HOME » NEWS » Tech » LG TO SHUT DOWN LG PAY PAYMENT SERVIVE THIS YEAR HG

ಸ್ಮಾರ್ಟ್​ಫೋನ್​ ಆಯ್ತು, ಇದೀಗ ಪೇಮೆಂಟ್​ ಸೇವೆ ಸ್ಥಗಿತ ಮಾಡಲು ಮುಂದಾದ LG!

LG pay: ಸ್ಮಾರ್ಟ್​ಫೋನ್​ ಉದ್ಯಮದಲ್ಲಿ ಮತ್ತು ಮಾರಾಟದಲ್ಲಿ ನಷ್ಟ ಅನುಭವಿಸಿದ ಎಲ್​ಜಿ ಸಂಸ್ಥೆ ಎಲ್​ಜಿ ಪೇಮೆಂಟ್​ ಸೇವೆಯನ್ನ ಸ್ಥಗಿತ ಮಾಡುವುದಾಗಿ ತಿಳಿಸಿದೆ. ಕಂಪನಿ ಎಲ್​ಜಿ ಸ್ಮಾರ್ಟ್​ಫೋನ್​ ಹೊಂದಿದವರಿಗೆ ಈ ಸೇವೆಯನ್ನು ನೀಡುತಿತ್ತು.

news18-kannada
Updated:June 2, 2021, 5:17 PM IST
ಸ್ಮಾರ್ಟ್​ಫೋನ್​ ಆಯ್ತು, ಇದೀಗ ಪೇಮೆಂಟ್​ ಸೇವೆ ಸ್ಥಗಿತ ಮಾಡಲು ಮುಂದಾದ LG!
ಎಲ್​ಜಿ ಸ್ಮಾರ್ಟ್​ಫೋನ್​
  • Share this:
ಎಲ್​ಜಿ ಸ್ಮಾರ್ಟ್​ಫೋನ್​ ಕಂಪನಿ ಕಳೆದ ಎಪ್ರಿಲ್​ ತಿಂಗಳಿನಲ್ಲಿ ಸ್ಮಾರ್ಟ್​ಫೋನ್​ ಉದ್ಯಮವನ್ನು ಹೊರಬರುವುದಾಗಿ ಹೇಳಿತ್ತು. ಇದೀಗ ಅದೇ ಸಂಸ್ಥೆ ಪೇಮೆಂಟ್​ ಸೇವೆಯನ್ನು ಸ್ಥಗಿತ ಮಾಡಲು ಮುಂದಾಗಿದ್ದು, ಆ ಮೂಲಕ ಗ್ರಾಹಕರಿಗೆ ಮತ್ತೊಂದು ಶಾಕ್​ ನೀಡಿದೆ.

ಸ್ಮಾರ್ಟ್​ಫೋನ್​ ಉದ್ಯಮದಲ್ಲಿ ಮತ್ತು ಮಾರಾಟದಲ್ಲಿ ನಷ್ಟ ಅನುಭವಿಸಿದ ಎಲ್​ಜಿ ಸಂಸ್ಥೆ ಎಲ್​ಜಿ ಪೇಮೆಂಟ್​ ಸೇವೆಯನ್ನ ಸ್ಥಗಿತ ಮಾಡುವುದಾಗಿ ತಿಳಿಸಿದೆ. ಕಂಪನಿ ಎಲ್​ಜಿ ಸ್ಮಾರ್ಟ್​ಫೋನ್​ ಹೊಂದಿದವರಿಗೆ ಈ ಸೇವೆಯನ್ನು ನೀಡುತಿತ್ತು. ಆದರೀಗ ಎಲ್​ಜಿ ತನ್ನ ಗ್ರಾಹಕರಿಗೆ ಸಂದೇಶವನ್ನು ಕಳುಹಿಸಿದ್ದು, ಜೊತೆಗೆ ವೆಬ್​ಸೈಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಆ ಮೂಲಕ ಎಲ್​ಜಿ ಪೇ ಸೇವೆಯನ್ನು ಸ್ಥಗಿತ ಮಾಡುವುದರ ಕುರಿತು ತಿಳಿಸಿದೆ.

ಎಲ್​ಜಿ ಈ ಬಗ್ಗೆ, ‘ಎಲ್​ಜಿ ಪೇ ಬಳಸುತ್ತಿದ್ದ ಗ್ರಾಹಕರಿಗೆ ಧನ್ಯವಾದಗಳು! ನಾವು ಹೇಳುವುದೇನೆಂದರೆ ಪ್ರಸಕ್ತ 2021ರಲ್ಲಿ ಎಲ್​ಜಿ ಪೇ ಸೇವೆಯನ್ನು ಸ್ಥಗಿತ ಮಾಡಲು ಮುಂದಾಗಿದ್ದೇವೆ‘ ಎಂದು ಬರೆದುಕೊಂಡಿದೆ.

ಸೌತ್​ ಕೊರಿಯ ಮೂಲದ ಈ ಸಂಸ್ಥೆ ಒಂದು ಸಮಯದಲ್ಲಿ ಭಾರತ ಮಾತ್ರವಲ್ಲದೆ, ಕೆಲವು ದೇಶಗಳಲ್ಲಿ ಸ್ಮಾರ್ಟ್​ಫೋನ್​ ಉದ್ಯಮದ ಮೂಲಕ ಜನಪ್ರಿಯತೆ ಗಳಿಸಿತ್ತು. ಆದರೆ ಬರು ಬರುತ್ತಾ ಚೀನಾ ಉತ್ಪಾದಿಸುವ ಸ್ಮಾರ್ಟ್​ಫೋನ್​ ಮತ್ತು ನವ ವಿನ್ಯಾಸ, ಬಜೆಟ್​ ಬೆಲೆ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಬಂದಾಗ ಅದರೆದುರು ಸ್ಪರ್ಧಿಸಲಾಗದೆ ಎಲ್​ಜಿ ಸ್ಮಾರ್ಟ್​ಫೋನ್​ ಸಂಸ್ಥೆ ನಷ್ಟ ಅನುಭವಿಸುತ್ತಾ ಬಂತು.

ಕೊನೆಗೂ ಪೈಪೋಟಿ ನೀಡಲಿಲ್ಲ!

ಕಂಪನಿ ಎಲ್​ಜಿ ಪೇ ಸೇವೆಯನ್ನು 2017ರಲ್ಲಿ ಪ್ರಾರಂಭಿಸಿತು. ಇದೊಂದು ಹಣ ವರ್ಗಾಯಿಸುವ ಸೇವೆಯಾಗಿದ್ದು,ಗೂಗಲ್ ಮತ್ತು ಸ್ಯಾಮ್​ಸಂಗ್​ ಪೇಮೆಂಟ್​ ಆ್ಯಪ್​ಗಳಿಗೆ ಪೈಪೋಟಿ ನೀಡಲು ಪರಿಚಯಿಸಿತು. 2018ರಲ್ಲಿ ಕಂಪನಿ ಮಧ್ಯಮ ಬೆಲೆಯ ಸ್ಮಾರ್ಟ್​ಫೋನ್​ಗಳಲ್ಲೂ ಈ ಸೇವೆಯನ್ನು ನೀಡಿತು. 2019ರಲ್ಲಿ ಅಮೆರಿಕದಲ್ಲಿ ಈ ಸೇವೆಯನ್ನು ವಿಸ್ತರಿಸಿದ್ದಲ್ಲದೆ, ಮ್ಯಾಗ್ನೆಟಿಕ್ ಟ್ರಿಪ್ಸ್​ ಸಪೋರ್ಟ್​​ ನೀಡಿತು. ಆದರೀಗ ಎಲ್​ಜಿ ಪೇಮೆಂಟ್​ ಸೇವೆಯನ್ನು ಈ ವರ್ಷ ಕೊನೆಗೊಳಿಸುವುದಾಗಿ ತಿಳಿಸಿದೆ.
Published by: Harshith AS
First published: June 2, 2021, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories