Toyota Fortuner: ಹೇಗಿದೆ ನೋಡ್ರೀ ಈ ಕಾರು, ಇದರ ಒಳಗೆ ಟಾಯ್ಲೆಟ್ ಕೂಡ ಇದೆ!

ಟೊಯೊಟಾ ಫಾರ್ಚುನರ್‌ನ ಮಾಲೀಕರೊಬ್ಬರು ತಮ್ಮ ವಾಹನದಲ್ಲಿ ವರ್ಕಿಂಗ್ ವ್ಯಾಕ್ಯೂಮ್ ಟಾಯ್ಲೆಟ್ ಅಳವಡಿಸಿಕೊಂಡಿದ್ದಾರೆ. ವ್ಲಾಗರ್ ರೆವೊಕಿಡ್ ಫಾರ್ಚುನರ್‌ನಲ್ಲಿ ಇದನ್ನು ಹೇಗೆ ಅಳವಡಿಸಲಾಗಿದೆ ಹಾಗೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ವಿಡಿಯೋದ ಮೂಲಕ ಹಂಚಿಕೊಂಡಿದ್ದಾರೆ.

ಬಿಲ್ಟ್-ಇನ್ ಶೌಚಾಲಯವಿರುವ ಭಾರತದ ಮೊದಲ ಕಾರು

ಬಿಲ್ಟ್-ಇನ್ ಶೌಚಾಲಯವಿರುವ ಭಾರತದ ಮೊದಲ ಕಾರು

  • Share this:
ಅಂತರರಾಜ್ಯ ಪ್ರಯಾಣ ಇಲ್ಲವೇ ದೂರದ ಸ್ಥಳಗಳಿಗೆ ಪ್ರಯಾಣಿಸುವ (Travel) ಸಮಯದಲ್ಲಿ ಹೆಚ್ಚಿನ ಚಾಲಕರಿಗೆ ಇಲ್ಲವೇ ಪ್ರಯಾಣಿಕರಿಗೆ ಉತ್ತಮವಾದ, ಸ್ವಚ್ಛವಾದ ಶೌಚಾಲಯವನ್ನು (Toilet) ಕಂಡುಕೊಳ್ಳುವುದು ಅತಿ ದೊಡ್ಡ ಸಮಸ್ಯೆ ಎಂದೇ ಹೇಳಬಹುದು. ಈ ಕಾರಣಕ್ಕಾಗಿಯೇ ಸಾಕಷ್ಟು ಜನರು ದೂರಪ್ರಯಾಣವನ್ನು ಇಷ್ಟಪಡುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲೆಂದೇ ಟೊಯೊಟಾ ಫಾರ್ಚುನರ್‌ನ (Toyota Fortuner) ಮಾಲೀಕರೊಬ್ಬರು ತಮ್ಮ ವಾಹನದಲ್ಲಿ ವರ್ಕಿಂಗ್ ವ್ಯಾಕ್ಯೂಮ್ ಟಾಯ್ಲೆಟ್ ಅಳವಡಿಸಿಕೊಂಡಿದ್ದಾರೆ. ವ್ಲಾಗರ್ ರೆವೊಕಿಡ್ ಫಾರ್ಚುನರ್‌ನಲ್ಲಿ ಇದನ್ನು ಹೇಗೆ ಅಳವಡಿಸಲಾಗಿದೆ ಹಾಗೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ವಿಡಿಯೋದ (Video) ಮೂಲಕ ಹಂಚಿಕೊಂಡಿದ್ದಾರೆ. ಹೊರಭಾಗದಿಂದ ನೋಡಿದಾಗ ಈ ಎಸ್‌ಯುವಿ ಕೊಂಚ ಭಿನ್ನವಾಗಿ ಕಂಡರೂ ವಾಹನದ (Vehicle) ಒಳಭಾಗದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ಎಸ್‌ಯುವಿ ಯ ಮೂರನೇ ಸಾಲು ಚಲಿಸುವ ಶೌಚಾಲಯವಾಗಿ ಮಾರ್ಪಾಡು
ಈ ಎಸ್‌ಯುವಿ ಯ ಮೂರನೇ ಸಾಲು ಚಲಿಸುವ ಶೌಚಾಲಯವಾಗಿ ಮಾರ್ಪಟ್ಟಿದೆ. ಇದರಲ್ಲಿ ನೀರಿನ ವ್ಯವಸ್ಥೆ ಕೂಡ ಇದ್ದು ನೀರು ಸಂಗ್ರಹಿಸುವುದಕ್ಕಾಗಿಯೇ ವಿಶೇಷ ಟ್ಯಾಂಕ್ ಒಂದನ್ನು ಕಾರಿನಲ್ಲಿ ಅಳವಡಿಸಲಾಗಿದೆ. ಟ್ಯಾಂಕ್‌ನಲ್ಲಿ ಸಂಗ್ರಹಿಸಿರುವ ನೀರು ಹೊರಕ್ಕೆ ಚೆಲ್ಲುವುದಿಲ್ಲ ಅದೂ ಕೂಡ ವಾಹನ ಎಷ್ಟೇ ವೇಗವಾಗಿ ಚಲಿಸುತ್ತಿದ್ದರೂ ಒಂದು ಹನಿ ನೀರು ಹೊರಕ್ಕೆ ಬರುವುದಿಲ್ಲ ಎಂಬುದು ಇದರ ವಿಶೇಷತೆಯಾಗಿದೆ.

ಟಾಯ್ಲೆಟ್ ಅಳವಡಿಸಿರುವುದರ ಕುರಿತು ಹೆಚ್ಚಿನ ವಿವರಗಳು ದೊರೆತಿದ್ದು ಚೊಕ್ಕಟವಾಗಿ ಇದನ್ನು ಜೋಡಿಸಲಾಗಿದ್ದು ಮೂರನೇ ಸಾಲಿನಲ್ಲಿ ಒಬ್ಬರು ಕುಳಿತುಕೊಳ್ಳುವ ಸ್ಥಳವನ್ನು ಇದು ಆಕ್ರಮಿಸಿಕೊಂಡಿದೆ. ಆದರೆ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ.

ವ್ಯಾನಿಟಿ ವ್ಯಾನ್‌ಗಳಲ್ಲಿರುವ ವಾಕ್ಯುಮ್ ಟಾಯ್ಲೆಟ್‌ಗಳು:
ದೊಡ್ಡ ಕಾರವಾನ್‌ಗಳು (caravans) ಮತ್ತು ವ್ಯಾನಿಟಿ ವ್ಯಾನ್‌ಗಳಲ್ಲಿ ಕೂಡ ಇಂತಹ ಶೌಚಾಲಯಗಳನ್ನು ಕಂಡುಕೊಳ್ಳಬಹುದು. ದೂರದ ಪ್ರದೇಶಗಳಲ್ಲಿ ನಡೆಸುವ ಕ್ಯಾಂಪಿಂಗ್ ಮತ್ತು ದೂರ ಪ್ರಯಾಣ ಮಾಡುವಾಗ ಇದು ಸಾಕಷ್ಟು ಉಪಯುಕ್ತವಾಗಿದ್ದರೂ, ದೈನಂದಿನ ಜೀವನದಲ್ಲಿ ಇಂತಹ ಮಾರ್ಪಾಡುಗಳ ಬಳಸುವಿಕೆಯನ್ನು ಅನೇಕರು ಪ್ರಯೋಜನಕಾರಿ ಎಂದು ಕಂಡುಕೊಳ್ಳುವುದಿಲ್ಲ.

ದುಬಾರಿ ಶೌಚಾಲಯ:
ಈ ಶೌಚಾಲಯಗಳು ಕೊಂಚ ದುಬಾರಿಯೂ ಹೌದು. ಇಂತಹ ಮಾರ್ಪಾಡುಗಳನ್ನು ಮಾಡಬೇಕು ಎಂದಾದಲ್ಲಿ ರೂ 70,000 ದಿಂದ ರೂ 1 ಲಕ್ಷದವರೆಗೆ ವೆಚ್ಚ ತಗುಲಬಹುದು. ಇನ್ನು ಖರ್ಚುವೆಚ್ಚಗಳು ಶೌಚಾಲಯದ ನಿರ್ಮಾಣ ಹಾಗೂ ಯಾವ ಬಗೆಯ ವ್ಯವಸ್ಥೆಗಳನ್ನು ಬಳಸುತ್ತೀರಿ ಎಂಬುದನ್ನು ಆಧರಿಸಿದೆ. ಓಜೆಸ್ ಆಟೋಮೊಬೈಲ್ಸ್ ಕೆಲವು ಸಮಯಗಳ ಹಿಂದೆ ಮಹೀಂದ್ರಾ ಬೊಲೆರೊದಲ್ಲಿ ಇಂತಹುದ್ದೇ ಶೌಚಾಲಯವನ್ನು ನಿರ್ಮಿಸಿದ್ದು ತಗುಲಿದ ವೆಚ್ಚ ರೂ.65,000 ವಾಗಿತ್ತು.

ಇದನ್ನೂ ಓದಿ: CNG ರೂಪಾಂತರದಲ್ಲಿ ಟಿಗೋರ್ XM ಕಾರನ್ನು ಪರಿಚಯಿಸಿದ ಟಾಟಾ ಮೋಟಾರ್ಸ್! ಬೆಲೆ ಎಷ್ಟು?

ಸಾಂಕ್ರಾಮಿಕದ ಸಮಯದಲ್ಲಿ ಸ್ವಚ್ಛ ಶೌಚಾಲಯಗಳು ಅಗತ್ಯವಾಗಿತ್ತು:
ಕೋವಿಡ್-19 ಸಾಂಕ್ರಾಮಿಕದೊಂದಿಗೆ ಸಾಮಾಜಿಕ ಅಂತರವೆಂಬುದು ಪ್ರಮುಖ ಚಟುವಟಿಕೆಯಾಗಿತ್ತು, ಒಂದು ರೀತಿಯಲ್ಲಿ ಹೇಳುವುದಾದರೆ ವಾಹನದೊಳಗೆ ಶೌಚಾಲಯವನ್ನು ಅಳವಡಿಸುವ ವ್ಯವಸ್ಥೆ ಅಲ್ಲಿಂದಲೇ ಪ್ರಾರಂಭವಾಯಿತು ಎಂದೇ ಹೇಳಬಹುದು. ಹೆಚ್ಚಿನ ವಾಹನ ಚಾಲಕರು ದೂರ ಪ್ರಯಾಣ ಇಷ್ಟಪಡುವ ಪ್ರಯಾಣಿಕರಿಗಾಗಿ ಈ ವ್ಯವಸ್ಥೆಯನ್ನು ಆರಿಸಿಕೊಂಡಿದ್ದಾರೆ.

ವಿಮಾನಗಳಲ್ಲಿ ಕಾಣಸಿಗುವ ನಿರ್ವಾತ ಮಾದರಿಯ ಶೌಚಾಲಯದಂತೆಯೇ ಇವುಗಳ ವಿನ್ಯಾಸವಿದ್ದು ಇವುಗಳನ್ನು ಪ್ರಾಥಮಿಕವಾಗಿ ವ್ಯಾನಿಟಿ ವ್ಯಾನ್‌ಗಳು ಮತ್ತು ಕಾರವಾನ್‌ಗಳಲ್ಲಿ ಬಳಸಲಾಗುತ್ತದೆ. ಮಹೀಂದ್ರಾ ಬೊಲೆರೊದಲ್ಲಿ ಈ ಶೌಚಾಲಯಕ್ಕಾಗಿ ಎರಡು ಪ್ರತ್ಯೇಕ ನೀರಿನ ಟ್ಯಾಂಕ್‌ಗಳಿವೆ. ಪಾಶ್ಚಿಮಾತ್ಯ ಮಾದರಿಯ ಶೌಚಾಲಯವನ್ನು ಇದು ಹೊಂದಿದ್ದು ವಾಹನದ ಸೈಡ್ ಫೇಸಿಂಗ್‌ನಲ್ಲಿ ಈ ಶೌಚಾಲಯನ್ನು ಅಳವಡಿಸಲಾಗಿದೆ. ಉತ್ತಮ ನೈರ್ಮಲ್ಯಕ್ಕಾಗಿ ಬೊಲೆರೊ, ಮಿನಿ-ವಾಶ್ರೂಮ್ ನಲ್ಲಿಗಳು, ಸೋಪ್ ಡಿಸ್ಪೆನ್ಸರ್‌ಗಳು ಮತ್ತು ಸ್ಯಾನಿಟೈಸರ್ಗಳನ್ನು ಕೂಡ ಒಳಗೊಂಡಿದೆ.

ಇದನ್ನೂ ಓದಿ:  Royal Enfield Hunter 350: ಭಾರಿ ಸೌಂಡ್​ ಮಾಡುತ್ತಿದೆ ಹಂಟರ್​ 350 ಬೈಕ್​! ಬೆಲೆ ಎಷ್ಟು? ಇಲ್ಲಿದೆ ವಿವರ

ಬೊಲೆರೊದಲ್ಲಿ ಒಂದು ಟ್ಯಾಂಕ್ ಸ್ವಚ್ಛ ನೀರನ್ನು ಒದಗಿಸಿದರೆ ಇನ್ನೊಂದು ಟ್ಯಾಂಕ್ ಪುನರ್ಬಳಕೆ ಮಾಡಬಹುದಾದ ತ್ಯಾಜ್ಯನೀರನ್ನು ಸಂಗ್ರಹಿಸುತ್ತದೆ. ಟ್ಯಾಂಕ್‌ಗಳನ್ನು ಜಿಆರ್‌ಪಿ-ಲೇಪಿತ ಅಲ್ಯೂಮಿನಿಯಂನಿಂದ ತಯಾರಿಸಲಾಗಿದ್ದು, ಇದು ಯಾವುದೇ ರೀತಿಯ ಸೋರಿಕೆ ಇಲ್ಲದೆ ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಎಲ್ಲಾ ವ್ಯವಸ್ಥೆಯನ್ನು ನಿರ್ವಹಿಸುವುದು 12V ಎಲೆಕ್ಟ್ರಿಕ್ ಸಿಸ್ಟಮ್ ಆಗಿದ್ದು ಇದು ಎಲೆಕ್ಟ್ರಿಕ್ ಪಂಪ್‌ಗೆ ಕೂಡ ಚಾಲನೆಯನ್ನು ಒದಗಿಸುತ್ತದೆ.
Published by:Ashwini Prabhu
First published: