ಮಾಡುವ ಮೂಲಕ ವ್ಯಾಪಾರವನ್ನು ಹೆಚ್ಚಿಸಿಕೊಂಡಿದೆ. ಇದೀಗ ಮಹೀಂದ್ರಾ ಸಂಸ್ಥೆ ಕೂಡ ನವೆಂಬರ್ 30ರವರೆಗೆ ಕೆಲ ಕಾರುಗಳ ಮೇಲೆ ಆಫರ್ ನೀಡಿದೆ.
ಮಹೀಂದ್ರಾ ಕಾರಿನ ಮೇಲೆ ಸುಮಾರು 3.06 ಲಕ್ಷದಷ್ಟು ಬೆನಿಫಿಟ್ ನೀಡುತ್ತಿದೆ. ಜೊತೆಗೆ ಡಿಸ್ಕೌಂಟ್, ಎಕ್ಸ್ಚೇಂಜ್ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.
ಮಹೀಂದ್ರಾ ಅಲ್ಟುರಾಸ್ ಜಿ4
ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿನ ಮೇಲೆ 2.20 ಲಕ್ಷ ರೂ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ 50 ಸಾವಿರ ಎಕ್ಸ್ಚೇಂಜ್ ಬೋನಸ್ ಒದಗಿಸುತ್ತಿದೆ. ಇನ್ನು 16 ಸಾವಿರ ಕಾರ್ಪೊರೇಟ್ ಬೋನಸ್ ನೀಡುತ್ತಿದೆ.
ಸ್ಕಾರ್ಪಿಯೊ
ಸ್ಕಾರ್ಪಿಯೊ ಎಸ್5 ಕಾರಿನ ಮೇಲೆ 20 ಸಾವಿರ ಡಿಸ್ಕೌಂಟ್ ನೀಡುತ್ತಿದೆ. 25 ಸಾವಿರ ಎಕ್ಸ್ಚೇಂಜ್ ಬೋನಸ್. 5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.
ಮಹೀಂದ್ರಾ ಎಕ್ಸ್ಯುವಿ300
ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಮೇಲೆ ಡಿಸ್ಕೌಂಟ್ ನೀಡಿದೆ. ಪೆಟ್ರೋಲ್ ಕಾರಿನ ಮೇಲೆ 25 ಸಾವಿರ ಎಕ್ಸ್ಚೇಂಜ್ ಬೋನಸ್, 5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್. ಇನ್ನು ಡೀಸೆಲ್ ವೆರಿಯಂಟ್ ಕಾರಿನ ಮೇಲೆ 10 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು 25 ಸಾವಿರ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ. ಜೊತೆಗೆ 5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಒದಗಿಸುತ್ತಿದೆ.
ಮಹೀಂದ್ರಾ ಬೊಲೊರೊ
ಬೊಲೆರೊ ಕಾರಿನ ಮೇಲೆ 6 ಸಾವಿರ ಎಕ್ಸ್ಚೇಂಜ್ ಬೋನಸ್, 10 ಸಾವಿರ ಎಕ್ಸ್ಚೇಂಜ್ ಬೋನಸ್, 4 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.
ಮಹೀಂದ್ರಾ ಎಕ್ಸ್ಯುವಿ500
W9 ಮತ್ತು W11 ವೇರಿಯಂಟ್ ವಾಹನದ ಮೇಲೆ 13 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ. 30 ಸಾವಿರ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ. ಅದಲ್ಲದೆ, 9 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಿದೆ.
W5 ಮತ್ತು W7 ವೇರಿಯಂಟ್ ಕಾರಿನ ಮೇಲೆ 12 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡಿದರೆ, 30 ಸಾವಿರ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ. ಅದರ ಜೊತೆಗೆ 9 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.
ಮಹೀಂದ್ರಾ ಮರಾಜ್ಜೊ
ಈ ಕಾರಿನ ಮೇಲೆ 10 ಸಾವಿರ ಡಿಸ್ಕೌಂಟ್ ನೀಡುತ್ತಿದೆ. 15 ಸಾವಿರ ಬೋನಸ್ ಒದಗಿಸುತ್ತಿದೆ. ಜೊತೆಗೆ 6 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ. M2 ಮತ್ತು MPV ಕಾರಿನ ಮೇಲೆ 2 ಸಾವಿರ ಅಡಿಷನಲ್ ಡಿಸ್ಕೌಂಟ್ ನೀಡುತ್ತಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ