Flipkart Knock-Out Offers Sale: ನಿಮ್ಮಿಷ್ಟದ ಸ್ಮಾರ್ಟ್​ಫೋನ್​​​​ಗೆ ಸಿಗಲಿದೆ​ ಭರ್ಜರಿ ಡಿಸ್ಕೌಂಟ್

ಫ್ಲಿಪ್​ಕಾರ್ಟ್​ ಆಯೋಜಿಸಿರುವ ನಾಕ್​  ಔಟ್​ ಆಫರ್​ನಲ್ಲಿ ಹಾನರ್​​ 9i ಸ್ಮಾರ್ಟ್​ಫೋನ್​ 8,999 ರೂ. ಬೆಲೆಗೆ ದೊರಕುತ್ತಿದೆ. 4GB RAM​ ಮತ್ತು 16GB ಸ್ಟೊರೇಜ್​ ಹೊಂದಿರುವ ಈ ಸ್ಮಾರ್ಟ್​ಫೋನ್​ ಮೇಲೆ 8,950 ರೂಪಾಯಿಯ ಎಕ್ಸ್​ಚೇಂಜ್​ ಆಫರ್​ ಅನ್ನು ನೀಡುತ್ತಿದೆ.

news18
Updated:June 11, 2019, 7:05 PM IST
Flipkart Knock-Out Offers Sale: ನಿಮ್ಮಿಷ್ಟದ ಸ್ಮಾರ್ಟ್​ಫೋನ್​​​​ಗೆ ಸಿಗಲಿದೆ​ ಭರ್ಜರಿ ಡಿಸ್ಕೌಂಟ್
ಫ್ಲಿಪ್​ಕಾರ್ಟ್​
  • News18
  • Last Updated: June 11, 2019, 7:05 PM IST
  • Share this:
ಭಾರತದ ಜನಪ್ರಿಯ ಇ-ಕಾಮರ್ಸ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್ ಗ್ರಾಹಕರಿಗಾಗಿ​ 'ನಾಕ್​ ಔಟ್​' ಆಫರ್​ ಅನ್ನು ನೀಡಿದೆ. ಸ್ಮಾರ್ಟ್​ಫೋನ್​​ಗಳಾದ ಹಾನರ್​ 9i , ಹಾನರ್​ 9N​, ರೆಡ್​ಮಿ 6, ರೆಡ್​ಮಿ Y2, ಪೊಕೊ F​1  ಮೇಲೆ ಭರ್ಜರಿ ಡಿಸ್ಕೌಂಟ್​ ನೀಡುತ್ತಿದೆ. ಈ ಆಫರ್​  ಜೂನ್​ 10 ರಿಂದ ಜೂನ್​ 14ರ ವರೆಗೆ ನಡೆಯುತ್ತಿದೆ.

ಫ್ಲಿಪ್​ಕಾರ್ಟ್​ ಆಯೋಜಿಸಿರುವ ನಾಕ್​  ಔಟ್​ ಆಫರ್​ನಲ್ಲಿ ಹಾನರ್​​ 9i ಸ್ಮಾರ್ಟ್​ಫೋನ್​ 8,999 ರೂ. ಗೆ ದೊರಕುತ್ತಿದೆ. 4GB RAM​ ಮತ್ತು 16GB ಸ್ಟೊರೇಜ್​ ಹೊಂದಿರುವ ಈ ಸ್ಮಾರ್ಟ್​ಫೋನ್​ ಮೇಲೆ 8,950 ರೂಪಾಯಿಯ ಎಕ್ಸ್​ಚೇಂಜ್​ ಆಫರ್​ ಅನ್ನು ನೀಡುತ್ತಿದೆ.

4GB RAM​ ಮತ್ತು 64GB ಸ್ಟೊರೇಜ್​ ಹೊಂದಿರುವ ಹಾನರ್​ 9N​ ಸ್ಮಾರ್ಟ್​ಫೋನ್​ 8,999 ರೂಪಾಯಿಗೆ ದೊರಕುತ್ತಿದೆ. ಅಂತೆಯೇ, 3GB RAM​ ಮತ್ತು 32GB ಸ್ಟೊರೇಜ್​ ಹೊಂದಿರುವ ಹಾನರ್​​ 9 ಲೈಟ್ ಸ್ಮಾರ್ಟ್​ಫೋನ್​ ಬೆಲೆ ಕಡಿತಗೊಳಿಸಿ 7,999 ರೂ.ಗೆ ಸಿಗಲಿದೆ. 4GB RAM​ ಮತ್ತು 64GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ 8,999 ರೂಪಾಯಿಗೆ ಗ್ರಾಹಕರಿಗೆ ದೊರಕುತ್ತಿದೆ.

6GB RAM​ ಮತ್ತು 64GB ಸ್ಟೊರೇಜ್​​ ಹೊಂದಿರುವ ಹಾನರ್​ 8X​ ಸ್ಮಾರ್ಟ್​ಫೋನ್​ ಬೆಲೆ ಕಡಿತಗೊಳಿಸಿ 14,999 ರೂ. ಗೆ ದೊರಕುತ್ತಿದೆ. ಅಂತೆಯೇ, ಹಾನರ್​ 7S​ ಸ್ಮಾರ್ಟ್​ಫೋನ್​​  5,499 ರೂಪಾಯಿಗೆ ಸಿಗುತ್ತಿದೆ.

3GB RAM​ ಹೊಂದಿರುವ ಹಾನರ್​ 7A ಸ್ಮಾರ್ಟ್​​ಫೋನ್​ 7,499 ಬೆಲೆಗೆ ದೊರಕುತ್ತಿದೆ. ಅಂತೆಯೇ, ಹಾನರ್​ 10 ಸ್ಮಾರ್ಟ್​ಫೋನ್​ 24,999 ಬೆಲೆಗೆ ಸಿಗುತ್ತಿದೆ. ಈ ಸ್ಮಾರ್ಟ್​ಫೋನ್​ 6GB RAM​ ಮತ್ತು 128GB ಸ್ಟೊರೇಜ್​ ಹೊಂದಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಬಿಸಿಲಿನ ತಾಪಕ್ಕೆ ಕೇರಳ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸಾವು

ರೆಡ್​ಮಿ ಸ್ಮಾರ್ಟ್​ಫೋನ್​ಗಳ ಮೇಲೂ ದರ ಕಡಿತ ಮಾರಾಟ ಮಾಡುತ್ತಿದೆ. ರೆಡ್​ಮಿ 6 ಸ್ಮಾರ್ಟ್​ಫೋನ್​ 7,499 ರೂ. ಗೆ ದೊರಕುತ್ತಿದೆ. ಅಂತೆಯೇ, ರೆಡ್​ಮಿ ನೋಟ್​​ 5 ಪ್ರೊ 10,999 ರೂ. ಗೆ ಸಿಗುತ್ತಿದೆ. ಇನ್ನು ವಿಶೇಷ ಸೆಲ್ಫಿ ಕ್ಯಾಮೆರಾ ಹೊಂದಿರುವ ರೆಡ್​ಮಿ Y2 ಸ್ಮಾರ್ಟ್​ಫೋನ್​ 8,499 ಬೆಲೆಗೆ ದೊರಕುತ್ತಿದೆ.ಫ್ಲಿಪ್​ಕಾರ್ಟ್​ ನಾಕ್​ ಔಟ್​ ಆಫರ್​ನಲ್ಲಿ ಮಿ A2 ಸ್ಮಾರ್ಟ್​ಫೋನ್ ಅನ್ನು​ 10,999 ರೂ. ಗೆ ಮಾರಾಟ ಮಾಡುತ್ತಿದೆ. ಅಂತೆಯೇ, ಪೊಕೊ F​1 ಸ್ಮಾರ್ಟ್​ಫೋನ್​ ಮೇಲೂ ದರ ಕಡಿತಗೊಳಿಸಿ 17,999 ರೂಪಾಯಿಗೆ ನೀಡುತ್ತಿದೆ.

ಇನ್ನು ಒಪ್ಪೊ, ವಿವೋ ಸ್ಮಾರ್ಟ್​ಫೋನ್​ಗಳು ಕೂಡ ಈ ಭರ್ಜರಿ ಆಫರ್​ನಲ್ಲಿ ಕಡಿಮೆ ಬೆಲೆಗೆ ದೊರಕುತ್ತಿದೆ. 4GB RAM​ ಮತ್ತು 64GB ಸ್ಟೊರೇಜ್​ ಹೊಂದಿರುವ ಒಪ್ಪೊ K1 ಸ್ಮಾರ್ಟ್​ಫೋನ್​ 14,999 ರೂ. ಗೆ ಸಿಗುತ್ತಿದೆ. ಗ್ರಾಹಕರಿಗಾಗಿ ವಿವೋ V15 ಪ್ರೊ, ಒಪ್ಪೊ F11 ಪ್ರೊ, ಒಪ್ಪೊ F​11, ವಿವೋ Y17, ಒಪ್ಪೊ R​ 17 ಪ್ರೊ, ವಿವೋ Y91i, ಮತ್ತು ವಿವೋ Y91 ಸ್ಮಾರ್ಟ್​ಫೋನ್​ಗಳ ಮೇಲೆ ಎಕ್ಸ್​ಚೇಂಜ್​ ಡಿಸ್ಕೌಂಟ್​ ಆಫರ್​ ನೀಡುತ್ತಿದೆ.

First published: June 11, 2019, 6:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading