Video: ಎಲ್​ಜಿ ಕಂಪನಿಯಿಂದ ಡ್ಯುಯೆಲ್​ ಸ್ಕ್ರೀನ್​ ಸ್ಮಾರ್ಟ್​ಫೋನ್​; ಇದರ ಬೆಲೆಯೆಷ್ಟು ಗೊತ್ತಾ.?

‘ಎಲ್​ಜಿ V50S‘ ಸ್ಮಾರ್ಟ್​ಫೋನ್​ 6.4 ಇಂಚಿನ ಡಿಸ್​ಪ್ಲೇ ಹೊಂದಿದ್ದು, ವಾಟರ್​ಡ್ರಾಪ್ ನಾಚ್​ ಹೊಂದಿದೆ.

news18-kannada
Updated:September 9, 2019, 11:19 AM IST
Video: ಎಲ್​ಜಿ ಕಂಪನಿಯಿಂದ ಡ್ಯುಯೆಲ್​ ಸ್ಕ್ರೀನ್​ ಸ್ಮಾರ್ಟ್​ಫೋನ್​; ಇದರ ಬೆಲೆಯೆಷ್ಟು ಗೊತ್ತಾ.?
‘ಎಲ್​ಜಿ V50S‘
  • Share this:
ಸ್ಮಾರ್ಟ್​ಫೋ​ನ್​ ಲೋಕದಲ್ಲಿ ಮಡಚುವ ಫೋನ್​ಗಳ ಟ್ರೆಂಡ್​ ಸೃಷ್ಠಿಯಾಗಿದೆ. ಇತ್ತೀಚೆಗೆ ಸ್ಯಾಮ್​ಸಂಗ್​ ಗ್ಯಾಲಕ್ಸಿ, ಹುವಾವೇ ಸ್ಮಾರ್ಟ್​ಫೋನ್​ ಕಂಪೆನಿಗಳು ಪೋಲ್ಡೇಬಲ್​ ಫೋನ್​ಗಳನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಎಲ್​ಜಿ ಕಂಪೆನಿ ಕೂಡ V50S ಹೆಸರಿನ ಡ್ಯುವೆಲ್​ ಸ್ಕ್ರೀನ್​ ಮಾದರಿಯನ್ನು ಪರಿಚಯಿಸಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

‘ಎಲ್​ಜಿ V50S‘ ಡ್ಯುವೆಲ್​ ಸ್ಕ್ರೀನ್​ ಸ್ಮಾರ್ಟ್​ಫೋನ್ 5G ನೆಟ್​ವರ್ಕ್​ಗೆ ಅನುಗುಣವಾಗಿ ತಯಾರಿಸಲಾಗುತ್ತಿದೆ. ನೂತನ ಸ್ಮಾರ್ಟ್​ಫೋನ್​ ದಕ್ಷಿಣ ಕೊರಿಯಾದಲ್ಲಿ ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ 4G ಮಾದರಿಯ ಸ್ಮಾರ್ಟ್​ಪೋನ್​ ಅನ್ನು ಪರಿಚಯಿಸಲಿದೆ.

​ನೂತನ ‘ಎಲ್​ಜಿ V50S‘ ಸ್ಮಾರ್ಟ್​ಫೋನ್​ 6.4 ಇಂಚಿನ ಡಿಸ್​ಪ್ಲೇ ಹೊಂದಿದ್ದು, ವಾಟರ್​ಡ್ರಾಪ್ ನಾಚ್​ ಹೊಂದಿದೆ. ಈ ಸ್ಮಾರ್ಟ್​ಫೋನ್​ ಸ್ನಾಪ್​ಡ್ರ್ಯಾಗನ್​ 855 ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸುತ್ತಿದೆ. ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ ಎರಡು ಕ್ಯಾಮೆರಾವನ್ನು ಅಳವಡಿಸಲಾಗಿದೆ. ದೀರ್ಘಕಾಳದ ಬಾಳಿಕೆಗಾಗಿ 4000mAh ಬ್ಯಾಟರಿಯನ್ನು ನೀಡಲಾಗಿದೆ. ಈ ಸ್ಮಾರ್ಟ್​ಫೋನ್​ 326 ಗ್ರಾಂ ತೂಕವನ್ನು ಹೊಂದಿದೆ. ಕಂಪೆನಿ ಈ ಸ್ಮಾರ್ಟ್​ಫೋನ್​ ಬೆಲೆಯನ್ನು ಇನ್ನೂ ಬಹಿರಂಗ ಪಡಿಸಿಲ್ಲ.

ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ​ ಮಡಚುವ ಫೋನ್​ಗಳ ಟ್ರೆಂಡ್​ ಪ್ರಾರಂಭವಾಗಿದ್ದು, ಪ್ರತಿಷ್ಠಿತ ಕಂಪೆನಿಗಳು ಪೋಲ್ಡೇಬಲ್​ ಸ್ಮಾರ್ಟ್​ಪೋನ್​ಗಳನ್ನು ಉತ್ಪಾದಿಸುತ್ತಿವೆ. ಇದೀಗ ಎಲ್​ಜಿ​ ಕಂಪೆನಿ ಕೂಡ ಕೊಂಚ ಬದಲಾವಣೆಯನ್ನು ಮಾಡಿಕೊಂಡು V50S ಹೆಸರಿನ ಡ್ಯುವೆಲ್​ ಸ್ಕ್ರೀನ್ ಫೋನ್​ ಅನ್ನು ತಯಾರಿಸಿದೆ.ಇದರ ಜೊತೆಗೆ ಮಾರುಕಟ್ಟೆಯಲ್ಲಿ ಪಾಲು ಹೊಂದಲು ಚಿಂತನೆ ನಡೆಸಿದೆ.
First published: September 8, 2019, 4:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading