ಭಾರತದಲ್ಲಿ ಹಲವಾರು ಜನಪ್ರಿಯ ಸ್ಮಾರ್ಟ್ವಾಚ್ ಕಂಪನಿಗಳು (Smartwatch) ಹುಟ್ಟಿಕೊಂಡಿವೆ. ಆದರೆ ಅವುಗಳು ಅದರದೇ ಆದಂತಹ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ಇದೀಗ ಭಾರತದ ಜನಪ್ರಿಯ ಸ್ಮಾರ್ಟ್ವಾಚ್ ಕಂಪನಿಯಾಗಿರುವ ಗಿಜ್ಮೋರ್ (Gizmore) ಮಾರುಕಟ್ಟೆಗೆ ಹೊಸ ಸ್ಮಾರ್ಟ್ವಾಚ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ಗಿಜ್ಫಿಟ್ ಪ್ಲಾಸ್ಮಾ ಸ್ಮಾರ್ಟ್ವಾಚ್ (Gizfit Plasma Smartwatch) ಅನ್ನು ಲಾಂಚ್ ಮಾಡಿದೆ. ಇದು ಮೇಡ್ ಇನ್ ಇಂಡಿಯಾ ಸ್ಮಾರ್ಟ್ವಾಚ್ ಆಗಿದ್ದು, ಆಕರ್ಷಕ ಫೀಚರ್ಸ್ಗಳ ಮೂಲಕ ಗಮನಸೆಳೆದಿದೆ. ಈ ಸ್ಮಾರ್ಟ್ವಾಚ್ 2,000ರೂಪಾಯಿ ಬೆಲೆಯನ್ನು ಹೊಂದಿದ್ದು, ಕೈ ಗೆಟಕುವ ಬೆಲೆಯಲ್ಲಿ ದೊರೆಯುವ ಅತ್ಯಾಕರ್ಷಕ ಸ್ಮಾರ್ಟ್ವಾಚ್ ಇದಾಗಿದೆ.
ಗಿಜ್ಮೋರ್ ಕಂಪನಿಯಿಂದ ಬಿಡುಗಡೆಯಾದ ಈ ಸ್ಮಾರ್ಟ್ವಾಚ್ ಗಿಝ್ಫಿಟ್ ಪ್ಲಾಸ್ಮಾ ಎಂಬುದಾಗಿದ್ದು ಇದು ಬಹಳಷ್ಟು ಫೀಚರ್ಸ್ಗಳನ್ನು ಒಳಗೊಂಡಿದೆ. ಗ್ರಾಹಕರಿಕೆ ಕೈಗೆಟಕುವ ಬೆಲೆಯಲ್ಲಿ ಈ ಸ್ಮಾರ್ಟ್ವಾಚ್ ಇಕಾಮರ್ಸ್ ವೆಬ್ಸೈಟ್ಗಳಲ್ಲಿ, ಮಾರುಕಟ್ಟೆಗಳಲ್ಲಿ ಖರೀದಿ ಮಾಡಬಹುದು.
ಗಿಝ್ಫಿಟ್ ಪ್ಲಾಸ್ಮಾ ಸ್ಮಾರ್ಟ್ವಾಚ್ ಫೀಚರ್ಸ್
ಗಿಝ್ಫಿಟ್ ಪ್ಲಾಸ್ಮಾ ಸ್ಮಾರ್ಟ್ವಾಚ್ 1.9 ಇಂಚಿನ 2.5D ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 240×280 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿಕೊಂಡಿದೆ. ಇದು 550 ನೀಟ್ಸ್ ಬ್ರೈಟ್ನೆಸ್ ಕೂಡ ಹೊಂದಿದೆ. ಈ ಸ್ಮಾರ್ಟ್ವಾಚ್ ಹಲವು ವಾಚ್ಫೇಸ್ ಆಯ್ಕೆಗಳನ್ನು ಕೂಡ ನೀಡಲಿದೆ. ವಾಚ್ಫೇಸ್ಗಳು ಮತ್ತು ಮೆನು ಶೈಲಿಗಳನ್ನು ಸ್ಮಾರ್ಟ್ವಾಚ್ ರೈಟ್ ಸೈಟ್ನಲ್ಲಿರುವ ಫಿಸಿಕಲ್ ಬಟನ್ ಮೂಲಕ ಸುಲಭವಾಗಿ ಬದಲಾಯಿಸಬಹುದಾಗಿದೆ.
ಇದನ್ನೂ ಓದಿ: ಜನವರಿ 1ರಿಂದ ಈ ಫೋನ್ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ! ಇದೇ ಕಾರಣವಂತೆ
ಇತರ ಫೀಚರ್ಸ್
ಇನ್ನು ಈ ಸ್ಮಾರ್ಟ್ವಾಚ್ ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸವನ್ನು ಹೊಂದಿದೆ. ಇದು ಬ್ಲೂಟೂತ್ ಕಾಲ್ ಫೀಚರ್ಸ್ ಅನ್ನು ಹೊಂದಿದ್ದು, ಇನ್ಬಿಲ್ಟ್ ವಾಯ್ಸ್ ಅಸಿಸ್ಟೆಂಟ್ ಬೆಂಬಲವನ್ನು ಸಹ ಪಡೆದುಕೊಂಡಿದೆ. ಇನ್ನು ಸ್ಮಾರ್ಟ್ವಾಚ್ ಹೆಲ್ತ್ ಫೀಚರ್ಸ್ಗಳಲ್ಲಿ 24×7 ಹೃದಯ ಬಡಿತ ಸೆನ್ಸಾರ್, SpO2 ಸೆನ್ಸಾರ್, ಸ್ಲಿಪ್ ಟ್ರ್ಯಾಕರ್ ಮತ್ತು ಬಾಡಿ ಟೆಂಪ್ರೇಚರ್ ಮಾನಿಟರ್ ಅನ್ನು ಒಳಗೊಂಡಿದೆ. ಜೊತೆಗೆ ಇದು ಸ್ಟೆಪ್ ಟ್ರ್ಯಾಕಿಂಗ್ ಮತ್ತು ಉಸಿರಾಟದ ವ್ಯಾಯಾಮಗಳನ್ನು ಸಹ ಅನುಮತಿಸುತ್ತದೆ.
ಸ್ಪೋರ್ಟ್ಸ್ ಫೀಚರ್ಸ್
ಗಿಝ್ಫಿಟ್ ಪ್ಲಾಸ್ಮಾ ಸ್ಮಾರ್ಟ್ವಾಚ್ ಆಕ್ಟಿವಿಟಿಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಜಿಪಿಎಸ್ ಟ್ರಾಜೆಕ್ಟರಿ ಡಿಸ್ಪ್ಲೇಯೊಂದಿಗೆ ಬರಲಿದೆ. ಇದನ್ನು ಸೋಶಿಯಲ್ ಪ್ಲಾಟ್ಫಾರ್ಮ್ ಗಳಲ್ಲಿಯೂ ಶೇರ್ ಮಾಡಿಕೊಳ್ಳುವುದಕ್ಕೆ ಕೂಡ ಅವಕಾಶವನ್ನು ಸಹ ನೀಡಲಾಗಿದೆ. ಸ್ವಿಮ್ಮಿಂಗ್, ಯೋಗ, ರನ್ನಿಂಗ್, ಔಟ್ಸೈಡ್ ವಾಕಿಂಗ್, ಬಾಸ್ಕೆಟ್ಬಾಲ್, ಬ್ಯಾಡ್ಮಿಂಟನ್, ಫುಟ್ಬಾಲ್, ಸೈಕ್ಲಿಂಗ್ ಮತ್ತು ಹೆಚ್ಚಿನ ಆಕ್ಟಿವಿಟಿಗಳನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಹಲವು ಸ್ಪೋರ್ಟ್ಸ್ ಮೋಡ್ಗಳನ್ನು ಸಹ ನೀಡಲಾಗಿದೆ.
ಬ್ಯಾಟರಿ ಫೀಚರ್ಸ್
ಇನ್ನು ಈ ಸ್ಮಾರ್ಟ್ ವಾಚ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 7 ದಿನಗಳ ಕಾಲ ನಿರಂತರವಾಗಿ ಬಳಸಬಹುದಾಗಿದೆ. ಇದು ವಾಯರ್ ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದರೊಂದಿಗೆ ಈ ಸ್ಮಾರ್ಟ್ವಾಚ್ ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸಿಯನ್ನು ಕೂಡ ಪಡೆದಿದೆ. ವೆದರ್ ಅಪ್ಡೇಟ್, ಇನ್ಬಿಲ್ಟ್ ಪ್ರೈವೆಸಿ ಲಾಕ್, ನೋಟಿಫಿಕೇಶನ್ ಅಲರ್ಟ್ ಮತ್ತು ಹೆಚ್ಚಿನ ವಿಷಯಗಳಿಗಾಗಿ IP67 ರೇಟಿಂಗ್ ಬೆಂಬಲವನ್ನು ಕೂಡ ಹೊಂದಿದೆ. ಈ ಸ್ಮಾರ್ಟ್ವಾಚ್ AI-ಆಧಾರಿತ ಹೆಲ್ತ್ ಟ್ರ್ಯಾಕಿಂಗ್ ಫೀಚರ್ಸ್ ಅನ್ನು ಕೂಡ ಹೊಂದಿರಲಿದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಗಿಜ್ಮೋರ್ನ ಗಿಝ್ಫಿಟ್ ಪ್ಲಾಸ್ಮಾ ಸ್ಮಾರ್ಟ್ವಾಚ್ 1,999 ರೂ. ಬೆಲೆಯನ್ನು ಹೊಂದಿದೆ. ಆದರೆ ಲಾಂಚ್ ಆಫರ್ನಲ್ಲಿ ಈ ಸ್ಮಾರ್ಟ್ವಾಚ್ 1,799ರೂ. ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸೇಲ್ ಆಗಲಿದೆ. ಈ ಸ್ಮಾರ್ಟ್ವಾಚ್ ಫ್ಲಿಪ್ಕಾರ್ಟ್ ಮೂಲಕ ಖರೀದಿಸುವುದಾದರೆ ಕಪ್ಪು, ನೇವಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ