ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ (Electronics Market) ಹಲವಾರು ಕಂಪನಿಗಳು ಈ ಲ್ಯಾಪ್ಟಾಪ್ (Laptop), ಕಂಪ್ಯೂಟರ್ (Computer), ಗ್ಯಾಜೆಟ್ಸ್ಗಳನ್ನು (Gadgets) ಬಿಡುಗಡೆ ಮಾಡಿದೆ. ಈ ಕಂಪನಿಗಳಲ್ಲಿ ಲೆನೋವೋ ಕೂಡ ಒಂದು. ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಲೆನೋವೋ ಕಂಪನಿಯ (Lenovo Company) ಡಿವೈಸ್ಗಳಿಗೆ ಭಾರೀ ಬೇಡಿಕೆಯಿದೆ. ಆದೇ ರೀತಿ ಕಂಪನಿ ಕೂಡ ಗ್ರಾಹಕರಿಗೆ ಇಷ್ಟವಾಗುವಂತಹ ಡಿವೈಸ್ಗಳನ್ನೇ ಬಿಡುಗಡೆ ಮಾಡುತ್ತದೆ. ಲೆನೋವೋ ಕಂಪನಿ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ಮೂಲಕ ಎಲ್ಲರ ಗಮನಸೆಳೆದಿದೆ.ಇದೀ ಲೆನೋವೋ ಮತ್ತೊಂದು ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡುತ್ತಿದ್ದು ಇದರ ಫೀಚರ್ಸ್ ಮೂಲಕವೇ ಗ್ರಾಹಕರನ್ನು ತನ್ನತ್ತ ಆಕರ್ಷಸಲಿದೆ ಎಂಬ ವರದಿಯಾಗಿದೆ.
ಈವರೆಗೆ ಸಾಕಷ್ಟು ಲ್ಯಾಪ್ಟಾಪ್ ಕಂಪನಿಗಳು ಬಂದಿವೆ. ಆದರೆ ಲೆನೊವೊ ಮಾತ್ರ ಮಾರುಕಟ್ಟೆಯಲ್ಲಿ ಅದರದೇ ಆದಂತಹ ಸ್ಥಾನವನ್ನು ಹೊಂದಿದೆ. ಇದೀಗ ಲೆನೋವೋ ಹೊಸ ಲ್ಯಾಪ್ಟಾಪ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇದೀಗ ಲೆನೋವೋ ಐಡಿಯಾಪ್ಯಾಡ್ ಫ್ಲೆಕ್ಸ್ 3i ಟು ಇನ್ ಒನ್ ಕ್ರೋಮ್ಬುಕ್ ಲ್ಯಾಪ್ಟಾಪ್ ಅನ್ನು ಅನಾವರಣಗೊಳಿಸಿದೆ.
ಲೆನೋವೋ ಕ್ರೋಮ್ಬುಕ್ ಲ್ಯಾಪ್ಟಾಪ್ನ ಫೀಚರ್ಸ್
ಲೆನೋವೋ ಐಡಿಯಾಪ್ಯಾಡ್ ಫ್ಲೆಕ್ಸ್ 3i ಟು ಇನ್ ಒನ್ ಕ್ರೋಮ್ಬುಕ್ ಲ್ಯಾಪ್ಟಾಪ್ನ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ ಇದು 12.2 ಇಂಚಿನ ಐಪಿಎಸ್ ಟಚ್ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಇನ್ನು ಈ ಡಿಸ್ಪ್ಲೇ 1920 x 1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. 300 ನಿಟ್ಸ್ ಬ್ರೈಟ್ನೆಸ್ ಮತ್ತು ಟಿಯುವಿ ರೈನ್ಲ್ಯಾಂಡ್ ಲೋ ಬ್ಲೂ ಲೈಟ್ನೊಂದಿಗೆ ಇದು ಬರುತ್ತದೆ. ಇನ್ನು ವಿಶೇಷವಾಗಿ ಈ ಲ್ಯಾಪ್ಟಾಪ್ ಅನ್ನು ನಿಮಗೆ ಬೇಕಾದ ಹಾಗೆ ಮಡಚಿ ಇಟ್ಟಕೊಳ್ಳಬಹುದಾಗಿದೆ. ಅದಕ್ಕಾಗಿ 360 ಡಿಗ್ರಿ ಹಿಂಜ್ ಅನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ ಸೀರಿಸ್ನ ಸ್ಮಾರ್ಟ್ಫೋನ್ಗಳ ಮಾರಾಟ ಆರಂಭ! ಭಾರೀ ಅಗ್ಗದಲ್ಲಿ ಲಭ್ಯ
ಈ ಲ್ಯಾಪ್ಟಾಪ್ನ ಪ್ರೊಸೆಸರ್ ಹೇಗಿದೆ?
ಇನ್ನು ಈ ಲೆನೋವೋ ಐಡಿಯಾಪ್ಯಾಡ್ ಫ್ಲೆಕ್ಸ್ 3i ಕ್ರೋಮ್ಬುಕ್ ಇಂಟೆಲ್ ಪ್ರೊಸೆಸರ್ N100 ಅಥವಾ ಇಂಟೆಲ್ ಪ್ರೊಸೆಸರ್ N200 ವೇಗವನ್ನು ಪಡೆದಿದೆ. ಇದು ಗೂಗಲ್ನ ಕ್ರೋಮ್ ಓಎಸ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4ಜಿಬಿ ರ್ಯಾಮ್ ಮತ್ತು- 64 ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಹಾಗೆ ಇನ್ನೊಂದು 8ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ಬಲವನ್ನು ಹೊಮದಿರಲಿದೆ ಎಮದು ಹೇಳಿದ್ದಾರೆ. ಈ ಲ್ಯಾಪ್ಟಾಪ್ 720 ಪಿಕ್ಸೆಲ್ ಮತ್ತು 1080 ಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ.
ಈ ಲೆನೋವೋ ಕಂಪನಿಯ ಹೊಸ ಲ್ಯಾಪ್ಟಾಪ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 12 ಗಂಟೆಗಳ ಕಾಲ ನಿರಂತರವಾಗಿ ಬಳಸಬಹುದಾಗಿದೆ.
ಇತರ ಫೀಚರ್ಸ್
ಲೆನೋವೋ ಐಡಿಯಾಪ್ಯಾಡ್ ಫ್ಲೆಕ್ಸ್ 3i ಕ್ರೋಮ್ಬುಕ್ ಲ್ಯಾಪ್ಟಾಪ್ ಮ್ಯಾಕ್ಸ್ ಆಡಿಯೋ ಜೊತೆಗೆ ಎರಡು 2W ಸ್ಟೀರಿಯೋ ಸ್ಪೀಕರ್ಗಳನ್ನು ಅಳವಡಿಸಲಾಗಿದೆ. ಇನ್ನು ಈ ಲ್ಯಾಪ್ಟಾಪ್ನ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಮಾತನಾಡುವುದಾದರೆ ಇಂಟೆಲ್ Wi-Fi 6 6E, Wi-Fi ಕಾರ್ಡ್ನೊಂದಿಗೆ ಬ್ಲೂಟೂತ್ 5.2 ಕಾಂಬೊ, ಮೈಕ್ರೋ ಎಸ್ಡಿ ಕಾರ್ಡ್ ಸ್ಲಾಟ್, ಯುಎಸ್ಬಿ 3.2 Gen 2 ಟೈಪ್-C ಪೋರ್ಟ್, ಕಾಂಬೊ ಆಡಿಯೊ ಜ್ಯಾಕ್ ಮತ್ತು HDMI 1.4 ಅನ್ನು ಬೆಂಬಲಿಸಲಿದೆ.
ಬೆಲೆ ಮತ್ತು ಲಭ್ಯತೆ
ಲೆನೊವೊ ಐಡಿಯಾಪ್ಯಾಡ್ ಫ್ಲೆಕ್ಸ್ 3i ಕ್ರೋಮ್ಬುಕ್ ಜಾಗತಿಕ ಮಾರುಕಟ್ಟೆಯಲ್ಲಿ $349.99 ಅಂದರೆ ಭಾರತದಲ್ಲಿ ಸುಮಾರು 28,939ರೂಪಾಯಿವ ಬೆಲೆಯೊಂದಿಗೆ ಖರೀದಿ ಮಾಡುವ ಅವಕಾಶವಿದೆ. ಇದು ಮೇ 2023 ರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಲೆನೋವೋ ಕಂಪನಿ ಹೇಳಿದೆ. ಇನ್ನು ಈ ಕ್ರೋಮ್ಬುಕ್ ಲ್ಯಾಪ್ಟಾಪ್ ಕ್ಲೌಡ್ ಗ್ರೇ ಮತ್ತು ಬ್ಲೂ ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಕಾಲಿಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ