40,000 ರೂಗೆ. ಗೇಮ್​ ಚೇಂಜರ್​ ಮೊಬೈಲ್​ ಬಂದಿದೆ!


Updated:August 6, 2018, 3:31 PM IST
40,000 ರೂಗೆ. ಗೇಮ್​ ಚೇಂಜರ್​ ಮೊಬೈಲ್​ ಬಂದಿದೆ!

Updated: August 6, 2018, 3:31 PM IST
ನ್ಯೂಸ್​18 ಕನ್ನಡ

ಎಲ್​ಜಿ ತನ್ನ ನೂತನ ಮೊಬೈಲ್​ ಎಲ್​ಜಿ ಜಿ7 ಪ್ಲಸ್​ ಥಿನ್​ ಕ್ಯೂ ಮೊಬೈಲ್​ ಕೊನೆಗೂ ಭಾರತೀಯ ಮೊಬೈಲ್​ ಮಾರುಕಟ್ಟೆಗೆ ಪರಿಚಯಿಸಿದೆ.

ಕೊಂಚ ತಡವಾಗಿಯೇ ಬಿಡುಗಡೆಯಾದ ಜಿ7 ಮೊಬೈಲ್​ ಕಳೆದ ವರ್ಷ ಬಿಡುಗಡೆಯಾದ ಎಲ್​ಜಿ ಜಿ6 ಮೊಬೈಲ್​ನ ಅಪ್​ಡೇಟೆಡ್​ ವರ್ಷನ್ ಇದಾಗಿದೆ. ಕಳೆದ ಮೇ ನಲ್ಲೇ ಈ ವರ್ಷ ಭಾರತ ಬಿಟ್ಟು ಹೆಚ್ಚಿನ ದೇಶಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಫ್ಲಿಪ್​ಕಾರ್ಟ್​​ನಲ್ಲಿ ಆ.10ರಂದು ಅಧಿಕೃತವಾಗಿ ಮಾರಾಟಗೊಳ್ಳಲಿದೆ.

ಒನ್​ಪ್ಲಸ್​ 6 ಮತ್ತು ಅಸೂಸ್​ ಝೆನ್​ಫೋನ್​ 5Z ಪ್ರತಿಸ್ಪರ್ಧಿಯಾಗಿ ಎಲ್​ಜಿ ಜಿ7 ಮೊಬೈಲ್​ಈ ಮೊಬೈಲ್​ನ್ನು ಬಿಡುಗಡೆ ಮಾಡುತ್ತಿದ್ದು ಸಂಪೂರ್ಣ ನಾಟ್ಚ್​ ವ್ಯವಸ್ಥೆಯಿಂದ ಈ ಮೊಬೈಲ್​ ವಿನ್ಯಾಸ ಮಾಡಲಾಗಿದೆ. G7+ ThinQ ಮೊಬೈಲ್​ನ ವಿಶೇಷತೆಗಳು ಇಲ್ಲಿದೆ.

6.1 ಇಂಚುಗಳ QHD+ ಹಾಗು ಹೆಚ್​ಡಿಆರ್​10 ಗುಣಮಟ್ಟದ ಡಿಸ್​ಪ್ಲೇಯನ್ನು ಅಳವಡಿಸಲಾಗಿದೆ. ನಾಟ್ಚ್​ ವ್ಯವಸ್ಥೆ ಮೂಲಕ ನೀರು ಹಾಗೂ ಧೂಳಿನಿಂದ ಮುಕ್ತಿ ನೀಡಲು ಈ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರೊಸೆಸರ್​ ಕುರಿತು ಹೇಳುವುದಾದರೆ ಒನ್​ಪ್ಲಸ್​ 6, ಅಸೂಸ್​ ​ 5Zನಂತೆ ಇದರಲ್ಲೂ ಸ್ನಾಪ್​ಡ್ರಾಗನ್​ 845 ಪ್ರೊಸೆಸರ್​ ಅಳವಡಿಸಲಾಗಿದೆ. ಇದರೊಂದಿಗೆ ಅತ್ಯುತ್ತಮ ಕೆಲಸ ನಿರ್ವಹಣೆಗೆ 6GB RAM ಒದಗಿಸಲಾಗಿದೆ. ಇದಕ್ಕೆ ಪೂರಕವಾಗಿ 128ಜಿಬಿ ಸ್ಟೋರೇಜ್​ ವ್ಯವಸ್ಥೆ ಮಾಡಲಾಗಿದೆ. 2 ಟಿಬಿ ವರೆಗೂ ಈ ಮೆಮೊರಿಯನ್ನು ವಿಸ್ತರಿಸುವ ಅವಕಾಶ ಕಲ್ಪಿಸಲಾಗಿದೆ.

ಇನ್ನು ಕ್ಯಾಮೆರಾದಲ್ಲೂ ಬದಲಾವಣೆ ತಂದಿರುವ ಎಲ್​ ಸಂಸ್ಥೆ ಜಿ7 ಪ್ಲಸ್​ ಥಿನ್​ ಕ್ಯೂ ಮೊಬೈಲ್​ನಲ್ಲಿ 16 ಎಂಪಿ ವೈಡ್​ ರೇಂಜ್​ ಹಾಗೂ f/1.6 ಅಪಾರ್ಚರ್​ ಹೊಂದಿರುವ 16 ಎಂಪಿ ಡ್ಯುಯಲ್​ ಕ್ಯಾಮರಾ ಹೊಂದಿದೆ. ಕೃತಕ ಬುದ್ಧಿಮತ್ತೆ ಸಹಾಯ ಕೂಡಾ ಇದರಲ್ಲಿ ನೀಡಲಾಗಿದ್ದು, ಚಿತ್ರದ ವಾತಾವರಣಕ್ಕೆ ಅನುಗುಣವಾಗಿ ಸೆಟ್ಟಿಂಗ್​ಗಳನ್ನು ಅದೇ ಬದಲಾಯಿಸಿ ಕೊಳ್ಳುತ್ತದೆ. ಇನ್ನುಳಿದಂತೆ ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ಮುಂಭಾಗದಲ್ಲಿ ನೀಡಲಾಗಿದೆ.
Loading...

ಅತ್ಯುತ್ತಮ ಗುಣಮಟ್ಟದ ಸೌಂಡ್​ ಸಿಸ್ಟಂಗಾಗಿ ಬೂಮ್​ಬಾಕ್ಸ್​ ಸ್ಪೀಕರ್​ ನೀಡಲಾಗಿದ್ದು ಹೈಫೈ ಕ್ವಾಡ್​ ಡಾಕ್​ ಹಾಗು ಡಿಟಿಎಸ್​ ಸೌಲಭ್ಯವನ್ನು ಒದಗಿಸಲಾಗಿದೆ. ವೇಗದ ಚಾರ್ಜಿಂಗ್​ಗಾಗಿ ಕ್ವಾಲ್ಕಾಂ ಕ್ವಿಕ್​ ಚಾರ್ಜ್​ 3.0 ಕೇವಲ್​ ನೀಡಲಾಗಿದ್ದು, 3000mAh ಬ್ಯಾಟರಿ ಅಳವಡಿಸಲಾಗಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...