• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • ಲಾಗ್ 9 ಕಂಪೆನಿ ತಯಾರಿಸಿದೆ ಎಲೆಕ್ಟ್ರಿಕ್ ವಾಹನಗಳಿಗೆ ಅಳವಡಿಸುವ ಬ್ಯಾಟರಿ; ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್!

ಲಾಗ್ 9 ಕಂಪೆನಿ ತಯಾರಿಸಿದೆ ಎಲೆಕ್ಟ್ರಿಕ್ ವಾಹನಗಳಿಗೆ ಅಳವಡಿಸುವ ಬ್ಯಾಟರಿ; ಕೇವಲ 15 ನಿಮಿಷದಲ್ಲಿ ಫುಲ್ ಚಾರ್ಜ್!

ಲಾಗ್​ 9

ಲಾಗ್​ 9

ಲಾಗ್​​ 9 ತಯಾರಿಸಿರುವ ಬ್ಯಾಟರಿಯನ್ನು ಎಲೆಕ್ಟ್ರಿಕ್​ ದ್ವೀಚಕ್ರ ವಾಹನಗಳಿಗೆ ಅಳವಡಿಸಿದರೆ 70 ಕಿಲೋ ಮೀಟರ್​ ಕ್ರಮಿಸಲಿದೆ. ಮೂರು ಚಕ್ರದ ಎಲೆಕ್ಟ್ರಿಕ್​ ವಾಹನಗಳಿಗೆ ಅಳವಡಿಸಿದರೆ 60-80 ಕಿಲೋ ಮೀಟರ್​ ಚಲಿಸಲಿದೆ ಎಂದು ಕಂಪೆನಿ ತಿಳಿಸಿದೆ.

 • Share this:

  ಲಾಗ್​ 9 ಎಂಬ ಸ್ಟಾರ್ಟ್​​-ಅಪ್​ ಇಲೆಕ್ಟ್ರಿಕ್​ ವಾಹನಗಳಿಗೆ ​ಬ್ಯಾಟರಿಯೊಂದನ್ನು ತಯಾರಿಸಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ನೂತನ ಬ್ಯಾಟರಿ 15 ನಿಮಿಷಗಳ ಸಂಪೂರ್ಣ ಚಾರ್ಜ್​ ಮಾಡುವ ವ್ಯವಸ್ಥೆಯನ್ನು ಹೊಂದಿದ್ದು, ಸೂಪರ್​ ಕೆಪಾಸಿಟಿ ಹೊಂದಿದೆ ಎಂದು ಕಂಪೆನಿ ತಿಳಿಸಿದೆ.


  ಅಂದಹಾಗೆಯೇ ಲಾಗ್​ 9 ತಯಾರಿಸಿರುವ ಬ್ಯಾಟರಿ ಪ್ಯಾಕ್​ 15 ವರ್ಷಗಳ ಕಾಲ ಬಳಸಬಹುದಾಗಿದೆ ಎಂದು ​ಕಂಪೆನಿ ತಿಳಿಸಿದೆ. ಲಾಗ್​ 9 ಬೆಂಗಳೂರು ಮೂಲಕ ಸ್ಟಾರ್​​ ಅಪ್​ ಕಂಪೆನಿ 5ಎಕ್ಸ್​ ಪವರ್​ ಕೆಪಾಸಿಟಿಯನ್ನು ಹೊಂದಿದೆ. ಈ ಬ್ಯಾಟರಿಯು ಬೆಂಕಿ ಪ್ರತಿರೋಧ ಮತ್ತು ಪ್ರಭಾವ-ಪ್ರತಿರೋಧದ ವಿಷಯದಲ್ಲಿ ಲಿಥಿಯಂ ಅಯಾನ್​ ಬ್ಯಾಟರಿಗಿಂತ 5 ಪಟ್ಟು ಸುರಕ್ಷಿತವಾಗಿದೆ.


  ಲಾಗ್​​ 9 ತಯಾರಿಸಿರುವ ಬ್ಯಾಟರಿಯನ್ನು ಎಲೆಕ್ಟ್ರಿಕ್​ ದ್ವೀಚಕ್ರ ವಾಹನಗಳಿಗೆ ಅಳವಡಿಸಿದರೆ 70 ಕಿಲೋ ಮೀಟರ್​ ಕ್ರಮಿಸಲಿದೆ. ಮೂರು ಚಕ್ರದ ಎಲೆಕ್ಟ್ರಿಕ್​ ವಾಹನಗಳಿಗೆ ಅಳವಡಿಸಿದರೆ 60-80 ಕಿಲೋ ಮೀಟರ್​ ಚಲಿಸಲಿದೆ ಎಂದು ಕಂಪೆನಿ ತಿಳಿಸಿದೆ.


  ಲಾಗ್​ 9 ಸೂರ್​ಲೇಟಿವ್​ ಬ್ಯಾಟರಿಯನ್ನ ಆರಂಭಿಕವಾಗಿ ಇಂಟ್ರಾ-ಸಿಟಿ ಎಲೆಕ್ಟ್ರಿಕ್​ ವಾಹನಗಳಿಗೆ ಬಳಸಲು ಮುಂದಾಗಿದೆ. ಹೊಸ ಬ್ಯಾಟರಿಯ ವ್ಯವಸ್ಥೆಗಾಗಿ ಭಾರತದ ಬಿ2ಬಿ ಲಾಸ್ಟ್​ ಮೈಲ್​ ಡೆಲಿವರಿ ವಿಭಾಗವನ್ನು ಗುರಿಯಾಗಿಸಿಕೊಂಡಿದೆ. ಅದರ ಜೊತೆಗೆ ಕಂಪೆನಿಯು ಅಮೆಜಾನ್​, ವೊಗೊ. ಶ್ಯಾಡೋಫ್ಯಾಕ್ಸ್​, ಡೆಲಿವೆರಿ ವಾಹನಗಳ ಜೊತೆಗೆ ಪಾಲುದಾರಿಕೆ ಹೊಂದಿದೆ ಎಂದು ತಿಳಿಸಿದೆ.


  ಮಾರ್ಚ್​ 2022ರ ವೇಳೆಗೆ ಭಾರತದ ಉದ್ದಗಲಕ್ಕೂ ರ್ಯಾಪಿಟ್​ ಚಾರ್ಜಿಂಗ್​ ಬ್ಯಾಟರಿಯನ್ನು ತಲುಪಿಸಲು ಮುಂದಾಗಿದೆ. ಜೊತೆಗೆ 3 ಸಾವಿರಕ್ಕೂ  ಅಧಿಕ ವಾಹನಗಳಿಗೆ ಅಳವಡಿಸುವ ಪ್ಲಾನ್​ ಹಾಕಿಕೊಂಡಿದೆ. ಇದರಲ್ಲಿ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳು ಸೇರಿವೆ.


  2023ರ ವೇಳೆಗೆ ದೇಶದಾದ್ಯಂತ 20 ಸಾವಿರಕ್ಕೂ ವಾಹನಗಳಿಗೆ ಬ್ಯಾಟರಿ ಅಳವಡಿಸುವ ಪ್ಲಾನ್​ ಹಾಕಿಕೊಂಡಿದೆ. ಲಾಗ್​ 9 ಈಗಾಗಲೇ ವೇಗವಾಗಿ ಮಾರುಕಟ್ಟೆ ಪ್ರವೇಶಿಸುವ ಚಿಂತನೆ ಕೈಗೊಂಡಿದೆ. ಜೊತೆಗೆ  ಎಷ್ಯಾದ ಇತರ ಮಾರುಕಟ್ಟೆಗೆ ರವಾನಿಸಲು ಮತ್ತು ಮಾರುಕಟ್ಟೆ ವೃದ್ಧಿಸಲು ಮುಂದಾಗಿದೆ.


  ಬಹುತೇಕ ಜನರು ಮೈಲೇಜ್​ ಪರೀಕ್ಷಿಸಿ ವಾಹನ ಖರೀದಿಸುತ್ತಿದ್ದಾರೆ. ಅದರಲ್ಲೂ ಸದ್ಯ ಬಿಎಸ್​6 ವಾಹನಗಳ ಜೊತೆಗೆ ಎಲೆಕ್ಟ್ರಿಕ್​ ವಾಹನಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಹಲವು ಕಂಪೆನಿಗಳು ಎಲೆಕ್ಟ್ರಿಕ್​ ಸ್ಕೂಟರ್​, ಬೈಕ್​ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಮತ್ತೊಂದೆಡೆ ಎಲೆಕ್ಟ್ರಿಕ್​ ವಾಹನಗಳು ಮೈಲೇಜ್​ ಹಾಗೂ ಬ್ಯಾಟರಿ ಚಾರ್ಜಿಂಗ್​ ಸಾಮರ್ಥ್ಯದ ಮೇಲೆ ಪ್ರದರ್ಶನ ಕಾಣುತ್ತಿದೆ.


  ಇದೀಗ ಲಾಗ್​ 9 ಸ್ಟಾರ್ಟ್​ ಅಪ್​ ಹೊಸ ಸೂಪರ್​ಲೇಟಿವ್​ ಬ್ಯಾಟರಿಯನ್ನು ತಯಾರಿಸಿದೆ. ಕೇವಲ 25 ನಿಮಿಷದಲ್ಲೇ ವೇಗವಾಗಿ ಚಾರ್ಜ್​ ಆಗುವ ಮೂಲಕ ಜನರ ಗಮನವನ್ನು ತಮ್ಮತ್ತ ಸೆಳೆಯುವ ಪಯತ್ನ ಮಾಡುತ್ತಿದೆ.

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು