Treo Zor: ಮೂರು ಚಕ್ರದ ಎಲೆಕ್ಟ್ರಿಕ್​ ವಾಹನವನ್ನ ಮಾರುಕಟ್ಟೆಗೆ ಪರಿಚಯಿಸಿದ ಮಹೀಂದ್ರಾ; ಒಂದು ಬಾರಿ ಚಾರ್ಜ್​ ಮಾಡಿದರೆ ಎಷ್ಟು ದೂರ ಕ್ರಮಿಸುತ್ತೆ?

ಒಂದು ಬಾರಿ ಟ್ರೆ ಜೋರ್​ ವಾಹನವನ್ನು ಚಾರ್ಜ್​​ ಮಾಡಿದರೆ 125ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ

 ಟ್ರೆ ಜೋರ್​

ಟ್ರೆ ಜೋರ್​

 • Share this:
  ಮಹೀಂದ್ರಾ ಸಂಸ್ಥೆ ಮೂರು ಚಕ್ರದ ಟ್ರೆ ಜೋರ್​ ವಾಹನವನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಮಹೀಂದ್ರಾ ನ್ಯೂಮೊ ಮೊಬಿಲಿಟಿ ಫ್ಲಾರ್ಟ್​ಫಾರ್ಮ್​ನಡಿಯಲ್ಲಿ ಈ ವಾಹವನ್ನು ಸಿದ್ಧಪಡಿಸಿದೆ. ಮೂರು ವೆರಿಯಂಟ್​ನಲ್ಲಿ ನೂತನ ವಾಹನವನ್ನು ಪರಿಚಯಿಸಿದ್ದು, ಪಿಕ್​ಅಪ್, ಡೆಲಿವರಿ, ಫ್ಲಾಟ್​ಬೆಡ್​ ಆಯ್ಕೆಯಲ್ಲಿ ಸಿಗಲಿದೆ.

  ಉಳಿದ ಕಾರ್ಗೊ ಕ್ಯಾರಿಯಿಂಗ್​ ಮೂರು ಚಕ್ರ ವಾಹನಕ್ಕಿಂತ ಮಹೀಂದ್ರಾ ಟ್ರೆ ಜೋರ್​ ದೊಡ್ಡಚಕ್ರವನ್ನ ಹೊಂದಿದೆ. 675mm​ ಕ್ಲಾಸ್​​ ಟ್ರೆ ಲೋಡಿಂಗ್​ ಹೈಟ್​ಯಿದೆ. 550KG ತೂಕ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. 10.7bhp ಮತ್ತು 42ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ.

  ಒಂದು ಬಾರಿ ಟ್ರೆ ಜೋರ್​ ವಾಹನವನ್ನು ಚಾರ್ಜ್​​ ಮಾಡಿದರೆ 125ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟು ಮಾತ್ರವಲ್ಲದೆ, ಮೊಬೈಲ್​ ಚಾರ್ಜ್​ ಮಾಡಲೆಂದೇ 15AMP ಸಾಕೆಟ್​ ನೀಡಿದೆ. 4 ಗಂಟೆಯ ಬಳಗೆ ಸ್ಮಾರ್ಟ್​ಫೋನ್​ ಫುಲ್​ಚಾರ್ಜ್​ ಆಗಲಿದೆ.

  ಟ್ರೆ ಜೋರ್​ ಮೈಟೇನೆನ್ಸ್​-ಫ್ರೀ ಲಿಥಿಯಂ ಐರಾನ್​ ಬ್ಯಾಟರಿ ಪ್ಯಾಕ್​ ಹೊಂದಿದೆ. ಮಹೀಂದ್ರಾ ಸಂಸ್ಥೆ ಮೂರು ವರ್ಷಗಳ ಕಾಲ/80 ಸಾವಿರ ಕಿ.ಮೀ  ವ್ಯಾರಂಟಿಯನ್ನು ನೀಡಿದೆ. ಅದರ ಜೊತೆಗೆ ಜಿಪಿಎಸ್​ ಟ್ರಾಕಿಂಗ್​, ಲಾಕೇಬಲ್​ ಗ್ಲೌ ಬಾಕ್ಸ್​, 12v ಸಾಕೆಟ್​ ಇದರಲ್ಲಿದೆ

  ಬೆಲೆ: ಮಹೀಂದ್ರಾ ಟ್ರೆ ಜೋರ್​​ ಫಿಕ್​ಅಪ್​, ಡೆಲಿವೆರಿ ವ್ಯಾನ್, ಫ್ಲಾಟ್​ಬೆಡ್ ಬೆಲೆ​ 2.73 ಲಕ್ಷ ರೂ.ವಿಮದ ಹಿಡಿದು 3.08 ಲಕ್ಷದವರೆಗೆ ಇರಲಿದೆ.
  First published: