Mahindra mega offer: ಸರ್ಕಾರಿ ನೌಕರರಿಗಾಗಿ ಮಹೀಂದ್ರಾ ಕಂಪನಿ ನೀಡಿದೆ ಭರ್ಜರಿ ಆಫರ್!

Mahindra: ಮಹೀಂದ್ರಾ ಕಂಪನಿ ಕೂಡ ಸರ್ಕಾರಿ ನೌಕರಿಗಾಗಿ ಭರ್ಜರಿ ಆಫರ್​ ನೀಡುತ್ತಿದ್ದು, 11,500 ರೂ. ಬೆನಿಫಿಟ್​ ನೀಡಿದೆ.

ಮಹೀಂದ್ರಾ ಥಾರ್​

ಮಹೀಂದ್ರಾ ಥಾರ್​

 • Share this:
  ದೀಪಾವಳಿ ಹಬ್ಬದ ಪಯುಕ್ತ ಹಲವಾರು ವಾಹನ ಉತ್ಪಾದನ ಸಂಸ್ಥೆಗಳು ತಮ್ಮ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಮೇಲೆ ಆಫರ್​ ನೀಡಿದೆ. ಅದರಂತೆ ಮಹೀಂದ್ರಾ ಕಂಪನಿ ಕೂಡ ಸರ್ಕಾರಿ ನೌಕರಿಗಾಗಿ ಭರ್ಜರಿ ಆಫರ್​ ನೀಡುತ್ತಿದ್ದು, 11,500 ರೂ. ಬೆನಿಫಿಟ್​ ನೀಡಿದೆ.

  ಹಬ್ಬದ ಸಲುವಾಗಿ ಮಹೀಂದ್ರಾ ಈ ಆಫರ್​ ಅನ್ನು ನೀಡುತ್ತಿದೆ. ಸರ್ಕಾರಿ ನೌಕರರು ಮಹೀಂದ್ರಾ ವಾಹನ ಖರೀದಿಸಿದರೆ  11,500 ರೂ. ಕ್ಯಾಶ್​ ಡಿಸ್ಕೌಂಟ್​ ನೀಡುತ್ತಿರುವುದಲ್ಲದೆ, ಕಡಿಮೆ ಬಡ್ಡಿದರವನ್ನು ಖರೀದಿಸುವ ಅವಕಾಶ ಮಾಡಿಕೊಡುತ್ತಿದೆ. ಶೇ. 7.25ರಷ್ಟು ಬಡ್ಡಿ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ತಿಂಗಳಿಗೆ 799 ರೂ.ನಿಂದ ಇಎಮ್​ಐ ಆಯ್ಕೆಯನ್ನು ನೀಡುತ್ತಿದೆ. ಗ್ರಾಹಕರಿಗಾಗಿ ಮಹೀಂದ್ರಾ ಮನೆಯ ಬಾಗಿಲಿಗೆ ಬಂದು ಸರ್ವೀಸ್​ ನೀಡುತ್ತಿದೆ.

  ಇತ್ತೀಚೆಗೆ ಮಹೀಂದ್ರಾ ಹೊಸ ಥಾರ್​ ಪರಿಚಯಿಸಿತು. ಸದ್ಯ ನೂತನ ವಾಹನ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿದ್ದು, ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಹಬ್ಬದ ಸಮಯದಲ್ಲಿ ಅನೇಕರು ಥಾರ್​ ವಾಹನವನ್ನು ಕೊಂಡುಕೊಳ್ಳುತ್ತಿದ್ದಾರೆ.

  ನವೆಂಬರ್​ 7ರಿಂದ ಪ್ರಾರಂಭವಾಗಿ ನವೆಂಬರ್​ 9ರವರೆಗೆ 500 ಘಟಕಗಳಿಗೆ ಥಾರ್​ ವಾಹನವನ್ನು ತಲುಪಿಸಲು ನಿರ್ಧರಿಸಲಾಗಿದೆ ಎಂದು ಮಹೀಂದ್ರಾ ಅಂಡ್​ ಮಹೀಂದ್ರಾ ಸಂಸ್ಥೆ ಶನಿವಾರದಂದು ತಿಳಿಸಿದೆ.
  Published by:Harshith AS
  First published: