ಭಾರತೀಯ ಮೂಲದ ಲಾವಾ ಸಂಸ್ಥೆ BeU ಹೆಸರಿನ ಸ್ಮಾರ್ಟ್ಫೋನನ್ನು ಪರಿಚಯಿಸಲು ಮುಂದಾಗಿದೆ. ಇಂದು (ಜನವರಿ 7ರಂದು) ಮಧ್ಯಾಹ್ನ 12 ಗಂಟೆಗೆ ಪರಿಚಯಿಸುವುದಾಗಿ ತಿಳಿಸಿದೆ.
ಅಂದಹಾಗೆಯೇ ಡಿಸೆಂಬರ್ 23ರಂದು ಲಾವಾ ಸಂಸ್ಥೆ BeU ಸ್ಮಾರ್ಟ್ಫೋನಿನ ಟೀಸರ್ ಬಿಡುಗಡೆ ಮಾಡಿತ್ತು. ಇದೀಗ ಹೊಸ ವರ್ಷದ ಎರಡನೆ ವಾರದಂದು ಸ್ಮಾರ್ಟ್ಫೋನ್ ಅನ್ನು ಪರಿಚಯಿಸುತ್ತಿದೆ. ನೂತನ ಸ್ಮಾರ್ಟ್ಫೋನ್ ಡ್ಯುಯೆಲ್ ರಿಯಲ್ ಕ್ಯಾಮೆರಾವನ್ನು ಹೊಂದಿದ್ದು, 2ಜಿಬಿ + 32ಜಿಬಿ ಸ್ಟೊರೇಜ್ ಆಯ್ಕೆಯಲ್ಲಿ ಇರಲಿದೆ. ಇನ್ನು ಲಾವಾ BeU ಸ್ಮಾರ್ಟ್ಫೋನ್ ಬೆಲೆ 6,888 ರೂ. ಎಂದು ಹೇಳಲಾಗುತ್ತಿದೆ.
ಲಾವಾ BeU 6.08 ಇಂಚಿನ ಹೆಚ್+ಡಿಸ್ಪ್ಲೇ ಹೊಂದಿದ್ದು, 2.5D ಕರ್ವ್ಡ್ ಗ್ಲಾಸ್ ಅಳವಡಿಸಲಾಗಿದೆ. ಒಕ್ಟಾ ಕೋರ್ ಎಸ್ಒಸಿಯಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ಫೋನ್ ಆ್ಯಂಡ್ರಾಯ್ಡ್ 10 ಬೆಂಬಲವನ್ನು ಪಡೆದಿದೆ.
ಕ್ಯಾಮೆರಾ:
ಲಾವಾ BeU ಸ್ಮಾರ್ಟ್ಫೋನ್ 13 ಮೆಗಾಫಿಕ್ಸೆಲ್ ಪ್ರೈಮರಿ ಸೆನ್ಸಾರ್, 2 ಮೆಗಾಫಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಜೊತೆಗೆ ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್ ನೀಡಲಾಗಿದೆ.
ಇನ್ನು ಸ್ಮಾರ್ಟ್ಫೋನಿನಲ್ಲಿ ಬ್ಲೂಟೂತ್, ಮೈಕ್ರೊ ಯುಎಸ್ಬಿ, ಹೆಡ್ಫೋನ್ ಜಾಕ್ ನೀಡಲಾಗಿದೆ. 4,060mAh ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್ಫೋನ್ ದೇಶಿಯ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯಾಗಿ ದೊರಕಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ