HOME » NEWS » Tech » MADE IN INDIA ELECTRIC COUPE PRAVAIG EXTINCTION MK1 HG

ನಂಬಿದ್ರೆ ನಂಬಿ! 504 ಕಿ.ಮೀ ಮೈಲೇಜ್ ನೀಡುತ್ತೆ ಈ ದೇಶಿಯ ಕಾರು!

Pravaig Extinction Mk1: ಎಕ್ಸ್​​ಟಿಂಗ್​ಕ್ಷನ್​ Mk1 ಕಾರು ಎರಡು ಡೋರ್​, 4 ಸೀಟ್​​ನಲ್ಲಿ ಪರಿಚಯಿಸಲಿದೆ. ಅಂದಹಾಗೆಯೇ 2,500 ಘಟಕಗಳಲ್ಲಿ ಮಾತ್ರ ಈ ಕಾರನ್ನು ಮಾರಾಟ ನಡೆಸಲಿದೆ.

news18-kannada
Updated:December 8, 2020, 2:07 PM IST
ನಂಬಿದ್ರೆ ನಂಬಿ! 504 ಕಿ.ಮೀ ಮೈಲೇಜ್ ನೀಡುತ್ತೆ ಈ ದೇಶಿಯ ಕಾರು!
Extinction Mk1
  • Share this:
ಎಲೆಕ್ಟ್ರಿಕ್​ ಕಾರುಗಳ ಉತ್ಪಾದನೆಯಲ್ಲಿ ಮಹತ್ತರವಾದ ಬದಲಾವಣೆಯಾಗುತ್ತಿದೆ. ಹಲವು ಕಂಪನಿಗಳು ಅಧಿಕ ಮೈಲೇಜ್​ ನೀಡುವ ಕಾರುಗಳ ಉತ್ಪಾದಿಸುತ್ತಿದೆ. ಅದರಂತೆ ಇಧೀಗ ದೇಶಿಯ ಪ್ರವೈಗ್​​ ಡೈನಾಮಿಕ್​ ಕಂಪನಿ ಎಕ್ಸ್​​ಟಿಂಗ್​ಕ್ಷನ್​ Mk1 ಹೆಸರಿನ ಕಾರನ್ನು ಉತ್ಪಾದಿಸಿದೆ. ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 504 ಕಿ.ಮೀ ಮೈಲೇಜ್​ ನೀಡುತ್ತದೆ.

ಎಕ್ಸ್​​ಟಿಂಗ್​ಕ್ಷನ್​ Mk1 ಕಾರು ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ. ಆದರೆ ಗುತ್ತಿಗೆ ನೀಡುವ ಮೂಲಕ ಮಾರಾಟ ಮಾಡಲಿದೆ. ದೆಹಲಿ ಮತ್ತು ಬೆಂಗಳೂರಿನಂತಹ ಮಹಾನಗರವನ್ನು ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ಪರಿಚಯಿಸಲಿದೆ.ಎಕ್ಸ್​​ಟಿಂಗ್​ಕ್ಷನ್​ Mk1 ಕಾರು ಎರಡು ಡೋರ್​, 4 ಸೀಟ್​​ನಲ್ಲಿ ಪರಿಚಯಿಸಲಿದೆ. ಅಂದಹಾಗೆಯೇ 2,500 ಘಟಕಗಳಲ್ಲಿ ಮಾತ್ರ ಈ ಕಾರನ್ನು ಮಾರಾಟ ನಡೆಸಲಿದೆ.
Youtube Video

ದೇಶಿಯ ಕಾರು ಎಕ್ಸ್​​ಟಿಂಗ್​ಕ್ಷನ್​ Mk1 ಒಂದು ಬಾರಿ ಚಾರ್ಜ್​ ಮಾಡಿದರೆ 504 ಕಿ.ಮೀ ಕ್ರಮಿಸಲಿದೆ. 0-80 ಪ್ರತಿಶತ ಚಾರ್ಜ್​ 30 ನಿಮಿಷಗಳಷ್ಟು ಬರಲಿದೆ. ಇನ್ನು 202 ಹೆಚ್​ಪಿ ಮತ್ತಿ 2,400ಎನ್​ಎಮ್​ ಟಾರ್ಕ್​ ಉತ್ಪಾದಿಸಲಿದೆ. 196 ಕಿ.ಮೀ ಅಧಿಕ ಸ್ಟೀಡ್​ ಹೊಂದಿದೆ.
Published by: Harshith AS
First published: December 8, 2020, 2:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories