• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Lost Smartphone: ಇನ್ಮುಂದೆ ಸ್ಮಾರ್ಟ್‌ಫೋನ್ ಕಳೆದು ಹೋದ್ರೆ ಟೆನ್ಶನ್ ಬೇಡ, ಈಸಿಯಾಗಿ ಟ್ರ್ಯಾಕ್ ಮಾಡ್ಬಹುದು! ಹೇಗೆ ಗೊತ್ತಾ?

Lost Smartphone: ಇನ್ಮುಂದೆ ಸ್ಮಾರ್ಟ್‌ಫೋನ್ ಕಳೆದು ಹೋದ್ರೆ ಟೆನ್ಶನ್ ಬೇಡ, ಈಸಿಯಾಗಿ ಟ್ರ್ಯಾಕ್ ಮಾಡ್ಬಹುದು! ಹೇಗೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಮಾರ್ಟ್​ಫೋನ್ ಕಳೆದು ಹೋದ್ರೆ ಅದರಲ್ಲಿದ್ದ ಡಾಕ್ಯುಮೆಂಟ್ಸ್​, ಕಾಂಟ್ಯಾಕ್ಟ್​ ಇವೆಲ್ಲವೂ ಹೋಗುತ್ತೆ ಅನ್ನೋ ಟೆನ್ಷನ್ ಹೆಚ್ಚಿನವರಿಗೆ ಆಗುತ್ತೆ. ಆದರೆ ಇನ್ಮುಂದೆ ಫೋನ್​ ಕಳೆದುಹೋಗಿ, ಸ್ವಿಚ್ ಆಫ್​ ಆಗಿದ್ರೂ ಟ್ರ್ಯಾಕ್ ಮಾಡ್ಬಹುದು.

  • Share this:

ಇಡೀ ದೇಶದಲ್ಲಿ ತಂತ್ರಜ್ಞಾನ ಇಲಾಖೆ (DoT)ಯಾದ ತಂತ್ರಜ್ಞಾನ ವಿಭಾಗವು ಕಳೆದುಹೋದ/ಕದ್ದ ಮೊಬೈಲ್ ಫೋನ್‌ಗಳನ್ನು (Mobile) ಪತ್ತೆಹಚ್ಚಲು ಸಂಚಾರ ಸಾಥಿ ಪ್ಲಾಟ್‌ಫಾರ್ಮ್ ಅನ್ನು ಇತ್ತೀಚೆಗೆ ಪ್ರಾರಂಭಿಸಿತು. ಈ ಸೇವೆಯು ದೇಶಾದ್ಯಂತ ಲಭ್ಯವಿದೆ ಮತ್ತು ಕಳೆದುಹೋದ/ಕದ್ದ ಮೊಬೈಲ್​ಗಳನ್ನು ಟ್ರ್ಯಾಕ್ ಮಾಡಲು ಮತ್ತು ಬ್ಲಾಕ್‌ ಮಾಡಲು ಸ್ಮಾರ್ಟ್‌ಫೋನ್ (Smartphone) ಹೊಂದಿರುವವರಿಗೆ ಈ ತಂತ್ರಜ್ಞಾನವು ಅನುಮತಿಸುತ್ತದೆ. ವಿಶ್ವದಲ್ಲಿ ಬಹುತೇಕ ಮಂದಿ ಅಂತ ಹೇಳುವುದಕ್ಕಿಂತ ಎಲ್ಲರೂ ಕೂಡ ಈಗ ಸ್ಮಾರ್ಟ್​ಫೋನ್ ಬಳಸುತ್ತಿದ್ದಾರೆ. ಇದು ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ಗಳ ಮೇಲೆ ಎಲ್ಲರೂ ಎಲ್ಲದಕ್ಕೂ ಅವಲಂಬಿತರಾಗಿದ್ದಾರೆ.


ದೈನಂದಿನ ವ್ಯವಹಾರದಿಂದ ಹಿಡಿದು ಹೆಚ್ಚಿನ ಕೆಲಸಗಳು ಸ್ಮಾರ್ಟ್​ಫೋನ್​ನಿಂದಲೇ ಆಗುತ್ತದೆ. ಹಾಗಾಗಿ ಇದರ ಬಳಕೆ ಹೆಚ್ಚಾಗುತ್ತಿದೆ. ಒಂದು ವೇಳೆ ಸ್ಮಾರ್ಟ್​ಫೋನ್​ ಕಳೆದು ಹೋದರೆ ಆ ದಿನವೇ ಹಾಳಾದಂತೆ ಎಂಬುವಷ್ಟು ಸ್ಮಾರ್ಟ್‌ಫೋನ್‌ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.


ಏಕೆಂದರೆ ಸ್ಮಾರ್ಟ್​ಫೋನ್​ ಮೂಲಕ ಅನೇಕ ಡಾಕ್ಯುಮೆಂಟ್ ​, ಕ್ವಾಂಟೆಕ್ಟ್ಸ್​ಗಳನ್ನು ಇಟ್ಟುಕೊಂಡಿರುತ್ತೇವೆ. ಸ್ಮಾರ್ಟ್​ಫೋನ್​ ಕಳೆದಂತೆ ಇವೆಲ್ಲವನ್ನು ಕಳೆದುಕೊಳ್ಳುತ್ತೇವೆ. ಆದರೀಗ ಅಂತಹ ಸಮಸ್ಯೆಗಳಿಗೆ ತಲೆಕೆಡಿಸಬೇಕಾದ ಅವಶ್ಯಕತೆಯಿಲ್ಲ. ಫೋನ್​ ಕಳೆದರೆ, ಆ ಫೋನ್‌ ಸ್ವಿಚ್​ ಆಫ್ ​​ ಆಗಿದ್ದರೂ ಕೂಡ ಸ್ಮಾರ್ಟ್‌ಫೋನ್ ಅನ್ನು ನೀವು ಸುಲಭವಾಗಿ ಟ್ರ್ಯಾಕ್ ಮಾಡಬಹುದಾಗಿದೆ.


ಇದನ್ನೂ ಓದಿ: ಕೇವಲ 5 ರೂಪಾಯಿಗೆ ಅನಿಯಮಿತ ಕರೆ, 10 ಜಿಬಿ ಡೇಟಾ ಫ್ರೀ!


ಸಂಚಾರ ಸಾಥಿ ಪ್ಲಾಟ್‌ಫಾರ್ಮ್‌ ಅನ್ನು ಬಳಕೆ ಮಾಡೋದು ಹೇಗೆ?


ಸಂಚಾರ ಸಾಥಿ ಪ್ಲಾಟ್‌ ಫಾರ್ಮ್‌ ಸೆಂಟ್ರಲ್‌ ಇಕ್ಯುಪ್‌ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌ (CEIR) ಅನ್ನು ಬಳಸುತ್ತದೆ. ಇದನ್ನು ಬಳಕೆ ಮಾಡುವುದು ಉಚಿತವಾಗಿದೆ ಮತ್ತು ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ಈಶಾನ್ಯ ಸೇರಿದಂತೆ ಕೆಲವು ಟೆಲಿಕಾಂ ವಲಯಗಳಲ್ಲಿ ಮುಖ್ಯ ವಾಹಿನಿಯಾಗಿ ಕಾರ್ಯನಿರ್ವಹಿಸುತ್ತಿದೆ.


ಸಾಂದರ್ಭಿಕ ಚಿತ್ರ


ತಮ್ಮ ಫೋನ್‌ಗಳನ್ನು ಕಳೆದುಕೊಂಡಿರುವ ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿರುವ IMEI ಸಂಖ್ಯೆಯನ್ನು ಬಳಸಿಕೊಂಡು ತಮ್ಮ ಸ್ಮಾರ್ಟ್‌ಪೋನ್‌ ಅನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡಬಹುದು. ಒಮ್ಮೆ ಬ್ಲಾಕ್‌ ಮಾಡಿದ್ರೆ, ಆ ಹ್ಯಾಂಡ್‌ಸೆಟ್ ಯಾವುದೇ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ.


ನಿಮ್ಮ ಸ್ಮಾರ್ಟ್​​ಫೋನ್​ ಕಳೆದು ಹೋಗಿದ್ದರೆ, ಅದನ್ನು ಟ್ರ್ಯಾಕ್‌ ಮಾಡೋದು ಮತ್ತು ಬ್ಲಾಕ್‌ ಮಾಡೋದು ಹೇಗೆ? ಇಲ್ಲಿದೆ ಕೆಲವು ಹಂತಗಳ ಗೈಡ್


ನಿಮ್ಮ ಕಳೆದುಹೋದ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಮತ್ತು ಬ್ಲಾಕ್‌ ಮಾಡಲು ಸಂಚಾರ ಸಾಥಿಯನ್ನು ಹೇಗೆ ಬಳಸುವುದು ಎಂಬುದರ ಕುರಿತು ನಾವು ನಿಮಗೆ ಹಂತ-ಹಂತವಾಗಿ ಗೈಡ್‌ ಮಾಡುತ್ತೇವೆ.


ಸಂಚಾರ ಸಾಥಿ ವೆಬ್‌ಸೈಟ್‌ನಲ್ಲಿ ಫೋನ್ ಅನ್ನು ಟ್ರ್ಯಾಕ್ ಮಾಡುವುದು ಅಗತ್ಯವಿರುವುದರಿಂದ ಕದ್ದ/ಕಳೆದುಹೋದ ಫೋನ್‌ನ ಎಫ್‌ಐಆರ್ (FIR) ಪ್ರತಿಯನ್ನು ಹೊಂದಿರುವುದು ಅಗತ್ಯ.


ಆ ಹಂತಗಳು ಹೀಗಿವೆ:


ಹಂತ 1- https://sarcharsaathi.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.


ಹಂತ 2- ಇಲ್ಲಿ, 'ನಿಮ್ಮ ಕಳೆದುಹೋದ/ಕದ್ದ ಮೊಬೈಲ್ ಅನ್ನು ಬ್ಲಾಕ್‌ ಮಾಡಿ' ಎಂಬುದನ್ನು ಕ್ಲಿಕ್ ಮಾಡಿ


ಹಂತ 3- ಮೊಬೈಲ್ ಸಂಖ್ಯೆ, IMEI ಸಂಖ್ಯೆ, ಮೊಬೈಲ್‌ನ ಬ್ರ್ಯಾಂಡ್ ಮತ್ತು ಮೊಬೈಲ್‌ನ ಮಾಡೆಲ್‌ ಅನ್ನು ಒಳಗೊಂಡಿರುವ ನಿಮ್ಮ ಮೊಬೈಲ್‌ನ ವಿವರಗಳನ್ನು ನಮೂದಿಸಲು ನಿಮ್ಮನ್ನು ಈಗ ಕೇಳಲಾಗುತ್ತದೆ. ನೀವು ಫೋನ್‌ ಅನ್ನು ಖರೀದಿ ಮಾಡಿರುವ ಬಿಲ್‌ ಅಥವಾ ಇನ್‌ವಾಯ್ಸ್ ಅನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.


ಸಾಂದರ್ಭಿಕ ಚಿತ್ರ


ಹಂತ 4- ನೆಕ್ಷ್ಟ್‌,, ನಿಮ್ಮ ನಗರ, ಜಿಲ್ಲೆ, ರಾಜ್ಯ ಮತ್ತು ನಿಮ್ಮ ಮೊಬೈಲ್‌ ಅನ್ನು ನೀವು ಕಳೆದುಕೊಂಡ ದಿನಾಂಕದಂತಹ ಕಳೆದುಹೋದ ಮಾಹಿತಿಯನ್ನು ನಮೂದಿಸಿ.


ಹಂತ 5- ಈಗ, ID ಪುರಾವೆಯೊಂದಿಗೆ ಹೆಸರು, ವಿಳಾಸ ಮತ್ತು ಇಮೇಲ್ ಐಡಿಯಂತಹ ಮೊಬೈಲ್ ಮಾಲೀಕರ ವೈಯಕ್ತಿಕ ಮಾಹಿತಿಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.


ಹಂತ 6- OTP ಸ್ವೀಕರಿಸಲು ನೀವು ಮೊಬೈಲ್ ಸಂಖ್ಯೆಯನ್ನು ಸಹ ನಮೂದಿಸಬೇಕಾಗುತ್ತದೆ.


ಹಂತ 7- ಒದಗಿಸಿದ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸುವ OTP ಅನ್ನು ನಮೂದಿಸಿ ಮತ್ತು ಅದನ್ನು ಪರಿಶೀಲಿಸಿ.


ಹಂತ 8- ಡಿಕ್ಲರೇಷನ್‌ ಅನ್ನು ಸ್ವೀಕರಿಸಿ ಮತ್ತು ಸಲ್ಲಿಸು ಎಂಬುದರ ಮೇಲೆ ಕ್ಲಿಕ್ ಮಾಡಿ.




ಹಂತ 9- ನೀವು ಈಗ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದೀರಿ. ಮುಂದಿನ ಹಂತವಾಗಿ, ನಿಮ್ಮ ಖಾತೆಗೆ ಲಾಗಿನ್ ಮಾಡಿ.


ಹಂತ 10- ನಿಮ್ಮ ಕಳೆದುಹೋದ/ಕದ್ದ ಫೋನ್ ಅನ್ನು ಪತ್ತೆಹಚ್ಚಲು, 'IMEI ಹುಡುಕಾಟ' ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅದು ಕೇಳಿದಂತೆ ವಿವರಗಳನ್ನು ನಮೂದಿಸಿ. ಪೋರ್ಟಲ್ ನಿಮ್ಮ ಫೋನ್ ಸ್ವಿಚ್ ಆನ್ ಆಗಿದ್ದರೆ ಅದರ ಸ್ಥಳವನ್ನು ಕೂಡಲೇ ತೋರಿಸುತ್ತದೆ.


ಹಂತ 11- ಈಗ ನಿಮ್ಮ ಫೋನ್ ಅನ್ನು ಬ್ಲಾಕ್‌ ಮಾಡಲು ‘ಬ್ಲಾಕ್ ಸ್ಟೋಲನ್/ಲಾಸ್ಟ್ ಫೋನ್’ ಎಂಬ ಬಟನ್‌ ಮೇಲೆ ಕ್ಲಿಕ್ ಮಾಡಿ, ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಬ್ಲಾಕ್' ಬಟನ್‌ ಮೇಲೆ ಕ್ಲಿಕ್ ಮಾಡಿ.

top videos


    ಹೀಗೆ ಈ ಹಂತಗಳನ್ನು ಫಾಲೋ ಮಾಡುವುದರ ಮೂಲಕ ಕಳೆದು ಹೋದ ನಿಮ್ಮ ಸ್ಮಾರ್ಟ್‌ ಪೋನ್‌ ಅನ್ನು ನೀವು ಎಲ್ಲಿದೆ ಅಂತ ಟ್ರ್ಯಾಕ್‌ ಮಾಡಬಹುದು ಅಥವಾ ಅದರ ಬಳಕೆ ನಿಲ್ಲಬೇಕು ಎಂದು ಬ್ಲಾಕ್‌ ಸಹ ಮಾಡಬಹುದು.

    First published: