HOME » NEWS » Tech » LOOKING TO BUY A GAMING PHONE THESE ARE THE OPTIONS STARTING AT RS 18999 STG HG

ಗೇಮ್‌ ಆಡಲು ಉತ್ತಮ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕೆ..? ಇಲ್ಲಿದೆ ನೋಡಿ ಟಾಪ್‌ 10 ಆಯ್ಕೆ

ಕೆಲವು ಮಾತ್ರ ಉತ್ತಮ ಗೇಮಿಂಗ್ ಮತ್ತು ಸಾಮಾನ್ಯ ಕಾರ್ಯಕ್ಷಮತೆಯನ್ನು ನೀಡುತ್ತವೆ. ಈ ಪೈಕಿ ಗೇಮಿಂಗ್‌ಗಾಗಿ ನೀವು ಖರೀದಿಸಬಹುದಾದ 10 ಅತ್ಯುತ್ತಮ ಫೋನ್‌ಗಳನ್ನು ನಾವು ಆರಿಸಿದ್ದು, ಈ ಸಾಧನಗಳು ಉತ್ತಮ ಪ್ರದರ್ಶನ, ಆಧುನಿಕ ವಿನ್ಯಾಸ, ಡ್ಯುಯಲ್ ಸ್ಪೀಕರ್‌ಗಳು, ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ ಬ್ಯಾಟರಿ, ಶಕ್ತಿಯುತ ಪ್ರೊಸೆಸರ್ ಮತ್ತು ಹೆಚ್ಚಿನದನ್ನು ಹೊಂದಿವೆ.

news18-kannada
Updated:April 12, 2021, 7:48 PM IST
ಗೇಮ್‌ ಆಡಲು ಉತ್ತಮ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕೆ..? ಇಲ್ಲಿದೆ ನೋಡಿ ಟಾಪ್‌ 10 ಆಯ್ಕೆ
ಕೆಲವು ಮಾತ್ರ ಉತ್ತಮ ಗೇಮಿಂಗ್ ಮತ್ತು ಸಾಮಾನ್ಯ ಕಾರ್ಯಕ್ಷಮತೆಯನ್ನು ನೀಡುತ್ತವೆ. ಈ ಪೈಕಿ ಗೇಮಿಂಗ್‌ಗಾಗಿ ನೀವು ಖರೀದಿಸಬಹುದಾದ 10 ಅತ್ಯುತ್ತಮ ಫೋನ್‌ಗಳನ್ನು ನಾವು ಆರಿಸಿದ್ದು, ಈ ಸಾಧನಗಳು ಉತ್ತಮ ಪ್ರದರ್ಶನ, ಆಧುನಿಕ ವಿನ್ಯಾಸ, ಡ್ಯುಯಲ್ ಸ್ಪೀಕರ್‌ಗಳು, ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ ಬ್ಯಾಟರಿ, ಶಕ್ತಿಯುತ ಪ್ರೊಸೆಸರ್ ಮತ್ತು ಹೆಚ್ಚಿನದನ್ನು ಹೊಂದಿವೆ.
  • Share this:
ಕೊರೊನಾ ಸಾಂಕ್ರಾಮಿಕ ಭೀತಿಯಿಂದ ಎಲ್ಲರೂ ಹೆಚ್ಚು ಮನೆಯಲ್ಲೇ ಇರುವಂತಾಗಿದೆ. ಹಲವರಿಗೆ ಈಗಲೂ ಆನ್‌ಲೈನ್‌ ಕ್ಲಾಸ್‌ ಮುಂದುವರಿದಿರುವುದರಿಂದ ಮಕ್ಕಳು ಕ್ಲಾಸ್‌ ಬಳಿಕ ಅದೇ ಫೋನ್‌ನಲ್ಲಿ ಗೇಮ್‌ ಆಡಲು ತೊಡಗುತ್ತವೆ. ಏಕೆಂದರೆ ಹೊರಗೆ ಬೇರೆಯವರ ಜತೆ ಆಟವಾಡಲು ಕಳಿಸಲು ಭಯ. ಇನ್ನು, ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಆದರೆ, ಗೇಮ್‌ ಆಡಲು ಉತ್ತಮ ಸ್ಮಾರ್ಟ್‌ಫೋನ್‌ಗಳ ಪೈಕಿ ಕೆಲವೇ ಆಯ್ಕೆಗಳಿವೆ. ಕೆಲವು ಮಾತ್ರ ಉತ್ತಮ ಗೇಮಿಂಗ್ ಮತ್ತು ಸಾಮಾನ್ಯ ಕಾರ್ಯಕ್ಷಮತೆಯನ್ನು ನೀಡುತ್ತವೆ. ಈ ಪೈಕಿ ಗೇಮಿಂಗ್‌ಗಾಗಿ ನೀವು ಖರೀದಿಸಬಹುದಾದ 10 ಅತ್ಯುತ್ತಮ ಫೋನ್‌ಗಳನ್ನು ನಾವು ಆರಿಸಿದ್ದು, ಈ ಸಾಧನಗಳು ಉತ್ತಮ ಪ್ರದರ್ಶನ, ಆಧುನಿಕ ವಿನ್ಯಾಸ, ಡ್ಯುಯಲ್ ಸ್ಪೀಕರ್‌ಗಳು, ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ ಬ್ಯಾಟರಿ, ಶಕ್ತಿಯುತ ಪ್ರೊಸೆಸರ್ ಮತ್ತು ಹೆಚ್ಚಿನದನ್ನು ಹೊಂದಿವೆ. ನಿಮ್ಮ ಬಜೆಟ್‌ನ ಪ್ರಕಾರ ನೀವು ಅತ್ಯುತ್ತಮವಾದ 2021 ಗೇಮಿಂಗ್ ಫೋನ್ ಅನ್ನು ಆಯ್ಕೆ ಮಾಡಬಹುದು.

1) ಒನ್‌ಪ್ಲಸ್ ನಾರ್ಡ್

ಗೇಮಿಂಗ್‌ಗೆ ಒನ್‌ಪ್ಲಸ್ ನಾರ್ಡ್ ಮತ್ತೊಂದು ಫೋನ್‌ ಆಗಿದ್ದು, ಒಟ್ಟಾರೆ ಉತ್ತಮ ಕಾರ್ಯಕ್ಷಮತೆಗಾಗಿ ನೀವು ಖರೀದಿಸಬಹುದು. 25,999 ರೂ. ಬೆಲೆ ಹೊಂದಿರುವ ಈ ಫೋನ್‌ ಮಧ್ಯ ಶ್ರೇಣಿಯ 5ಜಿ ಫೋನ್ ಕ್ವಾಲ್ಕಾಮ್‌ನ ಶಕ್ತಿಯುತ ಸ್ನ್ಯಾಪ್‌ಡ್ರ್ಯಾಗನ್‌ 765 ಜಿ SoC ಯಿಂದ ಶಕ್ತಿಯನ್ನು ಸೆಳೆಯುತ್ತದೆ. ಹ್ಯಾಂಡ್‌ಸೆಟ್ 6.44-ಇಂಚಿನ ಪೂರ್ಣ-ಎಚ್‌ಡಿ + AMOLED ಡಿಸ್ಪ್ಲೇಯನ್ನು 90Hz ರಿಫ್ರೆಶ್ ರೇಟ್‌ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಸ್ಟೀರಿಯೋ ಸ್ಪೀಕರ್‌ಗಳನ್ನು ಪಡೆಯುವುದರಿಂದ ಉತ್ತಮ ವೀಕ್ಷಣೆ ಅನುಭವವನ್ನು ನೀಡುತ್ತದೆ. ಒನ್‌ಪ್ಲಸ್‌ನ ಪ್ರಮುಖ ಮಾರಾಟದ ಅಂಶವೆಂದರೆ ಆಕ್ಸಿಜನ್ಓಎಸ್, ಇದು ನಿಮಗೆ ಅತ್ಯುತ್ತಮ ಆಂಡ್ರಾಯ್ಡ್ ಅನುಭವವನ್ನು ನೀಡುತ್ತದೆ. ಒನ್‌ಪ್ಲಸ್ ನಾರ್ಡ್ 30W ಚಾರ್ಜರ್ ಅನ್ನು ಬೆಂಬಲಿಸುವ 4,115mAh ಬ್ಯಾಟರಿಯೊಂದಿಗೆ ಸಾಗಿಸುತ್ತದೆ.

2) ವಿವೋ ವಿ 20 ಪ್ರೊ

ಇನ್ನು, ಫ್ಲಿಪ್‌ಕಾರ್ಟ್‌ನಲ್ಲಿ 29,990 ರೂಗಳಿಗೆ ಮಾರಾಟವಾಗುತ್ತಿರುವ ವಿವೋ ವಿ20 ಪ್ರೊ ಸ್ಮಾರ್ಟ್‌ಫೋನ್ ಸಹ ಉತ್ತಮ ಆಯ್ಕೆ. ಸಾಧನವು ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 765 ಜಿ ಪ್ರೊಸೆಸರ್ ಅನ್ನು ನೀಡುತ್ತದೆ. ಮಧ್ಯ ಶ್ರೇಣಿಯ 5 ಜಿ ಫೋನ್ 6.44-ಇಂಚಿನ ಎಫ್‌ಹೆಚ್‌ಡಿ + ಡಿಸ್ಪ್ಲೇ ಹೊಂದಿದೆ. ಈ ಫೋನ್‌ ಪ್ರಮಾಣಿತ 60Hz ಪ್ಯಾನೆಲ್‌ ಅನ್ನು ಹೊಂದಿದೆ. ಫೋನ್‌ನ ಹಿಂಭಾಗದಲ್ಲಿ, 64 ಎಂಪಿ ಸಂವೇದಕ ಸೇರಿದಂತೆ ಮೂರು ಕ್ಯಾಮೆರಾಗಳಿದ್ದರೆ, ಸೆಲ್ಫಿಗಳಿಗಾಗಿ, 44MP + 8MP ಡ್ಯುಯಲ್ ಫ್ರಂಟ್-ಫೇಸಿಂಗ್ ಕ್ಯಾಮೆರಾ ಇದೆ. ಪ್ರಮಾಣಿತ 4,000mAh ಬ್ಯಾಟರಿ ಇದ್ದು, ಕಂಪನಿಯು 33W ವೇಗದ ಚಾರ್ಜರ್ ಅನ್ನು ಸಾಧನದೊಂದಿಗೆ ನೀಡುತ್ತದೆ.

3) ಏಸಸ್‌ ಆರ್‌ಒಜಿ ಫೋನ್ 3

ಏಸಸ್‌ ಆರ್‌ಒಜಿ ಫೋನ್ 3 ಅತ್ಯುತ್ತಮ ಗೇಮಿಂಗ್ ಫೋನ್‌ಗಳಲ್ಲಿ ಒಂದು. ಸಾಧನವು ಪ್ರಸ್ತುತ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ 41,999 ರೂ. ಗಳಿಗೆ ನೀಡಲಾಗುತ್ತಿದೆ. ಇದರಲ್ಲಿ 6000 ಎಂಎಹೆಚ್ ಬ್ಯಾಟರಿ, ಕೂಲಿಂಗ್ ಸಿಸ್ಟಮ್, ಏಸಸ್‌ ನಾಯ್ಸ್ ರಿಡಕ್ಷನ್ ಟೆಕ್ ಹೊಂದಿರುವ ಕ್ವಾಡ್ ಮೈಕ್ರೊಫೋನ್, ಸ್ನ್ಯಾಪ್‌ಡ್ರ್ಯಾಗನ್‌ 865+ ಪ್ರೊಸೆಸರ್, 144 ಹೆಚ್ ಡಿಸ್ಪ್ಲೇ, ಸ್ಟಿರಿಯೋ ಸ್ಪೀಕರ್‌, ಏರ್‌ಟ್ರಿಗರ್ 3 ಗಾಗಿ ಅಲ್ಟ್ರಾಸಾನಿಕ್ ಸೆನ್ಸರ್‌ಗಳನ್ನು ಹೊಂದಿದೆ. 33W ವೇಗದ ಚಾರ್ಜರ್‌ ಸಹ ನೀಡಲಾಗುತ್ತದೆ.4) ಐಫೋನ್ 12 ಸೀರಿಸ್‌

ನೀವು ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಫೋನ್‌ ಅನ್ನು ಖರೀದಿಸಬಹುದು ಎಂದಾದರೆ ಗೇಮಿಂಗ್‌ಗೆ ಇವುಗಳಲ್ಲಿ ಯಾವುದಾದರೂ ಒಂದನ್ನು ಖರೀದಿಸಬಹುದು. ಐಫೋನ್ 12 79,900 ರೂ. ಗೆ ಲಭ್ಯವಿದ್ದು, ಐಫೋನ್ 12 ಮಿನಿ ಅಗ್ಗದ ಫೋನ್ ಆಗಿದ್ದು, ಫ್ಲಿಪ್‌ಕಾರ್ಟ್ ಮೂಲಕ 63,900 ರೂಗಳಿಗೆ ಖರೀದಿಸಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ನಲ್ಲಿ 6,000 ರೂ.ಗಳ ತ್ವರಿತ ರಿಯಾಯಿತಿ ಸಹ ಇದೆ. ಸಾಧನವು OLED ಸ್ಕ್ರೀನ್‌ ಅನ್ನು ಹೊಂದಿದ್ದು, ಬೆರಗುಗೊಳಿಸುತ್ತದೆ. ಅದ್ಭುತ ಹಿಂದಿನ ಕ್ಯಾಮೆರಾ ಸೆಟಪ್, ಶಕ್ತಿಯುತ ಆ್ಯಪಲ್ ಎ 14 ಬಯೋನಿಕ್ ಪ್ರೊಸೆಸರ್ ಮತ್ತು ಐಪಿ 68 ರೇಟಿಂಗ್ ನೀಡುತ್ತದೆ. . ಆದರೂ, ನೀವು ಐಫೋನ್ 12 ಮಿನಿ ಯಲ್ಲಿ ಚಿಕ್ಕ ಡಿಸ್ಪ್ಲೇ ಪಡೆಯುತ್ತೀರಿ ಎಂಬುದನ್ನು ಗಮನಿಸಬೇಕು.

5) ಪೋಕೋ ಎಕ್ಸ್ 3 ಪ್ರೊ

ಪೋಕೋ ಎಕ್ಸ್ 3 ಪ್ರೊ ಬೆಲೆ 18,999 ರೂ. ಆಗಿದೆ. ಮತ್ತು ಇದು ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 860 ಪ್ರೊಸೆಸರ್ ಅನ್ನು ಹೊಂದಿದೆ. ಈ ಚಿಪ್ ಒನ್‌ಪ್ಲಸ್ 7 ಪ್ರೊ, ಒನ್‌ಪ್ಲಸ್ 7 ಮತ್ತು ಇತರ ಹ್ಯಾಂಡ್‌ಸೆಟ್‌ಗಳಂತಹ ಫೋನ್‌ಗಳಿಗೆ ಶಕ್ತಿ ತುಂಬುತ್ತಿದೆ. ಈ ಬೆಲೆಗೆ, ನೀವು 5,160mAh ಬ್ಯಾಟರಿ, 33W ಫಾಸ್ಟ್ ಚಾರ್ಜರ್, ಡ್ಯುಯಲ್ ಸ್ಪೀಕರ್‌ಗಳು ಮತ್ತು 120Hz ರಿಫ್ರೆಶ್ ದರ, 6.67-ಇಂಚಿನ ಪೂರ್ಣ-HD + AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ, HDR10 ಪ್ರಮಾಣೀಕರಣ ಮತ್ತು ಕಾರ್ನಿಂಗ್ ಗೊರಿಲ್ಲಾ 6 ರಕ್ಷಣೆಯನ್ನು ಸಹ ಪಡೆಯುತ್ತೀರಿ.

6) ರಿಯಲ್‌ ಮಿ ಎಕ್ಸ್ 7 ಪ್ರೊ

ರಿಯಲ್‌ ಮಿ ಎಕ್ಸ್ 7 ಪ್ರೊ ನಿಮಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಹಿನ್ನೆಲೆ ಹೆವ್ವಿ ಗೇಮ್‌ಗಳನ್ನು ಆಡಲು ಸಮಸ್ಯೆಯಾಗಲ್ಲ. ಸಾಧನವು ಮೀಡಿಯಾಟೆಕ್‌ನ ಪ್ರಮುಖ ಡೈಮೆನ್ಸಿಟಿ 1000+ ಪ್ರೊಸೆಸರ್, 64 ಎಂಪಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್, ಡಾಲ್ಬಿ ಅಟ್ಮೋಸ್‌ ಸಪೋರ್ಟ್‌ನೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳು ಮತ್ತು 65W ಫಾಸ್ಟ್ ಚಾರ್ಜಿಂಗ್‌ ಬೆಂಬಲದೊಂದಿಗೆ 4,500 ಎಮ್‌ಎಹೆಚ್ ಬ್ಯಾಟರಿಯನ್ನು ಹೊಂದಿದೆ. ಸಾಧನವು 6.55-ಇಂಚಿನ ಪೂರ್ಣ-ಎಚ್‌ಡಿ + AMOLED 120Hz ರಿಫ್ರೆಶ್ ರೇಟ್‌ ಡಿಸ್ಪ್ಲೇ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್, ಮತ್ತು 1,200 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಇದು ಭಾರತದಲ್ಲಿ 29,999 ರೂ. ಗೆ ಲಭ್ಯವಿದೆ.

7)ಒನ್‌ಪ್ಲಸ್ 9 ಆರ್ / ಒನ್‌ಪ್ಲಸ್ 8 ಟಿ

ನೀವು ಒನ್‌ಪ್ಲಸ್ 8 ಟಿ ಅಥವಾ ಒನ್‌ಪ್ಲಸ್ 9 ಆರ್ ಅನ್ನು ಖರೀದಿಸಿದರೆ, ಇವೆರಡರಲ್ಲೂ ಒಂದೇ ರೀತಿಯ ಕಾರ್ಯಕ್ಷಮತೆಯನ್ನು ಪಡೆಯುತ್ತೀರಿ. ಒನ್‌ಪ್ಲಸ್ 8 ಟಿ ಬೆಲೆ 42,999 ರೂ ಆಗಿದ್ದರೂ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಗೆ 3,000 ರೂ. ಡಿಸ್ಕೌಂಟ್‌ ನೀಡಲಾಗುತ್ತಿದೆ. ಈ ಹಿನ್ನೆಲೆ 39,999 ರೂ. ಗಳಿಗೆ ಪಡೆಯಬಹುದು. ಜತೆಗೆ ಒನ್‌ಪ್ಲಸ್ 9 ಆರ್ ಅನ್ನು ಇತ್ತೀಚೆಗೆ ಭಾರತದಲ್ಲಿ 39,999 ರೂ. ಗಳಿಗೆ ಬಿಡುಗಡೆ ಮಾಡಲಾಯಿತು.

8) ಶಿಯೋಮಿ ಎಂಐ 10i

ಒಂದು ವೇಳೆ ನೀವು ಪೋಕೋ ಫೋನ್ ಖರೀದಿಸಲು ಬಯಸದಿದ್ದರೆ 20,999 ರೂ. ಗೆ ದೊರೆಯುವ ಶಿಯೋಮಿಯ ಎಂಐ 10 ಐ, ಪೋಕೋ ಎಕ್ಸ್ 3 ಪ್ರೊ ಗೆ ಉತ್ತಮ ಪರ್ಯಾಯವಾಗಿದೆ. ಇದು ಪ್ರಬಲ ಮಧ್ಯ ಶ್ರೇಣಿಯ ಪ್ರೊಸೆಸರ್ ಅಂದರೆ ಎನ್ಎಂ ಆಧಾರಿತ ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 750 ಜಿ ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ ಕಾರ್ಯಕ್ಷಮತೆ ವಿಭಾಗದಲ್ಲಿ ನಿಮಗೆ ಸಮಸ್ಯೆಗಳಿಲ್ಲ. ಈ ಫೋನ್‌ ಸ್ಟೀರಿಯೋ ಸ್ಪೀಕರ್‌ಗಳು, 120Hz ಅಡಾಪ್ಟಿವ್ ಸಿಂಕ್ ರಿಫ್ರೆಶ್ ರೇಟ್‌ ಡಿಸ್ಪ್ಲೇ ಮತ್ತು ಕೂಲಿಂಗ್ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. 6.7-ಇಂಚಿನ ಡಿಸ್ಪ್ಲೇ, 108 ಎಂಪಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್, 33 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ 4,820 ಎಮ್ಎಹೆಚ್ ಬ್ಯಾಟರಿಯನ್ನು ಹೊಂದಿದೆ.

9) ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ 5 ಜಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ 5 ಜಿ ಉತ್ತಮ ಸ್ಮಾರ್ಟ್‌ಫೋನ್ ಆಗಿದ್ದು, ಹೆಚ್ಚಿನ ಸ್ಯಾಮ್‌ಸಂಗ್ ಫೋನ್‌ಗಳಂತೆಯೇ ನೀವು ಉತ್ತಮ ಪ್ರದರ್ಶನವನ್ನು ಸಹ ಪಡೆಯುತ್ತೀರಿ. ಇದು ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 865 ಚಿಪ್‌ಸೆಟ್‌ ಹೊಂದಿದೆ. ವೈರ್‌ಲೆಸ್‌ ಚಾರ್ಜಿಂಗ್ 2.0 ಸಪೋರ್ಟ್‌ನೊಂದಿಗೆ 4,500 ಎಮ್ಎಹೆಚ್ ಬ್ಯಾಟರಿ ಹೊಂದಿದೆ. 25 ವ್ಯಾಟ್‌ ಫಾಸ್ಟ್ ಚಾರ್ಜರ್, 6.5-ಇಂಚಿನ ಪೂರ್ಣ-ಎಚ್‌ಡಿ + AMOLED ಡಿಸ್ಪ್ಲೇ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಇದು 5 ಜಿ ಸಪೋರ್ಟ್ ಹೊಂದಿರುವ ಕಾರಣ ಭವಿಷ್ಯದಲ್ಲಿ ಸಿದ್ಧವಾದ ಫೋನ್ ಆಗಿದೆ.

10) ಒನ್‌ಪ್ಲಸ್ 9

ಒನ್‌ಪ್ಲಸ್ 9 ಬ್ರ್ಯಾಂಡ್‌ನ ಇತ್ತೀಚಿನ ಪ್ರಮುಖ ಫೋನ್ ಆಗಿದ್ದು, ಎಲ್ಲಾ ಕ್ಷೇತ್ರಗಳ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ನೀವು ಅದನ್ನು ಅವಲಂಬಿಸಬಹುದು. ನೀವು 120Hz ರಿಫ್ರೆಶ್ ರೇಟ್‌ನೊಂದಿಗೆ 6.55-ಇಂಚಿನ AMOLED ಡಿಸ್ಪ್ಲೇ, ಕ್ವಾಲ್ಕಾಮ್‌ನ ಇತ್ತೀಚಿನ ಸ್ನ್ಯಾಪ್‌ಡ್ರ್ಯಾಗನ್‌ 888 SoC, ಮಲ್ಟಿ ಲೇಯರ್ಡ್ ಕೂಲಿಂಗ್ ಸಿಸ್ಟಮ್, ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ವಾರ್ಪ್ ಚಾರ್ಜ್ ಅನ್ನು ಸಪೋರ್ಟ್ ಮಾಡುವ 4,500mAh ಬ್ಯಾಟರಿ ಹೊಂದಿದೆ. ನೀವು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ. ಒನ್‌ಪ್ಲಸ್ 9ಗೆ ಭಾರತದಲ್ಲಿ 49,999 ರೂ. ಬೆಲೆ ಹೊಂದಿದೆ.
First published: April 12, 2021, 7:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories