ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್ ಇತ್ತೀಚೆಗೆ ಏನಾದರೊಂದು ಹೊಸ ಅಪ್ಡೇಟ್ಗಳನ್ನು ನೀಡುತ್ತಾ ಇರುತ್ತದೆ. ಅದ್ರಲ್ಲೂ ಕಳೆದ ಬಾರಿ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗಾಗಿ ಸಾಕಷ್ಟು ಫೀಚರ್ಸ್ಗಳನ್ನು ಬಿಡುಗಡೆ ಮಾಡಿದೆ. ಅದೇ ರೀತಿ ಈ ವರ್ಷವೂ ಇನ್ನೂ ಹಲವಾರು ಫೀಚರ್ಸ್ಗಳನ್ನು ಬಿಡುಗಡೆ ಮಾಡಲಿದೆ ಎಂದು ವಾಟ್ಸಾಪ್ ಭರವಸೆ ನೀಡಿತ್ತು. ಇದೀಗ ವಾಟ್ಸಾಪ್ ಹೊಸ ಅಪ್ಲಿಕೇಶನ್ ಒಂದನ್ನು ಪರಿಚಯಿಸಿದ್ದು ಐಮ್ಯಾಕ್ ಬಳಕೆದಾರರಿಗಾಗಿ ಈ ಅಪ್ಲಿಕೇಶನ್ ಅನ್ನು ಪರಿಚಯಿಸಿದ್ದಾರೆ. ಇನ್ಮುಂದೆ ಮ್ಯಾಕ್ ಡಿವೈಸ್ಗಳಲ್ಲಿ (Mac Device) ವಾಟ್ಸಾಪ್ ಅನ್ನು ಸುಲಭದಲ್ಲಿ ಬಳಕೆ ಮಾಡಬಹುದಾಗಿದೆ.
ಕಳೆದ ವರ್ಷವೇ ವಾಟ್ಸಾಪ್ ಅನ್ನು ಮ್ಯಾಕ್ ನಲ್ಲಿ ಅಭಿವೃದ್ಧಿ ಪಡಿಸುವ ಯೋಚನೆಯನ್ನು ಮೆಟಾ ನಿರ್ಧರಿಸಿತ್ತು. ಇದೀಗ ಮೆಟಾ ಒಡೆತನದಲ್ಲಿರುವ ವಾಟ್ಸಾಪ್ ಅನ್ನು ಮ್ಯಾಕ್‌ನಲ್ಲಿ ಬಳಕೆ ಮಾಡಲು ಹೊಸ ಆ್ಯಪ್ ಅನ್ನು ಪರಿಚಯಿಸಿದೆ. ಮ್ಯಾಕ್ಓಎಸ್ ಎಂಬ ಅಪ್ಲಿಕೇಶನ್ ಆಗಿದ್ದು, ಈ ಮೂಲಕ ಸುಲಭಲ್ಲಿ ವಾಟ್ಸಾಪ್ ಅನ್ನು ಮ್ಯಾಕ್‌ನಲ್ಲಿ ಬಳಕೆ ಮಾಡಬಹುದಾಗಿದೆ.
ಮ್ಯಾಕ್ಓಎಸ್ ಅಪ್ಲಿಕೇಶನ್
ಮ್ಯಾಕ್ ಡಿವೈಸ್‌ಗಳನ್ನು ಬೆಂಬಲಿಸುವ ವಾಟ್ಸಾಪ್ ಮ್ಯಾಕ್‌ಒಎಸ್ (MacOS) ಅಪ್ಲಿಕೇಶನ್ ಅನ್ನು ವಾಟ್ಸಾಪ್ ನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ ಇದರ ಮೂಲಕ ನೀವು ಮ್ಯಾಕ್‌ನಲ್ಲಿ ವಾಟ್ಸಾಪ್ ಅನ್ನು ಸುಲಭದಲ್ಲಿ ಬಳಸಲು ಸಾಧ್ಯವಾಗಲಿದೆ. ಇದು ಹೊಸ ಯೂಸರ್ ಇಂಟರ್‌ಫೇಸ್ ಅನ್ನು ಹೊಂದಿದ್ದು, ಹಲವು ಮಹತ್ತರವಾದ ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ರಿಸರ್ವಡ್ ಅಪ್ಲಿಕೇಶನ್ ಸೈಡ್‌ಬಾರ್ ಅನ್ನು ಕಾಣಬಹುದಾಗಿದೆ. ಜೊತೆಗೆ ಡಿವೈಸ್‌ನಿಂದ ಚಾಟ್‌ಗಳಿಗೆ ಫೈಲ್‌ಗಳನ್ನು ಡ್ರ್ಯಾಗ್ ಮಾಡುವ ಮತ್ತು ಡ್ರಾಪ್ ಮಾಡುವ ಫೀಚರ್ಸ್ ಅನ್ನು ಸಹ ನೀಡಲಾಗಿದೆ.
ವೆಬ್ ವರ್ಷನ್ನಲ್ಲಿ ವಾಟ್ಸಾಪ್ ಬಳಕೆ
ವಾಟ್ಸಾಪ್ ಅನ್ನು ಈ ಹಿಂದೆ ಮ್ಯಾಕ್ ಡಿವೈಸ್ಗಳಲ್ಲಿ ವಾಟ್ಸಾಪ್ ವೆಬ್ ಆವೃತ್ತಿ ಮೂಲಕ ಬಳಕೆ ಮಾಡಬಹುದಿತ್ತು. ಆದರೆ ಈ ವೆಬ್ ಆವೃತ್ತಿ ಮೂಲಕ ಬಳಸುವುದು ಎಲ್ಲಾ ಬಳಕೆದಾರರಿಗೂ ಅಷ್ಟೊಂದು ಉತ್ತಮ ಅನುಭವವನ್ನು ನೀಡಿಲ್ಲ. ಆದ್ದರಿಂದ ಇದನ್ನು ಅರಿತಂತಹ ವಾಟ್ಸಾಪ್ ಇದೀಗ ಮ್ಯಾಕ್ ಬಳಕೆದಾರರಿಗಾಗಿಯೇ ಮ್ಯಾಕ್ಓಎಸ್ ಎಂಬ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.
ಈ ಹಿಂದೆ ವೆಬ್ ವರ್ಷನ್ನಲ್ಲಿರುವ ಬಳಕೆ ಮಾಡುತ್ತಿರುವವರಿಗೆ ವಾಟ್ಸಾಪ್ನಲ್ಲಿ ಬಂದ ಹೊಸ ಅಪ್ಡೇಟ್ಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಅಪ್ಲಿಕೇಶನ್ ಮೂಲಕ ವಾಟ್ಸಾಪ್ನ ಎಲ್ಲಾ ಫೀಚರ್ಗಳನ್ನು ಪಡೆಯಬಹುದಾಗಿದೆ.
ವಾಟ್ಸಾಪ್ನಲ್ಲಿ ಹೊಸ ಫೀಚರ್ಸ್
ವಾಟ್ಸಾಪ್ ಕೆಲ ದಿನಗಳ ಹಿಂದೆ ಹೊಸ ಫೋಟೋ ಶೇರ್ ಮಾಡುವ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಯಾವುದೇ ಒಂದು ಫೋಟೋವನ್ನು ಇನ್ನಬ್ಬರಿಗೆ ಶೇರ್ ಮಾಡುವಾಗ ಅದರ ಮೂಲ ಕ್ವಾಲಿಟಿಯನ್ನು ಕಳೆದುಕೊಳ್ಳುತ್ತಿತ್ತು. ಆದರೆ ಇನ್ಮುಂದೆ ಆ ತೊಂದರೆ ಬರುವುದಿಲ್ಲ. ಯಾಕೆಂದರೆ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಫೋಟೋವನ್ನು ಶೇರ್ ಮಾಡಬೇಕಾದರೂ ನಿಮಗೆ ಬೇಕಾಗುವ ಗುಣಮಟ್ಟದಲ್ಲಿ ಶೇರ್ ಮಾಡಬಹುದಾಗಿದೆ. ನೀಬು ಸೆಲೆಕ್ಟ್ ಮಾಡಿದ ಆಯ್ಕೆ ಮೂಲಕ ನೀವು ಕಳುಹಿಸಲು ಬಯಸುವ ಫೋಟೋವನ್ನು ಇನ್ನೊಬ್ಬರಿಗೆ ಶೇರ್ ಮಾಡಬಹುದಾಗಿದೆ.‘
ಇದನ್ನೂ ಓದಿ: ಬೆಂಗಳೂರಿನ ಕಾಲೇಜುಗಳಲ್ಲಿ ಚಾಟ್ಜಿಪಿಟಿ ಟೆಕ್ನಾಲಜಿ ಬ್ಯಾನ್! ಕಾರಣವೇನು ಗೊತ್ತಾ?
ವಾಟ್ಸಾಪ್ ಬ್ಲಾಕ್ ಶಾರ್ಟ್ಕಟ್
ವಾಟ್ಸಾಪ್ ಇತ್ತೀಚೆಗೆ ಪರಿಚಯಿಸಿರುವ ಹೊಸ ಫೀಚರ್ಗಳಲ್ಲಿ ಬ್ಲಾಕ್ ಶಾರ್ಟ್ಕಟ್ ಫೀಚರ್ ಕೂಡ ಒಂದಾಗಿದೆ. ಈ ಹಿಂದೆ ಯಾವುದೇ ಅಪರಿಚಿತ ನಂಬರ್ಗಳಿಂದ ಮೆಸೇಜ್ಗಳು ಬಂದಾಗ ಅದನ್ನು ಓಪನ್ ಮಾಡಿಯೇ ಬ್ಲಾಕ್ ಮಾಡಬೇಕಿತ್ತು. ಆದರೆ ಇನ್ಮುಂದೆ ಚಾಟ್ ಓಪನ್ ಮಾಡದೆಯೇ ಬ್ಲಾಕ್ ಮಾಡಬಹುದು. ಅದಕ್ಕಾಗಿ ವಾಟ್ಸಾಪ್ ಇದೀಗ ಬ್ಲಾಕ್ ಶಾರ್ಟ್ಕಟ್ ಫೀಚರ್ ಅನ್ನು ಪರಿಚಯಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ