ಸ್ಮಾರ್ಟ್​ಫೋನ್​ ಮೂಲಕ ನಿಯಂತ್ರಿಸಬಹುದಾದ ಸ್ಮಾರ್ಟ್​ಬಲ್ಬ್​​; ಮನೆ ಬೆಳಗಿಸಲು ಯಾವ ಬಲ್ಬ್ ಬೆಸ್ಟ್?

Smart Bulb: ಕೆಲವು ಕಂಪನಿಗಳು ಎಲ್ಇಡಿ ಸ್ಮಾರ್ಟ್​ಬಲ್ಬ್​​ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಪರಿಚಯಿಸಿವೆ. ಸದ್ಯ ಸ್ಮಾರ್ಟ್​ಯುಗದಲ್ಲಿ ಹೊಸ ವೈಶಿಷ್ಟ್ಯವನ್ನು ಹೊಂದಿರುವ ಇಂತಹ ಸ್ಮಾರ್ಟ್​ಬಲ್ಬ್​​ಗಳು  ಗ್ರಾಹಕರನ್ನು ಮೋಡಿ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಎಲ್ಇಡಿ ಸ್ಮಾರ್ಟ್​ಬಲ್ಬ್​​ಗಳ  ಬಗ್ಗೆ ಇಲ್ಲಿದೆ ಮಾಹಿತಿ..

ಸ್ಮಾರ್ಟ್​ಬಲ್ಬ್

ಸ್ಮಾರ್ಟ್​ಬಲ್ಬ್

 • Share this:
  ಎಲ್ಲವೂ ಸ್ಮಾರ್ಟ್ ಆಗಿದೆ. ಮನೆ ಬೆಳಗಿಸುವ ಬಲ್ಬ್ ಕೂಡ ಸ್ಮಾರ್ಟ್ ಆಗಿದೆ. ಹಲವು ವಿಶೇಷತೆಯನ್ನು ಒಳಗೊಂಡ ಸ್ಮಾರ್ಟ್​ಬಲ್ಬ್​​ಗಳು ಮಾರುಕಟ್ಟೆಯಲ್ಲಿವೆ. ಸ್ಮಾರ್ಟ್​ಫೋನ್​​ನ್ನಲ್ಲಿರುವ ವೈ-ಫೈ, ಬ್ಲೂಟೂತ್ ಮೂಲಕ ಈ ಬಲ್ಬ್​​ಗಳನ್ನ ನಿಯಂತ್ರಣದಲ್ಲಿರಿಸಬಹುದಾಗಿದೆ.

  ಕೆಲವು ಕಂಪನಿಗಳು ಎಲ್ಇಡಿ ಸ್ಮಾರ್ಟ್​ಬಲ್ಬ್​​ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಪರಿಚಯಿಸಿವೆ. ಸದ್ಯ ಸ್ಮಾರ್ಟ್​ಯುಗದಲ್ಲಿ ಹೊಸ ವೈಶಿಷ್ಟ್ಯವನ್ನು ಹೊಂದಿರುವ ಇಂತಹ ಸ್ಮಾರ್ಟ್​ಬಲ್ಬ್​​ಗಳು  ಗ್ರಾಹಕರನ್ನು ಮೋಡಿ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಎಲ್ಇಡಿ ಸ್ಮಾರ್ಟ್​ಬಲ್ಬ್​​ಗಳ  ಬಗ್ಗೆ ಇಲ್ಲಿದೆ ಮಾಹಿತಿ..

  ಹಾಲೋನಿಕ್ಸ್ ಪ್ರೈಮ್ ಪ್ರಿಜ್ಮ್ ಸ್ಮಾರ್ಟ್ ವೈ-ಫೈ ಎಲ್ಇಡಿ ಬಲ್ಬ್:

  ಹಾಲೋನಿಕ್ಸ್ ಪ್ರೈಮ್ ಪ್ರಿಜ್ಮ್ ಸ್ಮಾರ್ಟ್​ಬಲ್ಬ್​​​​​ ವೈ-ಫೈ ಮೂಲಕ ನಿಯಂತ್ರಿಸಬಹುದಾಗಿದೆ. ಜೊತೆಗೆ ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾದ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ನಾನವನ್ನು ಇದು ಹೊಂದಿದೆ. ಅಷ್ಟು ಮಾತ್ರವಲ್ಲದೆ, ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್ ಮೂಲಕ ಆನ್-ಆಫ್ ಮಾಡಬಹುದಾಗಿದೆ. ಸದ್ಯ ಈ ಹಾಲೋನಿಕ್ಸ್ ಪ್ರೈಮ್ ಪ್ರಿಜ್ಮ್ ಸ್ಮಾರ್ಟ್​ಬಲ್ಬ್​​​​​ ಮಾರುಕಟ್ಟೆಯಲ್ಲಿದೆ.

  ಟಿಪಿ-ಲಿಂಕ್ ಎಲ್​ಬಿ100 ವೈ-ಫೈ ಸ್ಮಾರ್ಟ್​ಬಲ್ಬ್​​​​​ ಎಲ್ಇಡಿ ಬಲ್ಬ್:

  ಈ ಎಲ್ಇಡಿ ಸ್ಮಾರ್ಟ್​ಬಲ್ಬ್​​​​​ ಅನ್ನು ವೈ-ಫೈ ಮೂಲಕ ನಿಯಂತ್ರಣದಲ್ಲಿರಿಸಬಹುದಾಗಿದೆ. ಮಾತ್ರವಲ್ಲದೆ ಟಿಪಿ-ಲಿಂಕ್ ಎಲ್​ಬಿ 100 ವೈ-ಫೈ ಸ್ಮಾರ್ಟ್​ಬಲ್ಬ್​​​​​ ಎಲ್ಇಡಿ ಬಲ್ಬ್ ನಿಯಂತ್ರಣಕ್ಕೆಂದೆ ಆ್ಯಪ್ ಲಭ್ಯವಿದ್ದು ಅದರ ಮೂಲಕ ಆನ್-ಆಫ್ ಮಾಡಬಹುದಾಗಿದೆ.

  ಇನ್ನು ಸ್ಮಾರ್ಟ್​ಬಲ್ಬ್​​​​​ ಚೆಲ್ಲುವ ಬೆಳಕಿನ ಬಣ್ಣವನ್ನು ಬದಲಾಯಿಸಬಹುದು. ಬೇಕಾದ ಹಾಗೆಯೇ ಲೈಟಿನ ಪ್ರಕಾಶಮಾನವನ್ನು ಹೆಚ್ಚಿಸಬಹುದಾಗಿದೆ. ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಮೂಲಕ ನಿಯಂತ್ರಿಸಬಹುದಾದ ಆಯ್ಕೆ ಇದರಲ್ಲಿದೆ.

  ಸಿಸ್ಕಾ 7- ವಾಟ್ ಸ್ಮಾರ್ಟ್ ಎಲ್ಇಡಿ ಬಲ್ಬ್:

  ಸಿಸ್ಕಾ ಪರಿಚಯಿಸಿರುವ 7- ವಾಟ್ ಸ್ಮಾರ್ಟ್ ಎಲ್ಇಡಿ ಬಲ್ಬ್​​​ನಲ್ಲಿ 3 ಮಿಲಿಯನ್ ಬಣ್ಣಗಳನ್ನು ನೀಡಲಾಗಿದೆ. ಬಳಕೆದಾರ ತನಗೆ ಹೇಗೆ ಬೇಕೋ ಹಾಗೆ ಬದಲಾಯಿಸಿಕೊಳ್ಳಬಹುದಾಗಿದೆ. ಆ್ಯಪ್ ಮೂಲಕ ಈ ಸ್ಮಾರ್ಟ್​ಬಲ್ಬ್​​​​​ಅನ್ನು ನಿಯಂತ್ರಿಸಬಹುದಾಗಿದೆ.

  ವಿಪ್ರೊ ಗಾರ್ನೆಟ್ 9ಡಬ್ಲ್ಯು ಸ್ಮಾರ್ಟ್​ಬಲ್ಬ್​​​​​:

  9 ವ್ಯಾಟ್ ಸಾಮರ್ಥ್ಯದ ಬಲ್ಬ್ ಇದಾಗಿದೆ. ಬೆಳಕಿನ ಬಣ್ಣ ಮತ್ತು ಪ್ರಕಾಶಮಾನವನ್ನು ಬದಲಾಯಿಸಬಹುದಾದ ಆಯ್ಕೆ ಇದರಲ್ಲಿದೆ. ಸ್ಮಾರ್ಟ್​ಫೋನಿನಲ್ಲಿರುವ ಆ್ಯಪ್ ಮೂಲಕ ಈ ಬಲ್ಬ್ ಅನ್ನು ನಿಯಂತ್ರಿಸಬಹುದಾಗಿದೆ. ಬಳಕೆದಾರ ಒಂದು ಕ್ಲಿಕ್ ಮಾಡುವ ಮೂಲಕ ಆನ್-ಆಫ್ ಮಾಡಬಹುದಾಗಿದೆ.
  Published by:Harshith AS
  First published: