ವೈರಲ್ ಫೋಟೋ ಮೂಲಕ ಸಾಮಾಜಿಕ ಅಂತರದ ಅವಶ್ಯಕತೆಯ ಬಗ್ಗೆ ಮಹತ್ವ ಸಾರಿದ ಆನಂದ್ ಮಹೀಂದ್ರಾ
ಗ್ಲಾಸ್ ಶೀಲ್ಡ್ ಮೂಲಕ ಗ್ರಾಹಕರಿಂದ ಬೇರ್ಪಡಿಸುವ ಕೌಂಟರ್ನಲ್ಲಿ ವ್ಯಕ್ತಿಯೊಬ್ಬರು ಇಣುಕಿ ನೋಡುತ್ತಿರುವ ಚಿತ್ರವನ್ನು ಉದ್ಯಮಿ ಹಂಚಿಕೊಂಡಿದ್ದಾರೆ. ಆ ವ್ಯಕ್ತಿ ತನ್ನ ತಲೆಯನ್ನು ಕೌಂಟರ್ನ ಇನ್ನೊಂದು ಬದಿಗೆ ಹಾಕಿರುವುದು ಕಂಡುಬಂದಿದೆ.
ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕ ವ್ಯಕ್ತಿಗಳು ವೈರಸ್ ಮತ್ತಷ್ಟು ಹರಡುವುದನ್ನು ತಡೆಗಟ್ಟುವ ಮೂಲ ನಿಯಮಗಳನ್ನು ಪಾಲಿಸುವಂತೆ ಮತ್ತೊಮ್ಮೆ ಜನತೆಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಬುಧವಾರದ ವೇಳೆಗೆ, ಭಾರತವು 12,801,785 ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದು, 1,66,177 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಅಂಕಿ ಅಂಶಗಳು ಹೆಚ್ಚಾಗುತ್ತಿದ್ದಂತೆ, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಜನರು ಕೊರೊನಾ ವೈರಸ್ ತಡೆಗಟ್ಟುವ ಕ್ರಮಗಳನ್ನು ಹೇಗೆ ಉಲ್ಲಂಘಿಸುತ್ತಿದ್ದಾರೆ ಎಂಬ ಬಗ್ಗೆ ತಮ್ಮ ಆಲೋಚನೆಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಹಂಚಿಕೊಂಡರು.
ಗ್ಲಾಸ್ ಶೀಲ್ಡ್ ಮೂಲಕ ಗ್ರಾಹಕರಿಂದ ಬೇರ್ಪಡಿಸುವ ಕೌಂಟರ್ನಲ್ಲಿ ವ್ಯಕ್ತಿಯೊಬ್ಬರು ಇಣುಕಿ ನೋಡುತ್ತಿರುವ ಚಿತ್ರವನ್ನು ಉದ್ಯಮಿ ಹಂಚಿಕೊಂಡಿದ್ದಾರೆ. ಆ ವ್ಯಕ್ತಿ ತನ್ನ ತಲೆಯನ್ನು ಕೌಂಟರ್ನ ಇನ್ನೊಂದು ಬದಿಗೆ ಹಾಕಿರುವುದು ಕಂಡುಬಂದಿದೆ. ಆ ಬದಿಯಲ್ಲಿ ಕಾರ್ಮಿಕರ ಗುಂಪು ಕುಳಿತು ಕೆಲಸ ಮಾಡುತ್ತಿರುವುದು ವೃತ್ತಾಕಾರದ ಮಾರ್ಗದ ಮೂಲಕ ಮಾಡಿದ ಗ್ಲಾಸ್ ಶೀಲ್ಡ್ನಲ್ಲಿ ಕಾಣಿಸುತ್ತದೆ. ಈ ವ್ಯಕ್ತಿಯು ಫೇಸ್ ಮಾಸ್ಕ್ ಧರಿಸಿಲ್ಲ. ಮತ್ತು ಈ ಚಿತ್ರವನ್ನು ಸರ್ಕಾರಿ ಕಚೇರಿಯೊಳಗೆ ತೆಗೆಯಲಾಗಿದೆ ಎಂದು ತೋರುತ್ತದೆ.
ಈ ಫೋಟೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿರುವ 65 ವರ್ಷದ ಉದ್ಯಮಿ ಆನಂದ್ ಮಹೀಂದ್ರಾ, ಜನರು ಸಾಮಾಜಿಕ ದೂರಕ್ಕೆ ಒಗ್ಗಿಕೊಂಡಿಲ್ಲ ಎಂದು ಸ್ಪಷ್ಟವಾಗಿ ತೋರುತ್ತದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಆದರೂ, ಕೊರೊನಾ ವೈರಸ್ ಪ್ರಕರಣಗಳನ್ನು ತಗ್ಗಿಸಲು ನಮಗಾದಷ್ಟು ನಾವು ಮಾಡಬೇಕು ಎಂದು ಬರೆದಿರುವ ಉದ್ಯಮಿ, ತಮ್ಮ ತಲೆಯನ್ನು ಹಿಂದಕ್ಕೆ ಎಳೆದುಕೊಂಡು ಮಾಸ್ಕ್ ಹಾಕಿಕೊಳ್ಳುವಂತೆ ತಮ್ಮ ಫಾಲೋವರ್ಗಳಿಗೆ ಮನವಿ ಮಾಡಿಕೊಂಡರು.
ಈ ಟ್ವೀಟ್ಗೆ ಸದ್ಯ 10,500 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ ಮತ್ತು ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ಪೋಸ್ಟ್ ಮಾಡಿದಾಗಿನಿಂದ 950 ಕ್ಕೂ ಹೆಚ್ಚು ರಿಟ್ವೀಟ್ಗಳನ್ನು ಗಳಿಸಿದೆ.
ಆನಂದ್ ಮಹೀಂದ್ರಾ ಅವರ ಪೋಸ್ಟ್ಗೆ ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಸದ್ಯ ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚಿನ ಕೊರೊನಾ ಪ್ರಕರಣಗಳು ಕಂಡುಬರುತ್ತಿದ್ದರೂ ಪಶ್ಚಿಮ ಬಂಗಾಳ, ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ರಾಜಕೀಯ ರ್ಯಾಲಿಗಳು ಹೇಗೆ ನಡೆಯುತ್ತಿವೆ ಎಂದೂ ಕಾಮೆಂಟ್ ಮಾಡಿದ್ದಾರೆ. ಗುರುವಾರ, ಭಾರತವು 1,26,789 ಹೊಸ ಕೋವಿಡ್ - 19 ಪ್ರಕರಣಗಳನ್ನು ವರದಿ ಮಾಡಿದೆ.
Clearly, we’re not accustomed to social distancing. But it’s time to do our bit: pull our heads back and mask up! pic.twitter.com/cqK9apinMq
ಆನಂದ್ ಮಹೀಂದ್ರಾ ಅವರ ಟ್ವೀಟ್ಗೆ ಒಪ್ಪಿಗೆ ಸೂಚಿಸಿದ ಬಳಕೆದಾರರೊಬ್ಬರು ಅಂತಹ ಸಮಯಗಳಲ್ಲಿ ಇತರರನ್ನು ದೂಷಿಸುವ ಮತ್ತು ಪಿನ್-ಪಾಯಿಂಟಿಂಗ್ ಮಾಡುವ ಬದಲು, ''ಕತ್ತಲೆಯನ್ನು ದೂಷಿಸುವುದಕ್ಕಿಂತ ಮೇಣದ ಬತ್ತಿಯನ್ನು ಬೆಳಗಿಸುವುದು ಉತ್ತಮ ಎಂದು ಚೀನಾದ ತತ್ವಜ್ಞಾನಿ ಕನ್ಫ್ಯೂಷಿಯಸ್ ಹೇಳಿದ್ದನ್ನು ನೆನಪಿಟ್ಟುಕೊಳ್ಳುವುದು ಉತ್ತಮ. ಅವರು ಜಗತ್ತನ್ನು ಬದಲಾಯಿಸಲು ನಮಗೆ ಸಾಧ್ಯವಾಗದಿರಬಹುದು, ಆದರೆ ನಾವು ನಮ್ಮನ್ನು ಸುಧಾರಿಸಿಕೊಳ್ಳಬಹುದು'' ಎಂದು ಅವರು ಉಲ್ಲೇಖಿಸಿದ್ದಾರೆ.
ಇನ್ನು, ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ನೀವು ಹೊರಗಿರುವಾಗಲೆಲ್ಲಾ ನಿಮ್ಮ ಮಾಸ್ಕ್ ಅನ್ನು ಧರಿಸಿ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಅನ್ನು ಸಿದ್ಧವಾಗಿಟ್ಟುಕೊಳ್ಳಿ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ