• Home
 • »
 • News
 • »
 • tech
 • »
 • Internet: 2022 ರಲ್ಲಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ 10 ದೇಶಗಳ ಪಟ್ಟಿ!

Internet: 2022 ರಲ್ಲಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ 10 ದೇಶಗಳ ಪಟ್ಟಿ!

ಇಂಟರ್ನೆಟ್

ಇಂಟರ್ನೆಟ್

Internet: ಚೀನಾ ಇಂಟರ್ನೆಟ್ ಬಳಕೆದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಇದು ಈಗಿ ಇಂಟರ್ನೆಟ್‌ ಯುಗದಲ್ಲಾಗುತ್ತಿರುವ ಬದಲಾವಣೆಗಳಾಗಿದ್ದು. ಯಾವ್ಯಾವ ದೇಶ ಯಾವ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಮಾಹಿತಿ.

 • Share this:

  ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಚೀನಾವು (China) ವಿಶ್ವದಲ್ಲೇ ಅತಿ ಹೆಚ್ಚು ಇಂಟರ್ನೆಟ್ (Internet) ಬಳಕೆದಾರರನ್ನು ಹೊಂದಿದೆ. ಪ್ರಸ್ತುತ ಪ್ರಪಂಚದಾದ್ಯಂತ ಸುಮಾರು 5.07 ಬಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ. ಈ ಅಂಕಿ ಅಂಶವು ಪ್ರಪಂಚದ ಒಟ್ಟು ಜನಸಂಖ್ಯೆಯ 63.5% ಆಗಿದೆ. ಅತಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ (India) ಒಂದಾಗಿದೆ. ವಿಶ್ವದ ಜನಸಂಖ್ಯೆಯ ಅಂದಾಜಿನ ಪ್ರಕಾರ, ಜನವರಿ 2022 ರಲ್ಲಿ ದೇಶದಲ್ಲಿ 658 ಮಿಲಿಯನ್ (Million) ಇಂಟರ್ನೆಟ್ ಬಳಕೆದಾರರಿದ್ದರು. ಜನಸಂಖ್ಯೆಯ ಮುನ್ನಡೆಯಿಂದಾಗಿ ಚೀನಾ ಅತಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.


  ಅದೇ ರೀತಿ ಜಾಗತಿಕವಾಗಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಪೂರ್ವ ಏಷ್ಯಾವು 1.16 ಶತಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ, ಆದರೆ ಆಫ್ರಿಕನ್ ಪ್ರದೇಶಗಳು ಕಡಿಮೆ ಸಂಖ್ಯೆಯ ಇಂಟರ್ನೆಟ್ ಬಳಕೆದಾರರನ್ನು ಹೊಂದಿವೆ. ‌


  ಚೀನಾ ಇಂಟರ್ನೆಟ್ ಬಳಕೆದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. 


  ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯ 5ಜಿ ಮೊಬೈಲ್‌ ಬಿಡುಗಡೆ!


  2022 ರಲ್ಲಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ.


  ಚೀನಾ:


  ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ 1.45 ಶತಕೋಟಿ ಜನಸಂಖ್ಯೆಯನ್ನು ಹೊಂದಿದ್ದು ವಿಶ್ವದ ಮೊದಲ ದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಚೀನಾ ಸುಮಾರು 1.02 ಶತಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿದ್ದು ಅತೀ ಹೆಚ್ಚು ಇಂಟರ್ನೆಟ್‌ ಬಳಕೆದಾರರ ಪಟ್ಟಿಯಲ್ಲಿ ಇದು ಮೊದಲ ಸ್ಥಾನದಲ್ಲಿದೆ.


  ಭಾರತ:


  ವಿಶ್ವದ ಎರಡನೇ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶವು ಜನವರಿ 2022 ರ ವೇಳೆಗೆ ಸುಮಾರು 658 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ ಎಂದು ಹೇಳಲಾಗಿದ್ದರೂ, ಕಳೆದ ಜುಲೈನಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​​​ಆಫ್ ಇಂಡಿಯಾದ ವರದಿಯ ಪ್ರಕಾರ ದೇಶದಲ್ಲಿ ಪ್ರಸ್ತುತವಾಗಿ 692 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ ಎಂದು ಹೇಳಿದೆ.


  ಯುಎಸ್ಎ:


  ಜನವರಿ 2022 ರ ಹೊತ್ತಿಗೆ, ಯುನೈಟೆಡ್ ಸ್ಟೇಟ್‌ನಲ್ಲಿ ಸರಿಸುಮಾರು 307.2 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 92% ರಷ್ಟು ಇಲ್ಲಿ ಇಂಟರ್ನೆಟ್‌ ಬಳಕೆ ಮಾಡುವವರಿದ್ದಾರೆ.


  ಇಂಡೋನೇಷ್ಯಾ:


  ಜನವರಿ 2022 ರ ಹೊತ್ತಿಗೆ, ಇಂಡೋನೇಷ್ಯಾದಲ್ಲಿ ಸುಮಾರು 204.7 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ. ಇಲ್ಲಿ ಒಟ್ಟು ಜನಸಂಖ್ಯೆ 277.7 ಮಿಲಿಯನ್‌ನಷ್ಟು ಹೊಂದಿದೆ.


  ಬ್ರೆಜಿಲ್:


  ಈ ವರ್ಷದ ಆರಂಭದಲ್ಲಿ, ದೇಶವು 165.3 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. ಇದು ಆ ದೇಶದ ಒಟ್ಟು ಜನಸಂಖ್ಯೆಯ 77% ರಷ್ಟು ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ.


  ರಷ್ಯಾ:


  ಒಟ್ಟು 145.9 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ ರಷ್ಯಾ ಜನವರಿ 2022 ರ ಹೊತ್ತಿಗೆ 129.8 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ.


  ಜಪಾನ್:


  ಜಪಾನ್ 118.3 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಜಪಾನ್ ಹೊಂದಿದೆ. ಜಪಾನ್‌ನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 94% ನಷ್ಟು ಇಂಟರ್ನೆಟ್‌ ಬಳಕದಾರರಿದ್ದಾರೆ.


  List of 10 countries with most internet users in 2022
  ಇಂಟರ್ನೆಟ್‌


  ನೈಜೀರಿಯಾ:


  ನೈಜೀರಿಯಾದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 109.2 ಮಿಲಿಯನ್. ಇನ್ನು ನೈಜೀರಿಯಾ ಇಂಟರ್ನೆಟ್‌ ಬಳಕೆದಾರರ ಟಾಪ್‌ ದೇಶಗಳ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ.


  ಮೆಕ್ಸಿಕೋ:


  ಮೆಕ್ಸಿಕೋ 96.87 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. ಇಲ್ಲಿ ಮೆಕ್ಸಿಕೋ ಒಟ್ಟು 130.9 ಮಿಲಿಯನ್ ಜನಸಂಖ್ಯೆಯನ್ನು ಕೂಡ ಹೊಂದಿದೆ.


  ಜರ್ಮನಿ:


  ಜರ್ಮನಿಯು 78.02 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದ್ದು. ಇದು ಇಂಟರ್ನೆಟ್‌ ಬಳಕೆದಾರರ ಪಟ್ಟಿಯಲ್ಲಿ ಕೊನೆಯಸ್ಥಾನದಲ್ಲಿರುವ ದೇಶವಾಗಿದೆ.


  ಇದು ಇತ್ತೀಚಿಗಿನ ಇಂಟರ್ನೆಟ್‌ ಬಳಕೆಯಲ್ಲಿ ಆಗುತ್ತಿರುವ ಬೆಳವಣಿಗೆಯ ವರದಿಯಾಗಿದೆ. ಈಗ ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರ ಜೊತೆ ಇಂಟರ್ನೆಟ್‌ ಬಳಕೆಯನ್ನು ಮಾಡುತ್ತಾರೆ. ಈಗಂತೂ ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಇಲ್ಲದೆ ಯಾವುದೇ ಕೆಲಸಗಳು ನಡಿಯಲ್ಲ. ಆದ್ದರಿಂದ ಹೆಚ್ಚಿನ ಜನರು ಇದಕ್ಕೇ ಅವಲಂಬಿತರಾಗಿದ್ದಾರೆ.

  First published: