Video: ಬೆಂಗಳೂರಿನಲ್ಲಿ ಅತಿ ಕಡಿಮೆ ಬೆಲೆಗೆ ಸೆಕೆಂಡ್​ ಹ್ಯಾಂಡ್​ ಐಫೋನ್​ ಇಲ್ಲಿ ಸಿಗುತ್ತೆ!

Second hand iphone: ಬಹುತೇಕರಿಗೆ ಸೆಕೆಂಡ್​ ಹ್ಯಾಂಡ್​ ಸ್ಮಾರ್ಟ್​ಫೋನ್​ಗಳ ಮೇಲೆ ನಂಬಿಕೆ ಇರುವುದಿಲ್ಲ. ಆದರೆ ಈ ಮಳಿಗೆಯಲ್ಲಿ ಗ್ರಾಹಕರಿಗೆ ನಂಬಿಕೆಯ ಭರವಸೆ ನೀಡುವುದರ ಜೊತೆಗೆ ವ್ಯಾರಂಟಿಯನ್ನು ನೀಡಲಾಗುತ್ತದೆ. ಅದರೊಂದಿಗೆ ವರ್ಜಿನಲ್ ಬಾಕ್ಸ್​ ಮತ್ತು​ ಅಸೆಸ್ಸರೀಸ್​ ನೀಡುತ್ತಾರೆ.

Cashify Phones ಸೆಂಟರ್

Cashify Phones ಸೆಂಟರ್

  • Share this:
    ಯಾವುದೇ ವಸ್ತುವಿರಲಿ ಸೆಕೆಂಡ್​ ಹ್ಯಾಂಡ್​​ (Second Hand) ಖರೀದಿಗೆ ಹಿಂದೇಟು ಹಾಕುವವರೇ ಜಾಸ್ತಿ. ಆದರೆ ದುಬಾರಿ ಬೆಲೆಯ ವಸ್ತುಗಳು ಸೆಕೆಂಡ್​ ಹ್ಯಾಂಡ್​ ರೂಪದಲ್ಲಿ ಸಿಕ್ಕಿದಾಗ ಹಿಂದೂ ಮುಂದೂ ನೋಡದೆ ಖರೀದಿಸುತ್ತೇವೆ. ಅದರಲ್ಲಿ ದುಬಾರಿ ಬೆಲೆಯ ವಾಹನವಾಗಲಿ ಅಥವಾ ದೈನಂದಿನ ಜೀವನದಲ್ಲಿ ಬಳಸುವ ಫೋನ್ ​ಗಳಲ್ಲಿ (Phones) ಕಡಿಮೆ ಬೆಲೆಗೆ ಅಥವಾ ಸೆಕೆಂಡ್​ ಹ್ಯಾಂಡ್​ ರೂಪದಲ್ಲಿ ಸಿಕ್ಕಾಗ ಖರೀದಿಸದೇ ಇರಲಾರದು. ಬಹುತೇಕರಿಗೆ ಐಫೋನ್ (Iphone)​ ಖರೀದಿಸಬೇಕೆಂಬ ಆಸೆ ಇರುತ್ತದೆ. ಆದರೆ ಬೆಲೆ ನೋಡಿ ಹೊಸತನ್ನ ಖರೀದಿಸಲು ಹಿಂದೇಟು ಹಾಕುವವರೇ ಜಾಸ್ತಿ. ಆದರೆ ಮನದಲ್ಲೊಂದು ಖರೀದಿಸುವ ಆಸೆಯಿಟ್ಟುಕೊಂಡಿರುತ್ತಾರೆ. ಈ ಸಮಯದಲ್ಲಿ ಸೆಕೆಂಡ್​ ಹ್ಯಾಂಡ್​ ಹುಡುಕಾಡುತ್ತಿರುತ್ತಾರೆ. ಅದರಂತೆ ಬೆಂಗಳೂರಿನ ಪ್ರದೇಶದಲ್ಲಿ ಸೆಕೆಂಡ್​ ಹ್ಯಾಂಡ್​ ಐಫೋನ್​ ಖರೀದಿಸುವವರಿಗೆ ಸೂಕ್ತವಾದ ಜಾಗವೊಂದಿದೆ. ಇಲ್ಲಿ ಕಡಿಮೆ ಬೆಲೆ ಐಫೋನ್​ ಮಾತ್ರವಲ್ಲ. ವಿವಿಧ ಕಂಪನಿಗಳ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು (Android Smartphones) ಕೂಡ ಖರೀದಿಗೆ ಸಿಗುತ್ತವೆ. ಅಂದಹಾಗೆಯೇ ಬೆಂಗಳೂರಿನಲ್ಲಿ (Bengaluru) ಎಲ್ಲಿ ಸೆಕೆಂಡ್​ ಹ್ಯಾಂಡ್​ ಐಫೋನ್​ ಸಿಗುತ್ತೆ ಗೊತ್ತಾ? ಈ ಸ್ಟೋರಿ ಓದಿ.

    ಬೆಂಗಳೂರಿನ ಬೇಗೂರು ರಸ್ತೆಯ ಬೊಮ್ಮನಹಳ್ಳಿಯಲ್ಲಿರುವ Cashify Phones ಸೆಂಟರ್​ನಲ್ಲಿ ವಿವಿಧ ಐಫೋನ್​ ಮಾಡೆಲ್​ಗಳ ಸಿಗುತ್ತದೆ. ಕಡಿಮೆ ಬೆಲೆಗೆ ಮಾತ್ರವಲ್ಲದೆ ವ್ಯಾರಂಟಿ ಜೊತೆಗೆ ಐಫೋನ್​ ಇಲ್ಲಿ ಮಾರಾಟ ಮಾಡುತ್ತಾರೆ. ಜೊತೆಗೆ ಒನ್​ಪ್ಲಸ್​, ಶಿಯೋಮಿ ಹೀಗೆ ವಿವಿಧ ಕಂಪನಿಗಳ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡಲಾಗುತ್ತದೆ.

    ಬಹುತೇಕರಿಗೆ ಸೆಕೆಂಡ್​ ಹ್ಯಾಂಡ್​ ಸ್ಮಾರ್ಟ್​ಫೋನ್​ಗಳ ಮೇಲೆ ನಂಬಿಕೆ ಇರುವುದಿಲ್ಲ. ಆದರೆ ಈ ಮಳಿಗೆಯಲ್ಲಿ ಗ್ರಾಹಕರಿಗೆ ನಂಬಿಕೆಯ ಭರವಸೆ ನೀಡುವುದರ ಜೊತೆಗೆ ವ್ಯಾರಂಟಿಯನ್ನು ನೀಡಲಾಗುತ್ತದೆ. ಅದರೊಂದಿಗೆ ವರ್ಜಿನಲ್ ಬಾಕ್ಸ್​ ಮತ್ತು​ ಅಸೆಸ್ಸರೀಸ್​ ನೀಡುತ್ತಾರೆ. ಹಾಗಾಗಿ ಉತ್ಪನ್ನಗಳ ಮೇಲೆ ಭರವಸೆ ಇರುತ್ತದೆ.

    ಕೆಲವು ಕಂಪನಿ ಸ್ಮಾರ್ಟ್​ಫೋನ್​ಗಳಿಗೆ ಕಂಪನಿಯೇ ಸೌಲಭ್ಯವನ್ನು ವಿತರಿಸುತ್ತದೆ. ಒಂದು ವೇಳೆ ಒನ್​ಪ್ಲಸ್​ ಸ್ಮಾರ್ಟ್​ಫೋನ್​ ಖರೀದಿಸಿ ಎನಾದರೂ ಸಮಸ್ಯೆ ಕಾಣಿಸಿಕೊಂಡರೆ ನೇರವಾಗಿ ಒನ್​ಪ್ಲಸ್​ ಕಸ್ಟಮರ್​ ನಂಬರ್​ಗೆ ಕರೆ ಮಾಡಿ ಸಮಸ್ಯೆ ಹೇಳಿದರೆ ಸಾಕು ಸರಿಯಾಗಿ ಪ್ರತಿಕ್ರಿಯಿಸುವುದರ ಜೊತೆಗೆ ಸೇವೆಯನ್ನು ಒದಗಿಸುತ್ತಾರೆ.

    ಇದನ್ನೂ ಓದಿ: Viral Story: ಬೆಂಗಳೂರಿನ ಈ ಕ್ಯಾಂಟೀನ್​ನಲ್ಲಿ 1 ರೂಪಾಯಿಗೆ ತಿಂಡಿ ಸಿಗುತ್ತೆ, ಹಸಿವು ನೀಗಿಸೋಕೆ ಇನ್ನೇನು ಬೇಕು?

    ಇನ್ನು ಸ್ಯಾಮ್​ಸಂಗ್​ ನೋಟ್​ ಸಿರೀಸ್​ ಸ್ಮಾರ್ಟ್​ಫೋನ್​ಗಳೂ ಕೂಡ ಕಡಿಮೆ ಬೆಲೆಗೆ ಸಿಗುತ್ತದೆ. ಅಂದುಕೊಂಡಿರದ ಬೆಲೆಗೆ ಜನಪ್ರಿಯ ಕಂಪನಿಯ ಫೋನ್​ ಖರೀದಿಸಬಹುದಾಗಿದೆ. ಆದರೆ ಪ್ರತಿ ಸ್ಮಾರ್ಟ್​ಫೋನಿಗೂ ವರ್ಜಿನಲ್​ ಅಸೆಸ್ಸರೀಸ್​ ಚಾರ್ಜರ್​ ಎಲ್ಲವೂ ಸಿಗುತ್ತದೆ.



    ಇದನ್ನೂ ಓದಿ: Ola E scooter: ಖರೀದಿಸಿದ ಒಂದು ವಾರದಲ್ಲಿ ಕಾಣಿಸಿಕೊಂಡ ಸಮಸ್ಯೆ! ಪ್ರಾಣಪಾಯದಿಂದ ಪಾರಾದ ಬಳಕೆದಾರ

    ಅಂದಹಾಗೆಯೇ ಬಹುತೇಕ ಆಸೆಯಂತೆಯೇ ಐಫೋನ್​ ಎಕ್ಸ್​ ಆರ್​ ಕೂಡ ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ. ಇದರ ಬಿಡುಗಡೆಯ ಬೆಲೆಯು 36 ಸಾವಿರವಾಗಿದ್ದು, 27 ಸಾವಿರಕ್ಕೆ ಇದನ್ನು Cashify Phones ಸೆಂಟರ್ ಮಾರಾಟ ಮಾಡುತ್ತಿದೆ. ಅಷ್ಟು ಮಾತ್ರವಲ್ಲದೆ ಮಾರುಕಟ್ಟೆಗೆ ಬರುವ ವೇಳೆ 1 ಲಕ್ಷ ಬೆಲೆಯನ್ನು ಹೊಂದಿದ್ದ ಐಫೋನ್​ ಎಕ್ಸ್​ ಈ ಮಳಿಗೆಯಲ್ಲಿ ಕೇವಲ 27 ಸಾವಿರಕ್ಕೆ ಸಿಗುತ್ತಿದೆ.
    Published by:Harshith AS
    First published: