• Home
 • »
 • News
 • »
 • tech
 • »
 • ಓಲಾ, ಊಬರ್​ಗೆ ಪೈಪೋಟಿ ನೀಡಲು ಬರುತ್ತಿದೆ ಮಹೀಂದ್ರಾ ಅಲೈಟ್ ಎಲೆಕ್ಟ್ರಿಕ್​ ಕ್ಯಾಬ್​ ಸೇವೆ!

ಓಲಾ, ಊಬರ್​ಗೆ ಪೈಪೋಟಿ ನೀಡಲು ಬರುತ್ತಿದೆ ಮಹೀಂದ್ರಾ ಅಲೈಟ್ ಎಲೆಕ್ಟ್ರಿಕ್​ ಕ್ಯಾಬ್​ ಸೇವೆ!

ಮಹೀಂದ್ರಾ

ಮಹೀಂದ್ರಾ

ಭಾರತದಲ್ಲಿ ಓಲಾ ಮತ್ತು ಊಬರ್​ ಟ್ಯಾಕ್ಸಿ ಗ್ರಾಹಕ ಸ್ನೇಹಿಯಾಗಿ ಚಾಲ್ತಿಯಲ್ಲಿವೆ. ಕ್ಯಾಬ್​ ಸೇವೆಯಿಂದ ನಗರ ವಾಸಿಗಳಿಗೆ ಉಪಯೋಗ ಆಗುತ್ತಿದೆ. ಈ ನಿಟ್ಟಿನಲ್ಲಿ ಮಹೀಂದ್ರಾ ಕಂಪೆನಿ ಕೂಡ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸುವ ಮೂಲಕ ಸಾರ್ವಜನಿಕ ಸೇವೆಯನ್ನು ಮಾಡಲು ಮುಂದಾಗಿದೆ.

 • Share this:

  ಭಾರತದ ವಾಹನ ಉತ್ಪಾದಕ ಸಂಸ್ಥೆಯಾದ ಮಹೀಂದ್ರಾ ಕಂಪೆನಿ ಕಾರ್ಪೋರೇಟ್​ ಸಂಸ್ಥೆಗಳಿಗಾಗಿ ಅಲೈಟ್​ ಟ್ಯಾಕ್ಸಿ​ ಸೇವೆಯನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದೆ. ಈ ಮೂಲಕ ಓಲಾ ಮತ್ತು ಊಬರ್​ಗಳಿಗೆ ನೇರ ಪೈಪೋಟಿ ನೀಡಲು ಮುಂದಾಗಿದೆ.


  ಮಹೀಂದ್ರಾ ಎಲೆಕ್ಟ್ರಾನಿಕ್​ ವಾಹನಗಳನ್ನು ಬಳಸಿಕೊಂಡು ಅಲೈಟ್​ ಟ್ಯಾಕ್ಸಿ ಸೇವೆಯನ್ನು ನೀಡಲಿದೆ. ಮುಂದಿನ 2 ವರ್ಷಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.


  ಮಹೀಂದ್ರಾ ಅಲೈಟ್​​ ಸೇವೆಯ ಬಗ್ಗೆ ಮಹಿಂದ್ರಾ ಲಾಜಿಸ್ಟಿಕ್​ ಸಿಇಓ ರಾಮ್​ಪ್ರವೀಣ್​ ಸ್ವಾಮಿನಾಥನ್​ ಮಾತನಾಡಿ, ನಾವು ದೇಶದಾದ್ಯಂತ ಅಲೈಟ್​ ಸೇವೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.


  ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಕಂಪೆನಿ ಅಲೈಟ್​ ಸೇವೆಗಾಗಿ ಮೊಬೈಲ್​ ಅಪ್ಲಿಕೇಷನ್​ ಅನ್ನು ಪ್ರಾರಂಭಿಸಲಿದೆ. ಈ ಸೇವೆ ಕಂಪೆನಿಗಳ ಒಪ್ಪಂದದ ಆಧಾರ ಮೇರೆಗೆ ಕಾರ್ಯ ನಿರ್ವಹಿಸಲಿದೆ. ಒಪ್ಪಂದದ ಆಧಾರದ ಮೇರೆಗೆ ನೌಕರರನ್ನು ಕಚೇರಿಯಿಂದ ಮನೆಗಳಿಗೆ ಕರೆದೊಯ್ಯುವ ಕೆಲಸವನ್ನು ಮಾಡಲಿದೆ. ಕಂಪೆನಿ ವಕ್ತಾರರು ಆ್ಯಪ್​ ಬಳಸಿಕೊಂಡು ತಮ್ಮ ಗುರುತಿನ ಕಾರ್ಡ್​ ಪಂಚ್​ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.


  ಇನ್ನು ಬಿಡುವಿನ ವೇಳೆಯಲ್ಲಿ ಆನ್​ ಕಾಲ್​ ಸೇವೆಯನ್ನು ಮಾಡಲಿದೆ. ಇದರ ಮೂಲಕ ಅಲೈಟ್​​ ಕ್ಯಾಬ್​ ಸೇವೆಯನ್ನು ಆನ್​ಲೈನ್​ನಲ್ಲೂ ಬುಕ್​ ಮಾಡುವ ಅವಕಾಶ ನೀಡುತ್ತಿದೆ.


  ಭಾರತದಲ್ಲಿ ಓಲಾ ಮತ್ತು ಊಬರ್​ ಟ್ಯಾಕ್ಸಿ ಗ್ರಾಹಕ ಸ್ನೇಹಿಯಾಗಿ ಚಾಲ್ತಿಯಲ್ಲಿವೆ. ಕ್ಯಾಬ್​ ಸೇವೆಯಿಂದ ನಗರ ವಾಸಿಗಳಿಗೆ ಉಪಯೋಗ ಆಗುತ್ತಿದೆ. ಈ ನಿಟ್ಟಿನಲ್ಲಿ ಮಹೀಂದ್ರಾ ಕಂಪೆನಿ ಕೂಡ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸುವ ಮೂಲಕ ಸಾರ್ವಜನಿಕ ಸೇವೆಯನ್ನು ಮಾಡಲು ಮುಂದಾಗಿದೆ.


  ಇನ್ನು ಓಲಾ ಕಂಪೆನಿ ಸುಮಾರು 10 ಸಾವಿರಕ್ಕೂ ಅಧಿಕ ಕಾರ್ಪೊರೇಟ್​ ಕಂಪೆನಿಗಳಿಗೆ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತಿದೆ. ಊಬರ್​ ಕೂಡ ಕಾರ್ಪೋರೇಟ್​ ಕಂಪನಿಗಳ ಜೊತೆಗೆ ಗ್ರಾಹಕರಿಗೆ ಟ್ಯಾಕ್ಸಿ ಸೇವೆಯನ್ನು ನೀಡುತ್ತಿದೆ.


  ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಜಸ್ಥಾನದ ಅತ್ಯಾಚಾರ ಸಂತ್ರಸ್ಥೆ


  ಇದನ್ನೂ ಓದಿ: ಕೋಟಿಗೊಬ್ಬ-3 ರಿಲೀಸ್​ ಡೇಟ್​ ಫಿಕ್ಸ್​?; ಕಾರ್ಮಿಕರ ದಿನಾಚರಣೆಯಂದು ಅಬ್ಬರಿಸಲಿದ್ದಾರಾ ಕಿಚ್ಚ

  Published by:Harshith AS
  First published: