Mahindra ಕಾರುಗಳನ್ನು ಹೀಗೂ ಖರೀದಿಸಬಹುದು ನೋಡಿ! ಡೌನ್​ಪೇಮೆಂಟ್ ಮಾಡಬೇಕಾದ ಅವಶ್ಯಕತೆಯೂ ಇಲ್ಲ

Quiklyz ಮೂಲಕ ಗ್ರಾಹಕರು ಈಗ ಸುಲಭವಾಗಿ ಮಹೀಂದ್ರಾ ಕಾರನ್ನು ಬಾಡಿಗೆಗೆ ಪಡೆಯುವ ಆಯ್ಕೆಯನ್ನು ಪಡೆಯುತ್ತಾರೆ. ಈ ಪ್ಲಾಟ್‌ಫಾರ್ಮ್ ಮೂಲಕ, ಮಹೀಂದ್ರಾ ಆಟೋ ಪೋರ್ಟಲ್ ಅಥವಾ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಮಹೀಂದ್ರಾ ಕಾರನ್ನು ಬಾಡಿಗೆಗೆ ಪಡೆಯಬಹುದು.

ಮಹೀಂದ್ರ ಥಾರ್​

ಮಹೀಂದ್ರ ಥಾರ್​

 • Share this:
  ಮಹೀಂದ್ರಾ ಕಾರು (Mahindra Car) ಖರೀದಿಸುವ ಕನಸನ್ನು ನನಸು ಮಾಡಿಕೊಳ್ಳುವುದು ದುಬಾರಿ ಎಂದೆನಿಸಿಕೊಂಡವರಿಗಾಗಿ ಇದೀಗ ವಾಹನವನ್ನು (Vehivle) ಬಾಡಿಗೆ (Rent) ಪಡೆದುಕೊಳ್ಳುವ ಆಯ್ಕೆಯನ್ನು ಕಂಪನಿ ನೀಡಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಖರೀದಿ ಮಾಡಬಹುದಾಗಿದೆ. ಮಹೀಂದ್ರಾ ಕಂಪನಿ Quiklyz ಹೆಸರಿನ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ. ಇದು ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲು ವಾಹನ ಗುತ್ತಿಗೆ ಮತ್ತು ಚಂದಾದಾರಿಕೆಗೆ (Subscription) ವೇದಿಕೆ ಒದಗಿಸಿದೆ.

  Quiklyz ಮೂಲಕ ಗ್ರಾಹಕರು ಈಗ ಸುಲಭವಾಗಿ ಮಹೀಂದ್ರಾ ಕಾರನ್ನು ಬಾಡಿಗೆಗೆ ಪಡೆಯುವ ಆಯ್ಕೆಯನ್ನು ಪಡೆಯುತ್ತಾರೆ. ಈ ಪ್ಲಾಟ್‌ಫಾರ್ಮ್ ಮೂಲಕ, ಮಹೀಂದ್ರಾ ಆಟೋ ಪೋರ್ಟಲ್ ಅಥವಾ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಮಹೀಂದ್ರಾ ಕಾರನ್ನು ಬಾಡಿಗೆಗೆ ಪಡೆಯಬಹುದು. ಹಾಗಾದರೆ ಮಹೀಂದ್ರಾ ಕಾರನ್ನು ಬಾಡಿಗೆಗೆ ಪಡೆಯಲು ಏನೆಲ್ಲಾ ಬೇಕು? ಇಲ್ಲಿದೆ ಮಾಹಿತಿ

  ಈ ಸೌಲಭ್ಯವು 8 ನಗರಗಳಲ್ಲಿ ಲಭ್ಯವಿರುತ್ತದೆ:

  ಪ್ರಸ್ತುತ, ಮಹೀಂದ್ರಾ ಈ ಸೌಲಭ್ಯವನ್ನು ಮುಂಬೈ, ಪುಣೆ, ದೆಹಲಿ, ನೋಯ್ಡಾ, ಗುರುಗ್ರಾಮ್, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಮಾತ್ರ ಒದಗಿಸಿದೆ.

  ಇದನ್ನು ಓದಿ: Maruti Suzuki: ತಿಂಗಳಿಗೆ 12,199 ರೂ ಪಾವತಿಸಿ ಮಾರುತಿ ಸುಜುಕಿ ಕಾರನ್ನು ಬಾಡಿಗೆ ಪಡೆಯಿರಿ!

  ಬಳಕೆಗೆ ಅನುಗುಣವಾಗಿ ಪಾವತಿಸಿ:

  ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ಪೇ ಪರ್ ಯೂಸ್ ಮಾದರಿಯಲ್ಲಿ ಈ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಮಹೀಂದ್ರಾ ಆಟೋಮೋಟಿವ್ ಎಂಡಿ ಮತ್ತು ಸಿಇಒ ವಿಜಯ್ ನಕ್ರಾ ತಿಳಿಸಿದ್ದಾರೆ. ಇದರಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗಿದೆ. ಮಹೀಂದ್ರಾ ಕಾರುಗಳನ್ನು ಗುತ್ತಿಗೆ ನೀಡುವ ಮೂಲಕ ಗ್ರಾಹಕರು ಹೊಂದಿಕೊಳ್ಳುವ ಮತ್ತು ಪಾರದರ್ಶಕ ಆಯ್ಕೆಯನ್ನು ಪಡೆಯುತ್ತಾರೆ.

  ಇದನ್ನು ಓದಿ: CNG buses: ಇಂದೋರ್​​ನಲ್ಲಿ ತ್ಯಾಜ್ಯದಿಂದ ಓಡಾಡಲಿವೆ 400 ಬಸ್​ಗಳು! ಸಿಎನ್​ಜಿ ಸ್ಥಾವರ ಉದ್ಘಾಟಿಸಲಿರುವ ಪ್ರಧಾನಿ ಮೋದಿ

  ಗುತ್ತಿಗೆ ಅವಧಿ ಮುಗಿದ ನಂತರ, ಗ್ರಾಹಕರು ತಮ್ಮ ಕಾರನ್ನು ಹಿಂತಿರುಗಿಸಬಹುದು, ಮರು-ಲೀಸ್ ಮಾಡಬಹುದು ಅಥವಾ ತಮಗಾಗಿ ಹೊಸ ಕಾರನ್ನು ಆರಿಸಿಕೊಳ್ಳಬಹುದು. ವರ್ಷಕ್ಕೆ 10,000 ಕಿಮೀಗಳಿಂದ ಪ್ರಾರಂಭವಾಗುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಹೊರತಾಗಿ ಗ್ರಾಹಕರು ತಮ್ಮ ಆದ್ಯತೆಯ ಕಾರನ್ನು 24 ರಿಂದ 60 ತಿಂಗಳುಗಳವರೆಗೆ ಬಾಡಿಗೆಗೆ ಪಡೆಯಬಹುದು ಎಂದು Quiklyz ಹೇಳಿದೆ.

  ಪ್ರತಿ ತಿಂಗಳು ಇಷ್ಟು ಬಾಡಿಗೆ ಕಟ್ಟಬೇಕಾಗುತ್ತದೆ

  ಆಯ್ಕೆಮಾಡಿದ ಮಹೀಂದ್ರಾ ಕಾರಿಗೆ ನೀವು ಪ್ರತಿ ತಿಂಗಳು ಎಷ್ಟು ಬಾಡಿಗೆ ಪಾವತಿಸಬೇಕಾಗುತ್ತದೆ ಎಂದು ಈಗ ನೀವು ಯೋಚಿಸುತ್ತಿರಬೇಕು? ಹಾಗಾಗಿ ಮಹೀಂದ್ರಾ ಕಾರನ್ನು ಬಾಡಿಗೆಗೆ ತೆಗೆದುಕೊಳ್ಳುವ ಮಾಸಿಕ ಬಾಡಿಗೆ 21,000 ರೂ.ನಿಂದ ಪ್ರಾರಂಭವಾಗುತ್ತದೆ. ಆದಾಗ್ಯೂ, ಇದರ ನಂತರ ನೀವು ಪೆಟ್ರೋಲ್ ಹೊರತುಪಡಿಸಿ ಬೇರೆ ಏನನ್ನೂ ಖರ್ಚು ಮಾಡಬೇಕಾಗಿಲ್ಲ, ಅಂದರೆ, ವಿಮೆ, ನಿರ್ವಹಣೆ ಮತ್ತು ರಸ್ತೆಬದಿಯ ಸಹಾಯವನ್ನು ಕಂಪನಿಯು ಮಾಡುತ್ತದೆ.
  Published by:Harshith AS
  First published: