Mahindra ವಾಹನ ಖರೀದಿಸುವವರಿಗೆ ಇದೇ ಸುವರ್ಣವಕಾಶ! ವಾಹನಗಳ ಮೇಲೆ 81 ಸಾವಿರದಷ್ಟು ಡಿಸ್ಕೌಂಟ್!

Mahindra: ಆಯ್ದ ಮಹೀಂದ್ರಾ SUV ಗಳಲ್ಲಿ ಆಫರ್ 31ನೇ ಡಿಸೆಂಬರ್ 2021 ರವರೆಗೆ ಮಾನ್ಯವಾಗಿರುತ್ತದೆ. ಮಹೀಂದ್ರಾ ಥಾರ್, ಬೊಲೆರೊ ನಿಯೋ ಮತ್ತು XUV700 ಮೇಲೆ ಯಾವುದೇ ರಿಯಾಯಿತಿ ಇಲ್ಲ.

ಮಹೀಂದ್ರಾ ಸ್ಕಾರ್ಪಿಯೋ / Mahindra Scorpio

ಮಹೀಂದ್ರಾ ಸ್ಕಾರ್ಪಿಯೋ / Mahindra Scorpio

 • Share this:
  ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಮಹೀಂದ್ರಾ ಕಂಪನಿ (Mahindra Company) ರಿಯಾಯಿತಿ ಮತ್ತು ಕೊಡುಗೆಗಳೊಂದಿಗೆ ವಾಹನ ಖರೀದಿಸುವ ಅವಕಾಶವನ್ನು ನೀಡುತ್ತಿದೆ. ಕೆಲವು ಆಯ್ಕೆಯ ವಾಹನಗಳ ಮೇಲೆ ಮಹೀಂದ್ರಾ ಈ ಕೊಡುಗೆಯನ್ನು ನೀಡುತ್ತಿದ್ದು, ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

  ಮಾಹಿತಿಗಳ ಪ್ರಕಾರ, ಎಸ್‌ಯುವಿಗಳ ಮೇಲೆ 81,500 ರೂ ವರೆಗಿನ ಪ್ರಯೋಜನವನ್ನು ಮಹೀಂದ್ರಾ ಕಂಪನಿ ನೀಡುತ್ತಿದೆ. ಈ ಪ್ರಯೋಜನಗಳಲ್ಲಿ ನಗದು ರಿಯಾಯಿತಿಗಳು, ವಿನಿಮಯ ಕೊಡುಗೆಗಳು (Exchange Offer), ಕಾರ್ಪೊರೇಟ್ ರಿಯಾಯಿತಿಗಳು ಮತ್ತು ಹೆಚ್ಚುವರಿ ಕೊಡುಗೆಗಳು ಸೇರಿವೆ.

  ಆಯ್ದ ಮಹೀಂದ್ರಾ SUV ಗಳಲ್ಲಿ ಆಫರ್ 31ನೇ ಡಿಸೆಂಬರ್ 2021 ರವರೆಗೆ ಮಾನ್ಯವಾಗಿರುತ್ತದೆ. ಮಹೀಂದ್ರಾ ಥಾರ್ (Mahindra Thar), ಬೊಲೆರೊ ನಿಯೋ (Bolero Neo) ಮತ್ತು XUV700 ಮೇಲೆ ಯಾವುದೇ ರಿಯಾಯಿತಿ ಇಲ್ಲ.

  ಮಹೀಂದ್ರಾ ಅಲ್ಟುರಾಸ್ ಎಸ್‌ಯುವಿ ಕಾರಿನ ಮೇಲೆ 81,500 ರೂ.ವರೆಗಿನ ಪ್ರಯೋಜನಗಳೊಂದಿಗೆ ಲಭ್ಯವಿದೆ. ಆಫರ್‌ನಲ್ಲಿ 50,000 ರೂ.ವರೆಗಿನ ಎಕ್ಸ್‌ಚೇಂಜ್ ಬೋನಸ್, 11,500 ರೂ.ವರೆಗಿನ ಕಾರ್ಪೊರೇಟ್ ಕೊಡುಗೆ ಮತ್ತು 20,000 ರೂ.ವರೆಗಿನ ಇತರ ಕೊಡುಗೆಗಳು ಸೇರಿವೆ.

  ಮಹೀಂದ್ರಾ ಸ್ಕಾರ್ಪಿಯೋ:

  ಮಹೀಂದ್ರಾ ಸ್ಕಾರ್ಪಿಯೊವನ್ನು ಖರೀದಿಸಲು ಬಯಸಿದರೆ 34000 ರೂ ಲಾಭವನ್ನು ಪಡೆಯುತ್ತೀರಿ. ಇವುಗಳಲ್ಲಿ 15,000 ರೂ ವರೆಗಿನ ವಿನಿಮಯ ಕೊಡುಗೆಗಳು, 4,000 ರೂ ವರೆಗಿನ ಕಾರ್ಪೊರೇಟ್ ಕೊಡುಗೆಗಳು ಮತ್ತು 15,000 ರೂ ವರೆಗಿನ ಇತರ ಕೊಡುಗೆಗಳು ಸೇರಿವೆ.

  ಮಹೀಂದ್ರಾ XUV300:

  XUV300 ಸಬ್‌ಕಾಂಪ್ಯಾಕ್ಟ್ SUV ಮೇಲೆ 69,002 ರೂ.ವರೆಗಿನ ಕೊಡುಗೆಯನ್ನು ಹೊಂದಿದೆ. ಇದು 30,002 ರೂಪಾಯಿಗಳ ನಗದು ಕೊಡುಗೆ, 25,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 4,500 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಸಬ್‌ಕಾಂಪ್ಯಾಕ್ಟ್ SUV ಯಲ್ಲಿ ಗ್ರಾಹಕರು 10,000 ರೂ.ವರೆಗೆ ಇತರ ಕೊಡುಗೆಗಳನ್ನು ಪಡೆಯಬಹುದಾಗಿದೆ.

  ಮಹೀಂದ್ರಾ KUV100 NXT:

  Mahindra KUV100 NXT ಒಟ್ಟು 61,055 ರೂ.ಗಳ ಪ್ರಯೋಜನವನ್ನು ಹೊಂದಿದೆ. 38,055 ರೂ ನಗದು ರಿಯಾಯಿತಿ ಮತ್ತು 4,000 ರೂ ಕಾರ್ಪೊರೇಟ್ ರಿಯಾಯಿತಿಯೊಂದಿಗೆ 20,000 ರೂ ವರೆಗಿನ ವಿನಿಮಯ ಬೋನಸ್ ಅನ್ನು ಒಳಗೊಂಡಿದೆ.  ಇದನ್ನು ಓದಿ: ನಿಮ್ಮ Facebook ಖಾತೆಯನ್ನು ಯಾರೆಲ್ಲಾ ಕದ್ದು ನೋಡ್ತಿದ್ದಾರೆ ಗೊತ್ತಾ? ತಿಳಿದುಕೊಳ್ಳಲು ಹೀಗೆ ಮಾಡಿ

  ಮಹೀಂದ್ರಾ ಬೊಲೆರೊ:

  ಮಹೀಂದ್ರಾ ಬೊಲೆರೊವನ್ನು 13000 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಸಬಹುದು. ಜೊತೆಗೆ 10,000 ರೂ ವರೆಗಿನ ವಿನಿಮಯ ಕೊಡುಗೆ ಮತ್ತು 3,000 ರೂ.ವರೆಗಿನ ಕಾರ್ಪೊರೇಟ್ ಕೊಡುಗೆಯನ್ನು ಒಳಗೊಂಡಿದೆ.

  ಇದನ್ನು ಓದಿ: ಹಳೆಯ Smartphone​ ಇದ್ರೆ ಎಸೆಯಬೇಡಿ.. ಕಂಪ್ಯೂಟರ್ ಮೌಸ್ ಆಗಿ ಬಳಸಬಹುದು!

  ಮಹೀಂದ್ರಾ ಮರಾಜ್ಜೊ

  ಮಹೀಂದ್ರಾ ಮರಾಜ್ಜೊ 40,200 ರೂ.ಗಳ ಪ್ರಯೋಜನವನ್ನು ಹೊಂದಿದೆ. ಮಾತ್ರವಲ್ಲದೆ 20,000 ರೂ.ವಿನ ನಗದು ರಿಯಾಯಿತಿ, 15,000 ರೂ.ವಿನ ವಿನಿಮಯ ಕೊಡುಗೆ ಮತ್ತು 5,200 ರೂ. ವರೆಗೆ ಕಾರ್ಪೊರೇಟ್ ರಿಯಾಯಿತಿ ಇದೆ.
  Published by:Harshith AS
  First published: