Viral Video: ವಯಸ್ಸಲ್ಲೇನಿದೆ? 90ರ ಹರೆಯದಲ್ಲೂ ಸಖತ್ತಾಗಿ ಕಾರು ಓಡಿಸುವ ಈ ಅಜ್ಜಿಯನ್ನು ಓಮ್ಮೆ ನೋಡಿ!

Grandma Driving Skill: ಸಾಮಾಜಿಕ ಜಾಲತಾಣದಲ್ಲಿ ಅಜ್ಜಿ ಕಾರು ಓಡಿಸುವುದನ್ನು ಕಂಡು ಅನೇಕರು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ವಿಡಿಯೋವನ್ನು ಟ್ವಿಟರ್‌ನಲ್ಲಿ ಹಲವರು ಹಂಚಿಕೊಂಡಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ. ರೇಶಮ್​​ ಅಜ್ಜಿಯ  ಚಾಲನಾ ಕೌಶಲ್ಯವನ್ನು ಶ್ಲಾಘಿಸಿದ್ದಾರೆ.

ರೇಶಮ್​ ಬಾಯಿ

ರೇಶಮ್​ ಬಾಯಿ

  • Share this:
    ವಯಸ್ಸಲ್ಲೇನಿದೆ..? ವಯಸ್ಸು ಎಂಬುದು ಸಂಖ್ಯೆಯಷ್ಟೇ. ಛಲವೊಂದಿದ್ದರೆ ಏನು ಬೇಕಾದರು ಮಾಡಲು ಸಾಧ್ಯ ಎಂಬುದಕ್ಕೆ ಈ ಬಿಳಗೂದಲಿನ ಅಜ್ಜಿಯೇ ಸಾಕ್ಷಿ. ಏಕೆಂದರೆ ವಯಸ್ಸು 90 ಆದರು ಬತ್ತದ ಉತ್ಸಾಹ, ಕುಳಿತ ಸೀಟಿನಲ್ಲೇ ಕ್ಲಚ್ ಅದುಮಿ ಗೇರ್​​ ಹಾಕಿ ಕಾರು ಚಲಾಯಿಸುವ ಈ ವೃದ್ಧೆಯನ್ನು ನೋಡಿದರೆ ಎಂತವರಿಗೂ ಆಚ್ಚರಿಯಾದೆ ಇರದು. ಅದಕ್ಕೇ ಹೇಳಿದ್ದು ವಯಸ್ಸು ಒಂದು ಸಂಖ್ಯೆಯಷ್ಟೇ!

    ಮಧ್ಯಪ್ರದೇಶದ 90 ವರ್ಷದ ವೃದ್ಧೆ ರೇಶಮ್​ ಬಾಯಿ ಕಾರು ಚಲಾಯಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಅಷ್ಟೇ ಏಕೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​​ ಚೌಹಾನ್​ (Shivraj Singh Chouhan) ಅವರು ಕೂಡ ಈ ನೋಡಿ ಅಚ್ಚರಗೊಂಡು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ ‘ದಾಡಿ ಮಾ ನೆ ಹಮ್ ಸಭೀ ಕೋ ಪ್ರೇರಣಾ ದಿ ಹೇ ಕಿ ಅಪ್ನಿ ಅಭಿರುಚಿ ಪುರಿ ಕರ್ನೆ ಮೆ ಉಮರ್ ಕಾ ಕೋಯಿ ಬಂಧನ್ ನಹೀ ಹೋತಾ ಹೇ. ಉಮರ್ ಚಾರಿ ಕಿತ್ನಿ ಭೀ ಹೋ, ಜೀವನ್ ಜೀ ಕಾ ಜಜಡಾ ಹೋನಾ ಚಾಹಿಯೇ! '( ವಯಸ್ಸಿನಿಂದ ಜೀವನದ ಆಸೆಗಳನ್ನು ಈಡೇರಿಸುವುದನ್ನು ತಡೆಯಲು ಸಾಧ್ಯವಿಲ್ಲ. ವಯಸ್ಸು ಕೇವಲ ಒಂದು ಸಂಖ್ಯೆ, ನಿಮ್ಮ ಜೀವನವನ್ನು ನಡೆಸಲು ನಿಮಗೆ ಉತ್ಸಾಹ ಬೇಕು ಎಂಬುದನ್ನು ಅಜ್ಜಿ ನಮಗೆಲ್ಲರಿಗೂ ತೋರಿಸಿದ್ದಾರೆ.) ಎಂದು ವಿಡಿಯೋಗೆ ಅಡಿ ಬರಹ ಬರೆದಿದ್ದಾರೆ.

    ಅಜ್ಜಿ ಕಾರು ಕಳಿತ್ತದ್ದು ಹೇಗೆ ಗೊತ್ತಾ?

    ರೇಶಮ್ ಬಾಯಿ ತನ್ಸ್ವರ್ ದೇವಾಸ್ ಜಿಲ್ಲೆಯ ಬಿಲಾವಲಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮಗಳು ಮತ್ತು ಸೊಸೆ ಸೇರಿದಂತೆ ಆಕೆಯ ಕುಟುಂಬದ ಸದಸ್ಯರೆಲ್ಲರಿಗೂ ಕಾರು ಬಿಡುವ ಕೌಶಲ್ಯ ತಿಳಿದಿರುವುದರಿಂದ ತನಗೂ ಕಾರು ಓಡಿಸಬೇಕು ಎಂಬ ಆಸೆ ಹುಟ್ಟಿಕೊಳ್ಳುತ್ತದೆ. ಆ ನಂತರ ತಾನು ಕಲಿತೆ ಎಂದು ಹೇಳುತ್ತಾರೆ ರೇಶಮ್​ ಬಾಯಿ.

    ಈ ಬಗ್ಗೆ ಮಾತನಾಡಿದ್ದ ರೇಶಮ್​ ಬಾಯಿ ತನ್ಸ್ವರ್​ "ನನಗೆ ಡ್ರೈವಿಂಗ್ ತುಂಬಾ ಇಷ್ಟ. ನಾನು ಕಾರುಗಳನ್ನು ಮತ್ತು ಟ್ರ್ಯಾಕ್ಟರ್‌ಗಳನ್ನು ಓಡಿಸಿದ್ದೇನೆ "ಎಂದು ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಅಜ್ಜಿ ಕಾರು ಓಡಿಸುವುದನ್ನು ಕಂಡು ಅನೇಕರು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ವಿಡಿಯೋವನ್ನು ಟ್ವಿಟರ್‌ನಲ್ಲಿ ಹಲವರು ಹಂಚಿಕೊಂಡಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ. ರೇಶಮ್​​ ಅಜ್ಜಿಯ  ಚಾಲನಾ ಕೌಶಲ್ಯವನ್ನು ಶ್ಲಾಘಿಸಿದ್ದಾರೆ.  ಕೆಲವರು ಈ ರಸ್ತೆಯಲ್ಲಿ ಕಾರನ್ನು ಓಡಿಸಲು ಆಕೆಗೆ ಶಾಶ್ವತಾ ಚಾಲನಾ ಪರವಾನಗಿ ಇದೆಯೇ ಎಂದು ಬಹಳಷ್ಟು ಜನರು ಕಾಮೆಂಟ್​ ಬರೆದಿದ್ದಾರೆ.

    ಇದನ್ನು ಓದಿ ⇒ MeowTalk: ಮುದ್ದಿನ ಬೆಕ್ಕು ಏನು ಹೇಳುತ್ತೆ ಗೊತ್ತಾಗಬೇಕಾ? ಹಾಗಿದ್ರೆ ಈ ಆ್ಯಪ್​ ಬಳಸಿ ಅದರ ಮನಸ್ಥಿತಿ ಅರ್ಥ ಮಾಡಿಕೊಳ್ಳಿ

    ಅಂದಾಗೆಯೇ ರೇಶಮ್​ ಅಜ್ಜಿ ಮಾರುತಿ ಸುಜುಕಿ 800 ಕಾರನ್ನು ಸಲೀಸಾಗಿ ಓಡಿಸ್ತಾರೆ. ಇತ್ತ ಕಡೆಯಲ್ಲಿ ವಾಹನದಲ್ಲಿ ಚಲಾಯಿಸುವವನೊಬ್ಬ ಅಜ್ಜಿ ಕಾರು ಓಡಿಸುವುದನ್ನು ಕಂಡು ಫೋನಿನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಮಧ್ಯಪ್ರದೇಶದ ಸಾರಿಗೆ ಇಲಾಖೆಯ ಪ್ರಕಾರ, ಶಾಶ್ವತ ಚಾಲನಾ ಪರವಾನಗಿ 20 ವರ್ಷಗಳವರೆಗೆ ಅಥವಾ 50 ವರ್ಷ ವಯಸ್ಸಿನವರೆಗೆ ನೀಡಲಾಗುತ್ತದೆ. ವಾಣಿಜ್ಯ ವಾಹನಗಳಿಗೆ ನೀಡಲಾದ ಶಾಶ್ವತ ಚಾಲನಾ ಪರವಾನಗಿಯನ್ನು ಮೂರು ವರ್ಷಗಳವರೆಗೆ ನವೀಕರಿಸಬೇಕಾಗುತ್ತದೆ.





    ಪ್ರಸ್ತುತ, ಭಾರತದಲ್ಲಿ ಮೋಟಾರ್ ವಾಹನ ಕಾಯ್ದೆಯಡಿ ಚಾಲನಾ ಪರವಾನಗಿಗಳನ್ನು ನವೀಕರಿಸಲು 75 ವರ್ಷಗಳ ಗರಿಷ್ಠ ವಯಸ್ಸಿನ ಮಿತಿಯನ್ನು ಮಿತಿಗೊಳಿಸಲು ಕೇಂದ್ರವು ಪರಿಗಣಿಸುತ್ತಿದೆ.

    90ರ ವಯಸ್ಸಿನಲ್ಲೂ ಕಾರು ಓಡಿಸುತ್ತಿರುವುದನ್ನು ನೋಡಿದರೆ ಅಜ್ಜಿಯ ಉತ್ಸಾಮ ಮತ್ತು ಛಲಕ್ಕೆ ಭಲೇ ಎನ್ನಲೇಬೇಕು.
    Published by:Harshith AS
    First published: