LG V30+ ವಿಮರ್ಶೆ: ಒನ್’ಪ್ಲಸ್ 5T, ಗೆಲಾಕ್ಸಿ S8ಗಿಂತಲೂ ಉತ್ತಮ ಚಾಯ್ಸ್

news18
Updated:December 29, 2017, 4:44 PM IST
LG V30+ ವಿಮರ್ಶೆ:  ಒನ್’ಪ್ಲಸ್ 5T, ಗೆಲಾಕ್ಸಿ S8ಗಿಂತಲೂ ಉತ್ತಮ ಚಾಯ್ಸ್
news18
Updated: December 29, 2017, 4:44 PM IST
ನವದೆಹಲಿ: ಭಾರತದ ಸ್ಮಾರ್ಟ್’ಫೋನ್ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಹರಸಾಹಸ ಪಡುತ್ತಿರುವ ಎಲ್’ಜಿ ಸಂಸ್ಥೆ ಇತ್ತೀಚೆಗೆ ಒಳ್ಳೆಯ ಹೈಬಜೆಟ್ ಸ್ಮಾರ್ಟ್’ಫೋನ್ ಬಿಡುಗಡೆ ಮಾಡಿದೆ. ಎಲ್’ಜಿ ವಿ30 ಬಳಿಕ ಇದೀಗ ವಿ30+ ಫೋನನ್ನು 44,900 ರೂಪಾಯಿಗೆ ರಿಲೀಸ್ ಮಾಡಿದೆ. ಸ್ಯಾಮ್ಸುಂಗ್ ಗೆಲಾಕ್ಸಿ ಎಸ್8, ಗೂಗಲ್ ಪಿಕ್ಸೆಲ್ ಎಕ್ಸ್’ಎಲ್, ಒನ್’ಪ್ಲಸ್ 5ಟಿ ಇತ್ಯಾದಿ ಸ್ಮಾರ್ಟ್’ಫೋನ್’ಗಳ ಸಾಲಿಗೆ ಹೊಸ ಎಲ್’ಜಿ ಫೋನ್ ಸೇರಿಕೊಂಡಿದೆ. ಆದರೆ, ಎಲ್’ಜಿ ಫೋನ್ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸುವಂತಹ ಕೆಲ ಆಕರ್ಷಣೆ ಮತ್ತು ಸಾಮರ್ಥ್ಯ ಹೊಂದಿದೆ. ನ್ಯೂಸ್18 ಸಂಸ್ಥೆಯ ಸಿದ್ಧಾರ್ಥ್ ಶರ್ಮಾ ಎಲ್’ಜಿ ವಿ30+ ಫೋನ್ ವಿಮರ್ಶಿಸಿ ಚಿಯರ್ಸ್ ಹೇಳಿದ್ದಾರೆ.

LG V30+ ಫೋನ್ ವಿಶೇಷತೆ?
* 6 ಅಂಗುಲ ಪರದೆ
* 2880X1440 ರಿಸಲ್ಯೂಷನ್ (ಅಂದರೆ ಹೈಕ್ವಾಲಿಟಿ ವಿಡಿಯೋಗಳು)

* 4ಜಿಬಿ RAM
* 128 ಜಿಬಿ ಇಂಟರ್ನಲ್ ಸ್ಟೋರೇಜ್ (2 ಟೆರಾಬೈಟ್’ವರೆಗೆ ಹೆಚ್ಚಿಸಬಹುದು)
* 158 ಗ್ರಾಂ ತೂಕ
* 16 ಮೆಗಾಪಿಕ್ಸೆಲ್ ಹಿಂಬದಿ ಕೆಮರಾ, 5 ಮೆಗಾಪಿಕ್ಸೆಲ್ ಫ್ರಂಟ್ ಕೆಮರಾ
* ಬ್ಯಾಟರಿ: 3,300 mAh
* ಸಾಫ್ಟ್’ವೇರ್: ಆಂಡ್ರಾಯ್ಡ್ 7.1.2 Nougat

ಸಿದ್ಧಾರ್ಥ್ ಶರ್ಮಾ ಅವರ ಪ್ರಕಾರ, 45 ಸಾವಿರ ರೂ ರೇಂಜ್’ನ ದರದಲ್ಲಿ ಅತ್ಯುತ್ತಮ ಸ್ಮಾರ್ಟ್ ಫೋನ್ ಎಂದರೆ ಎಲ್’ಜಿ ವಿ30+. ಇದರಲ್ಲಿ ಉತ್ಕೃಷ್ಟ ಸಾಫ್ಟ್’ವೇರ್ ಮತ್ತು ಹಾರ್ಡ್’ವೇರ್ ಇದೆ. ಕೈಲಿ ಹಿಡಿದುಕೊಳ್ಳಲು ಹಗುರವಾಗಿದೆ, ನೋಡಲು ಆಕರ್ಷಕವಾಗಿದೆ. ಆದರೆ, ಫೋನ್ ಸ್ಕ್ರ್ಯಾಚ್ ಆಗದೇ ಇರೋ ರೀತಿ ನೋಡಿಕೊಂಡರೆ ನಿಮ್ಮ ಪಾಲಿಗೆ ಇದು ಹೆಮ್ಮೆಯ ಆಸ್ತಿ ಎನಿಸಲಿದೆ.
First published:December 29, 2017
ಮತ್ತಷ್ಟು ಓದಿರಿ
ಮುಂದಿನ ಸುದ್ದಿ