ಮೊಬೈಲ್ ನಂಬರ್ 10ರಿಂದ 13ಕ್ಕೆ ಏರುತ್ತಾ..? ಏನಿದು ಟೆಲಿಕಾಂ ಇಲಾಖೆಯ ಹೊಸ ಆದೇಶ..?


Updated:February 21, 2018, 9:52 PM IST
ಮೊಬೈಲ್ ನಂಬರ್ 10ರಿಂದ 13ಕ್ಕೆ ಏರುತ್ತಾ..? ಏನಿದು ಟೆಲಿಕಾಂ ಇಲಾಖೆಯ ಹೊಸ ಆದೇಶ..?

Updated: February 21, 2018, 9:52 PM IST
ನವದೆಹಲಿ(ಫೆ.21): ಭದ್ರತಾ ದೃಷ್ಟಿಯಿಂದ ಮೊಬೈಲ್ ಸಂಖ್ಯೆಯನ್ನ 10ರಿಂದ 13ಕ್ಕೆ ಏರಿಸುವಂತೆ ಟೆಲಿಕಾಂ ಇಲಾಖೆ ನಿರ್ದೇಶನ ನೀಡಿದೆ ಎಂಬ ಸುದ್ದಿ ಭಾರೀ ಜೋರಾಗಿ ಹರಡಿತ್ತು. ಅಸಲಿಗೆ ಸುದ್ದಿಯೇ ಬೇರೆ. ಬದಲಾಗುವುದು ಮೊಬೈಲ್ ನಂಬರ್ ಅಲ್ಲ ಎಂ2ಎಂ ನಂಬರ್ ಅರ್ಥಾತ್ ಮೆಶಿನ್2ಮೆಶಿನ್ ನಂಬರ್.

ಹೌದು, ಸ್ವೈಪಿಂಗ್ ಮೆಶಿನ್, ವಾಹನಗಳು, ಎಲೆಕ್ಟ್ರೀಕ್ ಮೀಟರ್​ಗಳಲ್ಲಿ ಬಳಸಲಾಗುವ ಎಂ2ಎಂ ನಂಬರ್ ಬದಲಾಗಲಿದೆ. ಅಕ್ಟೋಬರ್ 1,2018ರಿಂದ ಪ್ರತಿಯೊಂದು ಎಂ2ಎಂ ಸಂಖ್ಯೆಗಳು 10ರಿಂದ 13ಕ್ಕೆ ಏರಿಕೆಯಾಗಲಿವೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಟೆಲಿಕಾಂ ಇಲಾಖೆ ಡಿಸೆಂಬರ್ 31ರವರೆಗೆ ಗಡುವು ವಿಧಿಸಿದೆ.

ಈ ಬದಲಾವಣೆಗೆ ಟೆಲಿಕಾಂ ಇಲಾಖೆಯಿಂದ ಜನವರಿ 8, 2018ರಂದೇ ನಿರ್ದೇಶನ ಬಂದಿದ್ದು, ನಿರ್ದೇಶನಗಳಿಗೆ ತಕ್ಕಂತೆ ಪ್ರಕ್ರಿಯೆ ಆರಂಭಿಸಲಾಗಿದೆ ಬಿಎಸ್ಎನ್ಎಲ್​ನ ಉನ್ನತ ಅಧಿಕಾರಿಯೊಬ್ಬರು ನ್ಯೂಸ್ 18ಗೆ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ಸಚಿವಾಲಯವು ದೂರವಾಣಿ ನಿಯಂತ್ರಣ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಸಿಮ್ ಒಳಗೊಂಡಿರುವ ಎಂ2ಎಂ ಡಿವೈಸ್​ಗಳ ಸಂಖ್ಯೆಯನ್ನ 13ಕ್ಕೆ ಹೆಚ್ಚಿಸಲು ಸಮ್ಮತಿಸಿರುವುದಾಗಿ ಸ್ಪಷ್ಟಪಡಿಸಿದೆ.

 
First published:February 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...