• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Tips For Parents: ಪೋಷಕರೇ, ನಿಮ್ಮ ಮಕ್ಕಳ ಸ್ಕ್ರೀನ್ ಟೈಮ್​ ಜಾಸ್ತಿ ಇದ್ರೆ ಈಗ್ಲೇ ಬ್ರೇಕ್​ ಹಾಕಿ, ಆಪಲ್ ಸಿಇಒ ಸಲಹೆ

Tips For Parents: ಪೋಷಕರೇ, ನಿಮ್ಮ ಮಕ್ಕಳ ಸ್ಕ್ರೀನ್ ಟೈಮ್​ ಜಾಸ್ತಿ ಇದ್ರೆ ಈಗ್ಲೇ ಬ್ರೇಕ್​ ಹಾಕಿ, ಆಪಲ್ ಸಿಇಒ ಸಲಹೆ

ಮಕ್ಕಳಿಗಾಗಿ ಸಲಹೆ

ಮಕ್ಕಳಿಗಾಗಿ ಸಲಹೆ

ಬೆಳಿಗ್ಗೆ ಎದ್ದು ತಕ್ಷಣ ಹಾಲು ಕುಡಿಯುವುದರಿಂದ ಹಿಡಿದು ರಾತ್ರಿ ಮಲಗುವ ತನಕ ಮೊಬೈಲ್ ಫೋನ್ ಅವರಿಗೆ ಎಲ್ಲಾದಕ್ಕೂ ಬೇಕು ಅನ್ನೋವಷ್ಟರ ಮಟ್ಟಿಗೆ ಮಕ್ಕಳಿಗೆ ಈ ಮೊಬೈಲ್ ಫೋನ್ ಹತ್ತಿರವಾಗಿದೆ ಅಂತ ಹೇಳಬಹುದು.

  • Share this:
  • published by :

ಮೊದಲೆಲ್ಲಾ ಅಮ್ಮ(Mother)  ಮಗುವನ್ನು ಮನೆಯ ಹಿತ್ತಲಿನಲ್ಲಿ ಅಥವಾ ಮನೆಯ ಟೆರಸ್ ಮೇಲೆ ಕರೆದುಕೊಂಡು ಹೋಗಿ ಕೈಯಲ್ಲಿ ಅನ್ನ-ತುಪ್ಪದ ಬಟ್ಟಲು ಹಿಡಿದುಕೊಂಡು ಚಂದಮಾಮನನ್ನು ತೋರಿಸುತ್ತಾ ಕೈತುತ್ತು ತಿನ್ನಿಸುತ್ತಿದ್ದಳು. ಆದರೆ ಈಗಿನ ಮಕ್ಕಳು ಮೊಬೈಲ್ ಫೋನ್ (Mobile Phone) ತಮ್ಮ ಕೈಯಲ್ಲಿದ್ದು ಅದರಲ್ಲಿ ಕನ್ನಡ, ಇಂಗ್ಲೀಷ್ ರೈಮ್ಸ್ ಗಳು ಮತ್ತು ಇನ್ನಿತರೆ ಕಾರ್ಟೂನ್ ಗಳು ಇದ್ದರೆನೆ ಅವರಿಗೆ ತಾಯಿ ತಿನ್ನಿಸಿದ ಊಟ ಗಂಟಳೊಳಗೆ ಇಳಿಯುವಂತೆ ಆಗಿದೆ ಪರಿಸ್ಥಿತಿ. ಹೌದು,  ಅಷ್ಟರ ಮಟ್ಟಿಗೆ ಮಕ್ಕಳು ಈ ಮೊಬೈಲ್ ಫೋನ್ ಗಳಲ್ಲಿ ಬರುವ ರೈಮ್ಸ್, ಕಾರ್ಟೂನ್ ಮತ್ತು ಗೇಮ್ಸ್ ಗಳಿಗೆ ಅಡಿಕ್ಟ್ (Addict) ಆಗಿದ್ದಾರೆ ಅಂತ ಹೇಳಬಹುದು.


ಬೆಳಿಗ್ಗೆ ಎದ್ದು ತಕ್ಷಣ ಹಾಲು ಕುಡಿಯುವುದರಿಂದ ಹಿಡಿದು ರಾತ್ರಿ ಮಲಗುವ ತನಕ ಮೊಬೈಲ್ ಫೋನ್ ಅವರಿಗೆ ಎಲ್ಲಾದಕ್ಕೂ ಬೇಕು ಅನ್ನೋವಷ್ಟರ ಮಟ್ಟಿಗೆ ಮಕ್ಕಳಿಗೆ ಈ ಮೊಬೈಲ್ ಫೋನ್ ಹತ್ತಿರವಾಗಿದೆ ಅಂತ ಹೇಳಬಹುದು.


ಮೊಬೈಲ್ ಫೋನ್ ಅಷ್ಟೇ ಅಲ್ಲದೆ ಮಕ್ಕಳು ತಂದೆ ತಾಯಂದಿರ ಲ್ಯಾಪ್‌ಟಾಪ್ ಗಳಲ್ಲಿಯೂ ಸಹ ಈ ರೈಮ್ಸ್ ಮತ್ತು ಕಾರ್ಟೂನ್ ಗಳನ್ನು ನೋಡಲು ಶುರು ಮಾಡಿದ್ದಾರೆ ಅಂತ ಹೇಳಬಹುದು. ಹೀಗೆ ಮಕ್ಕಳು ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಗಳ ಸ್ಕ್ರೀನ್ ಮುಂದೆ ಗಂಟೆಗಟ್ಟಲೆ ಕೂತರೆ ಕಣ್ಣುಗಳಿಗೆ ಹಾನಿಯಾಗುವುದು ಮತ್ತು ಮಕ್ಕಳ ಬುದ್ದಿ ಮಂದವಾಗುವುದು ಗ್ಯಾರೆಂಟಿ ಅಂತ ಅನೇಕ ವೈದ್ಯರು ಪೋಷಕರಿಗೆ ಆಗಾಗ್ಗೆ ಹೇಳುತ್ತಲೇ ಇರುತ್ತಾರೆ.


ಪೋಷಕರಿಗೆ ಸಲಹೆ ನೀಡಿದ್ರು ಆಪಲ್ ಸಿಇಒ ಟಿಮ್ ಕುಕ್


ಇಷ್ಟೇ ಅಲ್ಲದೆ ವೈದ್ಯರು ಮಕ್ಕಳನ್ನು ಮನೆಯಲ್ಲಿಯೇ ಕೂರಿಸಿಕೊಂಡು ಕೂರಬೇಡಿ, ಮನೆಯಿಂದ ಹೊರಗೆ ಅವರನ್ನು ಬೇರೆ ಹುಡುಗರ ಜೊತೆಗೆ ಬೆರೆಯಲು, ಆಟವಾಡಲು ಬಿಡಿ ಅಂತ ಪೋಷಕರಿಗೆ ಹೇಳುತ್ತಲೇ ಇರುತ್ತಾರೆ. ಈಗ ಇವರಷ್ಟೇ ಅಲ್ಲದೆ ಆಪಲ್ ಸಿಇಒ ಟಿಮ್ ಕುಕ್ ಸಹ ಇದರ ಬಗ್ಗೆ ಪೋಷಕರಿಗೆ ತುಂಬಾನೇ ಮಹತ್ವದ ಸಲಹೆಯನ್ನು ನೀಡಿದ್ದಾರೆ ನೋಡಿ.


ಇದನ್ನೂ ಓದಿ: ಮತ್ತೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸೋಕೆ ಬರುತ್ತಿದೆ ನೋಕಿಯಾ ಮೊಬೈಲ್! ಶೀಘ್ರವೇ ಹೊಸ ಸ್ಮಾರ್ಟ್‌ಫೋನ್ ಲಾಂಚ್


ಆಪಲ್ ಸಿಇಒ ಟಿಮ್ ಕುಕ್ ಅವರು ಪೋಷಕರು ತಮ್ಮ ಮಕ್ಕಳು ಡಿಜಿಟಲ್ ಸಾಧನಗಳಲ್ಲಿ ಕಳೆಯುವ ಸಮಯವನ್ನು ಮಿತಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ ನೋಡಿ. ಜಿಕ್ಯೂ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಕ್ಕಳು ಡಿಜಿಟಲ್ ಸಾಧನಗಳಲ್ಲಿ, ವಿಶೇಷವಾಗಿ ಸ್ಮಾರ್ಟ್‌ಫೋನ್ ಗಳಲ್ಲಿ ಎಷ್ಟು ಸಮಯ ಕಳೆಯುತ್ತಾರೆ, ಇದಕ್ಕೆ ಪೋಷಕರು ಸರಿಯಾದ ಮಾರ್ಗಸೂಚಿಗಳನ್ನು ನಿಗದಿಪಡಿಸಬೇಕು ಎಂದು ಕುಕ್ ಸಲಹೆ ನೀಡಿದ್ದಾರೆ.


ಇಂದಿನ ಮಕ್ಕಳು ಬರೀ ಮಕ್ಕಳಲ್ಲ, ಅವರು ಡಿಜಿಟಲ್ ಮಕ್ಕಳು ಅಂದ್ರು ಕುಕ್


ಇಂದಿನ ಮಕ್ಕಳು ಬರೀ ಮಕ್ಕಳಲ್ಲ, ಅವರು ಡಿಜಿಟಲ್ ಮಕ್ಕಳು ಅಂತ ಕುಕ್ ಹೇಳಿದರು, ಆದರೆ ಡಿಜಿಟಲ್ ಸಾಧನಗಳ ಮುಂದೆ ಕಳೆಯುವ ಸಮಯ ಎಂದರೆ ಸ್ಕ್ರೀನ್ ಟೈಂ ಅನ್ನು ಮಿತಿಗೊಳಿಸಲು ಕಠಿಣವಾದ ಮಾರ್ಗಸೂಚಿಗಳನ್ನು ರಚಿಸುವುದು ತುಂಬಾನೇ ಮುಖ್ಯವಾಗಿದೆ ಎಂದು ಕುಕ್ ಹೇಳಿದರು. ಆಪಲ್ ಕಂಪನಿ ಜನರನ್ನು ಈ ರೀತಿಯಾಗಿ ಸ್ಕ್ರೀನ್ ಗೆ ಅಂಟಿಕೊಳ್ಳುವ ಬದಲು, ಅವರು ಮೊದಲು ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಲು ಮತ್ತು ಅವುಗಳನ್ನು ಕಲಿಯಲು ಜನರನ್ನು ಸಶಕ್ತಗೊಳಿಸಲು ತಂತ್ರಜ್ಞಾನವನ್ನು ತಯಾರಿಸುತ್ತದೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಡಿಮಾರ್ಟ್, ಬಿಗ್ ಬಾಸ್ಕೆಟ್, ಬಿಗ್ ಬಜಾರ್‌ನ ಫೇಕ್​ ವೆಬ್‌ಸೈಟ್‌! ವಂಚಿಸೋ ಅಕೌಂಟ್​​ಗಳ ಬಗ್ಗೆ ತಿಳಿದುಕೊಳ್ಳೋದು ಹೇಗೆ?


"ಜನರು ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಲು, ಅವರು ಕಲಿಯಲು ಸಾಧ್ಯವಾಗದ ವಿಷಯಗಳನ್ನು ಕಲಿಯಲು ಜನರನ್ನು ಸಶಕ್ತಗೊಳಿಸಲು ನಾವು ತಂತ್ರಜ್ಞಾನವನ್ನು ತಯಾರಿಸುತ್ತೇವೆ ಮತ್ತು ನನ್ನ ಪ್ರಕಾರ ಇದು ನಿಜವಾಗಿಯೂ ನಮ್ಮನ್ನು ಪ್ರೇರೇಪಿಸುತ್ತದೆ. ಜನರು ನಮ್ಮ ಫೋನ್ ಗಳನ್ನು ಹೆಚ್ಚು ಬಳಸುವುದನ್ನು ನಾವು ಬಯಸುವುದಿಲ್ಲ. ಅದಕ್ಕಾಗಿ ನಾವು ಪ್ರೋತ್ಸಾಹಿಸುವುದಿಲ್ಲ ಕೂಡ" ಎಂದು ಅವರು ಹೇಳಿದರು.


ಆಪಲ್‌ನ ಸ್ಕ್ರೀನ್ ಟೈಂ ವೈಶಿಷ್ಟ್ಯತೆಯ ಬಗ್ಗೆ ಕುಕ್ ಹೇಳಿದ್ದೇನು ನೋಡಿ


ಕುಕ್ ಆಪಲ್ ನ ಸ್ಕ್ರೀನ್ ಟೈಂ ವೈಶಿಷ್ಟ್ಯತೆಯನ್ನು ಉಲ್ಲೇಖಿಸುತ್ತಾ “ಇದು ಬಳಕೆದಾರರಿಗೆ ತಮ್ಮ ಅಪ್ಲಿಕೇಶನ್ ಬಳಕೆಯನ್ನು ಟ್ರ್ಯಾಕ್ ಮಾಡಲು ಮತ್ತು ತಮ್ಮ ಸಾಧನಗಳಲ್ಲಿ ಕಳೆಯುವ ಸಮಯವನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ. ಪೋಷಕರು ತಮ್ಮ ಮಕ್ಕಳ ಸ್ಕ್ರೀನ್ ಟೈಂ ಅನ್ನು ಮೇಲ್ವಿಚಾರಣೆ ಮಾಡಲು ಈ ವೈಶಿಷ್ಟ್ಯತೆಯನ್ನು ಬಳಸಬಹುದು ಎಂದು ಅವರು ಹೇಳಿದರು.
ಇತರ ಜನರೊಂದಿಗೆ ತೊಡಗಿಸಿಕೊಳ್ಳುವ ಬದಲು ಕೇವಲ ಡಿಜಿಟಲ್ ಸಾಧನಗಳ ಸ್ಕ್ರೀನ್ ಅನ್ನು ನೋಡಲು ಹೆಚ್ಚಿನ ಸಮಯವನ್ನು ಕಳೆದರೆ, ಅವರು ತಪ್ಪು ಮಾಡುತ್ತಿದ್ದಾರೆ ಅಂತ ಅರ್ಥ ಎಂದು ಆಪಲ್ ಸಿಇಒ ಒತ್ತಿ ಹೇಳಿದರು. ಜನರು ಈ ರೀತಿಯ ಸ್ಕ್ರೀನ್ ಗಳಿಂದ ಆಗಾಗ್ಗೆ ವಿರಾಮ ತೆಗೆದುಕೊಳ್ಳಬೇಕು ಮತ್ತು ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಸಂಪರ್ಕ ಸಾಧಿಸಬೇಕು ಎಂದು ಅವರು ಹೇಳಿದರು.

First published: