HOME » NEWS » Tech » LG SMARTPHONE SHUTDOWN WHAT HAPPENS TO YOUR PHONES SOFTWARE UPDATES HG

ಆರು ವರ್ಷದಿಂದ ನಷ್ಟ ಅನುಭವಿಸಿ ಕೊನೆಗೂ ಉತ್ಪಾದನೆ ನಿಲ್ಲಿಸಿದ ಜನಪ್ರಿಯ ಸ್ಮಾರ್ಟ್​ಫೋನ್​ ಸಂಸ್ಥೆ!

LG smartphone: 2015ರಿಂದ ಸತತವಾಗಿ ನಷ್ಟವನ್ನು ಅನುಭವಿಸುತ್ತಾ ಬಂದಿದೆ. ಈವರೆಗೆ ಸುಮಾರು 33,010 ಕೋಟಿ ರೂ ನಷ್ಟ ಅನುಭವಿಸಿದೆ.

news18-kannada
Updated:April 6, 2021, 11:07 AM IST
ಆರು ವರ್ಷದಿಂದ ನಷ್ಟ ಅನುಭವಿಸಿ ಕೊನೆಗೂ ಉತ್ಪಾದನೆ ನಿಲ್ಲಿಸಿದ ಜನಪ್ರಿಯ ಸ್ಮಾರ್ಟ್​ಫೋನ್​ ಸಂಸ್ಥೆ!
ಎಲ್​ಜಿ
  • Share this:
ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಎಲ್​ಜಿ ಇದೀಗ ಸ್ಮಾರ್ಟ್​ಫೊನ್​ ಉತ್ಪಾದನೆಯನ್ನ ಸ್ಥಗಿತಗೊಳಿಸಿದೆ. ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯಾಗಿರುವ ಎಲ್​ಜಿ ಇನ್ಮುಂದೆ ಸ್ಮಾರ್ಟ್​ಫೊನ್​ ಉತ್ಪಾದಿಸುವುದಿಲ್ಲ ಎಂದು ಅಧಿಕೃತಪಡಿಸಿದೆ. ಆ ಮೂಲಕ ಮಾರುಕಟ್ಟೆಯಿಂದ ಹಿಂದೆಸರಿದಿದೆ. 

ಕೆಲವು ವರ್ಷಗಳ ಹಿಂದೆ ಎಲ್​ಜಿ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿ ರಾರಾಜಿಸಿತ್ತು. ಆದರೆ ಹೊಸ ಕಂಪೆನಿಗಳ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಧಾವಿಸಿದಂತೆ ಎಲ್​ಜಿ ಸ್ಮಾರ್ಟ್​ಫೋನಿನ ಮೇಲೆ ಹೊಡೆತಬಿದ್ದಿತು. ಆ್ಯಪಲ್​, ಸ್ಯಾಮ್​ಸಂಗ್​ನಂತೆಯೇ ಜನಪ್ರಿಯವಾಗಿದ್ದ ಎಲ್​ಜಿ ಬರು ಬರುತ್ತಾ ಉಳಿದ ಸ್ಮಾರ್ಟ್​ಫೋನ್​​ಗಳ ವಿರುದ್ಧ ಪೈಪೋಟಿ ನೀಡದೆ ಹಿಂದೆ ಸರಿಯುತ್ತಾ ಬಂತು.

ವಿವಿಧ ಕಂಪೆನಿಗಳ ಸ್ಮಾರ್ಟ್​ಫೋನ್​​ಗಳ ಎದುರು ಎಲ್​ಜಿ ಸಂಸ್ಥೆಗೆ ಪೈಪೋಟಿ ನೀಡಲು ಕಷ್ಟವಾಯಿತು. ವರದಿಗಳ ಪ್ರಕಾರ 2015ರಿಂದ ಸತತವಾಗಿ ನಷ್ಟವನ್ನು ಅನುಭವಿಸುತ್ತಾ ಬಂದಿದೆ. ಈವರೆಗೆ ಸುಮಾರು 33,010 ಕೋಟಿ ರೂ ನಷ್ಟ ಅನುಭವಿಸಿದೆ.

ಈ ಮೊದಲೇ ಎಲ್​ಜಿ ಸಂಸ್ಥೆ ಮೊಬೈಲ್ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಬಗ್ಗೆ ಕೇಳಿಬಂದಿತ್ತು. ಆದರೀಗ ಅಧಿಕೃತವಾಗಿ ತಿಳಿಸಿದೆ. ಇನ್ಮುಂದೆ ಯಾವುದೇ ಸ್ಮಾರ್ಟ್​ಫೋನನ್ನು ಉತ್ಪಾದಿಸುದಿಲ್ಲ ಎಂದು ತಿಳಿಸಿದೆ.

ಬಳಕೆಯಲ್ಲಿರುವ ಎಲ್​ಜಿ ಸ್ಮಾರ್ಟ್​ಫೋನ್​ ಗತಿಯೇನು?

ಸಾಕಷ್ಟು ಜನರ ಬಳಿ ಎಲ್​ಜಿ ಸ್ಮಾರ್ಟ್​ಫೊನ್​ಗಳಿದೆ. ಆದರೀಗ ಎಲ್​ಜಿ ಸ್ಮಾರ್ಟ್​ಫೋನ್​ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ. ಆದರೆ ಬಳಕೆಯಲ್ಲಿರುವ ಸ್ಮಾರ್ಟ್​ಫೊನ್​ಗಳ ಗತಿಯೇನು? ಎಂಬ ಆತಂಕ ಅನೇಕರಲ್ಲಿ ಹುಟ್ಟಿಕೊಂಡಿತ್ತು. ಅದಕ್ಕೆ ಉತ್ತರವಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಉತ್ಪನ್ನಗಳ ಮಾರಾಟವು ಅದು ಖಾಲಿಯಾಗುವ ತನಕ ಮುಂದುವರೆಯಲಿದೆ. ಅಲ್ಲದೆ ಈಗಾಗಲೇ ಬಳಕೆಯಲ್ಲಿರುವ ಸ್ಮಾರ್ಟ್​ಫೋನ್​ ಗ್ರಾಹಕರಿಗೆ ಯಾವುದೇ ಭಯಬೇಡ. ಸ್ಮಾರ್ಟ್​ಫೊನ್ ಹಾಳಾದಲ್ಲಿ ರಿಪೇರಿ ಜೊತೆಗೆ ಸೂಕ್ತ ಸೇವೆ ನೀಡಲಿದ್ದೇವೆ ಎಂದು ಭರವಸೆ ನೀಡಿದೆ.
ನಷ್ಟ ಅನುಭವಿಸಿದ ಎಲ್​ಜಿ ನಡೆ ಯಾವ ಕಡೆಗೆ?

ಮೊಬೈಲ್​ ಉತ್ಪಾದನೆಯಿಂದ ನಷ್ಟ ಅನುಭವಿಸಿದ ಎಲ್​ಜಿ ಸಂಸ್ಥೆ ವಿದ್ಯುತ್​ ಚಾಲಿತ ಘಟಕ, ಕನೆಕ್ಟೆಟ್​ ಡಿವೈಸ್​ ಹಾಗೂ ಸ್ಮಾರ್ಟ್​ ಹೋಮ್ಸ್​ ರೋಬೊಟಿಕ್ಸ್​ ಮತ್ತು ಅಟೋಮೋಟಿವ್​ ಕೇಂದ್ರಿತ ಉಪಕರಣ ವ್ಯವಹಾರದತ್ತ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದೆ.
Published by: Harshith AS
First published: April 6, 2021, 10:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories