Iphone Xಗಿಂತಲೂ ದುಬಾರಿ ಎಲ್​ಜಿಯವರ ಈ ಫೋನ್​!


Updated:July 30, 2018, 5:20 PM IST
Iphone Xಗಿಂತಲೂ ದುಬಾರಿ ಎಲ್​ಜಿಯವರ ಈ ಫೋನ್​!

Updated: July 30, 2018, 5:20 PM IST
ದಕ್ಷಿಣ ಕೋರಿಯಾದ ತಂತ್ರಜ್ಞಾನ ಸಂಸ್ಥೆ ಎಲ್​ಜಿ ಮೊಬೈಲ್​ ಆ್ಯಪಲ್​ಗಿಂತಲೂ ಅಧಿಕ ಬೆಲೆಯ ನೂತನ ಸ್ಮಾರ್ಟ್​ಫೊನ್​ನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿದ್ದು ಆಗಸ್ಟ್​ 20ರಂದು ಮಾರಾಟ ಮಾಡುವುದಾಗಿ ಘೋಷಿಸಿದೆ.

ಎಲ್​ಜಿ ಸಿಗ್ನೇಚರ್​​ ಶ್ರೇಣಿಯಲ್ಲಿ ಬಿಡುಗಡೆಯಾಗುವ ಈ ಮೊಬೈಲ್​ ಐಫೊನ್​ ಎಕ್ಸ್​ ಬೆಲೆಯನ್ನು ಮೀರಿಸಲಿದ್ದು ಆಂಡ್ರಾಯ್ಡ್‌ನ ಮೊಬೈಲ್​ಗಳಲ್ಲೇ ಅತೀ ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡ ಮೊಬೈಲ್ ಇದಾಗಲಿದೆ.

ಕಪ್ಪು ಮತ್ತು ಬಿಳುಪು ಬಣ್ಣದಿಂದ ಎಲ್​ಜಿ ಸಿಗ್ನೇಚರ್​ ಮೊಬೈಲ್​ ರೂ.1,22,820ಕ್ಕೆಲಾಂಚ್ ಆಗಲಿದೆ ಎನ್ನಲಾಗಿದೆ. ಇದರೊಂದಿಗೆ ಬಿಡುಗಡೆ ಆಫರ್​ ಎಂದು ಬ್ಯಾಂಗ್​ & ಒಲುಫ್​ಸೆನ್​ ಅವರ ಬಯೋಪ್ಲೆ H9i ಹೆಡ್​ಫೋನ್​ ನೀಡಲಿದೆ. LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ಅನ್ನು ಪ್ರೀಮಿಯಮ್ ಮೆಟಿರಿಯಲ್ ಆಗಿರುವ ಜಿರ್ಕೋನಿಯಮ್ ಸೆರೆಮಿಕ್ ಬ್ಲಾಕ್ ನಿಂದ ಮಾಡಲಾಗಿದೆ.

ಕೇವಲ 300 ಮೊಬೈಲ್​ಗಳನ್ನು ಮಾರಾಟ ಮಾಡಲು ತೀರ್ಮಾನಿಸಿರುವ ಸಂಸ್ಥೆ, ಎರಡು ವಾರ ಮುಂಗಡವಾಗಿಯೇ ಮೊಬೈಲ್​ ಬುಕ್ಕಿಂಗ್ ಮಾಡಬೇಕಾಗಿದೆ. ಸ್ಮಾರ್ಟ್‌ಫೋನಿನ ಮೇಲೆ ಬಳಕೆದಾರರು ಅವರ ಹೆಸರನ್ನು ಬರೆಸಿಕೊಳ್ಳಬಹುದಾಗಿದೆ.

LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ಟಾಪ್ ಎಂಡ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅಳವಡಿಸಲಾಗಿದೆ. ಆಡ್ರಿನೋ 630 GPUವನ್ನು ನೀಡಲಾಗಿದೆ. 6 ಇಂಚಿನ OLED ಡಿಸ್‌ಪ್ಲೇ QHD+ ಗುಣಮಟ್ಟದ ಡಿಸ್​ಪ್ಲೇ ನೀಡಲಾಗಿದೆ. ಡಿಸ್‌ಪ್ಲೇ ಸ್ಕ್ರಾಚ್ ಆಗಬಾರದು ಎನ್ನುವ ಕಾರಣಕ್ಕೆ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ನೀಡಲಾಗಿದೆ. 6 GB RAM ಹಾಗೂ 256 GB ಆಂತರಿಕ ಮೆಮೊರಿಯನ್ನು ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಹೋಲಿಸಿದರೆ ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನಿನ 16 MP + 16 MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಫಿ ಪ್ರಿಯರಿಗಾಗಿ 8 MP ಸೆಲ್ಪೀ ಕ್ಯಾಮೆರಾವನ್ನು ಅಳವಡಿಸಲಾಗಿದೆ.
First published:July 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ