HOME » NEWS » Tech » LG WING TO LAUNCH IN INDIA TODAY EXPECTED PRICE SPECIFICATIONS HG

LG Wing: ಡ್ಯುಯೆಲ್ ಸ್ಕ್ರೀನ್ ಸ್ಮಾರ್ಟ್​ಫೋನ್​ ಪರಿಚಯಿಸಿದೆ ಎಲ್​ಜಿ

LG Wing smartphone: ನೂತನ ಸ್ಮಾರ್ಟ್​ಫೋನಿನ ಮೈನ್​ ಸ್ಕ್ರೀನ್​​ 6.8 ಇಂಚಿನ ಫುಲ್​ HD+P-OLED ಡಿಸ್​ಪ್ಲೇ ಸೆಕೆಂಡರಿ ಸ್ಕ್ರೀನ್​ 3.9 ಇಂಚಿನ G-OLED ಸ್ಕ್ರೀನ್ ​ಹೊಂದಿದೆ.

news18-kannada
Updated:October 28, 2020, 1:36 PM IST
LG Wing: ಡ್ಯುಯೆಲ್ ಸ್ಕ್ರೀನ್ ಸ್ಮಾರ್ಟ್​ಫೋನ್​ ಪರಿಚಯಿಸಿದೆ ಎಲ್​ಜಿ
LG ವಿಂಗ್​
  • Share this:
ಸ್ಮಾರ್ಟ್​ಫೊನ್​ ಮಾರುಕಟ್ಟೆಯಲ್ಲಿ ಹೊಸ ಬಗೆಯ, ವಿನ್ಯಾಸದ ಮತ್ತು ವಿಶೇಷ ಫೀಚರ್​ ಅಳವಡಿಸಿಕೊಂಡಿರುವ ಸ್ಮಾರ್ಟ್​ಫೊನ್​ಗಳು ಬರುತ್ತಿವೆ. ಅದರಂತೆ ಇದೀಗ ಜನಪ್ರಿಯ ಎಲ್​ಜಿ ಸಂಸ್ಥೆ ಡ್ಯುಯೆಲ್​ ಸ್ಕ್ರೀನ್​ ಅಳವಡಿಸಿರುವ LG ವಿಂಗ್​ ಹೆಸರಿನ ಸ್ಮಾರ್ಟ್​ಫೋನ್​ ಉತ್ಪಾದಿಸಿದ್ದು, ಇಂದು ಬೆಳಗ್ಗೆ 11;30ಕ್ಕೆ ಸರಿಯಾಗಿ  ನೂತನ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದಕ್ಷಿಣ ಕೊರಿಯಾದಲ್ಲಿ ಎಲ್​ಜಿ ವಿಂಗ್​ ಸ್ಮಾರ್ಟ್​ಫೋನ್​ ಖರೀದಿಗೆ ಸಿಗುತ್ತಿದೆ. ಆದರೆ ಭಾರತೀಯರಿಗಾಗಿ ಇಂದು ಪರಿಚಯಿಸಿದೆ. ಇನ್ನು​​ ಸ್ಮಾರ್ಟ್​ಫೋನ್​ನಲ್ಲಿ ಟಾಪ್​-ಎಂಡ್​ ಸ್ಪೇಸ್​ ನೀಡಲಾಗಿದ್ದು, ಮೈನ್​ಸ್ಕ್ರೀನ್ ಮತ್ತು ಸೆಕೆಂಡ್​ ಸ್ಕ್ರೀನ್​ ನೀಡಲಾಗಿದೆ. ಹಾಗಾಗಿ ಇದನ್ನು ಗಡಿಯಾರ ತಿರುಗಿದಂತೆ ತಿರುಗಿಸಬಹುದಾಗಿದೆ. ಅದರ ಜೊತೆಗೆ ಪಾಪ್​ ಅಪ್​ ಸೆಲ್ಫಿ ಮತ್ತು ಗಿಂಬಲ್​ ಮೋಡ್​ ಕ್ಯಾಮೆರಾವನ್ನು ಸ್ಮಾರ್ಟ್​ಫೋನಿನ​ ಹಿಂಭಾಗದಲ್ಲಿ ಜೋಡಿಸಲಾಗಿದೆ.

LG ವಿಂಗ್​ ವಿಶೇಷತೆ;

ನೂತನ ಸ್ಮಾರ್ಟ್​ಫೋನಿನ ಮೈನ್​ ಸ್ಕ್ರೀನ್​​ 6.8 ಇಂಚಿನ ಫುಲ್​ HD+P-OLED ಡಿಸ್​ಪ್ಲೇ ಸೆಕೆಂಡರಿ ಸ್ಕ್ರೀನ್​ 3.9 ಇಂಚಿನ G-OLED ಸ್ಕ್ರೀನ್ ​ಹೊಂದಿದೆ.

ಒಕ್ಟಾಕೋರ್​ ಸ್ನಾಪ್​ಡ್ರಾಗನ್​ 765G ಪ್ರೊಸೆಸರ್​ ಮತ್ತು ಆ್ಯಂಡ್ರೇನೊ 620GPU ನೀಡಲಾಗಿದೆ. 8GB RAM​ ಮತ್ತು 128GB/256GB ಇಂಟರ್​ನಲ್​ ಸ್ಟೊರೇಜ್​ ಆಯ್ಕೆ ಇದರಲ್ಲಿದೆ. ಅಷ್ಟು ಮಾತ್ರವಲ್ಲದೆ, 2TB ತನಕ ಮೈಕ್ರೋಕಾರ್ಡ್​ ವೃದ್ಧಿಸಬಹುದಾಗಿದೆ.

ಆ್ಯಂಡ್ರಾಯ್ಡ್​ 10 ಬೆಂಬಲವನ್ನು ಪಡೆದಿರುವ ಈ ಸ್ಮಾರ್ಟ್​ಫೋನ್​ 4 ಸಾವಿರ mah​ ಬ್ಯಾಟರಿ ಅಳವಡಿಸಲಾಗಿದೆ.  25 ವ್ಯಾಟ್​​ ಫಾಸ್ಟ್​ ಚಾರ್ಜಿಂಗ್​ ಸೌಲಭ್ಯ ಮತ್ತು 10 ವ್ಯಾಟ್​​ ವೈರ್​ಲೆಸ್​​ ಚಾರ್ಜಿಂಗ್​ ಸಪೋರ್ಟ್​ ಹೊಂದಿದೆ.

ಕ್ಯಾಮೆರಾ: 64 ಮೆಗಾಫಿಕ್ಸೆಲ್​​ ರಿಯಲ್​ ಕ್ಯಾಮೆರಾ ಜೊತೆಗೆ ಎಲ್​​ಇಡಿ ಫ್ಲಾಶ್​, 13 ಮೆಗಾಫಿಕ್ಸೆಲ್​ ಅಲ್ಟ್ರಾ-ವೈಡ್​-ಆ್ಯಂಗಲ್​ ಲೆನ್ಸ್​, 12 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​​ ಗಿಂಬಲ್​ ಮೋಡ್​ ಮತ್ತು 32 ಮೆಗಾಫಿಕ್ಸೆಲ್​ ಪಾಪ್​ ಅಪ್​ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಇನ್ನು ಸ್ಮಾರ್ಟ್​ಫೋನಿನಲ್ಲಿ ಫಿಂಗರ್​ಪ್ರಿಂಟ್​ ಸೆನ್ಸಾರ್​, ನೀರು ಮತ್ತು ಧೂಳಿನಿಂದ ರಕ್ಷಿಸಬಹುದಾದ ಫೀಚರ್​ ಎಲ್​ಜಿ ವಿಂಗ್​ ಸ್ಮಾರ್ಟ್​ಫೋನ್​ ಹೊಂದಿದೆ.

ಬೆಲೆ: ಸೌತ್​ ಕೊರಿಯಾದ ಜನರಿಗೆ ನೂತನ ವಿಂಗ್​ ಸ್ಮಾರ್ಟ್​ಫೋನ್​ ಖರೀದಿಗೆ ಸಿಗುತ್ತಿದೆ. 1,098,500 ಬೆಲೆಗೆ ಮಾರಾಟ ಮಾಡುತ್ತಿದೆ. ಆದರೆ ಭಾರತದಲ್ಲಿ ಇದರ ಬೆಲೆ 71,400 ರೂ. ಎಂದು ಅಂದಾಜಿಸಲಾಗಿದೆ.

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​​ಗಳೇ ಬೆಸ್ಟ್; ಐಫೋನ್ ಪ್ರಿಯರನ್ನು ಬೆರಗುಗೊಳಿಸಿದೆ ಈ ವಿಡಿಯೋ!

ಮತ್ತೊಮ್ಮೆ ಆಫರ್​ಗಳನ್ನು ಹೊತ್ತುತಂದ ಫ್ಲಿಪ್​ಕಾರ್ಟ್​; ಅ.29ರಿಂದ Big Diwali Sale ಆರಂಭ!
Published by: Harshith AS
First published: October 28, 2020, 1:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories