Google: ವೈಯ್ಯಕ್ತಿಕ ಸಾಲ ನೀಡುವ ಆ್ಯಪ್​ ಬಳಸುವವರಿಗೆ ಹೊಸ ರೂಲ್ಸ್​​ ಪಾಲಿಸುವಂತೆ ಹೇಳಿದ ಗೂಗಲ್!

ಗೂಗಲ್​

ಗೂಗಲ್​

Personal Loan App: ಗೂಗಲ್​ (Google) ಇಂತಹ ಸಮಸ್ಯೆಗಳನ್ನು ಗಮನಿಸಿದೆ. ಭಾರತದಲ್ಲಿನ ಪರ್ಸನಲ್ ಲೋನ್ ಅವಶ್ಯಕತೆಗಳು ಹೆಚ್ಚಾಗುತ್ತಿರುವ ಕಾರಣ ಇದೆಲ್ಲವನ್ನನು ಗಮನಿಸಿದೆ ಗೂಗಲ್​ ಹೊಸ ಚಿಂತನೆಯನ್ನು ಮಾಡಿದೆ. ಇದೇ ನಿಟ್ಟಿನಲ್ಲಿ ವೈಯ್ಯಕ್ತಿಕ ಸಾಲವನ್ನು ನೀಡುವ ವೇದಿಕೆಯನ್ನು ಸುಲಭಗೊಳಿಸಲು ಹೊಸ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಮುಂದೆ ಓದಿ ...
 • Share this:

  ಸಾಮಾನ್ಯವಾಗಿ ಸಾಲ ಕೊಡಲು ಬಹುತೇಕರು ಹಿಂದೆ ಸರಿಯುತ್ತಾರೆ. ಆದರೆ ಪ್ರಸ್ತುತ ಸ್ಥಿತಿಗತಿಯಲ್ಲಿ ಮತ್ತು ಕೊರೊನಾ (Covid-19) ಅವಾಂತರದ ನಡುವೆ ಬದುಕಲು ಅದೆಷ್ಟೋ ಜನರು ಸಾಲದ ಮೊರೆ ಹೋದವರು ಇದ್ದಾರೆ. ಬ್ಯಾಂಕ್​ಗಳು (Bank) ಸರಿಯಾದ ದಾಖಲೆಗಳನ್ನು ಪರಿಶೀಲಿಸಿ ನಂತರ ಸಾಲವನ್ನು (Loan) ನೀಡುತ್ತವೆ. ಆದರೆ ಸಾಲ ಸಿಗಲು ಕೊಂಚ ಸಮಯದ ಬೇಕಾಗುತ್ತದೆ. ಹೀಗಾಗಿ ಸದ್ಯ ಟ್ರೆಂಡಿಂಗ್​ನಲ್ಲಿ ಆನ್​ಲೈನ್​ ಆ್ಯಪ್​ಗಳ (Online App) ಮೂಲಕ ಸಾಲ ಸಿಗುತ್ತವೆ. ಬಹುತೇಕರು ಅವಶ್ಯಕತೆ ಬಿದ್ದರೆ ಆನ್​ಲೈನ್​ ಮೂಲಕ ಸಾಲ ಮಾಡಲು ಮುಂದಾಗುತ್ತಾರೆ. ಆದರೆ ಕೆಲವೊಂದು ಇಂತಹ ಸಾಲ ನೀಡುವ ಆ್ಯಪ್​ಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ, ಇನ್ನು ಕೆಲವು ಜನರನ್ನು ಮೋಸದ ಕೂಪಕ್ಕೆ ತಳ್ಳುತ್ತಿವೆ. ಹಾಗಾಗಿ ಇದರಿಂದ ಅನೇಕರು ಮೋಸ ಹೋದವರೂ ಇದ್ದಾರೆ. ಕಳೆದ ವರ್ಷದಿಂದ ಈ ವೈಯ್ಯಕ್ತಿಕ ಆ್ಯಪ್​ಗಳು ಜನರನ್ನು ಆಕ್ರಮಿಸಿರುವುದು ಸುಳ್ಳಲ್ಲ. ಆದರೀಗ ನಂಬಿಕಸ್ಥ ಗೂಗಲ್ (Google)​ ವೈಯ್ಯಕ್ತಿಕ ಸಾಲಗಾರಿಗೆ (Personal Loan) ಸಲುಭವಾದ ವೇದಿಕೆಯನ್ನು ನಿರ್ಮಿಸಲು ಮುಂದಾಗಿದೆ.


  ಹೌದು. ಗೂಗಲ್​ (Google) ಇಂತಹ ಸಮಸ್ಯೆಗಳನ್ನು ಗಮನಿಸಿದೆ. ಭಾರತದಲ್ಲಿನ ಪರ್ಸನಲ್ ಲೋನ್ ಅವಶ್ಯಕತೆಗಳು ಹೆಚ್ಚಾಗುತ್ತಿರುವ ಕಾರಣ ಇದೆಲ್ಲವನ್ನನು ಗಮನಿಸಿದೆ ಗೂಗಲ್​ ಹೊಸ ಚಿಂತನೆಯನ್ನು ಮಾಡಿದೆ. ಇದೇ ನಿಟ್ಟಿನಲ್ಲಿ ವೈಯ್ಯಕ್ತಿಕ ಸಾಲವನ್ನು ನೀಡುವ ವೇದಿಕೆಯನ್ನು ಸುಲಭಗೊಳಿಸಲು ಹೊಸ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.


  ಅಂದಹಾಗೆಯೇ ಪರ್ಸನಲ್​ ಲೋನ್​  ಅಪ್ಲಿಕೇಶನ್‌ಗಳು ಅರ್ಹತೆಯ ಅಗತ್ಯತೆಗಳ ಹೆಚ್ಚುವರಿ ಪುರಾವೆಗಳನ್ನು ಸಲ್ಲಿಸಲು ಬಯಸಿದೆ ಮತ್ತು ಹೊಸ ನಿಯಮಗಳನ್ನು ಅನುಸರಿಸಲು ಈ ಅಪ್ಲಿಕೇಶನ್‌ಗಳಿಗೆ ಗಡುವನ್ನು ನಿಗದಿಪಡಿಸಿದೆ. "ವೈಯಕ್ತಿಕ ಸಾಲಗಳನ್ನು ಒದಗಿಸಲು ನೀವು RBI ನಿಂದ ಪರವಾನಗಿ ಪಡೆದಿದ್ದರೆ, ನಮ್ಮ ಪರಿಶೀಲನೆಗಾಗಿ ನಿಮ್ಮ ಪರವಾನಗಿಯ ನಕಲನ್ನು ನೀವು ಸಲ್ಲಿಸಬೇಕು" ಎಂದು Google ಬ್ಲಾಗ್‌ಪೋಸ್ಟ್ ಮೂಲಕ ಹೈಲೈಟ್ ಮಾಡಿದೆ.


  ಇದನ್ನೂ ಓದಿ: Apple Foldable Phone: ಸ್ಯಾಮ್​ಸಂಗ್ ಫೋಲ್ಡೆಬಲ್​ಗಿಂತ ಆ್ಯಪಲ್ ಮಡಚುವ ಫೋನ್ ಇಷ್ಟೊಂದು ಗ್ರ್ಯಾಂಡ್ ಆಗಿ ಬರಲಿದ್ಯಾ?


  ಕಂಪನಿಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) ತಮ್ಮ ಪರವಾನಗಿಯ ನಕಲನ್ನು ಒದಗಿಸಿದಾಗ ಹೇಳಲಾದ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ. ಎರಡನೆಯದು ಮತ್ತು ಹೆಚ್ಚು ಮುಖ್ಯವಾದ ಮಾನದಂಡವೆಂದರೆ ಅಪ್ಲಿಕೇಶನ್ ನೇರವಾಗಿ ಹಣ ಸಾಲ ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ಗ್ರಾಹಕರಿಗೆ ಹಣದ ಸಾಲವನ್ನು ಸುಲಭಗೊಳಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳುವ ಘೋಷಣೆಗೆ ಸಂಬಂಧಿಸಿದೆ.


  ಸುರಕ್ಷತಾ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ Google Play Store ನಿಂದ ಭಾರತೀಯ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ


  ಗ್ರಾಹಕ ನೇರವಾಗಿ ಹಣದ ಸಾಲ ನೀಡುವ ಚಟುವಟಿಕೆಗಳಲ್ಲಿ ತೊಡಗಿಲ್ಲದಿದ್ದರೆ ಮತ್ತು ನೋಂದಾಯಿತ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFC) ಅಥವಾ ಬ್ಯಾಂಕ್‌ಗಳಿಂದ ಬಳಕೆದಾರರಿಗೆ ಹಣದ ಸಾಲವನ್ನು ಸುಲಭಗೊಳಿಸಲು ವೇದಿಕೆಯನ್ನು ಒದಗಿಸುತ್ತಿದ್ದರೆ, ಇದನ್ನು ತಿಳಿಸಬೇಕಾಗುತ್ತದೆ ಎಂದು ಹೇಳಿದೆ.


  ಗೂಗಲ್​ ಎಲ್ಲಾ ನೋಂದಾಯಿತ NBFC ಗಳು ಮತ್ತು ಬ್ಯಾಂಕ್‌ಗಳ ಹೆಸರನ್ನು ನಮೂದಿಸುವುದನ್ನು ಒಳಗೊಂಡಿರುವ ಘಟಕಗಳಿಂದ ಉತ್ತಮ ಪಾರದರ್ಶಕತೆಯನ್ನು Google ಬಯಸುತ್ತದೆ.  ಭಾರತ ಮಾತ್ರವಲ್ಲದೆ, ಜೊತೆಗೆ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನಂತಹ ದೇಶಗಳಲ್ಲಿಯೂ ಈ ನಿಯಮಗಳನ್ನು ಕಡ್ಡಾಯಗೊಳಿಸಲು Google ಬಯಸಿದೆ.


  ಇದನ್ನೂ ಓದಿ: TV Fridge Price Hike: ಎಚ್ಚರ! ಟಿವಿ, ಫ್ರಿಜ್ ಬೆಲೆ ಏರಿಕೆಯಾಗಬಹುದು, ಏನು ಕಾರಣ?


  ವೈಯ್ಯಕ್ತಿಕ ಸಾಲದ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕಳೆದ ವರ್ಷದಿಂದ ದೇಶದಲ್ಲಿ ಇದು ಅಣಬೆಗಳಂತೆ ಬೆಳೆಯುತ್ತಿದೆ. ಸಣ್ಣ ವೈಯಕ್ತಿಕ ಅಪ್ಲಿಕೇಶನ್‌ಗಳಿಂದ ಉಂಟಾದ ಅಸ್ವಸ್ಥತೆಯ ಕುರಿತು ಹಲವಾರು ವರದಿಗಳು ಹೊರಬಿದ್ದಿದೆ. ಅದರಲ್ಲೂ ಕೆಲವೊಂದು ಅಪ್ಲಿಕೇಶನ್​ಗಳು ಜನರನ್ನು ಮೋಸದ ಕೂಪಕ್ಕೆ ತಳ್ಳಿದ ಅನೇಕ ಉದಾಹರಣೆಗಳು ಇದೆ.


  ಮತ್ತೊಂದೆಡೆ ಜನರು ಅನುಕೂಲಕ್ಕಾಗಿ ಸೈನ್ ಅಪ್ ಮಾಡುತ್ತಾರೆ ಆದರೆ ಯಾವುದೇ ಪಾವತಿ ಮಾಡದಿರುವುದನ್ನು ತಿರಸ್ಕ ರಿಸುತ್ತಾರೆ.

  Published by:Harshith AS
  First published: