ಹೊಸ ವರ್ಷಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. 2020ನೇ ವರ್ಷದ ಕೊನೆಯ ತಿಂಗಳಲ್ಲಿದ್ದೇವೆ. ಹೀಗಿರುವಾಗ ಹಲವಾರು ಕಾರು ಕಂಪನಿಗಳು ತಮ್ಮ ಕಾರುಗಳ ಮೇಲೆ ವರ್ಷಾಂತ್ಯದ ಆಕರ್ಷಕ ಆಫರ್ ನೀಡುತ್ತಿದೆ. ಅದರಂತೆ ಮಹೀಂದ್ರಾ ಕಾರು ಕಂಪನಿ ಕೂಡ ಕಾರುಗಳ ಮೇಲೆ 3 ಲಕ್ಷದಷ್ಟು ಆಫರ್ ಹೊರಡಿಸಿದೆ.
ಮಹೀಂದ್ರಾ ಬೊಲೆರೊ, Marazzo, XUV 300, XUV 500, Alturas ಜಿ4 ಕಾರುಗಳ ಮೇಲೆ ಆಕರ್ಷಕ ಕೊಡುಗೆ ನೀಡಿದೆ.
ಮಹೀಂದ್ರಾ Bolero: ಈ ಕಾರಿನ ಮೇಲೆ 20,500 ರೂ.ವರೆಗೆ ಆಫರ್ ಹೊರಡಿಸಿದೆ. 6,500 ರೂ ಕ್ಯಾಶ್ ಡಿಸ್ಕೌಂಟ್ ನೀಡಿದೆ. 4 ಸಾವಿರ ಕಾರ್ಪೊರೇಶನ್ ಡಿಸ್ಕೌಂಟ್ ಜೊತೆಗೆ 10 ಸಾವಿರದಷ್ಟು ಎಕ್ಸ್ಚೇಂಜ್ ಬೆನಿಫಿಟ್ ಒದಗಿಸಿದೆ.
Marazzo: ಮಹೀಂದ್ರಾ ಮೊರಾಜೊ ಕಾರಿನ ಮೇಲೆ 15 ಸಾವಿರ ಎಕ್ಸ್ಚೇಂಜ್ ಬೋನಸ್ ಮತ್ತು ಅಡಿಷನಲ್ ಕ್ಯಾಶ್ ಡಿಸ್ಕೌಂಟ್ ನೀಡಿದೆ.
Scorpio: ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಮೇಲೆ 20 ಸಾವಿರದಷ್ಟು ಡಿಸ್ಕೌಂಟ್ ನೀಡಿದೆ. 25 ಸಾವಿರ ಎಕ್ಸ್ಚೇಂಜ್ ಬೋನಸ್ ಮತ್ತು 5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.
XUV 500: ಮಹೀಂದ್ರಾ ಎಕ್ಸ್ಯುವಿ500 ಕಾರಿನ ಮೇಲೆ 13 ಸಾವಿರ ಕ್ಯಾಶ್ ಬೆನಿಫಿಟ್ ನೀಡುತ್ತಿದೆ. 30 ಸಾವಿರ ಎಕ್ಸ್ಚೇಂಜ್ ಬೋನಸ್ . ಜೊತೆಗೆ 9 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.
XUV 300: ಪೆಟ್ರೋಲ್ ಕಾರಿನ ಮೇಲೆ 25 ಸಾವಿರದಷ್ಟು ಎಕ್ಸ್ಚೇಂಜ್ ಬೋನಸ್ ಮತ್ತು 5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ. ಇನ್ನು ಡಿಸೇಲ್ ಕಾರಿನ ಮೇಲೆ 10 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ 25 ಸಾವಿರ ಎಕ್ಸ್ಚೇಂಜ್ ಬೋನಸ್ ಮತ್ತು 5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.
Alturas ಜಿ4: ಈ ಕಾರಿನ ಮೇಲೆ 2.2 ಲಕ್ಷ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ. 50 ಸಾವಿರ ಎಕ್ಸ್ಚೇಂಜ್ ಬೋನಸ್, 16 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ 20 ಸಾವಿರ ಅಸೆಸ್ಸರಿ ಪ್ಯಾಕೇಜ್ ಒದಗಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ