ಹೋಂಡಾ ಆಕ್ಟಿವಾವನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸಿದ ಮಹಾರಾಷ್ಟ್ರದ ಸಾಫ್ಟ್‌ವೇರ್ ಎಂಜಿನಿಯರ್!

ಈಗಾಗಲೇ ಬಳಕೆಯಲ್ಲಿರುವ ಇಂದನದ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿದರೆ ಹೇಗಿರುತ್ತೆ..? ಈ ರೀತಿಯಾಗಿ ಯೋಚನೆ ಮಾಡಿದ ಮಹಾರಾಷ್ಟ್ರದ ಪನ್ವೆಲ್‌ನ ಸಾಫ್ಟ್‌ವೇರ್ ಎಂಜಿನಿಯರ್ ಓಂಕಾರ್‌ ಅವರು ಇಂತಹ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದಾರೆ.

ಓಂಕಾರ್‌ ಥಾಲೆ

ಓಂಕಾರ್‌ ಥಾಲೆ

  • Share this:
ಹೆಚ್ಚುತ್ತಿರುವ ಇಂಧನ ಬೆಲೆಗಳು, ಬೆಲೆ ಏರಿಕೆಯಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ಜನರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಮುಖ ಮಾಡುತ್ತಿದ್ದಾರೆ. 2019 ಮತ್ತು 2020 ರ ಸಮಯದಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ 129% ರಷ್ಟು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಲಕ್ಷಣಗಳು ಕಾಣುತ್ತಿವೆ. ಆದರೂ, ದೂರದ ಪ್ರಯಾಣದ ಮಿತಿ ಮತ್ತು ದೀರ್ಘ ಚಾರ್ಜಿಂಗ್ ಸಮಯಮದ ಅಭಾವವು ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆಗೆ ಅಡ್ಡಿಯಾಗುತ್ತಿದೆ. ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಬದಲು, ಈಗಾಗಲೇ ಬಳಕೆಯಲ್ಲಿರುವ ಇಂದನದ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿದರೆ ಹೇಗಿರುತ್ತೆ..? ಈ ರೀತಿಯಾಗಿ ಯೋಚನೆ ಮಾಡಿದ ಮಹಾರಾಷ್ಟ್ರದ ಪನ್ವೆಲ್‌ನ ಸಾಫ್ಟ್‌ವೇರ್ ಎಂಜಿನಿಯರ್ ಓಂಕಾರ್‌ ಅವರು ಇಂತಹ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದಾರೆ.

31 ವರ್ಷದ ಓಂಕಾರ್‌ ಥಾಲೆ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಅವರು ಬಳಸುವ ಹೋಂಡಾ ಆಕ್ಟಿವಾವನ್ನು ವಾಹನವು ಪೆಟ್ರೋಲ್‌ನಿಂದ ಚಲಿಸುತ್ತಿತ್ತು. ಈಗ ಅವರ ಪ್ರಯತ್ನದಿಂದ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿದ್ದಾರೆ. ವಿಶೇಷವೆನೆಂದರೆ, ಕೇವಲ ಹವ್ಯಾಸವಾಗಿ ಪ್ರಾರಂಭವಾದ ಈ ಪ್ರಯತ್ನವು ಯಶಸ್ವಿಯಾಗುವುದಕ್ಕಿಂತ ಮುಂಚೆ ಓಂಕಾರ್‌ ಈ ಯೋಜನೆಗಾಗಿ ಭಾರಿ ಹಣವನ್ನು ಖರ್ಚು ಮಾಡಿ ಆರ್ಥಿಕ ನಷ್ಟ ಅನುಭವಿಸಿದ್ದಾರೆ.

ಓಂಕಾರ್‌ ಮಾರ್ಪಡಿಸಿದ ವಾಹನದಲ್ಲಿ, ಪೆಟ್ರೋಲ್‌ನಿಂದ ಎಲೆಕ್ಟ್ರಿಕ್‌ಗೆ ಹಾಗೂ ಎಲೆಕ್ಟ್ರಿಕ್‌ನಿಂದ ಪೆಟ್ರೋಲ್‌ಗೆ ರೈಡ್‌ ಮಧ್ಯದಲ್ಲಿಯೇ ಬದಲಾಯಿಸಬಹುದಾಗಿದೆ. ಒಂದು ಬಾರಿ ಚಾರ್ಚ್ ಮಾಡಿದರೆ 85 ಕಿ.ಮೀ.ವರೆಗೆ ಮೈಲೇಜ್‌ ನೀಡುತ್ತದೆ. ಈ ವಾಹನವು ಗಂಟೆಗೆ 60 ಕಿಲೋಮೀಟರ್ ನಷ್ಟು ಗರಿಷ್ಠ ವೇಗವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಗೆ ಪರಿವರ್ತಿಸಿದ ವಾಹನವು ಈಗಾಗಲೇ 9000 ಕಿ.ಮೀ. ಪ್ರಯಾಣ ಮಾಡಿದೆ. ಓಂಕಾರ್‌ ಅವರು
ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಮತ್ತು ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ಅವರಿಂದ ಅನುಮೋದನೆಗಾಗಿ ಕಾಯುತ್ತಿದ್ದಾರೆ. ಹೊಸ ವಾಹನವನ್ನು ಖರೀದಿಸುವ ಬದಲಾಗಿ ಈ ರೀತಿಯಾಗಿ ವಾಹನವನ್ನು ಮಾರ್ಪಡಿಸಲು 40% ಕಡಿಮೆ ಖರ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.

'2010 ರಲ್ಲಿ ಥಾಣೆಯಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ನಂತರ, ಪ್ರತಿದಿನ ಕಾರಿನಲ್ಲಿ ಸುಮಾರು 45 ಕಿ.ಮೀ ಪ್ರಯಾಣ ಮಾಡುತ್ತಿದ್ದೆ. ಆಗ, ಕಾರಿನ ಇಂಧನ ತುಂಬಿಸುವುದಕ್ಕೆ ಬೇಜಾರಾಗುತ್ತಿತ್ತು. ಇಂಧನವನ್ನು ವಾಹನಕ್ಕೆ ತುಂಬಿಸಲು ಗಂಟೆಗಟ್ಟಲೆ ಸರದಿಯಲ್ಲಿ ಕಾಯುವುದು ಇಷ್ಟವಾಗಲಿಲ್ಲ. 2017 ರಲ್ಲಿ ನನ್ನ ಕೆಲಸವನ್ನು ಬಿಟ್ಟು, ಪನ್ವೆಲ್‌ನಲ್ಲಿ 8 ಉದ್ಯೋಗಿಗಳೊಂದಿಗೆ ನನ್ನ ಸ್ವಂತ ಸಾಫ್ಟ್‌ವೇರ್ ಕಂಪನಿಯನ್ನು ಪ್ರಾರಂಭಿಸಿದೆ' ಎಂದು ಓಂಕಾರ್ ಅವರು ಹೇಳಿದರು.

"ಇಂದನಕ್ಕಾಗಿ ತುಂಬಾ ಹಣ ಖರ್ಚು ಮಾಡುವ ಸಮಯದಲ್ಲಿ ಸಾಮಾನ್ಯ ವಾಹನಗಳಲ್ಲಿ ಎಲೆಕ್ಟ್ರಿಕ್ ಮೋಟರ್ ಗಳನ್ನು ಬಳಸುವ ಮೂಲಕ ಇಂಧನ ಬಳಕೆಯನ್ನು ಕಡಿಮೆ ಮಾಡುವ ಮಾರ್ಗಗಳ ಬಗ್ಗೆ ನಾನು ಯೋಚಿಸಿದೆ" ಎಂದು ಅವರು ಹೇಳಿದರು.

ನಂತರ, ಅವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಹಗಲಿನಲ್ಲಿ ಸೈಕ್ಲಿಂಗ್ ಬ್ಯಾಟರಿಗಳು ಮತ್ತು ಮೋಟರ್‌ ಗಳನ್ನು ಪರೀಕ್ಷೆ ಮಾಡಲು ಪ್ರಾರಂಭಿಸಿದರು. ಓಂಕಾರ್ ಅವರು ಮಾಡಿದ ಪ್ರಯೋಗದ ಯಶಸ್ಸಿನ ನಂತರ, 2019 ರ ನವೆಂಬರ್‌ನಲ್ಲಿ ಆಕ್ಟಿವಾವನ್ನು ಖರೀದಿಸಿ, ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸುವ ಪ್ರಯತ್ನಕ್ಕೆ ಕೈ ಹಾಕಿದರು.

ಆದರೂ, ವಾಹನವು 30 ಕಿಲೋಗಳಷ್ಟು ತೂಕವನ್ನು ಹೊಂದಿದ್ದು, ಇದರಲ್ಲಿ 15 ಕಿಲೋ ಬ್ಯಾಟರಿ, 8 ಕಿಲೋ ಮೋಟಾರ್ ಹೊಂದಿದೆ. "ಹೆಚ್ಚುವರಿ ತೂಕದ ಅನುಸಾರ ವಾಹನದ ಮೈಲೇಜ್ ನಲ್ಲಿ 1% ರಷ್ಟು ಪರಿಣಾಮ ಬೀರಲಿದೆ. ಆದರೂ ಇಂಧನ ವಾಹನಕ್ಕಿಂತ ಬಹಳ ಹಣ ಉಳಿತಾಯವಾಗಲಿದೆ ಎಂದಿದ್ದಾರೆ.

ಓಂಕಾರ್‌ ಅವರಿಗೆ ತಾವು ಅಭಿವೃದ್ಧಿಪಡಿಸಿದ ತಂತ್ರಜ್ಞಾನದ ಬಗ್ಗೆ ಭರವಸೆಯಿದೆ ಮತ್ತು ಮಾರುಕಟ್ಟೆಯಲ್ಲಿ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ, ಆದರೆ ಅದರ ಮೈಲೇಜ್ ಮತ್ತು ಅಸಮರ್ಪಕ ಚಾರ್ಜಿಂಗ್ ಸೌಕರ್ಯದ ಬಗ್ಗೆ ಖರೀದಿದಾರರಲ್ಲಿ ಇನ್ನೂ ಗೊಂದಲವಿದ್ದು, ಖರೀಸಲು ಮನಸ್ಸು ಮಾಡುತ್ತಿಲ್ಲ. ಅಸ್ತಿತ್ವದಲ್ಲಿರುವ ಪೆಟ್ರೋಲ್ ವಾಹನಕ್ಕೆ ರೆಟ್ರೊಫಿಟ್ ಕಿಟ್ ಅನ್ನು ಅಳವಡಿಕೆ ಮಾಡುವುದು ಸೂಕ್ತವಾದ ಮಾರ್ಗವಾಗಿದೆ. ಏಕೆಂದರೆ ಜನರು ದೈನಂದಿನ ಪ್ರಯಾಣದ ಸಮಯದಲ್ಲಿ ಇಂಧನದ ಖರ್ಚನ್ನು ಬಹಳಷ್ಟು ಉಳಿಸಬಹುದು. ಒಂದು ವೇಳೆ ಬ್ಯಾಟರಿ ನಿಷ್ಕ್ರಿಯಗೊಂಡರೆ, ವಾಹನ ಸವಾರರು ತಕ್ಷಣ ಎಲೆಕ್ಟ್ರಿಕ್‌ನಿಂದ ಪೆಟ್ರೋಲ್ ಮೋಡ್‌ಗೆ ಬದಲಾಯಿಸಿ ಪ್ರಯಾಣವನ್ನು ಮುಂದುವರಿಸಬಹುದು.” ಎಂದು ಓಂಕಾರ್ ಹೇಳುತ್ತಾರೆ.

ಒಟ್ಟಿನಲ್ಲಿ ಓಂಕಾರ್ ಅವರ ಸತತ ಪ್ರಯತ್ನದ ಫಲವಾಗಿ ತಮ್ಮ ಯೋಜನೆಯಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇವರಿಗೆ ಸರ್ಕಾರದಿಂದ ಬೆಂಬಲ ಸಿಕ್ಕರೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಸಂಚಲನವಾಗುವುದರಲ್ಲಿ ಸಂದೇಹವಿಲ್ಲ.
Published by:Harshith AS
First published: